AAI Recruitment; ಅರ್ಜಿ ಆಹ್ವಾನ.. ಇವರಿಗೆ ಮಾತ್ರ ಅವಕಾಶ, ಸಂಬಳ ಎಷ್ಟಿದೆ?

AAI Recruitment; ಅರ್ಜಿ ಆಹ್ವಾನ.. ಇವರಿಗೆ ಮಾತ್ರ ಅವಕಾಶ, ಸಂಬಳ ಎಷ್ಟಿದೆ?

ಮನೆಯಲ್ಲಿ ಖಾಲಿ ಇರುವ ಬದಲು ಇದಕ್ಕೆ ಒಮ್ಮೆ ಟ್ರೈ ಮಾಡಿ.ಸಂಸ್ಥೆಯು ಒಟ್ಟು ಎಷ್ಟು ಉದ್ಯೋಗಗಳನ್ನ ಆಹ್ವಾನ ಮಾಡಿದೆ ಎಂಬುದನ್ನು ಈ ಪೋಸ್ಟ್ ಮೂಲಕ ತಿಳಿದುಕೊಳ್ಳಬಹುದು

ಅರ್ಜಿ ಹೇಗೆ ಸಲ್ಲಿಸಬೇಕು ಎನ್ನುವ ಮಾಹಿತಿ ಇಲ್ಲಿ ನೀಡಲಾಗಿದೆ

ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾ (ಎಎಐ) ಹುದ್ದೆಯಿಂದ ನಿವೃತ್ತಿ ಹೊಂದಿದಂತ ನುರಿತ ಆಕಾಂಕ್ಷಿಗಳಿಗಾಗಿ ಉದ್ಯೋಗಗಳನ್ನು ಆಹ್ವಾನ ಮಾಡಿದೆ. ಯಾರು ಕೆಲಸದಿಂದ ನಿವೃತ್ತಿ ಪಡೆದು ಖಾಲಿ ಇರುವರೋ ಅವರು ಈ ಕೆಲಸಗಳಿಗೆ ಅಪ್ಲೇ ಮಾಡಬಹುದು. 70 ವರ್ಷದ ಒಳಗಿನವರಿಗೆ ಇಲ್ಲಿ ಅವಕಾಶ ನೀಡಲಾಗಿದೆ. ತಮಗೆ ಉದ್ಯೋಗ ಅವಶ್ಯಕತೆ ಇದ್ದರೆ ಇದನ್ನು ಸದುಪಯೋಗ ಪಡೆದುಕೊಳ್ಳಬಹುದು.

ನಿವೃತ್ತ ATCOದಲ್ಲಿ ಖಾಲಿ ಇರುವ ಸಲಹೆಗಾರ (Consultant) ಮತ್ತು ಕಿರಿಯ ಸಲಹೆಗಾರ (Junior Consultant) ಉದ್ಯೋಗಗಳನ್ನು ಭರ್ತಿ ಮಾಡಲಾಗುತ್ತಿದೆ. ಒಟ್ಟು 6 ಉದ್ಯೋಗಗಳು ಖಾಲಿ ಇವೆ. ಮಾಸಿಕವಾಗಿ ವೇತನವನ್ನು ಸಲಹೆಗಾರ ಕೆಲಸಕ್ಕೆ 75,000 ರೂಪಾಯಿ, ಕಿರಿಯ ಸಲಹೆಗಾರ ಹುದ್ದೆಗೆ 50,000 ರೂಪಾಯಿ ನೀಡಲಾಗುವುದು. ಯಾವುದೇ ಭತ್ಯೆ ನೀಡಲಾಗುವುದಿಲ್ಲ. ಇನ್ನು ಈ ಉದ್ಯೋಗಗಳು ಗುತ್ತಿಗೆ ಆಧಾರದ ಹುದ್ದೆಗಳು ಆಗಿವೆ.

ಆಯ್ಕೆಯಾದ ಅಭ್ಯರ್ಥಿಗಳು 01 ವರ್ಷದ ಅವಧಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಬಳಿಕ ಮತ್ತೆ ಒಂದು ವರ್ಷದವರೆಗೆ ವಿಸ್ತರಿಸಿ ಇದೇ ರೀತಿ ಗರಿಷ್ಠ 3 ವರ್ಷಗಳವರೆಗೆ ಸಂಸ್ಥೆ ಮುಂದುವರೆಸುವ ಅಧಿಕಾರ ಹೊಂದಿರುತ್ತದೆ. ಸಂದರ್ಶನದ ಮೂಲಕ ಅಭ್ಯರ್ಥಿಯ ಆಯ್ಕೆ ಇರುತ್ತದೆ. ಅಭ್ಯರ್ಥಿಗಳು E-7/E-6 ಮಟ್ಟದಿಂದ ನಿವೃತ್ತರಾಗಿ AAI ATCO ಗಳಾಗಿರಬೇಕು ಮತ್ತು ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 5 ರಿಂದ 10 ವರ್ಷಗಳ ಅನುಭವ ಹೊಂದಿರಬೇಕು. ಈ ಮಾನದಂಡಗಳಿಗೆ ಓಕೆ ಎನ್ನುವುದಾದರೆ ಆಕಾಂಕ್ಷಿಗಳು ಅರ್ಜಿ ಸಲ್ಲಿಕೆ ಮಾಡಬಹುದು. ಕೆಳಗೆ ನಮೂದಿಸಿದ ಇಮೇಲ್ ಐಡಿಗೆ ಸರಿಯಾಗಿ ಭರ್ತಿ ಮಾಡಿದ ಅರ್ಜಿಗಳನ್ನು ಕಳುಹಿಸಿಕೊಡಬಹುದು.

ಆಕಾಂಕ್ಷಿಗಳು ಎಎಐ ವೆಬ್ಸೈಟ್ಗೆ ಭೇಟಿ ನೀಡಿ ಅರ್ಜಿಯ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ಅರ್ಜಿಯನ್ನು ಸಂಪೂರ್ಣವಾಗಿ ಭರ್ತಿ ಮಾಡಿದ ಬಳಿಕ ಅದದನ್ನು ಇಮೇಲ್ ಮೂಲಕ ಎಎಐ ಸಂಸ್ಥೆಗೆ ಕಳುಹಿಸಿಕೊಡಬೇಕು. ಕಳುಹಿಸಿ ಕೊಡಬೇಕಾದ ಇಮೇಲ್- Email ID: hrrhqer@aai.aero ಆಗಿದೆ. 12 ಫೆಬ್ರವರಿ 2025ರ ಒಳಗಾಗಿ ಅರ್ಜಿ ಸಲ್ಲಿಕೆ ಮಾಡಬೇಕು.

ಅರ್ಜಿ ಸಲ್ಲಿಕೆಗೆ ಲಿಂಕ್-

https://www.aai.aero/en/recruitment/release/556206

ಸಂಪೂರ್ಣ ಮಾಹಿತಿಗಾಗಿ- click here 



Post a Comment

Previous Post Next Post

Top Post Ad

CLOSE ADS
CLOSE ADS
×