ರಾಜ್ಯ ರಾಜಧಾನಿ ಬೆಂಗಳೂರಿನ ಹೆಸರಘಟ್ಟದಲ್ಲಿರುವ ಭಾರತೀಯ ಕೃಷಿ ಸಂಶೋಧನಾ ಪರಿಷತ್ (ICAR) ಮತ್ತು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಗಳು (IIHR) ತೋಟಗಾರಿಕೆ ಮತ್ತು ಸಂಬಂಧಿತ ವಲಯಗಳ ಎಲ್ಲ ಪ್ರಮುಖ ಇಲಾಖೆಗಳ ಸಂಸ್ಥೆಗಳ ಸಹಕಾರದಲ್ಲಿ 'ಭಾರತೀಯ ತೊಟಗಾರಿಕೆ ಮೇಳ 2025' ಅನ್ನು ಹಮ್ಮಿಕೊಂಡಿದೆ.
ಐಐಎಚ್‌ಆರ್ ಮತ್ತು ಐಸಿಎಆರ್ ವತಿಯಿಂದ ಮುಂದಿನ ತಿಂಗಳು ಫೆಬ್ರವರಿ 27ರಿಂದ ಮಾರ್ಚ್ 01ರವರೆಗೆ ಬೃಹತ್ "ರಾಷ್ಟ್ರೀಯ ತೋಟಗಾರಿಕಾ ಮೇಳ - 2025" ಹಮ್ಮಿಕೊಂಡಿದೆ. 'ವಿಕಸಿತ ಭಾರತಕ್ಕಾಗಿ ತೋಟಗಾರಿಕೆ - ಪೋಷಣೆ, ಸಬಲೀಕರಣ ಮತ್ತು ಜೀವನೋಪಾಯ' ಶಿರ್ಷಿಕೆಯಡಿ ಕಾರ್ಯಕ್ರಮವು ಹೆಸರಘಟ್ಟದ ಸಂಸ್ಥೆಯ ವಿಶಾಲ ಪ್ರದೇಶದಲ್ಲಿ ನಡೆಯಲಿದೆ. ಲಕ್ಷಾಂತರ ರೈತರು, ಸಾರ್ವಜನಿಕರು, ತೋಟಗಾರಿಕೆ ಬೆಳಗಾರರು ಆಗಮಿಸಲಿದ್ದಾರೆ ಎಂದು ಐಐಎಚ್‌ಆರ್ ನಿರ್ದೇಶಕರು ಮಾಹಿತಿ ನೀಡಿದ್ದಾರೆ.
ತೋಟಗಾರಿಕೆ ಮೇಳದಲ್ಲಿ ಏನೆಲ್ಲ ಇರಲಿದೆ?
ರಾಷ್ಟ್ರೀಯ ತೋಟಗಾರಿಕಾ ಮೇಳದಲ್ಲಿ ಪೌಷ್ಟಿಕಾಂಶದಿಂದ ಸಮೃದ್ಧವಾಗಿರುವ ಬೆಳೆಗಳು ಮತ್ತು ಪ್ರಭೇದಗಳ ಮೂಲಕ ಪೌಷ್ಟಿಕಾಂಶವನ್ನು ಸುಧಾರಿಸುವ ಪ್ರಭೇದಗಳು ಮತ್ತು ತಂತ್ರಜ್ಞಾನಗಳನ್ನು ಪ್ರದರ್ಶನ ಇರಲಿದೆ. ಪೌಷ್ಟಿಕಾಂಶ ಬೆಳೆಗಳ ಉತ್ತೇಜನ ಮೇಲೆ ಮೇಳೆ ಕೇಂದ್ರೀಕರಿಸುತ್ತದೆ. ಅಗತ್ಯವಿರುವ ರೈತರನ್ನು ತೋಟಗಾರಿಕಾ ಬೆಳೆಗಳ ವಿವಿಧ ಅಂಶಗಳ ಕುರಿತು ಅಗತ್ಯ ಆಧಾರಿತ ಮಾಹಿತಿ / ತಂತ್ರಜ್ಞಾನಗಳು ಮತ್ತು ಕಾರ್ಯಕ್ರಮ ಮೂಲಕ ಸಬಲೀಕರಣಗೊಳಿಸುವ ಪ್ರಯತ್ನ ಇದಾಗಿದೆ.
ಆಗಮಿಸುವ ರೈತರಿಗೆ, ಸಣ್ಣ ಬೆಳೆಗಾರರಿಗೆ, ಆರ್ಥಿಕವಾಗಿ ಹಿಂದುಳಿದ ಸಣ್ಣ ರೈತರಿಗೆ ಸೂಕ್ತ ತಂತ್ರಜ್ಞಾನಗಳ ಮೇಲೆ ಮತ್ತು ಸಾಮಾಜಿಕವಾಗಿ, ಆರ್ಥಿಕವಾಗಿ ಹೊಂದಿಕೊಳ್ಳುವ ಮತ್ತು ಪರಿಸರಕ್ಕೆ ಸುರಕ್ಷಿತವಾದ ತೋಟಗಾರಿಕಾ ಬೆಳೆಗಳಲ್ಲಿ ಉತ್ಪಾದಕತೆ ಕುರಿತು ತಿಳಿಸಲಾಗುವುದು. ಆದಾಯ ಹೆಚ್ಚಸಲು ಮತ್ತು ಬೆಳೆಗಾರರ ಜೀವನೋಪಾಯ ಸುಧಾರಣೆ ಮೇಲೆ ಸಂಸ್ಥೆ ಗಮನ ಕೇಂದ್ರೀಕರಿಸಿದೆ.
National Horticulture Fair 2025 on February 27th to March 1st at Bengaluru
ಸಂಸ್ಥೆಯು ಬೆಳೆ ಉತ್ಪಾದನೆ, ಬೆಳೆ ರಕ್ಷಣೆ, ಕೊಯ್ಲಿನ ನಂತರದ ನಿರ್ವಹಣೆ, ಮೌಲ್ಯವರ್ಧನೆ, ಯಂತ್ರೋಪಕರಣಗಳು ಮತ್ತು ತೋಟಗಾರಿಕಾ ಬೆಳೆಗಳಲ್ಲಿ IIHR ಮತ್ತು ICAR ಅಭಿವೃದ್ಧಿಪಡಿಸಿದ 250ಕ್ಕೂ ಹೆಚ್ಚು ಪ್ರಭೇದಗಳು ಮತ್ತು ತಂತ್ರಜ್ಞಾನಗಳ ಪ್ರದರ್ಶನ ಮೇಳದಲ್ಲಿ ಇರಲಿದೆ.
ತೋಟಗಾರಿಕೆ ಸಂಸ್ಥೆಯು ಅಭಿವೃದ್ಧಿಪಡಿಸಿದ ಪ್ರಭೇದಗಳು ಫಲ, ಪುಷ್ಪ, ತರಕಾರಿ, ಔಷಧ ಬೆಳೆಗಳ ಮತ್ತು ತಂತ್ರಜ್ಞಾನಗಳ ನೇರ ಪ್ರದರ್ಶನ ನಡೆಯಲಿದೆ. ಮಾರಾಟಕ್ಕೂ ಅವಕಾಶ ಇದೆ. ನಗರ ತೋಟಗಾರಿಕೆಗಾಗಿ ಲಂಬ ಕೃಷಿ ಮತ್ತು ತಾರಸಿ ಕೃಷಿ, ವಿವಿಧ ತೋಟಗಾರಿಕೆ ಬೆಳೆಗಳ ಸಂರಕ್ಷಿತ ಕೃಷಿಯ ಕುರಿತು ಶ್ರೇಷ್ಠತಾ ಕೇಂದ್ರ ಸೌಲಭ್ಯ ಹೊಂದಿರುತ್ತದೆ.