CISF Constable Recruitment : ಕೇಂದ್ರ ಕೈಗಾರಿಕಾ ಭದ್ರತಾ ಪಡೆಯಲ್ಲಿ 1 ಸಾವಿರಕ್ಕೂ ಹೆಚ್ಚು ಕಾನ್ಸ್ಟೇಬಲ್ ಡ್ರೈವರ್ ಹುದ್ದೆಗಳ ಭರ್ತಿ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಕೇಂದ್ರ ಕೈಗಾರಿಕಾ ಭದ್ರತಾ ಪಡೆಯು ಕೇಂದ್ರ ಸಶಸ್ತ್ರ ಪಡೆಗಳಲ್ಲಿ ಒಂದಾಗಿದ್ದು, ಇವು ಕೇಂದ್ರ ಸರ್ಕಾರಿ ಹುದ್ದೆಗಳಾಗಿವೆ. ಯಾವ ಹುದ್ದೆಗಳಿಗೆ ಈ ನೇಮಕಾತಿ ನಡೆಯುತ್ತಿದೆ? ಏನೆಲ್ಲಾ ಅರ್ಹತೆಗಳನ್ನು ಒಳಗೊಂಡಿರಬೇಕು ಹಾಗೂ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹೇಗೆ ಎಂಬ ಮಾಹಿತಿ ಇಲ್ಲಿದೆ.
ನೇಮಕಾತಿ ಮಾಡಿಕೊಳ್ಳುತ್ತಿರುವ ಹುದ್ದೆಗಳ ವಿವರ :
ಈ ನೇಮಕಾತಿಯಲ್ಲಿ ಒಟ್ಟು 1,124 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಅವುಗಳಲ್ಲಿ ವಿಭಾಗವಾರು ಹುದ್ದೆಗಳ ವಿಂಗಡಣೆ ಮಾಡಲಾಗಿದ್ದು, ಈ ಕೆಳಗಿನಂತಿದೆ.
• ಕಾನ್ ಸ್ಟೇಬಲ್ / ಡ್ರೈವರ್ – 845 ಹುದ್ದೆಗಳು
• ಕಾನ್ ಸ್ಟೇಬಲ್ / ಡ್ರೈವರ್ ಕಂ ಪಂಪ್ ಆಪರೇಟರ್ – 279 ಹುದ್ದೆಗಳು
ಅರ್ಜಿ ಸಲ್ಲಿಕೆಗೆ ಇರಬೇಕಾದ ಸಾಮಾನ್ಯ ಅರ್ಹತೆಗಳು :
10ನೇ ತರಗತಿ ಪಾಸಾದಂತಹ ಹಾಗೂ ಅದರ ಜೊತೆಗೆ ಲಘು ವಾಹನ & ಭಾರಿ ವಾಹನ ಚಾಲನಾ ಪರವಾನಾಗಿ ಹೊಂದಿರುವಂತಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು. ವಯೋಮಿತಿ ಅರ್ಹತೆ ನೋಡುವುದಾದರೆ 21 ರಿಂದ 27 ವರ್ಷದ ಒಳಗಿನ ಅಭ್ಯರ್ಥಿಗಳಾಗಿರಬೇಕು.
ಅರ್ಜಿ ಶುಲ್ಕ ಹಾಗೂ ತಿಂಗಳ ಸಂಬಳ :
• ಈ ಒಂದು ನೇಮಕಾತಿಯಲ್ಲಿ ಅಂತಿಮವಾಗಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ 21,700ರೂ. ರಿಂದ 69,100ರೂ. ನೀಡಲಾಗುತ್ತದೆ.
• ಅರ್ಜಿ ಶುಲ್ಕ – ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮಾಜಿ ಸೈನಿಕ ಹಾಗೂ ಅಂಗವಿಕಲ ಅಭ್ಯರ್ಥಿಗಳು ಉಚಿತವಾಗಿ ಅರ್ಜಿ ಸಲ್ಲಿಸಬಹುದು ಇವರನ್ನು ಹೊರತುಪಡಿಸಿ ಉಳಿದ ವರ್ಗದ ಅಭ್ಯರ್ಥಿಗಳಿಗೆ 100ರೂ. ನಿಗದಿಪಡಿಸಲಾಗಿದೆ.
ಅರ್ಜಿ ಸಲ್ಲಿಸುವ ವಿಧಾನ :
CISF ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ನೋಂದಣಿಯಾಗಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಿದ ಬಳಿಕ ಅರ್ಜಿಯನ್ನು ಪ್ರಿಂಟ್ ತೆಗೆಸಿ ಈ ಕೆಳಗಿನ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸಿ :
ಅರ್ಜಿ ಸಲ್ಲಿಕೆ ವಿಳಾಸ :
DIG, CISF (South Zone) HQrs., ‘D’ Block, Rajaji Bhawan, Basant Nagar, Chennai,
Tamil Nadu-600090.
ವೆಬ್ಸೈಟ್ ವಿಳಾಸ : https://cisfrectt.cisf.gov.in