ಟ್ರೈನ್ ಟಿಕೆಟ್ ಬುಕಿಂಗ್‌ನಲ್ಲಿ ಹೊಸ ಸೌಲಭ್ಯ! ಹಣ ಇಲ್ಲದೇ ಇದ್ರೂ ಟಿಕೆಟ್ ಬುಕ್ ಮಾಡಿ. ಇಲ್ಲಿದೆ ವಿವರ

ಟ್ರೈನ್ ಟಿಕೆಟ್ ಬುಕಿಂಗ್‌ನಲ್ಲಿ ಹೊಸ ಸೌಲಭ್ಯ! ಹಣ ಇಲ್ಲದೇ ಇದ್ರೂ ಟಿಕೆಟ್ ಬುಕ್ ಮಾಡಿ. ಇಲ್ಲಿದೆ ವಿವರ

“IRCTC ಪರಿಚಯಿಸಿದ ‘ಬುಕ್ ನೌ, ಪೇ ಲೇಟರ್'(‘Book Now, Pay Later’) ಯೋಜನೆ – ಪ್ರಯಾಣಿಕರಿಗಾಗಿ ಸುಲಭ ಪಾವತಿ ಆಯ್ಕೆ!”

ಪ್ರಯಾಣವನ್ನು ಯೋಜಿಸುವಾಗ ಸಾಮಾನ್ಯವಾಗಿ ಎದುರಾಗುವ ಒಂದು ದೊಡ್ಡ ಸಮಸ್ಯೆ ಹಣದ ಕೊರತೆ. ಈ ಸಂದರ್ಭಗಳಲ್ಲಿ ಜನರು ಯೋಜನೆಯನ್ನು ಮುಂದೂಡಲು ಅಥವಾ ಪರ್ಯಾಯ ವ್ಯವಸ್ಥೆಗಳನ್ನು ಹುಡುಕಲು ಮುಂದಾಗುತ್ತಾರೆ. ಈ ಸಮಸ್ಯೆಯನ್ನು ಮನಗಂಡ ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ಲಿಮಿಟೆಡ್ (IRCTC) ಈಗ ಪ್ರಯಾಣಿಕರಿಗೆ(passengers) ಹೊಸ ಮತ್ತು ಅನುಕೂಲಕರ ಆಯ್ಕೆಯನ್ನು ಪರಿಚಯಿಸಿದೆ. ‘ಬುಕ್ ನೌ, ಪೇ ಲೇಟರ್’(‘Book Now, Pay Later’) ಎಂಬ ಈ ಆಧುನಿಕ ಸೌಲಭ್ಯವು, ಯಾವುದೇ ಮುಂಗಡ ಪಾವತಿಯಿಲ್ಲದೆ ಟಿಕೆಟ್‌ಗಳನ್ನು ಬುಕ್ ಮಾಡಲು ಅನುಮತಿಸುತ್ತದೆ. ಈ ಹೊಸ ಕ್ರಮವು ನೂರಾರು ಪ್ರಯಾಣಿಕರಿಗೆ ಅನುಕೂಲಕರ ಮಾರ್ಗವಾಗಿದ್ದು, ತಕ್ಷಣವೇ ಪಾವತಿಸಲು ಅಸಮರ್ಥರಾದವರಿಗೂ ಟಿಕೆಟ್ ಬುಕ್( ticket Book ) ಮಾಡಲು ಅವಕಾಶ ಮಾಡಿಕೊಡುತ್ತದೆ. ‘ಬುಕ್ ನೌ, ಪೇ ಲೇಟರ್’ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

‘ಬುಕ್ ನೌ, ಪೇ ಲೇಟರ್’ ಯೋಜನೆಯ ಮುಖ್ಯ ಅಂಶಗಳು ಯಾವುವು?:

IRCTC ಇದರಡಿ ಯಾವುದೇ ಮುಂಗಡ ಪಾವತಿಯನ್ನು ಮಾಡದೇ ನಿಮ್ಮ ರೈಲು ಟಿಕೆಟ್ ಅನ್ನು ಬುಕ್ ಆದರೆ ಈ ಯೋಜನೆಯನ್ನು ನೀವು ಬಳಸಿಕೊಳ್ಳಲು ಕೆಲವು ಷರತ್ತುಗಳು ಮತ್ತು ನಿಯಮಗಳನ್ನು ಪಾಲನೆ ಮಾಡಬೇಕು. ಟಿಕೆಟ್ ಬುಕ್ ಮಾಡಿದ 14 ದಿನಗಳ(14 days) ಒಳಗಾಗಿ ಪಾವತಿಯನ್ನು ಪೂರ್ಣಗೊಳಿಸಬೇಕು. ತಡವಾದಲ್ಲಿ 3.5% ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ.

‘ಬುಕ್ ನೌ, ಪೇ ಲೇಟರ್’ ಸೇವೆಯನ್ನು ಹೇಗೆ ಬಳಸುವುದು ?:

ಈ ಹೊಸ ಯೋಜನೆ ಅಳವಡಿಸಲು IRCTC ಪ್ಲಾಟ್‌ಫಾರ್ಮ್‌ನಲ್ಲಿ ಪ್ರಯಾಣಿಕರು ಈ ಕೆಳಗಿನ ಹಂತಗಳನ್ನು ಅನುಸರಿಸಬೇಕು:

1. IRCTC ಖಾತೆಗೆ ಲಾಗ್ ಇನ್ ಮಾಡಿ:

ನೀವು ಮೊದಲಿಗೆ ನಿಮ್ಮ IRCTC ಖಾತೆಗೆ ಲಾಗ್ ಇನ್ ಆಗಿ. ಖಾತೆ ಇಲ್ಲದಿದ್ದರೆ, ಹೊಸದಾಗಿ ಖಾತೆ ತೆರೆಯಿರಿ.

2. ‘ಬುಕ್ ನೌ’ ಆಯ್ಕೆ ಮಾಡಿ:

ನೀವು ಪ್ರಯಾಣ ವಿವರಗಳನ್ನು ಆಯ್ಕೆ ಮಾಡಿದ ನಂತರ, ‘ಬುಕ್ ನೌ’ ಆಯ್ಕೆಯನ್ನು ಕ್ಲಿಕ್(click) ಮಾಡಿ.

3. ಪ್ರಯಾಣಿಕರ ಮಾಹಿತಿಯನ್ನು ನಮೂದಿಸಿ:

ಹೊಸ ಪುಟದಲ್ಲಿ, ಪ್ರಯಾಣಿಕರ ವಿವರಗಳು ಮತ್ತು ಕ್ಯಾಪ್ಚಾ ಕೋಡ್(Captcha code) ನೀಡಲಾಗುತ್ತದೆ. ಇವುಗಳನ್ನು ಸರಿಯಾಗಿ ಪೂರ್ತಿಗೊಳಿಸಿ.

4. ಪಾವತಿ ವಿಧಾನವನ್ನು ಆಯ್ಕೆಮಾಡಿ:

ಪಾವತಿ ಪೇಜ್‌ಗೆ ಬರುವ ನಂತರ, ನೀವು ಕ್ರೆಡಿಟ್/ಡೆಬಿಟ್ ಕಾರ್ಡ್, BHIM ಅಪ್ಲಿಕೇಶನ್ ಅಥವಾ ನೆಟ್ ಬ್ಯಾಂಕಿಂಗ್(Net banking) ಮೂಲಕ ಪಾವತಿಸಲು ಆಯ್ಕೆ ಮಾಡಬಹುದು.

5. ಪೇ ಲೇಟರ್ ಸೇವೆಗೆ ನೋಂದಣಿ ಮಾಡಿ:

‘ಬುಕ್ ನೌ, ಪೇ ಲೇಟರ್’ ಆಯ್ಕೆಯನ್ನು ಬಳಸಲು ನೀವು ಮೊದಲು www.epaylater.in ಗೆ ಭೇಟಿ ನೀಡಿ ನೋಂದಾಯಿಸಬೇಕು.

6. ಪಾವತಿ ಪ್ರಕ್ರಿಯೆ ಪೂರ್ಣಗೊಳಿಸಿ:

ನೋಂದಣಿಯ ನಂತರ, ‘ಪೇ ಲೇಟರ್'(‘Pay Letter’) ಆಯ್ಕೆಯು ಲಭ್ಯವಾಗುತ್ತದೆ. ಇದನ್ನು ಆಯ್ಕೆ ಮಾಡಿದ ಬಳಿಕ, ಮುಂಗಡ ಪಾವತಿಯಿಲ್ಲದೆ ನಿಮ್ಮ ಟಿಕೆಟ್ ಬುಕ್ ಆಗುತ್ತದೆ.

ಪಾವತಿ ನಿಯಮಗಳು ಮತ್ತು ಶುಲ್ಕದ ವಿವರಗಳ ಮಾಹಿತಿ :

  • ಟಿಕೆಟ್ ಬುಕ್ ಮಾಡಿದ 14 ದಿನಗಳ ಒಳಗೆ ಪಾವತಿಯನ್ನು ಪೂರ್ಣಗೊಳಿಸಬೇಕು.
  • ಪಾವತಿಗೆ ತಡವಾದಲ್ಲಿ 3.5% ಸೇವಾ ಶುಲ್ಕವನ್ನು ವಿಧಿಸಲಾಗುತ್ತದೆ.
  • ಪಾವತಿಯನ್ನು ಸಮಯಕ್ಕೆ ಪೂರ್ಣಗೊಳಿಸಿದರೆ, ಯಾವುದೇ ಹೆಚ್ಚುವರಿ ಶುಲ್ಕ ಅನ್ವಯಿಸುವುದಿಲ್ಲ.

ಯೋಜನೆಯ ಪ್ರಯೋಜನಗಳೇನು?:

  • ತಕ್ಷಣ ಪಾವತಿಸಲು ಹಣವಿಲ್ಲದಿದ್ದರೂ, ಟಿಕೆಟ್ ಬುಕ್ ಮಾಡಬಹುದು.
  • ಸಂಪೂರ್ಣ ಪ್ರಕ್ರಿಯೆ ಡಿಜಿಟಲ್(Digital) ಆಗಿರುವುದರಿಂದ ಸಮಯ ಮತ್ತು ಶ್ರಮ ಉಳಿತಾಯ.
  • ಅತ್ಯಾವಶ್ಯಕ ಸಂದರ್ಭಗಳಲ್ಲಿ, ಹಣದ ಕೊರತೆಯ ಕಾರಣದಿಂದ ಪ್ರಯಾಣವನ್ನು ರದ್ದುಗೊಳಿಸುವುದನ್ನು ತಪ್ಪಿಸಬಹುದು.
  • ಭಾರತೀಯ ರೈಲ್ವೆಯ(Indian Railways) ಈ ಹೊಸ ಯೋಜನೆ, ಪ್ರಯಾಣಿಕರ ಕನಸುಗಳಿಗೆ ಹೊಸ ರೂಪವನ್ನು ಕೊಡುವಲ್ಲಿ ಸಹಾಯ ಮಾಡುತ್ತಿದ್ದು, ರೈಲು ಪ್ರಯಾಣಿಕರು ಇದರ ಮೂಲಕ ತಮ್ಮ ಟಿಕೆಟ್‌ಗಳನ್ನು ಸುಲಭವಾಗಿ ಬುಕ್ ಮಾಡಬಹುದು. ಆದರೂ, ತೀರ್ಮಾನಕ್ಕೂ ಮುನ್ನ ಯೋಜನೆಯ ಎಲ್ಲಾ ನಿಯಮಗಳು ಮತ್ತು ಷರತ್ತುಗಳನ್ನು ತಿಳಿದುಕೊಳ್ಳುವುದು ಅತ್ಯಗತ್ಯ.
  • ಈ ‘ಬುಕ್ ನೌ, ಪೇ ಲೇಟರ್’ (‘Book Now, Pay Later’)ಯೋಜನೆ ನಿಮ್ಮ ಮುಂದಿನ ಪ್ರಯಾಣವನ್ನು ಇನ್ನಷ್ಟು ಸುಂದರಗೊಳಿಸುವಲ್ಲಿ ಯಾವುದೇ ಸಂಶಯವಿಲ್ಲ!.


Post a Comment

Previous Post Next Post

Top Post Ad

CLOSE ADS
CLOSE ADS
×