ರಾಜ್ಯ ಸರಕಾರದ ಈ ಬಾರಿಯ ಬಜೆಟ್ ನಲ್ಲಿ ಪಶುಸಂಗೋಪನೆಯಲ್ಲಿ ತೊಡಗಿಕೊಂಡಿರುವ ರೈತಾಪಿ ವರ್ಗದ ಜನರಿಗೆ ಜಾನುವಾರುಗಳು ಆಕಸ್ಮಿಕವಾಗಿ ಮರಣ ಹೊಂದಿದ ಸಮಯದಲ್ಲಿ ಆರ್ಥಿಕವಾಗಿ ನೆರವು ನೀಡಲು ಅನುಗ್ರಹ ಯೋಜನೆಯ(Anugrah Yojane)ಮೂಲಕ ನೀಡುತ್ತಿದ್ದ ಪರಿಹಾರದ ಮೊತ್ತವನ್ನು ಹೆಚ್ಚಳ ಮಾಡಲಾಗಿದೆ.
ಏನಿದು ಅನುಗ್ರಹ ಯೋಜನೆ? ಅನುಗ್ರಹ ಯೋಜನೆ ಯೋಜನೆಯಡಿ ಯಾವೆಲ್ಲ ಜಾನುವಾರುಗಳ ಆಕಸ್ಮಿಕ ಮರಣಕ್ಕೆ ಪರಿಹಾರವನ್ನು(Anugrah Scheme) ನೀಡಲಾಗುತ್ತದೆ? ಮತ್ತು ಜಾನುವಾರುವಾರು ಪರಿಹಾರದ ಮೊತ್ತ ಎಷ್ಟು? ಇನ್ನಿತರೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ.
ಜಾನುವಾರುಗಳ ಆಕಸ್ಮಿಕ ಸಾವಿನ ಸಂದರ್ಭದಲ್ಲಿ ರೈತರು ಅನುಭವಿಸುತ್ತಿರುವ ಸಂಕಷ್ಟ ನಿವಾರಣೆಗೆ “ಅನುಗ್ರಹ” ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯಡಿ ಹಸು ಎಮ್ಮೆ ಮತ್ತು ಎತ್ತುಗಳಿಗೆ ಪ್ರಸ್ತುತ ನೀಡಲಾಗುತ್ತಿರುವ ಪರಿಹಾರ ಮೊತ್ತವನ್ನು 10 ಸಾವಿರಗಳಿಂದ 15 ಸಾವಿಗಳಿಗೆ, ಕುರಿ / ಮೇಕೆಗಳಿಗೆ ನೀಡಲಾಗುತ್ತಿರುವ ಮೊತ್ತವನ್ನು 5 ಸಾವಿರಗಳಿಂದ 7,500 ರೂಗಳಿಗೆ ಹಾಗೂ 3 ರಿಂದ 6 ತಿಂಗಳ ಕುರಿ / ಮೇಕೆ ಮರಿಗಳಿಗೆ ನೀಡಲಾಗುತ್ತಿರುವ ಮೊತ್ತವನ್ನು ರೂ 3,500 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ.
Anugrah Scheme Amount-ಅನುಗ್ರಹ ಯೋಜನೆ ಪರಿಹಾರ ಮೊತ್ತದ ವಿವರ ಹೀಗಿದೆ:
ಜಾನುವಾರುಗಳು ಹಿಂದಿನ ಪರಿಹಾರ ಪರಿಷ್ಕೃತ ಪರಿಹಾರ
- ಎಮ್ಮೆ ಮತ್ತು ಎತ್ತು ₹ 10,000 ₹ 15,000/-
- ಕುರಿ/ಮೇಕೆಗಳಿಗೆ ₹ 5,000/ ₹ 7,500/-
- 3 ರಿಂದ 6 ತಿಂಗಳ ಕುರಿ/ಮೇಕೆ ಮರಿಗಳಿಗೆ ₹ 3,500/- ₹ 5,000/-
Anugrah Scheme Application-ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?
ರೈತ ಆಕಸ್ಮಿಕವಾಗಿ ತಾವು ಸಾಕಾಣಿಕೆ ಮಾಡಿರುವ ಜಾನುವಾರುಗಳು ಅಕಾಲಿಕ ರೋಗ ಇನ್ನಿತರೆ ಕಾರಣಗಳಿಂದ ಮರಣ ಹೊಂದಿದ ಸಮಯದಲ್ಲಿ ಆರ್ಥಿಕವಾಗಿ ಅಗುವ ನಷ್ಟವನ್ನು ಸರಿದೂಗಿಸಲು ರೈತರಿಗೆ ನೆರವು ನೀಡಲು ರಾಜ್ಯ ಸರಕಾರದಿಂದ ಈ ಯೋಜನೆಯಡಿ ನೀಡುವ ಆರ್ಥಿಕ ನೆರವನ್ನು ಪಡೆಯಲು ಈ ಕೆಳಗೆ ತಿಳಿಸಿರುವ ಅಗತ್ಯ ದಾಖಲಾತಿಗಳನ್ನು ಸಿದ್ದಪಡಿಸಿಕೊಂಡು ನಿಮ್ಮ ತಾಲ್ಲೂಕಿನ ಪಶು ಆಸ್ಪತ್ರೆಯನ್ನು ನೇರವಾಗಿ ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.
Anugrah Scheme Documents-ಅರ್ಜಿ ಸಲ್ಲಿಸಲು ಅವಶ್ಯಕ ದಾಖಲಾತಿಗಳು:
1) ಅರ್ಜಿದಾರ ರೈತರ ಆಧಾರ್ ಕಾರ್ಡ
2) ಬ್ಯಾಂಕ್ ಪಾಸ್ ಬುಕ್
3) ಪಶು ವೈದ್ಯರಿಂದ ಜಾನುವಾರು ಮರಣೋತ್ತರ ಪರೀಕ್ಷೆ ವರದಿ
Application Process-ಪರಿಹಾರವನ್ನು ಪಡೆಯಲು ಅರ್ಜಿ ವಿಲೇವಾರಿ ಪ್ರಕ್ರಿಯೆ:
ಜಾನುವಾರುಗಳು ಆಕಸ್ಮಿಕವಾಗಿ ಮರಣ ಹೊಂದಿದ ಸಮಯದಲ್ಲಿ ಸ್ಥಳೀಯ ಪಶು ಆಸ್ಪತ್ರೆಯನ್ನು ಭೇಟಿ ಮಾಡಿ ಮೊಟ್ಟ ಮೊದಲಿಗೆ ಜಾನುವಾರುವಿನ ಮರಣೋತ್ತರ ಪರೀಕ್ಷೆ ನಡೆಸಬೇಕು ಇದಾದ ಬಳಿಕ ಪಶುವೈದ್ಯರಿಂದ ದೃಢೀಕರಣ ಪತ್ರ ಪಡೆದುಕೊಂಡು ಇನ್ನಿತರೆ ಅಗತ್ಯ ದಾಖಲಾತಿಗಳನ್ನು ಸಲ್ಲಿಸಿ ನಿಮ್ಮ ತಾಲ್ಲೂಕಿನ ಪಶು ಆಸ್ಪತ್ರೆಯಲ್ಲಿ ಅರ್ಜಿಯನ್ನು ಸಲ್ಲಿಸಿದ ಬಳಿಕ ಪಶು ವೈದ್ಯಾಧಿಕಾರಿಗಳು ನಿಮ್ಮ ಅರ್ಜಿಯನ್ನು ಪರಿಶೀಲನೆ ಕೈಗೊಂಡು ಅರ್ಹ ರೈತರಿಗೆ ನೇರ ನಗದು ವರ್ಗಾವಣೆ ಮೂಲಕ ಅನುದಾನ ಬಿಡುಗಡೆಯಾದ ಬಳಿಕ ರೈತರ ಖಾತೆಗೆ ಹಣ ಜಮಾ ಮಾಡಲಾಗುತ್ತದೆ.
Veterinary Department Helpline number- ಈ ಯೋಜನೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ಪಶುಸಂಗೋಪನೆ ಇಲಾಖೆಯ ಸಹಾಯವಾಣಿ ಸಂಖ್ಯೆಗೆ “8277100200” ಕರೆ ಮಾಡಿ ಮಾಹಿತಿಯನ್ನು ಪಡೆಯಬಹುದು.
Veterinary Department Schemes-ಜಾನುವಾರುಗಳಿಗೆ ಸಂಬಂದಪಟ್ಟ ಇನ್ನಿತರೆ ಯೋಜನೆಗಳ ವಿವರ ಹೀಗಿದೆ:
ಪ್ರಸ್ತುತ ಬಜೆಟ್ ನಲ್ಲಿ ಜಾನುವಾರುಗಳಿಗೆ ಸಂಬಂಧಿಸಿದಂತೆ ಅನುಗ್ರಹ ಯೋಜನೆ ಜೊತೆಗೆ ಇನ್ನಿತರೆ ಯೋಜನೆಯನ್ನು ಜಾರಿಗೆ ತರಲಾಗಿದ್ದು ಇವುಗಳ ವಿವರ ಈ ಕೆಳಗಿನಂತಿದೆ.
2025-26ನೇ ಸಾಲಿನಲ್ಲಿ 100 ಪಶು ವೈದ್ಯಕೀಯ ಸಂಸ್ಥೆಗಳ ನೂತನ ಕಟ್ಟಡಗಳನ್ನು ನಬಾರ್ಡ್ ಸಹಯೋಗದೊಂದಿಗೆ ನಿರ್ಮಾಣ ಮಾಡಲು ಅನುದಾನವನ್ನು ಮೀಸಲಿಡಲಾಗಿದೆ. ರಾಜ್ಯದ ದೇಶಿ ರಾಸುಗಳ ತಳಿಗಳಾದ ಹಳ್ಳಿಕಾರ್, ಕಿಲಾರಿ, ಅಮೃತ್ ಮಹಲ್ ಹಾಗೂ ಬಂಡೂರು ಕುರಿ ತಳಿಯ ಸಂರಕ್ಷಣೆ ಹಾಗೂ ಅಭಿವೃದ್ದಿಗಾಗಿ 2 ಕೋಟಿ ರೂ ಒದಗಿಸಲು ನಿರ್ಣಯ ತೆಗೆದುಕೊಳ್ಳಲಾದೆ.