ಈಗಾಗಲೇ ರೆಷನ್ ಕಾರ್ಡ್ ಅರ್ಜಿ ಸಲ್ಲಿಸಿರುವ ಈ ಜಿಲ್ಲೆಯವರಿಗೆ ಬಿಗ್ ಅಪ್ಡೇಟ್

ಈಗಾಗಲೇ ರೆಷನ್ ಕಾರ್ಡ್ ಅರ್ಜಿ ಸಲ್ಲಿಸಿರುವ ಈ ಜಿಲ್ಲೆಯವರಿಗೆ ಬಿಗ್ ಅಪ್ಡೇಟ್

ಕೆಲವು ಜಿಲ್ಲೆಗಳಿಗೆ ಮೊದಲು ರೇಷನ್ ಕಾರ್ಡ್ ವಿತರಣೆ.ಗ್ರಾಮ ಒನ್, ಕರ್ನಾಟಕ ಒನ್‌ನಲ್ಲಿ ಹೆಚ್ಚು ಅರ್ಜಿ ಸಲ್ಲಿಕೆ

ಯೋಜನೆ ಲಾಭ ಪಡೆಯಲು ಬಿಪಿಎಲ್ ಕಾರ್ಡ್ ಕಡ್ಡಾಯ

ಬೆಂಗಳೂರು (Bengaluru): ರಾಜ್ಯದ ಹಲವಾರು ಬಡ ಕುಟುಂಬಗಳು ನಿರೀಕ್ಷೆಯೊಂದಿಗೆ ಸರ್ಕಾರಿ ಯೋಜನೆಗಳ (government schemes) ಪ್ರಯೋಜನ ಪಡೆಯಲು ರೇಷನ್ ಕಾರ್ಡ್ (Ration Card) ನಿರೀಕ್ಷಿಸುತ್ತಿವೆ. ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಉಪಯೋಗ ಪಡೆಯಲು ಇದರ ಅಗತ್ಯವಿದೆ ಎಂಬುದು ಗೊತ್ತೇ ಇದೆ.

ರೇಷನ್ ಕಾರ್ಡ್ ವಿತರಣೆಯಲ್ಲಿ ಈ ಬಾರಿ ಚಿತ್ರದುರ್ಗ, ದಾವಣಗೆರೆ, ದಕ್ಷಿಣ ಕನ್ನಡ, ಬಾಗಲಕೋಟೆ, ಹಾವೇರಿ, ಬೀದರ್, ರಾಯಚೂರು, ಕೊಪ್ಪಳ, ಯಾದಗಿರಿ, ವಿಜಯಪುರ ಜಿಲ್ಲೆಗಳ ನಿವಾಸಿಗಳಿಗೆ ಮೊದಲ ಪ್ರಾಧಾನ್ಯತೆ ಇದೆ ಎನ್ನಲಾಗಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆಎಚ್ ಮುನಿಯಪ್ಪ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ.

ಈ ಹಿಂದಿನ ಹಂತದಲ್ಲಿ ಗ್ರಾಮ ಒನ್ (Grama One) ಮತ್ತು ಕರ್ನಾಟಕ ಒನ್ (Karnataka One) ಕೇಂದ್ರಗಳಲ್ಲಿ ಜನರು ಅರ್ಜಿ ಸಲ್ಲಿಸಿ ಅಥವಾ ತಿದ್ದುಪಡಿ ಮಾಡಿಕೊಂಡು, ಅರ್ಜಿ ಪ್ರಕ್ರಿಯೆಯನ್ನು ಮುಗಿಸಿದ್ದರು.

ಬಿಪಿಎಲ್ (BPL) ಕಾರ್ಡ್‌ಗಾಗಿ ಕಾಯುತ್ತಿರುವ ಕುಟುಂಬಗಳು ತಮ್ಮ ಅರ್ಜಿಯ ಸ್ಥಿತಿಯನ್ನು ನಿರೀಕ್ಷಿಸುತ್ತಿದ್ದಾರೆ. ಆದರೆ ಯಾರಿಗೆ ಹಾಗೂ ಯಾವ ಜಿಲ್ಲೆಗಳಿಗೆ ಕಾರ್ಡ್ ವಿತರಿಸಲಾಗುತ್ತದೆ ಎಂಬುದನ್ನು ಅರ್ಜಿ ವಿಲೇವಾರಿ ನಂತರ ನಿರ್ಧರಿಸಲಾಗುತ್ತದೆ.

ಹೊಸ ರೇಷನ್ ಕಾರ್ಡ್ ಅರ್ಜಿ

ಇದರ ಜೊತೆಗೆ, ಬಡತನ ರೇಖೆಗಿಂತ ಮೇಲಿರುವವರು ಬಿಪಿಎಲ್ ಕಾರ್ಡ್ ಅನ್ನು ಕೊಂಡಿರುವುದು ಬೆಳಕಿಗೆ ಬಂದಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ. ಇಂತಹವರು ಸ್ವಯಂ ಇಚ್ಛೆಯಿಂದ ತಮ್ಮ ಕಾರ್ಡ್‌ಗಳನ್ನು ರದ್ದುಪಡಿಸದಿದ್ದರೆ, ದಂಡ ಕೂಡ ವಿದಿಸಬಹುದಾಗಿದ್ದು ಜೊತೆಗೆ ಕಾರ್ಡ್ ಕೂಡ ಕ್ಯಾನ್ಸಲ್ ಆಗಲಿದೆ.

ಸರ್ಕಾರದ ಸ್ಪಷ್ಟ ಆದೇಶವು, ನಕಲಿ ಅಥವಾ ಅನರ್ಹ ಕಾರ್ಡ್‌ಗಳನ್ನು ಹೊಂದಿರುವವರಿಗೆ ಶಿಸ್ತು ಕ್ರಮ ಅನುಸರಿಸಲಾಗುವುದು ಎಂದು ಎಚ್ಚರಿಸಿದೆ. ಯಾವುದೇ ಹಕ್ಕು ಅಥವಾ ಪ್ರಯೋಜನ ಪಡೆಯುವ ಮುನ್ನ, ಪ್ರಾಮಾಣಿಕತೆ ಅತ್ಯಂತ ಮುಖ್ಯ ಎಂಬ ಸಂದೇಶ ಇದಾಗಿದೆ.


Post a Comment

Previous Post Next Post

Top Post Ad

CLOSE ADS
CLOSE ADS
×