Crop Insurance amount-ಈ ಜಿಲ್ಲೆಯ ರೈತರ ಖಾತೆಗೆ ₹2,333 ಲಕ್ಷ ಮುಂಗಾರು ಬೆಳೆ ವಿಮೆ ಜಮಾ

Crop Insurance amount-ಈ ಜಿಲ್ಲೆಯ ರೈತರ ಖಾತೆಗೆ ₹2,333 ಲಕ್ಷ ಮುಂಗಾರು ಬೆಳೆ ವಿಮೆ ಜಮಾ

ಪ್ರಧಾನ ಮಂತ್ರಿ ಫಸಲ ಬೀಮಾ ಯೋಜನೆಯಡಿ ಈಗಾಗಲೇ 2023-24ನೇ ಸಾಲಿನಲ್ಲಿ ಮುಂಗಾರು ಬೆಳೆ ವಿಮೆ ಮಾಡಿಸಿದ ಅರ್ಹ ರೈತರ ಖಾತೆಗೆ ₹2,333 ಲಕ್ಷ ಬೆಳೆ(Crop Insurance amount)ವಿಮೆ ಪರಿಹಾರವನ್ನು ನೇರ ನಗದು ವರ್ಗಾವಣೆ ಮೂಲಕ ಜಮಾ ಮಾಡಲಾಗಿದೆ.2023-24ನೇ ವರ್ಷದ ಮುಂಗಾರು ಹಂಗಾಮಿನ ಮರು ವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮೆ(Bele vime) ಯೋಜನೆಯಡಿ ಚಿತ್ರದುರ್ಗ ಜಿಲ್ಲೆಯ 3584 ರೈತರ ಬ್ಯಾಂಕ್ ಖಾತೆಗೆ ₹2,333 ಲಕ್ಷ ಬೆಳೆ ವಿಮೆ ಪರಿಹಾರವನ್ನು ಜಮಾ ಮಾಡಲಾಗಿದೆ.

ಬೆಳೆ ವಿಮೆ ಪರಿಹಾರದ ಹಣವನ್ನು ರೈತರ ಖಾತೆಗೆ ಜಮಾ ಕುರಿತು ಮಾಹಿತಿ ಹಂಚಿಕೊಂಡಿರುವ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರು ಮುಂಗಾರು ಹಂಗಾಮಿನ ಮರು ವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ತೋಟಗಾರಿಕೆ ಬೆಳೆಗಳಾದ ಅಡಿಕೆ, ಮಾವು ಮತ್ತು ದಾಳಿಂಬೆ ಬೆಳೆಗೆ ಜಿಲ್ಲೆಯ 3648 ರೈತರು ರೂ 226.99 ಲಕ್ಷ ಬೆಳೆ ವಿಮೆ ಪರಿಹಾರದ ಹಣವನ್ನು ಪಾವತಿಸಲಾಗಿದೆ ಎಂದು ತಿಳಿಸಿದ್ದಾರೆ.

Crop Survey details-ಬೆಳೆ ವಿಮೆ ಪರಿಹಾರವನ್ನು ಪಡೆಯಲು ತಪ್ಪದೇ ಬೆಳೆ ಸಮೀಕ್ಷೆಯನ್ನು ಸರಿಯಾಗಿ ಮಾಡಿಸಿಕೊಳ್ಳಲು ಸೂಚನೆ:

ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರು ಬೆಳೆ ವಿಮೆ ಪರಿಹಾರದ ಕುರಿತು ರೈತರಿಗೆ ಸಲಹೆಯನ್ನು ನೀಡಿದ್ದು ಎಲ್ಲಾ ರೈತರು ಫಸಲ್ ಭೀಮಾ ಯೋಜನೆಯಡಿ ಅರ್ಜಿ ಸಲ್ಲಿಸಿ ಬೆಳೆ ವಿಮೆ ಪರಿಹಾರವನ್ನು ಪಡೆಯಲು ಕೃಷಿ ಇಲಾಖೆಯಿಂದ ನಡೆಸುವ ಬೆಳೆ ಸಮೀಕ್ಷೆಯನ್ನು ತಪ್ಪದೇ ಸರಿಯಾಗಿ ಮಾಡಿಕೊಳ್ಳಲು ಸಲಹೆ ನೀಡಿದ್ದಾರೆ.

ಏಕೆಂದರೆ ಬೆಳೆ ವಿಮೆ ಅರ್ಜಿಯ ಬೆಳೆ ಮಾಹಿತಿ ಮತ್ತು ಬೆಳೆ ಸಮೀಕ್ಷೆಯ ಬೆಳೆ ಮಾಹಿತಿ ತಾಳೆಯಾದರೆ ಮಾತ್ರ ಬೆಳೆ ವಿಮೆ ಯೋಜನೆಯಡಿ ಬೆಳೆ ಪರಿಹಾರ ಪಡೆಯಲು ಸಾಧ್ಯವಾಗುತ್ತದೆ ಅದ್ದರಿಂದ ಎಲ್ಲಾ ರೈತ ಭಾಂದವರು ಬೆಳೆ ಸಮೀಕ್ಷೆಯಲ್ಲಿ ಬೆಳೆ ಮಾಹಿತಿಯನ್ನು ತಪ್ಪದೇ ಸರಿಯಾಗಿ ದಾಖಲಿಸಿಕೊಳ್ಳಲು ಸಲಹೆ ನೀಡಲಾಗಿದೆ.

Crop Insurance Status check-ಬೆಳೆ ವಿಮೆ ಹಣ ಜಮಾ ವಿವರವನ್ನು ಮೊಬೈಲ್ ನಲ್ಲೇ ತಿಳಿಯುವ ವಿಧಾನ:

ರಾಜ್ಯ ಸರಕಾರದಿಂದ ಬೆಳೆ ವಿಮೆ ಯೋಜನೆಯ ಅರ್ಜಿ ವಿಲೇವಾರಿಯಲ್ಲಿ ಪಾರದರ್ಶಕ ವ್ಯವಸ್ಥೆಯನ್ನು ಜಾರಿಗೆ ತರಲು ಸಂರಕ್ಷಣೆ ತಂತ್ರಾಂಶವನ್ನು ಜಾರಿಗೆ ತರಲಾಗಿದ್ದು ರೈತರು ಈ ಕೆಳಗಿನ ವಿಧಾನವನ್ನು ಅನುಸರಿಸಿ ನಿಮ್ಮ ಮೊಬೈಲ್ ನಲ್ಲೇ ಬೆಳೆ ವಿಮೆ ಅರ್ಜಿಯ ಸ್ಥಿತಿಯನ್ನು ಚೆಕ್ ಮಾಡಿಕೊಳ್ಳಬಹುದು.

Step-1: ಮೊದಲು Crop Insurance Status Check On Mobile ಇಲ್ಲಿ ಕ್ಲಿಕ್ ಮಾಡಿ ರಾಜ್ಯ ಸರಕಾರದ ಅಧಿಕೃತ ಬೆಳೆ ವಿಮಾ ಯೋಜನೆಯ samrakshane ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು.

Step-2: ನಂತರದಲ್ಲಿ ಈ ಪೇಜ್ ನಲ್ಲಿ ವರ್ಷ/Year: “2023-24” ಎಂದು ಹಾಗೂ ಋತು/Select Insurance Season : ಮುಂಗಾರು/Kharif ಎಂದು ಸೆಲೆಕ್ಟ್ ಮಾಡಿಕೊಂಡು ಮುಂದುವರೆಯಬೇಕು..

Step-3: ಬಳಿಕ ಈ ಪೇಜ್ ನಲ್ಲಿ ಕೆಳಗೆ ಕಾಣುವ “Farmers” ಕಾಲಂನಲ್ಲಿ “Crop Insurance Details On Survey no” ಆಯ್ಕೆಯ ಮೇಲೆ ಒತ್ತಿ ಮುಂದುವರೆಯಬೇಕು.

Step-4: ನಂತರದಲ್ಲಿ ಈ ಪುಟದಲ್ಲಿ ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ, ಹಳ್ಳಿ, ಜಮೀನಿನ ಸರ್ವೆ ನಂಬರ್ ಅನ್ನು ಹಾಕಿ “Search” ಬಟನ್ ಮೇಲೆ ಕ್ಲಿಕ್ ಮಾಡಬೇಕು. ಆಗ ಸರ್ವೆ ಸಂಬರ್ ನಲ್ಲಿ ಲಭ್ಯವಿರುವ ಹಿಸ್ಸಾ ನಂಬರ್ ಗಳು ಕಾಣಿಸುತ್ತವೆ ಇಲ್ಲಿ ಒಂದು ಸರ್ವೆ ನಂಬರ್ ಮೇಲೆ ಕ್ಲಿಕ್ ಮಾಡಿದಾಗ ಆ ಸರ್ವೆ ನಂಬರ್ ನ ಬೆಳೆ ವಿಮೆ ಅರ್ಜಿ ನಂಬರ್ ತೋರಿಸುತ್ತದೆ ಅದನ್ನು ಒಂದು ಕಡೆ ನಮೂದಿಸಿಟ್ಟುಕೊಳ್ಳಿ.

Step-5: ಅರ್ಜಿ ನಂಬರ್ ಅನ್ನು ತೆಗೆದುಕೊಂಡ ಬಳಿಕ ಇದೆ ಪುಟದಲ್ಲಿ ಮೇಲೆ ಬಲಬದಿಯಲ್ಲಿ ತೋರಿಸುವ “Home” ಆಯ್ಕೆಯನ್ನು ಕ್ಲಿಕ್ ಮಾಡಿ ಇಲ್ಲಿ “Farmers” ಕಾಲಂನಲ್ಲಿ “check status” ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.

Step-6: ನಂತರ ಅರ್ಜಿ ಸಂಖ್ಯೆ/Application no ಹಾಗೂ ಕ್ಯಾಪ್ಚರ್ ಕೋಡ್ ಹಾಕಿ “Search” ಬಟನ್ ಮೇಲೆ ಕ್ಲಿಕ್ ಮಾಡಿದರೆ ಕೆಳಗೆ ಅರ್ಜಿಯ ವಿವರ ಮತ್ತು ಮಧ್ಯಂತರ ಬೆಳೆ ವಿಮೆ ಜಮಾ ವಿವರ ತೋರಿಸುತ್ತದೆ. ಎಷ್ಟು ಹಣ ಜಮಾ ಅಗಿದೆ? ಯಾವ ದಿನಾಂಕ? ಬ್ಯಾಂಕ್ ಖಾತೆ ವಿವರ ತೋರಿಸುತ್ತದೆ.

Post a Comment

Previous Post Next Post

Top Post Ad

CLOSE ADS
CLOSE ADS
×