Actress: 12 ಕೋಟಿಯ ಕಾರು ಖರೀದಿಸಿದ್ರು ದರ್ಶನ್ ಸಿನಿಮಾ ನಟಿ! ಈ ಐಷಾರಾಮಿ ಕಾರು ಖರೀದಿಸಿದ ಮೊದಲ ಭಾರತೀಯ ನಟಿ ಇವರೇ

12 ಕೋಟಿ ರೂಪಾಯಿ ಬೆಲೆಬಾಳುವ ರೋಲ್ಸ್ ರಾಯ್ಸ್ ಕಲ್ಲಿನಾನ್ ಕಾರನ್ನು ಈ ದರ್ಶನ್ ಸಿನಿಮಾದ ಈ ನಟಿ ಖರೀದಿಸಿದ್ದಾರೆ. ಈ ದುಬಾರಿ ಕಾರು ಖರೀದಿಸಿದ ಮೊದಲ ಭಾರತೀಯ ನಟಿ ಇವರಾಗಿದ್ದಾರೆ.

 ಬಾಲಿವುಡ್ ನಟಿ ಊರ್ವಶಿ ರೌಟೇಲಾ 12 ಕೋಟಿ ರೂಪಾಯಿ ಮೌಲ್ಯದ ರೋಲ್ಸ್ ರಾಯ್ಸ್ ಕಲ್ಲಿನನ್ ಕಾರನ್ನು ಖರೀದಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. ಬಾಲಿವುಡ್ ಹಾಗೂ ಸೌತ್ ಸಿನಿಮಾಗಳಲ್ಲಿ ಮಿಂಚುತ್ತಿರುವ ಊರ್ವಶೀ ಸಿಕ್ಕಾಪಟ್ಟೆ ರಿಚ್ ಆಗಿದ್ದಾರೆ

ಬಾಲಿವುಡ್ ನಟಿ ಊರ್ವಶಿ ರೌಟೇಲಾ 12 ಕೋಟಿ ರೂಪಾಯಿ ಮೌಲ್ಯದ ರೋಲ್ಸ್ ರಾಯ್ಸ್ ಕಲ್ಲಿನನ್ ಕಾರನ್ನು ಖರೀದಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. ಬಾಲಿವುಡ್ ಹಾಗೂ ಸೌತ್ ಸಿನಿಮಾಗಳಲ್ಲಿ ಮಿಂಚುತ್ತಿರುವ ಊರ್ವಶೀ ಸಿಕ್ಕಾಪಟ್ಟೆ ರಿಚ್ ಆಗಿದ್ದಾರೆ

ಕನ್ನಡದಲ್ಲಿ ನಟ ದರ್ಶನ್ ಜೊತೆ ಐರಾವತ ಸಿನಿಮಾದಲ್ಲಿ ಊರ್ವಶಿ ರೌಟೇಲಾ ನಟಿಸಿದ್ರು. ಇತ್ತೀಚಿಗೆ ತೆಲುಗಿನ ಡಾಕು ಮಹಾರಾಜ್ ಚಿತ್ರದಲ್ಲಿನ ಸಾಂಗ್ ನಿಂದ ಭಾರೀ ಟ್ರೋಲ್ ಆಗಿದ್ರು. ಸಾಂಗ್ ಹಿಟ್ ಆದ್ರೂ ಹಾಡಿನ ಬಗ್ಗೆ ಕೆಲವರು ಅಪಸ್ವರ ತೆಗೆದಿದ್ರು. ಇದೀಗ ಊರ್ವಶಿ, ರೋಲ್ಸ್ ರಾಯ್ಸ್ ಕಲ್ಲಿನನ್ ಹೊಂದಿರುವ ಭಾರತದ ಮೊದಲ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಬಾಲಿವುಡ್ ಬ್ಯೂಟಿ ಊರ್ವಶಿ ರೌಟೇಲಾ, ಫೋರ್ಬ್ಸ್ ಶ್ರೀಮಂತ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಮುಖೇಶ್ ಅಂಬಾನಿ, ಶಾರುಖ್ ಖಾನ್, ವಿವೇಕ್ ಒಬೆರಾಯ್, ಅಲ್ಲು ಅರ್ಜುನ್, ಭೂಷಣ್ ಕುಮಾರ್, ಅಜಯ್ ದೇವಗನ್ ಮುಂತಾದ ಪ್ರಮುಖ ಸೆಲೆಬ್ರಿಟಿಗಳು ಈಗಾಗಲೇ ಈ ಐಷಾರಾಮಿ ಕಾರನ್ನು ಹೊಂದಿದ್ದಾರೆ. ಈ ದುಬಾರಿ ಕಾರು ಖರೀದಿಸಿದವರ ಲಿಸ್ಟ್ ಗೆ ಊರ್ವಶಿ ಸೇರಿದ್ದಾರೆ.

ಊರ್ವಶಿ ರೌಟೇಲಾ ಹಿಂದಿ ಸಿನಿಮಾ ಮೂಲಕ ಭಾರೀ ಕ್ರೇಜ್ ಹುಟ್ಟಿಸಿದ್ದಾರೆ. ಈಗಾಗಲೇ 'ಸನಮ್ ರೇ', 'ಗ್ರೇಟ್ ಗ್ರ್ಯಾಂಡ್ ಮಸ್ತಿ' ಮತ್ತು 'ಹೇಟ್ ಸ್ಟೋರಿ 4' ನಂತಹ ರೊಮ್ಯಾಂಟಿಕ್ ಕಾಮಿಡಿ ಚಿತ್ರಗಳಲ್ಲಿ ಊರ್ವಶಿ ನಟಿಸಿದ್ದಾರೆ. ಆದರೆ ಹೆಚ್ಚಿನ ಮನ್ನಣೆ ಸಿಕ್ಕಿಲ್ಲ. ಸದ್ಯ ತೆಲುಗು ಸಿನಿಮಾಗಳಲ್ಲಿ ಐಟಂ ಸಾಂಗ್ಗಳಿಂದ ಕುಣಿಯುತ್ತಾ ಸದ್ದು ಮಾಡುತ್ತಿದ್ದಾರೆ. ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಬೋಲ್ಡ್ ಸಿನಿಮಾ ಮೂಲಕ ಮಿಂಚುತ್ತಿದ್ದಾರೆ.

ರೌಟೇಲಾ ಸಿಂಗ್ ಅವರ ಸಾಬ್ ದಿ ಗ್ರೇಟ್ ಚಿತ್ರದ ಮೂಲಕ ಊರ್ವಶಿ ಹಿಂದಿಯಲ್ಲಿ ಪದಾರ್ಪಣೆ ಮಾಡಿದರು. ಈ ಸಿನಿಮಾದಲ್ಲಿ ಸನ್ನಿ ಡಿಯೋಲ್ ಎದುರು ನಟಿಸಿದ್ದರು. ಆ ನಂತರ ಸನಮ್ ರೇ, ಹೇಟ್ ಸ್ಟೋರಿ 4, ಪಾಗಲ್ ಪಂಟಿ ಮುಂತಾದ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. 

ಊರ್ವಶಿ ತೆಲುಗಿನಲ್ಲಿ ಐಟಂ ಸಾಂಗ್ಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದರು. ಅವರು ಚಿರಂಜೀವಿ ಅವರ 'ವಾಲ್ತೇರು ವೀರಯ್ಯ'ದಲ್ಲಿ ಬಾಸ್ ಪಾರ್ಟಿಯಲ್ಲಿ ನಟಿಸಿದ್ದಾರೆ. ಆ ನಂತರ ಅಖಿಲ್ ‘ಏಜೆಂಟ್’ ಚಿತ್ರದಲ್ಲಿ ವೈಲ್ಡ್ ಸಾಲಾ ಹಾಡಿನಲ್ಲಿ ಮಿಂಚಿದ್ದರು. ಬ್ರೋ ಚಿತ್ರದಲ್ಲಿ ಪವನ್ ಕಲ್ಯಾಣ್ ಮತ್ತು ಸಾಯಿ ತೇಜ್ ಅವರ ಇತ್ತೀಚಿನ ಹಾಡು ಮೈ ಡಿಯರ್ ಮಾರ್ಕಂಡೇಯ. ಮತ್ತು ಇನ್ನೊಂದು ಇತ್ತೀಚಿನ ಚಿತ್ರ ರಾಮ್ 'ಸ್ಕಂದ'ದಲ್ಲಿ ಐಟಂ ಸಾಂಗ್ ನಲ್ಲಿ ಮಿಂಚಿದ್ರು.

ಉರ್ವಶಿ ರೌಟೇಲಾ 25 ಫೆಬ್ರವರಿ 1994 ರಂದು ಹರಿದ್ವಾರದಲ್ಲಿ ಜನಿಸಿದ್ರು. ಮೀರಾ ರೌಟೇಲಾ, ಮನ್ವರ್ ಸಿಂಗ್ ರೌಟೇಲಾ ಗರ್ವಾಲಿ ರಜಪೂತ ಕುಟುಂಬಕ್ಕೆ ಸೇರಿದವರು. 15 ನೇ ವಯಸ್ಸಿನಲ್ಲಿ ಫ್ಯಾಶನ್ ನತ್ತ ಊರ್ವಶಿ ಚಿತ್ತ ಹರಿಸಿದ್ರು. ಮತ್ತೆ ನಟಿ ಹಿಂತಿರುಗಿ ನೋಡಲಿಲ್ಲ. 2011 ರಲ್ಲಿ, ಭಾರತೀಯ ಪ್ರಿನ್ಸ್ ಮಿಸ್ ಏಷ್ಯನ್ ಸೂಪರ್ ಮಾಡೆಲ್ 2011 ಪ್ರಶಸ್ತಿಗಳನ್ನು ಗೆದ್ರು. 2014 ರಲ್ಲಿ, ಆಲ್ಬಂ ಲವ್ ಡಾಸ್ ವಿತ್ ಯೋಯೋ ಹನಿಸಿಂಗ್ ಅವರಿಗೆ ಒಳ್ಳೆಯ ಹೆಸರನ್ನು ತಂದಿತು. 

ಅಂಡಮಾನ್ ನಿಕೋಬಾರ್ ಸರ್ಕಾರವು ಜೂನಿಯರ್ ಬ್ಯೂಟಿ ವುಮೆನ್ ಯೂನಿವರ್ಸ್ 2018 ಅನ್ನು ಆಯೋಜಿಸಿತ್ತು. ಇದರಲ್ಲಿ ನಟಿ ಉತ್ತರಾಖಂಡ ರತ್ನ ಪ್ರಶಸ್ತಿಯನ್ನು ಪಡೆದರು. ಸಿನಿಮಾ ಜೊತೆಗೆ ಊರ್ವಶಿ ರೌಟೇಲಾ ವೀಡಿಯೊ ಆಲ್ಬಮ್ ಗಳ ಜೊತೆಗೆ ಅನೇಕ ರಿಯಾಲಿಟಿ ಶೋಗಳಿಗೆ ನಿರೂಪಕಿಯಾಗಿ ಕೆಲಸ ಮಾಡಿದ್ದಾರೆ. 

Previous Post Next Post