ಆಹಾರ ಇಲಾಖೆಯಿಂದ ಕಾಲ ಕಾಲಕ್ಕೆ ಹಳ್ಳಿವಾರು ಪರಿಷ್ಕೃತ ಪಡಿತರ ಚೀಟಿದಾರರ ಪಟ್ಟಿಯನ್ನು(Ration Card list) ಇಲಾಖೆಯ ಅಧಿಕೃತ ವೆಬ್ಸೈಟ್ ನಲ್ಲಿ ಪ್ರಕಟಿಸಲಾಗುತ್ತದೆ ಗ್ರಾಹಕರು ಈ ಪಟ್ಟಿಯನ್ನು ತಮ್ಮ ಮೊಬೈಲ್ ನಲ್ಲೇ ಹೇಗೆ ನೋಡುವುದು ಎಂದು ಈ ಅಂಕಣದಲ್ಲಿ ವಿವರಿಸಲಾಗಿದೆ.ಇದಲ್ಲದೇ ಹಳ್ಳಿವಾರು ರದ್ದಾದ ರೇಷನ್ ಕಾರ್ಡ ಪಟ್ಟಿಯನ್ನು ಸಹ ಆಹಾರ ಇಲಾಖೆಯಿಂದ(Ahara ilake) ಪ್ರತಿ ತಿಂಗಳು ತಾಲ್ಲೂಕುವಾರು ಪ್ರಕಟಿಸಲಾಗುತ್ತಿದ್ದು ಈ ಪಟ್ಟಿಯನ್ನು ಸಹ ಹೇಗೆ ನೋಡಬಹುದು ಎನ್ನುವ ಮಾಹಿತಿಯನ್ನು ತಿಳಿಸಲಾಗಿದೆ.
ಪಡಿತರ ಚೀಟಿ ಹೊಂದಿರುವ ಗ್ರಾಹಕರು(Ration Card) ತಮ್ಮ ಮನೆಯಲ್ಲೇ ಕುಳಿತು ಈ ಪಟ್ಟಿಯನ್ನು ಕೇವಲ ಒಂದೆರಡು ಕ್ಲಿಕ್ ನಲ್ಲಿ ತಮ್ಮ ಮೊಬೈಲ್ ನಲ್ಲೇ ನೋಡಲು ಅವಕಾಶವಿದ್ದು ಯಾವೆಲ್ಲಾ ಹಂತಗಳನ್ನು ಅನುಸರಿಸಿ ಈ ಪಟ್ಟಿಯನ್ನು ನೋಡಬೇಕು ಎನ್ನುವ ಮಾಹಿತಿಯನ್ನು ಇಲ್ಲಿ ವಿವರಿಸಲಾಗಿದೆ.
Village wise ration card list-ಪರಿಷ್ಕೃತ ಪಡಿತರ ಚೀಟಿದಾರರ ಹಳ್ಳಿ ಪಟ್ಟಿ ನೋಡುವ ವಿಧಾನ:
ಪಡಿತರ ಚೀಟಿ ಹೊಂದಿರುವ ಗ್ರಾಹಕರು ತಮ್ಮ ಮೊಬೈಲ್ ನಲ್ಲೇ ಪರಿಷ್ಕರಿಸಿದ ಹಳ್ಳಿವಾರು ರೇಷನ್ ಪಡೆಯಲು(Karnataka Food Department) ಅರ್ಹ ಇರುವ ಅಧಿಕೃತ ರೇಷನ್ ಕಾರ್ಡದಾರರ ಪಟ್ಟಿಯನ್ನು ನೋಡಲು ಅವಕಾಶವಿದ್ದು ಈ ಕೆಳಗಿನ ವಿಧಾನವನ್ನು ಅನುಸರಿಸಿ ಪಟ್ಟಿಯಲ್ಲಿ ನಿಮ್ಮ ಹೆಸರು ಇದಿಯಾ ಎಂದು ಒಮ್ಮೆ ಚೆಕ್ ಮಾಡಿಕೊಳ್ಳಬಹುದು.
Step-1: ಮೊದಲಿಗೆ ಇಲ್ಲಿ ಕ್ಲಿಕ್ Village wise ration card list ಮಾಡಿ ಆಹಾರ ಇಲಾಖೆಯ ಅಧಿಕೃತ ahara ತಂತ್ರಾಂಶವನ್ನು ಭೇಟಿ ಮಾಡಬೇಕು.
Step-2: ತಂತ್ರಾಂಶವನ್ನು ಪ್ರವೇಶ ಮಾಡಿದ ಬಳಿಕ ಇಲ್ಲಿ ಮುಖಪುಟದಲ್ಲಿ ಮೇಲೆ ಕಾಣುವ “E-Services” ಬಟನ್ ಮೇಲೆ ಕ್ಲಿಕ್ ಮಾಡಬೇಕು.
Step-3: ಇದಾದ ಬಳಿಕ ಇಲ್ಲಿ ಬಲ ಬದಿಯಲ್ಲಿ ಕಾಣುವ Menu ಆಯ್ಕೆಯಲ್ಲಿ “E-Ration Card” ಬಟನ್ ಮೇಲೆ ಕ್ಲಿಕ್ ಮಾಡಿ “Show Village list” ಬಟನ್ ಮೇಲೆ ಕ್ಲಿಕ್ ಮಾಡಿ.
Step-4: ಈ ಪೇಜ್ ನಲ್ಲಿ ನಿಮ್ಮ “ಜಿಲ್ಲೆ/District”, ತಾಲ್ಲೂಕು/Taluk, “ಗ್ರಾಮ ಪಂಚಾಯತ/Gram Panchayat”, “ಹಳ್ಳಿ/Village” ಹೆಸರನ್ನು ಆಯ್ಕೆ ಮಾಡಿಕೊಂಡು “Go” ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಹಳ್ಳಿಯಲ್ಲಿ ರೇಷನ್ ಪಡೆಯಲು ಅರ್ಹರಿರುವ ಪಡಿತರ ಚೀಟಿದಾರರ ಪಟ್ಟಿ ತೋರಿಸುತ್ತದೆ ಈ ಪಟ್ಟಿಯಲ್ಲಿ “RC Number” Name, Address, Ration Card Type, No of Members ಕಾಲಂ ನಲ್ಲಿ ಪಡಿತರ ಚೀಟಿದಾರರ ಸಂಪೂರ್ಣ ವಿವರ ತೋರಿಸುತ್ತದೆ.
Cancelled and Suspended Ration Card List-ರದ್ದಾದ ಪಡಿತರ ಚೀಟಿ ಪಟ್ಟಿಯನ್ನು ನೋಡುವ ವಿಧಾನ:
ಆಹಾರ ಇಲಾಖೆಯ ಜಾಲತಾಣದಲ್ಲಿ ರದ್ದುಪಡಿಸಲಾದ ರೇಷನ್ ಕಾರ್ಡ ಪಟ್ಟಿಯನ್ನು ಸಹ ಪ್ರಕಟಿಸಲಾಗುತ್ತದೆ ಈ ಪಟ್ಟಿಯನ್ನು ಸಹ ಗ್ರಾಹಕರು ತಮ್ಮ ಮೊಬೈಲ್ ನಲ್ಲೆ ನೋಡಲು ಅವಕಾಶ ನೀಡಲಾಗಿದ್ದು ಈ ಕೆಳಗೆ ವಿವರಿಸುವ ಹಂತಗಳನ್ನು ಅನುಸರಿಸಿ ರದ್ದಾದ ಪಡಿತರ ಚೀಟಿದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದೇ ಇರುವುದನ್ನು ಖಚಿತಪಡಿಸಿಕೊಳ್ಳಬಹುದು.
Step-1: ಮೊದಲಿಗೆ ಇಲ್ಲಿ ಕ್ಲಿಕ್ Suspended Ration Card List ಮಾಡಿ ಆಹಾರ ಇಲಾಖೆಯ ಜಾಲತಾಣವನ್ನು ಪ್ರವೇಶ ಮಾಡಬೇಕು.
Step-2: ಬಳಿಕ “ಇ-ಪಡಿತರ ಚೀಟಿ/E-Ration Card” ಆಯ್ಕೆಯ ಮೇಲೆ ಕ್ಲಿಕ್ ಮಾಡಿ “ರದ್ದುಗೊಳಿಸಲಾದ/ತಡೆಹಿಡಿಯಲಾದ ಪಟ್ಟಿ/Cancelled and Suspended List” ಬಟನ್ ಮೇಲೆ ಕ್ಲಿಕ್ ಮಾಡಬೇಕು.
Step-3: ನಂತರದಲ್ಲಿ ನಿಮ್ಮ ಜಿಲ್ಲೆ, ತಾಲ್ಲೂಕು, ತಿಂಗಳು, ವರ್ಷ ಆಯ್ಕೆಯನ್ನು ಮಾಡಿಕೊಂಡು ಪ್ರತಿ ತಿಂಗಳು ವಾರು ನಿಮ್ಮ ತಾಲ್ಲೂಕಿನಲ್ಲಿ ರದ್ದಾದ ರೇಷನ್ ಕಾರ್ಡ ಪಟ್ಟಿಯನ್ನು ನೋಡಬಹುದು.
Ahara ilake website-ಆಹಾರ ಇಲಾಖೆಯ ವೆಬ್ಸೈಟ್ ನಲ್ಲಿ ಯಾವೆಲ್ಲ ಸೇವೆಗಳು ಲಭ್ಯ:
A) ಅನ್ನಭಾಗ್ಯ ಯೋಜನೆಯ ಡಿಬಿಟಿ ಸ್ಥಿತಿಯನ್ನು ಚೆಕ್ ಮಾಡಬಹುದು.
b) ಹೊಸ/ಹಾಲಿ ಪಡಿತರ ಚೀಟಿ ಸ್ಥಿತಿಯನ್ನು ಆನ್ಲೈನ್ ನಲ್ಲಿ ಈ ವೆಬ್ಸೈಟ್ ಭೇಟಿ ಮಾಡಿ ಚೆಕ್ ಮಾಡಿಕೊಳ್ಳಬಹುದು.
C) ರೇಷನ್ ಕಾರ್ಡ ತಿದ್ದುಪಡಿಗೆ ಅರ್ಜಿ ಸಲ್ಲಿಸಿದರೆ ಆ ಅರ್ಜಿ ಯಾವ ಹಂತದಲ್ಲಿದೆ ಎನ್ನುವ ಮಾಹಿತಿಯನ್ನು ಸಹ ಚೆಕ್ ಮಾಡಿಕೊಳ್ಳಬಹುದು.
Karnataka Food Department-ಆಹಾರ ಇಲಾಖೆಯ ವೆಬ್ಸೈಟ್ ಲಿಂಕ್- CLICK HERE