Uchitha Holige Tarabeti-ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ತರಬೇತಿ

Uchitha Holige Tarabeti-ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ತರಬೇತಿ

ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ, ಕುಮಟಾ ಕೇಂದ್ರದಿಂದ 1 ತಿಂಗಳ ಉಚಿತ ಟೈಲರಿಂಗ್(Sewing Machine Training) ತರಬೇತಿಯನ್ನು ನೀಡಲು ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸುವುದು ಹೇಗೆ? ಅರ್ಜಿ ಸಲ್ಲಿಸುವ ವಿಧಾನ ಸೇರಿದಂತೆ ಸಂಪೂರ್ಣ ವಿವರಣೆಯನ್ನು ಈ ಅಂಕಣದಲ್ಲಿ ತಿಳಿಸಲಾಗಿದೆ.

ಇತೀಚಿನ ದಿನಗಳಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶದ ಮಹಿಳೆಯರು ಹೊಲಿಗೆ ಯಂತ್ರ(Holige yantra) ತರಬೇತಿ ಪಡೆದು ಸ್ವಾವಲಂಬನೆ ಜೀವನವನ್ನು ನಡೆಸಲು ಹೆಚ್ಚು ಉತ್ಸಾಹಕರಾಗಿದ್ದು ಈ ನಿಟ್ಟಿನಲ್ಲಿ ಆಸಕ್ತ ಮಹಿಳೆಯರಿಗೆ ಉಚಿತವಾಗಿ ಹೊಲಿಗೆ ತರಬೇತಿಯನ್ನು ನೀಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ.

ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ, ಕುಮಟಾ ಕೇಂದ್ರದಿಂದ ಉಚಿತವಾಗಿ ಹೊಲಿಗೆ ಯಂತ್ರ ತರಬೇತಿಯನ್ನು(Holige Yantra Tarabeti) ನೀಡುವುದರ ಜೊತೆಗೆ ತರಬೇತಿಯನ್ನು ಪಡೆದ ಬಳಿಕ ಸ್ವ-ಉದ್ಯೋಗವನ್ನು ಆರಂಭಿಸಲು ಬ್ಯಾಂಕ್ ಮೂಲಕ ಸಾಲವನ್ನು ಪಡೆಯುವುದರ ಕುರಿತು ಸಹ ಮಾರ್ಗದರ್ಶನ ನೀಡಲಾಗುತ್ತದೆ.

Who can apply For sewing machine Training-ಉಚಿತ ಹೊಲಿಗೆ ತರಬೇತಿಯನ್ನು ಪಡೆಯಲು ಅರ್ಜಿ ಸಲ್ಲಿಸಲು ಅರ್ಹತೆಗಳು:

  • ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
  • ಮಹಿಳಾ ಅಭ್ಯರ್ಥಿಗಳಿಗೆ ಮಾತ್ರ ಈ ತರಬೇತಿಯಲ್ಲಿ ಭಾಗವಹಿಸಲು ಅವಕಾಶವಿರುತ್ತದೆ.
  • ಅರ್ಜಿದಾರ ಮಹಿಳೆಗೆ ವಯಸ್ಸು 18 ರಿಂದ 45 ವರ್ಷದ ಒಳಗಿರಬೇಕು. 
  • ಅಭ್ಯರ್ಥಿಗೆ ಕನ್ನಡವನ್ನು ಓದಲು ಹಾಗೂ ಬರೆಯಲು ಬರಬೇಕು ಅಂತವರಿಗೆ ಮಾತ್ರ ಅವಕಾಶವಿರುತ್ತದೆ. 
  • ಅರ್ಜಿದಾರರು ಒಮ್ಮೆ ತರಬೇತಿ ಕೇಂದ್ರದಿಂದ ತರಬೇತಿ ಪಡೆದ ನಂತರ ಸ್ವ-ಉದ್ಯೋಗ ಆರಂಭಿಸಲು ಆಸಕ್ತಿಯನ್ನು ಹೊಂದಿರಬೇಕು.
  • BPL ಪಡಿತರ ಚೀತಿಯನ್ನು ಹೊಂದಿರುವ ಅಭ್ಯರ್ಥಿಗಳಿಗೆ ಮೊದಲ ಅದ್ಯತೆ ನೀಡಲಾಗುತ್ತದೆ ಎಂದು ತರಬೇತಿ ಕೇಂದ್ರದ ಅಧಿಕೃತ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

Sewing machine Training dates-ತರಬೇತಿ ನಡೆಯುವ ಅವದಿ:

ಉಚಿತ ಹೊಲಿಗೆ ಯಂತ್ರ ತರಬೇತಿಯು ದಿನಾಂಕ- 05 ಮಾರ್ಚ್ 2025 ರಿಂದ ಆರಂಭವಾಗಿ 03 ಏಪ್ರಿಲ್ 2025 ಕ್ಕೆ ಮುಕ್ತಾಯವಾಗುತ್ತದೆ ಒಟ್ಟು 30 ದಿನಗಳ ತರಬೇತಿಯು ಇದಾಗಿರುತ್ತದೆ.

Required Documents For sewing machine Training-ಅರ್ಜಿ ಸಲ್ಲಿಸಲು ಅವಶ್ಯಕ ದಾಖಲಾತಿಗಳು:

1) ಅರ್ಜಿದಾರ ಮಹಿಳೆಯ ಆಧಾರ್ ಕಾರ್ಡ ಪ್ರತಿ

2) ಪೋಟೋ

3) ಪಡಿತರ ಚೀಟಿ ಪ್ರತಿ

4) ಬ್ಯಾಂಕ್ ಪಾಸ್ ಬುಕ್ ಪ್ರತಿ

5) ಪಾನ್ ಕಾರ್ಡ

6) ಮೊಬೈಲ್ ನಂಬರ್

Free sewing machine Training-ಈ ತರಬೇತಿಯು ಊಟ ವಸತಿಯೊಂದಿಗೆ ಸಂಪೂರ್ಣ ಉಚಿತವಾಗಿದೆ:

ಈ ತರಬೇತಿಯು ಒಟ್ಟು 30 ದಿನ ಆಯೋಜನೆ ಮಾಡಲಾಗಿದ್ದು ತರಬೇತಿ ಕೇಂದ್ರದಿಂದ ತರಬೇತಿ ಭಾಗವಹಿಸುವ ಎಲ್ಲಾ ಅಭ್ಯರ್ಥಿಗಳಿಗೆ ಉಚಿತ ವಸತಿ ಮತ್ತು ಊಟದ ವ್ಯವಸ್ಥೆ ಇರುತ್ತದೆ ಮತ್ತು ತರಬೇತಿಯು ಸಂಪೂರ್ಣ ಉಚಿತವಾಗಿದ್ದು ಯಾವುದೇ ಶುಲ್ಕ ಪಾವತಿ ಮಾಡುವ ಅವಶ್ಯಕತೆ ಇರುವುದಿಲ್ಲ ಎಂದು ತಿಳಿಸಲಾಗಿದೆ.

How To Apply-ಅರ್ಜಿಯನ್ನು ಸಲ್ಲಿಸುವುದು ಹೇಗೆ?

ಅರ್ಹ ಅಭ್ಯರ್ಥಿಗಳು ತರಬೇತಿಯಲ್ಲಿ ಭಾಗವಹಿಸುವ ಮುಂಚಿತವಾಗಿ ಈ 9449860007, 9538281989, 9916783825, 8880444612 ಮೊಬೈಲ್ ನಂಬರ್ ಗಳಿಗೆ ಕರೆ ಮಾಡಿ ನಿಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕು. ತರಬೇತಿ ಆರಂಭವಾಗುವ ದಿನದಂದು ಅಗತ್ಯ ದಾಖಲಾತಿಗಳನ್ನು ತೆಗೆದುಕೊಂಡು ಹೋಗಿ ತರಬೇತಿಯಲ್ಲಿ ಭಾಗವಹಿಸಬೇಕು.

Training Center Address -ತರಬೇತಿ ನಡೆಯುವ ಸ್ಥಳ:

ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ

ಇಂಡಿಸ್ಟ್ರಿಯಲ್ ಏರಿಯಾ, ಹೆಗಡೆ ರಸ್ತೆ, ಕುಮಟಾ, ಉತ್ತರಕನ್ನಡ

Free sewing machine subsidy Yojana-ಹೊಲಿಗೆ ಯಂತ್ರಕ್ಕೆ ಸಹಾಯಧನ ಪಡೆಯಬಹುದು ಹೇಗೆ?

ನಮ್ಮ ರಾಜ್ಯದಲ್ಲಿ ಸಾರ್ವಜನಿಕರು ಹೊಲಿಗೆ ಯಂತ್ರಕ್ಕೆ ಸಹಾಯಧನವನ್ನು ಪಡೆಯಲು ಎರಡು ಯೋಜನೆಯಡಿ ಅವಕಾಶವಿರುತ್ತದೆ, ಒಂದನೇಯದು ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ(PM vishwakarma ) ಎರಡನೇಯದು ಗ್ರಾಮೀಣ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಿಂದಲು ಸಹ ಹೊಲಿಗೆ ಯಂತ್ರಕ್ಕೆ ಸಹಾಯಧನವನ್ನು ಪಡೆಯಬಹುದಾಗಿದೆ.

PM vishwakarma-ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ಕುರಿತು ಸಂಪೂರ್ಣ ಮಾಹಿತಿಯನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ- Read More

Free sewing machine-ಗ್ರಾಮೀಣ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಯೋಜನೆಯ ಕುರಿತು ಸಂಪೂರ್ಣ ಮಾಹಿತಿಯನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ- Read More

Post a Comment

Previous Post Next Post

Top Post Ad

CLOSE ADS
CLOSE ADS
×