ರೇಷನ್ ಕಾರ್ಡ್ ಅಪ್ಡೇಟ್: ರೇಷನ್ ಬದಲಿಗೆ ಹಣ ನೀಡುವ ಯೋಜನೆಗೆ ಚರ್ಚೆ

ರೇಷನ್ ಕಾರ್ಡ್ ಅಪ್ಡೇಟ್: ರೇಷನ್ ಬದಲಿಗೆ ಹಣ ನೀಡುವ ಯೋಜನೆಗೆ ಚರ್ಚೆ

ನಾಡಿನ ಪಡಿತರ ಚೀಟಿ ಹೊಂದಿರುವ ಫಲಾನುಭವಿಗಳಿಗೆ ಮಹತ್ವದ ಸುದ್ದಿಯೊಂದು ಹೊರಬಿದ್ದಿದೆ. ಹೊಸ ನಿಯಮಗಳು ಜಾರಿಗೆ ಬರಲಿದ್ದು, ಇ-ಕೆವೈಸಿ ಕಡ್ಡಾಯ, ಆದಾಯ ಮಿತಿಯ ಪರಿಷ್ಕರಣೆ ಸೇರಿದಂತೆ ಹಲವು ಮಹತ್ವದ ಬದಲಾವಣೆಗಳಿವೆ.

  • ಇ-ಕೆವೈಸಿ ಇಲ್ಲದೆ ರೇಷನ್ ಕಾರ್ಡ್ ಅಮಾನ್ಯ!
  • ಬಿಪಿಎಲ್‌ ಮತ್ತು ಎಪಿಎಲ್‌ ವರ್ಗೀಕರಣದಲ್ಲಿ ಬದಲಾವಣೆ.
  • ರೇಷನ್ ಬದಲಿಗೆ ಹಣ ನೀಡುವ ಯೋಜನೆಗೆ ಚರ್ಚೆ.

Ration Card : ಭಾರತದಲ್ಲಿ ಪಡಿತರ ಚೀಟಿಗೆ ಸಂಬಂಧಿಸಿದಂತೆ ಸರ್ಕಾರ ಹೊಸ ನಿಯಮಗಳನ್ನು ಜಾರಿಗೆ ತರಲು ಸಜ್ಜಾಗಿದೆ. ಕೋವಿಡ್ ನಂತರ ಪಡಿತರ ವ್ಯವಸ್ಥೆ ಬದಲಾಗುತ್ತಿರುವುದರಿಂದ, ಫಲಾನುಭವಿಗಳಿಗೆ ಹೊಸ ಮಾರ್ಗಸೂಚಿಗಳು (New Rules) ಅನುಸರಿಸುವ ಅಗತ್ಯವಿದೆ.

ಈ ನಿಟ್ಟಿನಲ್ಲಿ, ಇ-ಕೆವೈಸಿ (e-KYC) ಕಡ್ಡಾಯವಾಗಿದ್ದು, ನಿರ್ದಿಷ್ಟ ಅವಧಿಯಲ್ಲಿ ಮಾಡಿಸಿಕೊಳ್ಳದವರು ಪಡಿತರ ಸೌಲಭ್ಯ ಪಡೆಯಲು ಸಾಧ್ಯವಿರುವುದಿಲ್ಲ.

ಇದೆ ತರಹದ ನೇಮಕಾತಿ,ವಿದ್ಯಾರ್ಥಿವೇತನ,ಕೇಂದ್ರ/ರಾಜ್ಯ ಯೋಜನೆಗಳಿಗಾಗಿ ನಮ್ಮ ಟೆಲಿಗ್ರಾಮ ಚಾನಲ್ ಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ

ರೇಷನ್ ಕಾರ್ಡ್ ಅಪ್ಡೇಟ್: ರೇಷನ್ ಬದಲಿಗೆ ಹಣ ನೀಡುವ ಯೋಜನೆಗೆ ಚರ್ಚೆ!

ಇನ್ನು ಬಿಪಿಎಲ್‌ (BPL Card) ಮತ್ತು ಎಪಿಎಲ್‌ (APL Card) ಕಾರ್ಡ್‌ಗಳನ್ನು ಪರಿಶೀಲನೆ ಮಾಡಿ, ಸರ್ಕಾರ ಅನರ್ಹರ ಪಡಿತರ ಚೀಟಿಗಳನ್ನು ಅಮಾನ್ಯಗೊಳಿಸುತ್ತಿದೆ. ಈ ಹಿನ್ನೆಲೆಯಲ್ಲಿ, ನಕಲಿ ದಾಖಲೆಗಳ ಮೇಲೆ ಪಡಿತರ ಸೌಲಭ್ಯ ಪಡೆಯುತ್ತಿದ್ದವರನ್ನು ಗುರುತಿಸಿ ಕ್ರಮ ಕೈಗೊಳ್ಳಲಾಗುತ್ತಿದೆ. ಇದರಿಂದಾಗಿ ಅನೇಕ ಬಡ ಕುಟುಂಬಗಳು ಬಿಪಿಎಲ್‌ ಪಟ್ಟಿಯಿಂದ ಹೊರ ಬೀಳುವ ಸಾಧ್ಯತೆಯೂ ಇದೆ.

ಹೊಸ ನಿಯಮಗಳ ಪ್ರಕಾರ, ನಗರ ಪ್ರದೇಶದ ಫಲಾನುಭವಿಗಳ ವಾರ್ಷಿಕ ಆದಾಯ ಮಿತಿಯನ್ನು ₹3 ಲಕ್ಷ ಹಾಗೂ ಗ್ರಾಮೀಣ ಪ್ರದೇಶದವರಿಗೆ ₹2 ಲಕ್ಷಕ್ಕೆ ಪರಿಷ್ಕರಿಸಲಾಗಿದೆ. ಈ ಮಿತಿಯನ್ನು ಮೀರಿದವರು ಪಡಿತರ ಸೌಲಭ್ಯ ಪಡೆಯಲು ಅರ್ಹರಾಗಿರುವುದಿಲ್ಲ.

ಪಡಿತರ ಪದಾರ್ಥಗಳ ಬದಲಿಗೆ ನಗದು ಪಾವತಿ ಯೋಜನೆ

ಇನ್ನು ಪಡಿತರ ವ್ಯವಸ್ಥೆಯಲ್ಲಿ ಮತ್ತೊಂದು ದೊಡ್ಡ ಬದಲಾವಣೆ ಎಂಬುದಾಗಿ, ಸರ್ಕಾರ ಪಡಿತರ ಪದಾರ್ಥಗಳ ಬದಲಿಗೆ ನಗದು ಪಾವತಿ ಯೋಜನೆಯನ್ನು ಪರಿಗಣಿಸುತ್ತಿದೆ. ಈ ಕುರಿತು ನೀತಿ ಆಯೋಗ ಸಭೆಯಲ್ಲಿ ಚರ್ಚೆಯಾಗಿದ್ದು, ಸರ್ಕಾರದ ಅಂತಿಮ ನಿರ್ಧಾರ ಇನ್ನೂ ಬಾಕಿಯಿದೆ.

ಆದರೆ, ಈ ಕ್ರಮ ಜಾರಿಗೆ ಬಂದರೆ, ಜನರು ತಮ್ಮ ಅಗತ್ಯಗಳಿಗೆ ತಕ್ಕಂತೆ ಪಡಿತರ ಹಣವನ್ನು ಬಳಸಿಕೊಳ್ಳಲು ಅನುಕೂಲವಾಗಬಹುದು, ಆದರೂ ಕೆಲವರು ಈ ಬಗ್ಗೆ ನಿರುತ್ಸಾಹ ವ್ಯಕ್ತಪಡಿಸಿದ್ದಾರೆ. ಹಣ ಕೊಟ್ಟರೆ ಅದು ಬೇರೆ ರೀತಿ ಖರ್ಚಾಗಲಿದೆ ಎಂದು ಕೆಲ ಮಹಿಳೆಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇನ್ನು, ಸರ್ಕಾರದ ಇತರ ಯೋಜನೆಗಳಿಗೂ ಪಡಿತರ ಚೀಟಿಯು ಅನಿವಾರ್ಯ ದಾಖಲೆಯಾಗಿದ್ದು, ಆರೋಗ್ಯ ವಿಮೆ (Health Insurance), ಗ್ಯಾಸ್ ಸಬ್ಸಿಡಿ (Gas Subsidy) ಸೇರಿದಂತೆ ಅನೇಕ ಸೌಲಭ್ಯಗಳನ್ನು ಪಡೆಯಲು ಇದು ಉಪಯುಕ್ತವಾಗಲಿದೆ.

ಪಡಿತರ ಚೀಟಿಯ ಹೊಸ ನಿಯಮಗಳು: ಗಮನಿಸಬೇಕಾದ ಪ್ರಮುಖ ಮಾಹಿತಿಗಳು!

ಪಡಿತರ ಚೀಟಿದಾರರಿಗೆ ಸರ್ಕಾರದಿಂದ ಹೊಸ ನಿಯಮಗಳನ್ನು ಜಾರಿಗೆ ತರುವ ಸೂಚನೆ ನೀಡಲಾಗಿದೆ. ಈ ನಿಯಮಗಳಂತೆ, ಕಾರ್ಡ್‌ಗಳನ್ನು ಅಪ್ಡೇಟ್ (Ration Card Update) ಮಾಡುವುದು ಮತ್ತು ಹೊಸ ಷರತ್ತುಗಳನ್ನು ಪಾಲಿಸುವುದು ಕಡ್ಡಾಯ.

ನಿಯಮಗಳನ್ನು ಅನುಸರಿಸದಿದ್ದರೆ ಪಡಿತರ ಚೀಟಿ ರದ್ದುಗೊಳ್ಳುವ ಸಾಧ್ಯತೆ ಇದೆ. ಹೀಗಾಗಿ, ಈ ಹೊಸ ನಿಯಮಗಳ ಕುರಿತ ಪ್ರಮುಖ ಮಾಹಿತಿಗಳನ್ನು ಪಾಲಿಸಬೇಕಾಗುತ್ತದೆ.

ಇ-ಕೆವೈಸಿ ಕಡ್ಡಾಯ

ಪಡಿತರ ಚೀಟಿದಾರರು ತಮ್ಮ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು.

ಇ-ಕೆವೈಸಿ ಮಾಡದಿದ್ದರೆ ಪಡಿತರ ಚೀಟಿಯನ್ನು ರದ್ದುಗೊಳಿಸಲಾಗುವುದು.

ಸರ್ಕಾರದ ಪ್ರಮುಖ ಜಾಲತಾಣ: https://ahara.karnataka.gov.in/

Post a Comment

Previous Post Next Post

Top Post Ad

CLOSE ADS
CLOSE ADS
×