ಕೃಷಿ ಇಲಾಖೆಯಿಂದ(Karnataka Agriculture Department) ರೈತರಿಗೆ ಮಹತ್ವದ ಮಾಹಿತಿಯನ್ನು ಪ್ರಕಟಗೊಳಿಸಲಾಗಿದ್ದು ಈ ಕುರಿತು ಒಂದಿಷ್ಟು ಅಗತ್ಯವಾದ ವಿವರಗಳನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲಾಗಿದ್ದು ತಪ್ಪದೇ ಈ ಮಾಹಿತಿಯನ್ನು ನಿಮ್ಮ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿ ಇತರೆ ರೈತರಿಗೂ ಈ ಮಾಹಿತಿಯನ್ನು ತಿಳಿಸಲು ಸಹಕರಿಸಿ
ರಾಜ್ಯಾದ್ಯಂತ ಕೃಷಿಕರು ಮುಂಗಾರು(Mugaru) ಹಂಗಾಮಿಗೆ ಭೂಮಿಯ ಸಿದ್ದತೆಯನ್ನು ಮಾಡಿಕೊಳ್ಳುತ್ತಿದ್ದು ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಪೂರ್ವ-ಮುಂಗಾರು ಮಳೆ ಉತ್ತಮವಾಗಿ ಅಗಿದ್ದು ಬಿತ್ತನೆ ಬೀಜ,ಗೊಬ್ಬರ ಖರೀದಿ ಮಾಡಲು ರೈತರು ಸಕಲ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿರುವ ಸಮಯದಲ್ಲಿ ಕೃಷಿ ಇಲಾಖೆಯಿಂದ ರೈತರಿಗೆ ಒಂದಿಷ್ಟು ಅಗತ್ಯ ಸಲಹೆಗಳನ್ನು ಪ್ರಕಟಿಸಲಾಗಿದೆ.
ರೈತರು ರಸಗೊಬ್ಬರವನ್ನು(Fertilizers) ಖರೀದಿ ಮಾಡುವಾಗ ಯಾವೆಲ್ಲ ಅಂಶಗಳನ್ನು ಮುಖ್ಯವಾಗಿ ಅನುಸರಿಸಬೇಕು? ಹಾಗೂ ಇದೇ ಮಾದರಿಯಲ್ಲಿ ಬಿತ್ತನೆ ಬೀಜ(Seeds) ಹಾಗೂ ಕೀಟನಾಶಕಗಳನ್ನು(Pesticides)ಖರೀದಿ ಮಾಡುವಾಗ ಅನುಸರಿಸಬೇಕಾದ ಅಗತ್ಯ ಕ್ರಮಗಳ ಕುರಿತು ಸಹ ಒಂದಿಷ್ಟು ಅಗತ್ಯ ಹಾಗೂ ಬಹುಮುಖ್ಯ ಮಾಹಿತಿಯನ್ನು ಕೃಷಿ ಇಲಾಕೆಯಿಂದ ಹಂಚಿಕೊಳ್ಳಲಾಗಿದೆ.
The main points should keep purchasing fertilizer-ರೈತರು ಮಾರುಕಟ್ಟೆಯಲ್ಲಿ ಗೊಬ್ಬರವನ್ನು ಖರೀದಿ ಮಾಡುವಾಗ ಮುಖ್ಯವಾಗಿ ಗಮನಿಸಬೇಕಾದ ಅಂಶಗಳು:
ರಸಗೊಬ್ಬರಗಳನ್ನು ಯಾವಾಗಲು ಮಾರಾಟಗಾರರಿಂದಲೇ ಖರೀದಿಸಬೇಕು.
ರಸಗೊಬ್ಬರದ ಚೀಲದ ಬಾಯಿಯುನ್ನು ಯಂತ್ರದಿಂದ ಹೊಲಿದಿರಬೇಕು. ಕೈಯಿಂದ ಹೊಲಿದಿದ್ದರೆ ಅದಕ್ಕೆ. ಸೀಸದಿಂದ ಮೊಹರನ್ನು ಹಾಕಿರಬೇಕು.
ರಸಗೊಬ್ಬರದ ಚೀಲವು ಸರಿಯಾದ ತೂಕವಿರಬೇಕು. ಅನುಮಾನವಿದ್ದಲ್ಲಿ ಚೀಲವನ್ನು ತೂಕ ಖರೀದಿಸಬೇಕು.
ರಸಗೊಬ್ಬರದ ಚೀಲದ ಮೇಲೆ ನಮೂದಿಸಿರುವ ಗರಿಷ್ಟ ಮಾರಾಟ ಬೆಲೆಗಿಂತ ಹೆಚ್ಚಿನ ಬೆಲೆ ನೀಡಬಾರದು.
ರಸಗೊಬ್ಬರದ ಚೀಲದ ಮೇಲೆ ಈ ಕೆಳಕಂಡ ವಿವರಗಳು ಮುದ್ರಿತವಾಗಿರಬೇಕು: ರಸಗೊಬ್ಬರದ ಹೆಸರು, ರಸಗೊಬ್ಬರದ ಬ್ರಾಂಡ್, ರಸಗೊಬ್ಬರ ತಯಾರಕರ ಹೆಸರು ಮತ್ತು ವಿಳಾಸ, ರಸಗೊಬ್ಬರದಲ್ಲಿರುವ ಕನಿಷ್ಟ ಶೇಕಡ ಪೋಷಕಾಂಶಗಳ ವಿವರ, ಗರಿಷ್ಠ ಮತ್ತು ನಿವ್ವಳ ತೂಕ (ಪ್ಯಾಕ್ ಮಾಡಿದಾಗ), ಗರಿಷ್ಟ ಮಾರಾಟ ಬೆಲೆ (ತೆರಿಗೆಗಳನ್ನು ಸೇರಿಸಿ), ತಯಾರಿಸಿದ ತಿಂಗಳು ಮತ್ತು ವರ್ಷ
ಮಿಶ್ರಣ, ವಿಶೇಷ ಮಿಶ್ರಣ ರಸಗೊಬ್ಬರಗಳು, ಲಘು ಪೋಷಕಾಂಶಗಳು ಮತ್ತು ಅವುಗಳ ಮಿಶ್ರಣ ಮತ್ತು ಸೂಪರ್ ಫಾಸ್ಟೇಟ್ ಚೀಲ / ಡಬ್ಬಿಗಳ ಮೇಲೆ ಬ್ಯಾಚ್ ಸಂಖ್ಯೆ ಮತ್ತು ತಯಾರಿಕಾ ಪರವಾನಿಗೆ ಪತ್ರದ (Certification of Registration.)
ರಸಗೊಬ್ಬರವನ್ನು ಖರೀದಿಸಿದ್ದಕ್ಕೆ ರಶೀದಿಯನ್ನು ಪಡೆಯಬೇಕು. ರಶೀದಿಯಲ್ಲಿ ಖರೀದಿಸಿದ ರಸಗೊಬ್ಬರಗಳ ವಿವರಗಳನ್ನು ತುಂಬಿದ್ದು ರೈತರ ಸಹಿ ಮತ್ತು ಮಾರಾಟಗಾರರ ಸಹಿ ಇರಬೇಕು.
ಕೇಂದ್ರ ಸರ್ಕಾರ ನೀಡುವ ಸಹಾಯಧನದ ಮೊತ್ತವನ್ನು (ಅನ್ವಯವಾಗುವ ಕಡೆ) ಕಡ್ಡಾಯವಾಗಿ ನಮೂದಿಸಿರಬೇಕು.
ರಸಗೊಬ್ಬರಗಳನ್ನು Point of Sale ಉಪಕರಣದ ಮೂಲಕವೇ ಆಧಾರ್ ಸಂಖ್ಯೆ ತೋರಿಸಿ ಖರೀದಿಸತಕ್ಕದ್ದು.
Important points to note when purchasing sowing seeds-ಬಿತ್ತನೆ ಬೀಜವನ್ನು ಖರೀದಿಸುವಾಗ ಗಮನಿಸಬೇಕಾದ ಮುಖ್ಯ ಅಂಶಗಳು:
ಅಧಿಕೃತ ಬಿತ್ತನೆ ಬೀಜ ಮಾರಾಟಗಾರರಿಂದಲೇ ಬಿತ್ತನೆ ಬೀಜವನ್ನು ಖರೀದಿಸಿ.
ಬಿತ್ತನೆ ಬೀಜ ಖರೀದಿಸಿದಾಗ ತಪ್ಪದೇ ಅಧಿಕೃತ ರಶೀದಿ ಪಡೆಯಬೇಕು. ರಶೀದಿಯಲ್ಲಿ ಲಾಟ್‌ನಂಬ ನಮೂದಿಸಿರಬೇಕು.
ಚೀಲದ ಮೇಲೆ ನಮೂದಿಸಿರುವಂತೆ ತೂಕ ಸರಿಯಾಗಿದೆಯೆ? ಚೀಲವನ್ನು ಮಷಿನಿನಿಂದ ಹೊಲೆಯಲಾಗಿದೆಯೆ?ಎಂದು ಖಚಿತಪಡಿಸಿಕೊಂಡು ಖರೀದಿ ಮಾಡಬೇಕು.
ಬಿತ್ತನೆ ಬೀಜದ ಉತ್ಪಾದಕರು ಹಾಗೂ ಮಾರಾಟಗಾರರ ವಿಳಾಸವನ್ನು ಗಮನಿಸಬೇಕು.
ಬಿತ್ತನೆ ಬೀಜವು ಸಂಬಂದಪಟ್ಟ ಪ್ರಾಧಿಕಾರದಿಂದ ಪರೀಕ್ಷಿಸಲ್ಪಟ್ಟು ಗುಣಮಟ್ಟದ ಬಗ್ಗೆ ಧೃಡೀಕರಿಸಲಾಗಿದೆಯೆ? ದೃಡೀಕರಣದ ಟ್ಯಾಗ್‌ಗಳನ್ನು ಲಗತ್ತಿಸಲಾಗಿದೆಯೆ? ಎಂದು ಖಾತರಿಸಿಪಡಿಸಿಕೊಳ್ಳಿ.
ಬಿತ್ತನೆಗೆ ಮುಂಚೆ ಬೀಜ ಮೊಳೆಯುವಿಕೆ ಪ್ರಮಾಣವನ್ನು ಪರೀಕ್ಷಿಸಿಕೊಳ್ಳಬೇಕು.
ಬಿತ್ತನೆ ಬೀಜವನ್ನು ಕೀಟನಾಶಕಗಳಿಂದ ಉಪಚರಿಸಲಾಗಿದೆಯೆ? ಎಂಬುದನ್ನು ಗಮನಿಸಿ.
ಬಿತ್ತನೆ ಬೀಜದ ಚೀಲ, ಸ್ವಲ್ಪ ಪ್ರಮಾಣದ ಬಿತ್ತನೆ ಬೀಜ, ದೃಡೀಕರಣದ ಬಗ್ಗೆ ಲಗತ್ತಿಸಿರುವ ಟ್ಯಾಗುಗಳನ್ನು ಬೆಳೆ ಕಟಾವು ಆಗುವವರೆಗೆ ಸುರಕ್ಷಿತವಾಗಿ ಕಾಯ್ದಿಟ್ಟುಕೊಳ್ಳಬೇಕು.
ನಮೂದಿಸಿರುವ ಉತ್ಪಾದನಾ ದಿನಾಂಕ ಮತ್ತು ವ್ಯಾಲಿಡಿಟಿ ಅವಧಿಯನ್ನು ಗಮನಿಸಬೇಕು.
Important points to consider when buying pesticides-ಕೀಟನಾಶಕ ಖರೀದಿಸುವಾಗ ಗಮನಿಸಬೇಕಾದ ಮುಖ್ಯ ಅಂಶಗಳು:
ಕೀಟನಾಶಕ ಅಧಿಕೃತ ಮಾರಾಟಗಾರರಿಂದಲೇ ಖರೀದಿಸಿ.
ಕೀಟನಾಶಕ ಖರೀದಿಸಿದಾಗ ತಪ್ಪದೇ ಅಧಿಕೃತ ರಶೀದಿಯನ್ನೇ ಪಡೆಯಿರಿ.
ರಶೀದಿಯಲ್ಲಿ ಬ್ಯಾಚ್ ನಂ / ಲಾಟ್ ನಂ. ಖರೀದಿಸಿದ ಪ್ರಮಾಣವನ್ನು ತಪ್ಪದೇ ನಮೂದಿಸಿರಬೇಕು.
ಕೀಟನಾಶಕ ಬಾಟಲಿ /ಪೊಟ್ಟಣ ತೆರೆಯಲಾಗಿದೆಯೇ? ಎಂದು ಪರೀಕ್ಷಿಸಬೇಕು.
ಕೀಟನಾಶಕದ ಉತ್ಪಾದಕರು /ಮಾರಾಟಗಾರರ ವಿಳಾಸವನ್ನು ಗಮನಿಸಬೇಕು.
ಕೀಟನಾಶಕದ ಬಾಟಲಿ / ಪೊಟ್ಟಣ ಮೇಲೆ ಐಎಸ್‌ಐ ಮಾರ್ಕ್ ಅನ್ನು ಗಮನಿಸಬೇಕು.
ಕೀಟನಾಶಕದ ತಾಂತ್ರಿಕ/ಮಾರಾಟದ ಹೆಸರು ಕ್ರಿಯಾಶೀಲತೆ (Active ingredient) ಹಾಗೂ ಪ್ರಮಾಣವನ್ನು ನಮೂದಿಸಲಾಗಿದೆಯೆಂದು / ಗಮನಿಸಬೇಕು.
ಕೀಟನಾಶಕದ ಉತ್ಪಾದನಾ ದಿನಾಂಕ ಹಾಗೂ ಅವಧಿ ಮೀರುವ ದಿನಾಂಕ(Expiry Date)ಕೀಟನಾಶಕದ ಉತ್ಪಾದನಾ ದಿನಾಂಕ ಹಾಗೂ ಅವಧಿ ನಮೂದಿಸಲಾಗಿದೆಯೆಂದು ಗಮನಿಸಬೇಕು.
ಕೀಟನಾಶಕದ ಗುಣಮಟ್ಟದ ಬಗ್ಗೆ ಅನುಮಾನವಿದ್ದಲ್ಲಿ ಸಮೀಪದ ಕೀಟನಾಶಕ ಪರಿವೀಕ್ಷಕರ ಪ್ರಯೋಗಾಲಯಕ್ಕೆ ಕಳುಹಿಸಿ ಗುಣಮಟ್ಟ ಪಡಿಸಿಕೊಳ್ಳಬೇಕು.
Important links
Karnataka Agriculture Department Website-ಕೃಷಿ ಇಲಾಖೆಯ ಅಧಿಕೃತ ವೆಬ್ಸೈಟ್- Click Here
Agriculture Department Helpline-ಸಹಾಯವಾಣಿ ಸಂಖ್ಯೆ-1800 425 3553