PF Update: ನೀವೇ ಮಾಡಬಹುದು ಪಿಎಫ್ ಖಾತೆ ಬದಲಾವಣೆ - ತಿದ್ದುಪಡಿ, ಹಣ ಕ್ಲೈಮ್ ಸಹ ಸಿಂಪಲ್‌

PF Update: ನೀವೇ ಮಾಡಬಹುದು ಪಿಎಫ್ ಖಾತೆ ಬದಲಾವಣೆ - ತಿದ್ದುಪಡಿ, ಹಣ ಕ್ಲೈಮ್ ಸಹ ಸಿಂಪಲ್‌

ಉದ್ಯೋಗಿಗಳ ಪಿಎಫ್ ಅಕೌಂಟ್‌ನಲ್ಲಿ (ಉದ್ಯೋಗಿಗಳ ಭವಿಷ್ಯ ನಿಧಿ)ಯಲ್ಲಿ ಯಾವುದಾದರೂ ತಿದ್ದುಪಡಿ ಇಲ್ಲವೇ ಏನಾದರೂ ವಿಷಯಗಳನ್ನು ಸೇರಿಸುವುದಕ್ಕೆ ಸರ್ಕಸ್‌ ಮಾಡಬೇಕು. ನಮ್ಮದೇ ಪಿಎಫ್ ಕರೆಕ್ಷನ್‌ಗೆ ಎಚ್‌ಆರ್‌ ಬಳಿ ಇಲ್ಲವೇ ಅಡ್ಮಿನ್‌ಗಳನ್ನು ಸಂಪರ್ಕಿಸಬೇಕು. ಅದಕ್ಕೆ ರಿಕ್ವಸ್ಟ್‌ಗಳನ್ನು ಕಳುಹಿಸಬೇಕು. ಹಲವು ಹಂತಗಳು ಇದರಲ್ಲಿವೆ. ಆದರೆ ಇನ್ಮುಂದೆ ನೀವು ಪಿಎಫ್ ಖಾತೆಯಲ್ಲಿ ತಿದ್ದುಪಡಿಯನ್ನು ಮಾಡಿಕೊಳ್ಳುವುದು ಸುಲಭವಾಗಲಿದೆ. ಪಿಎಫ್‌ನಲ್ಲಿ ತಿದ್ದುಪಡಿ ಅಥವಾ ಸೇರ್ಪಡೆ ಪ್ರಕ್ರಿಯೆಗಳನ್ನು ಕೇಂದ್ರ ಬಿಜೆಪಿ ಸರ್ಕಾರವು ಸರಳೀಕರಣ ಮಾಡಿದೆ. ಈ ಸಂಬಂಧ ಕೇಂದ್ರ ಸರ್ಕಾರವು ಹೊಸ ಇಪಿಎಫ್‌ಒ (EPFO) ಸೌಲಭ್ಯವನ್ನು ಪರಿಚಯಿಸಿದೆ. ಇದರಿಂದ ಕೋಟ್ಯಾಂತರ ಜನ ಪಿಎಫ್‌ ಬಳಕೆದಾರರಿಗೆ ಅನುಕೂಲವಾಗಿದೆ. ಇಪಿಎಫ್‌ಒನಲ್ಲಿ ಆಗಿರುವ ಬದಲಾವಣೆಗಳೇನು, ಹೇಗೆ ಪಿಎಫ್‌ ಅಕೌಂಟ್‌ ಇರುವವರಿಗೆ ಸಹಾಯವಾಗಲಿದೆ ಎನ್ನುವ ಮಾಹಿತಿ ಇಲ್ಲಿದೆ.

ಸಾಮಾನ್ಯವಾಗಿ ಪಿಎಫ್‌ನಲ್ಲಿ ಹೆಸರು, ಜನ್ಮದಿನಾಂಕ, ಲಿಂಗ, ತಂದೆ/ ತಾಯಿಯ ಹೆಸರು, ರಾಷ್ಟ್ರೀಯತೆ, ವಿವಾಹ ನೋಂದಣಿ, ಪತಿ ಅಥವಾ ಪತ್ನಿ ಹೆಸರು ಸೇರಿಸುವುದು ಅಥವಾ ಯಾವುದಾದರು ತಿದ್ದುಪಡಿಗಳನ್ನು ಮಾಡುವುದು ಇರುತ್ತದೆ. ಅಲ್ಲದೆ ಒಂದು ಕಂಪನಿಯಿಂದ ಇನ್ನೊಂದು ಕಂಪನಿಗೆ ಕೆಲಸ ಬದಲಾಯಿಸಿದ ಮೇಲೆ ಹಳೆಯ ಪಿಎಫ್‌ ಮೊತ್ತವನ್ನು ಹೊಸ ಖಾತೆಗೆ ವರ್ಗಾಯಿಸುವುದು ಸೇರಿದಂತೆ ಹಲವು ಸಣ್ಣ ಕೆಲಸಗಳಿಗೂ ಪಿಎಫ್ ರಿಕ್ವೆಸ್ಟ್‌ ಇಲ್ಲವೇ ಆಯಾ ಕಂಪನಿಗಳ ಎಚ್‌ಆರ್‌ ಸಹಕಾರ ಪಡೆದುಕೊಳ್ಳಬೇಕಿದೆ. ಇನ್ಮುಂದೆ ನೀವು ಎಚ್‌ಆರ್‌ ಸಹಕಾರ ಹಾಗೂ EPFO ಅನುಮೋದನೆಗಾಗಿ ಕಾಯದೆ ನೀವೇ ನಿಮ್ಮ ಪಿಎಫ್‌ ಅಕೌಂಟ್‌ನಲ್ಲಿ ಕರೆಕ್ಷನ್ಸ್‌ ಮಾಡಿಕೊಳ್ಳಬಹುದು.

PF Update You Can change amend and claim your PF account online

ಈಚೆಗೆ ಕೇಂದ್ರ ಸರ್ಕಾರವು ಹೊಸ ಇಪಿಎಫ್‌ಒ ಸೇವೆಯನ್ನು ಪ್ರಾರಂಭಿಸಿದೆ. ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಮನ್ಸುಖ್ ಮಾಂಡವಿಯಾ ಅವರು ಈ ಬಗ್ಗೆ ಬಿಗ್‌ ಅಪ್‌ಡೇಟ್‌ ಕೊಟ್ಟಿದ್ದಾರೆ. ಪಿಎಫ್ ಬಳಕೆದಾರರು ಯುನಿವರ್ಸಲ್ ಅಕೌಂಟ್ (UAN) ನಂಬರ್‌ 2017ರ

ಅಕ್ಟೋಬರ್ 1ರ ನಂತರ ಕೊಟ್ಟಿದ್ದರೆ ನೀವೇ ವಿವರಗಳನ್ನು ಸರಿಪಡಿಸಿಕೊಳ್ಳು ಸಾಧ್ಯವಿದೆ. ಮುಖ್ಯವಾಗಿ ಯುಎಎನ್ ಅನ್ನು ನೀವು ಆಧಾರ್‌ ಕಾರ್ಡ್‌ನೊಂದಿಗೆ ಲಿಂಕ್‌ ಮಾಡಿಕೊಂಡಿಲ್ಲ ಎಂದಾದರೆ ಮಾತ್ರ ಕಷ್ಟವಾಗಲಿದೆ. ಆಗ ನೀವು ಯಾವುದೇ ತಿದ್ದುಪಡಿಯನ್ನು ಮಾಡಬೇಕಾದರೆ ಕಂಪನಿಗಳಿಗೆ ಭೌತಿಕವಾಗಿ ಮಾಹಿತಿ ಸಲ್ಲಿಸಬೇಕಾಗುತ್ತದೆ. ಈ ಮಾಹಿತಿಯನ್ನು ಪರಿಶೀಲನೆ ಮಾಡಿದ ನಂತರ ಕಂಪನಿಯು ಅನುಮೋದನೆಗಾಗಿ ಇಪಿಎಫ್‌ಒಗೆ ಕಳುಹಿಸಿಕೊಡಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.

ಪ್ರತಿಯೊಬ್ಬರು ಉದ್ಯೋಗಿಗೆ ಅವರು ಮೊದಲು ಕೆಲಸಕ್ಕೆ ಸೇರುವಾಗ EPFO ಗಾಗಿ UAN ರಿಜಿಸ್ಟ್ರೇಷನ್‌ ಅನ್ನು ಕಂಪನಿಗಳಲ್ಲಿ ಮಾಡಿಸಿಕೊಳ್ಳಲಾಗುತ್ತದೆ. ಆದರೆ ಮುಂದೆ ಬದಲಾವಣೆಯಾದರೆ ಅಥವಾ ಅದರಲ್ಲಿ ತಪ್ಪುಗಳಿದ್ದರೆ ತಿದ್ದುಪಡಿ ಮಾಡಿಕೊಳ್ಳುವ ಪ್ರಕ್ರಿಯೆ ದೊಡ್ಡದಿತ್ತು. ಇದೀಗ ಅದನ್ನು ಸರಳೀಕರಣ ಮಾಡಲಾಗಿದೆ. ಕೋಟ್ಯಾಂತರ ಜನರ ತಿದ್ದುಪಡಿ ರಿಕ್ವೆಸ್ಟ್‌ಗಳು ಬಾಕಿ ಉಳಿದಿರುವುದು ಸಹ ಈ ರೀತಿ ನಿರ್ಧಾರಕ್ಕೆ ಕಾರಣ ಎಂದು ಹೇಳಲಾಗಿದೆ. ಇಲ್ಲಿಯ ವರೆಗೆ ಏನಾದರೂ ತಪ್ಪು ಅಥವಾ ಬದಲಾವಣೆ ಮಾಡಿಕೊಳ್ಳಬೇಕಿದ್ದರೆ, ಆನ್‌ಲೈನ್‌ನಲ್ಲಿ ರಿಕ್ವೆಸ್ಟ್‌ ಮಾಡಬೇಕಿತ್ತು. ಆ ರಿಕ್ವೆಸ್ಟ್‌ಗಳನ್ನು ಕಂಪನಿಯ ಎಚ್‌ಆರ್‌ಗಳು ಪರಿಶೀಲಿಸಿದ ಮೇಲೆ ಅದನ್ನು ಅನುಮೋದಿಸುವಂತೆ EPFO ಕಳುಹಿಸಲಾಗುತ್ತಿತ್ತು. ಕೆಲವೊಂದು ಬದಲಾವಣೆ ಹಾಗೂ ಕ್ಲೈಮ್‌ಗಳು ತಿಂಗಳುಗಳ ಸಮಯ ತೆಗೆದುಕೊಳ್ಳುವುದು ಸಹ ಇದೆ. ಇದೀಗ ಈ ಬಹುಹಂತದ ಪ್ರಕ್ರಿಯೆಗೆ ಬ್ರೇಕ್‌ ಹಾಕಲಾಗಿದೆ. ಬದಲಾವಣೆಗಳನ್ನು ನೀವೇ ಮಾಡಿಕೊಳ್ಳಬಹುದಾಗಿದೆ.

ಇಪಿಎಫ್ ವರ್ಗಾವಣೆ ಹಾಗೂ ಕ್ಲೈಮ್ ಸಹ ಸುಲಭ: 

ಇನ್ನು ತಿದ್ದುಪಡಿ ಮಾತ್ರವಲ್ಲದೆ ಇಪಿಎಫ್‌ ವರ್ಗಾವಣೆ ಹಾಗೂ ಕ್ಲೈಮ್‌ಗಳ ಪ್ರಕ್ರಿಯೆಯನ್ನು ಸಹ ಸರಳೀಕರಣ ಮಾಡಲಾಗಿದೆ. ಒಂದು ಕಂಪನಿಯಿಂದ ಇನ್ನೊಂದು ಕಂಪನಿಗೆ ಕೆಲಸ ಬದಲಾಯಿಸಿದಾಗ ಇಪಿಎಫ್ ಖಾತೆಗಳ ವರ್ಗಾವಣೆಗೆ ರಿಕ್ವೆಸ್ಟ್‌ ಕೊಡಬೇಕು. ಮುಂದಿನ ದಿನಗಳಲ್ಲಿ ಆಧಾರ್ ಒಟಿಪಿ ಮೂಲಕ ಆನ್‌ಲೈನ್‌ನಲ್ಲೇ ಇಪಿಎಫ್ ವರ್ಗಾವಣೆ ಕ್ಲೈಮ್ ಸಲ್ಲಿಸುವುದಕ್ಕೆ ಅವಕಾಶ ಇರಲಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

Post a Comment

Previous Post Next Post

Top Post Ad

CLOSE ADS
CLOSE ADS
×