ಯಶಸ್ವಿನಿ ಯೋಜನೆಯಡಿ 5 ಲಕ್ಷದ ವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆ! ರಾಜ್ಯ ಸರಕಾರದಿಂದ ಹೊಸ ಆದೇಶ ಪ್ರಕಟ

ಯಶಸ್ವಿನಿ ಯೋಜನೆಯಡಿ 5 ಲಕ್ಷದ ವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆ! ರಾಜ್ಯ ಸರಕಾರದಿಂದ ಹೊಸ ಆದೇಶ ಪ್ರಕಟ

Yashaswini yojana-2024-25 ನೇ ಸಾಲಿಗೆ ಸಹಕಾರಿಗಳಿಗಾಗಿ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯನ್ನು(Yashaswini yojana) ಜಾರಿಗೊಳಿಸಲು ಮತ್ತು ಈ ಯೋಜನೆಯಡಿ ಹೊಸ ಸದಸ್ಯರನ್ನು ನೋಂದಾಯಿಸಲು ರಾಜ್ಯ ಸರಕಾರದಿಂದ ಹೊಸ ಆದೇಶವನ್ನು ಪ್ರಕಟಿಸಲಾಗಿದೆ.

ಯಶಸ್ವಿನಿ ಯೋಜನೆಯು ಸಹಕಾರ ಸಂಘಗಳ ಸದಸ್ಯರ ಅನುಕೂಲಕ್ಕಾಗಿ ಸರಕಾರವು ಜಾರಿಗೊಳಿಸಿರುವ ಒಂದು ಪ್ರತಿಷ್ಠಿತ ವಿಶಿಷ್ಟ ಯೋಜನೆಯಾಗಿದ್ದು(Yashaswini scheme), ಈ ಯೋಜನೆಯನ್ನು ಅನುಷ್ಥಾನ ಮಾಡಲು ಈ ವರ್ಷಕ್ಕೆ ಅಧಿಕೃತ ಮಾರ್ಗಸೂಚಿಯನ್ನು ಹೊರಡಿಸಲಾಗಿದೆ.

ಯಶಸ್ವಿನಿ ಯೋಜನೆಯಡಿ ಪ್ರಯೋಜನ ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಅರ್ಜಿಯನ್ನು ಎಲ್ಲಿ ಸಲ್ಲಿಸಬಹುದು? ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳೇನು? ರಾಜ್ಯ ಸರಕಾರದ ಹೊಸ ಆದೇಶದ ಮಾಹಿತಿಯನ್ನು ಇಲ್ಲಿ ಪ್ರಕಟಿಸಲಾಗಿದೆ.

Yashaswini yojane guidelines-ಯಶಸ್ವಿನಿ ಯೋಜನೆಯ ನೂತನ ಮಾರ್ಗಸೂಚಿ ಹೀಗಿದೆ:

1) ಯಾವುದೇ ಸಹಕಾರ ಸಂಘಗಳ ಕಾಯ್ದೆಗಳಡಿ (ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959 ಕರ್ನಾಟಕ ಸೌಹಾರ್ದ ಸಹಕಾರಿಗಳ ಕಾಯ್ದೆ 1997 ಅಥವಾ ಬಹು ರಾಜ್ಯ ಸಹಕಾರಿ ಸಂಘಗಳ ಕಾಯ್ದೆ 2002) ನೋಂದಾಯಿಸಿ, ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಯಾವುದೇ ಸಹಕಾರ ಸಂಘ / ಬ್ಯಾಂಕುಗಳ (ಗ್ರಾಮೀಣ ಮತ್ತು ನಗರ ಸಹಕಾರ ಸಂಘಗಳು ಒಳಗೊಂಡಂತೆ) ಸದಸ್ಯರು ಅಥವಾ ಸಹಕಾರಿ ಸ್ವ-ಸಹಾಯ ಗುಂಪುಗಳ ಸದಸ್ಯರು, ಸದಸ್ಯರಾಗಿ ಒಂದು ತಿಂಗಳು ಪೂರ್ಣಗೊಂಡಿದ್ದಲ್ಲಿ ಅಂತಹ ಸದಸ್ಯರು ಅಥವಾ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959ರಡಿ ನೋಂದಣಿಯಾಗಿ ಕಾರ್ಯನಿರತ ಸಹಕಾರ ಸಂಘಗಳಲ್ಲಿ ಕನಿಷ್ಠ ಮೂರು ವರ್ಷ ಸೇವೆ ಪೂರ್ಣಗೊಳಿಸಿ ಮಾಸಿಕ ರೂ.30,000/- ಮತ್ತು ಅದಕ್ಕಿಂತ ಕಡಿಮೆ ಒಟ್ಟು ವೇತನ ವಡೆಯುತ್ತಿರುವ ನೌಕರರು ಮತ್ತು ಅವರ ಅರ್ಹ ಕುಟುಂಬ ಸದಸ್ಯರು ನಿಗದಿತ ವಾರ್ಷಿಕ ವಂತಿಗೆಯನ್ನು ಪಾವತಿಸಿ ಯಶಸ್ವಿನಿ ಯೋಜನೆಯಡಿ ಸದಸ್ಯರಾಗಲು ಅರ್ಹರಿರುತ್ತಾರೆ (ನೌಕರರಾಗಿದ್ದಲ್ಲಿ ಕನಿಷ್ಠ ಮೂರು ವರ್ಷ ಸೇವೆ ಮತ್ತು ರೂ.30,000/- ಮತ್ತು ಅದಕ್ಕಿಂತ ಕಡಿಮೆ ವೇತನ ಪಡೆಯುತ್ತಿರುವ ಬಗ್ಗೆ ಸಂಬಂಧಿಸಿದ ಸಹಕಾರ ಸಂಘದ ಆಡಳಿತ ಮಂಡಳಿ ದೃಢೀಕರಣ ಪತ್ರ ಲಗತ್ತಿಸಬೇಕು)

2) ಸಮಾಪನೆ / ನಿಷ್ಕ್ರಿಯಗೊಂಡಿರುವ ಸಹಕಾರ ಸಂಘಗಳ ಹಾಗೂ ನೌಕರರ ಸಹಕಾರ ಸಂಘಗಳ ಸದಸ್ಯರು ಅಥವಾ ಪ್ರಧಾನ ಅರ್ಜಿದಾರರು ಮತ್ತು ಅವನ ಕುಟುಂಬದ ಯಾವುದೇ ಸದಸ್ಯನು ಸರ್ಕಾರಿ ನೌಕರರಾಗಿದ್ದಲ್ಲಿ ಯೋಜನೆಗೆ ಅರ್ಹರಿರುವುದಿಲ್ಲ. ಅದೇ ರೀತಿ ಒಬ್ಬ ವ್ಯಕ್ತಿ ಖಾಸಗಿ ಕಂಪನಿ ಅಥವಾ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಮಾಸಿಕ ರೂ.30,000/-ಕ್ಕಿಂತ ಹೆಚ್ಚು ಒಟ್ಟು ವೇತನ ಪಡೆಯುತ್ತಿದ್ದಲ್ಲಿ ಅಥವಾ ಒಬ್ಬ ವ್ಯಕ್ತಿ ಯಾವುದೇ ಆರೋಗ್ಯ ವಿಮಾ ಯೋಜನೆಯಡಿಯಲ್ಲಿ ಸದಸ್ಯರಾಗಿದ್ದಲ್ಲಿ ಅಂತಹವರು ಯಶಸ್ವಿನಿ ಯೋಜನೆಯಡಿ ಸದಸ್ಯರಾಗಲು ಅರ್ಹರಿರುವುದಿಲ್ಲ. ಅಂತಹವರನ್ನು ಯಶಸ್ಸಿನಿ ಯೋಜನೆಯ ‘ಫಲಾನುಭವಿಯಾಗಿ ನೋಂದಾಯಿಸಬಾರದು. ಆದಾಗ್ಯೂ ಯಾವುದೇ ಕಾರಣಕ್ಕೆ ನೋಂದಾಯಿಸಿದ್ದಲ್ಲಿ ಸಹಿತ ಅವರು ಯೋಜನೆ ಸೌಲಭ್ಯ ವಡೆಯಲು ಅರ್ಹರಾಗುವುದಿಲ್ಲ. ಅಂತಹ ವ್ಯಕ್ತಿಗಳು ಪಾವತಿಸಿದ ವಂತಿಗೆಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು.

3) ಯಶಸ್ವಿನಿ ಯೋಜನೆಯಲ್ಲಿನ ವ್ಯಾಖ್ಯಾನದಂತೆ “ಕುಟುಂಬ” ಎಂದರೆ ಪ್ರಧಾನ ಅರ್ಜಿದಾರರ (Principal Member) ತಂದೆ, ತಾಯಿ, ಗಂಡ/ಹೆಂಡತಿ, ಗಂಡು ಮಕ್ಕಳು, ಮದುವೆಯಾಗದ ಹೆಣ್ಣು ಮಕ್ಕಳು, ಸೊಸೆಯಂದಿರು ಮತ್ತು ಮೊಮ್ಮಕ್ಕಳು (ಗಂಡು ಮಕ್ಕಳ ಮಕ್ಕಳು) ಎಂದು ಅರ್ಥೈಯಿಸುವುದು. ಒಂದು ಮನೆಯಲ್ಲಿ ಸೊಸೆ ಪ್ರಧಾನ ಅರ್ಜಿದಾರರಾಗಿದ್ದಲ್ಲಿ ಅವರ ಗಂಡನ ತಂದೆ/ತಾಯಿ ಅಂದರೆ ಅರ್ಜಿದಾರರ ಅತ್ತೆ/ಮಾವ ಅರ್ಹ ಸದಸ್ಯರಾಗುತ್ತಾರೆ. ಆದರೆ ಅರ್ಜಿದಾರರ ತಂದೆ/ತಾಯಿಯವರನ್ನು ಸದಸ್ಯರನ್ನಾಗಿ ಸೇರಿಸಿಕೊಳ್ಳಲು ಬರುವುದಿಲ್ಲ.

4) ಒಬ್ಬ ಯಶಸ್ವಿನಿ ಸದಸ್ಯ ಒಂದು ಅವಿಭಕ್ತ ಕುಟುಂಬದ ಸದಸ್ಯರಾಗಿದ್ದು, ಅವಿಭಕ್ತ ಕುಟುಂಬದ ಎಲ್ಲಾ ಸದಸ್ಯರಿಗೆ ಒಂದೇ ರೇಷನ್ ಕಾರ್ಡು ಹೊಂದಿದ್ದು, ಅದನ್ನು ಹಾಜರು ಪಡಿಸಿದ್ದಲ್ಲಿ ಅಂತಹ ರೇಷನ್ ಕಾರ್ಡ್‌ನಲ್ಲಿ ಹೆಸರು ನಮೂದಾಗಿರುವ ಅವಿಭಕ್ತ ಕುಟುಂಬದ ಎಲ್ಲಾ ಸದಸ್ಯರು ವಾರ್ಷಿಕ ವಂತಿಗೆ ಪಾವತಿಸಿದ್ದಲ್ಲಿ ಅಂತಹ ಕುಟುಂಬದ ಎಲ್ಲಾ ಸದಸ್ಯನಿಗೆ ಯೋಜನೆ ಸೌಲಭ್ಯ ಪಡೆಯಲು ಸರ್ಕಾರವು ಅವಕಾಶ ಕಲ್ಪಿಸಿದೆ. ಅವಿಭಕ್ತ ಕುಟುಂಬದ ಸದಸ್ಯರಿಗೆ ಒಂದೇ ರೇಷನ್ ಕಾರ್ಡ್ ಇಲ್ಲದಿದ್ದಲ್ಲಿ ಈ ಯೋಜನೆಯಡಿ ನೋಂದಾಯಿಸಲು ಅವಕಾಶವಿರುವುದಿಲ್ಲ.

5) ಮದುವೆಯಾಗಿರುವ ಹೆಣ್ಣು ಮಗಳು ಹಾಗೂ ಅವರ ಮಕ್ಕಳು ಅವರ ತವರು ಮನೆಯಲ್ಲಿ ಅಂದರ ಅವರ ತಂದೆ/ತಾಯಿ/ಅಣ್ಣ/ತಮ್ಮ ಪ್ರಧಾನ ಅರ್ಜಿದಾರರ ಕುಟುಂಬದಲ್ಲಿಯೇ ಯಾವುದೇ (ವಿಧವೆ/ವಿಚ್ಛೇದನೆ/ಬೇರ್ಪಟ್ಟಿರುವುದು) ಕಾರಣಗಳಿಗೆ ವಾಸವಾಗಿದ್ದರೆ ಮತ್ತು ಅವರ ವಂತಿಗೆಯನ್ನು ಪ್ರಧಾನ ಅರ್ಜಿದಾರರು ಪ್ರಾಪ್ಪಗಿಸಿದ್ದರೆ ಈ ಯೋಜನೆ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ.

6) ಆದಾಗ್ಯೂ ಮದುವೆಯಾಗಿರುವ ಹೆಣ್ಣು ಮಗಳು ತವರು ಮನೆಯ ಯಶಸ್ವಿನಿ ಕಾರ್ಡಿನಲ್ಲಿ ಆ ವರ್ಷದ ವಾರ್ಷಿಕ ವಂತಿಗೆ ಪಾವತಿಸಿ ಸದಸ್ಯರನ್ನಾಗಿ ನೋಂದಣಿ ಮಾಡಿಕೊಂಡಿದ್ದಲ್ಲಿ ಅಂತಹ ಮದುವೆಯಾಗಿರುವ ಹೆಣ್ಣು ಮಗಳು ತವರು ಮನೆಯ ರೇಷನ್ ಕಾರ್ಡ್‌ನಲ್ಲಿ ತಮ್ಮ ಹೆಸರು ಇರುವ ಬಗ್ಗೆ, ರೇಷನ್ ಕಾರ್ಡ್ ಪ್ರತಿಯನ್ನು ಹಾಜರು ಪಡಿಸಿದ್ದಲ್ಲಿ ಯೋಜನೆ ಸೌಲಭ್ಯ ಪಡೆಯಲು ಅರ್ಹರಿರುತ್ತಾರೆ. ಒಂದು ವೇಳೆ ತವರು ಮನೆಯವರು ರೇಷನ್ ಕಾರ್ಡ್ ಹೊಂದಿಲ್ಲದಿದ್ದರೆ, ಸಂಬಂಧಿಸಿದ ಸಹಕಾರ ಸಂಘದಿಂದ, ಮುದುವೆಯಾಗಿರುವ ಹೆಣ್ಣು ಮಗಳು ತವರು ಮನೆಯಲ್ಲಿ ಇರುವ ಬಗ್ಗೆ ದೃಢೀಕರಿಸಬೇಕು. ಇಲ್ಲದಿದ್ದಲ್ಲಿ ಅಂತಹ ಹೆಣ್ಣು ಮಗಳು ತವರು ಮನೆಯಲ್ಲಿನ ಯಶಸ್ವಿನಿ ಯೋಜನೆಗೆ ಅರ್ಹರಿರುವುದಿಲ್ಲ.

7) ನವಜಾತ ಶಿಶು ತಾಯಿ ಹೆಸರು ಇರುವ ಯಶಸ್ವಿನಿ ಕಾರ್ಡ್‌ ಆಧಾರದ ಮೇಲೆ ಈ ಯೋಜನೆಯಡಿಯಲ್ಲಿ ಸೌಲಭ್ಯವನ್ನು ಮುಂದಿನ ವರ್ಷ ನೋಂದಣಿಯಾಗುವ ವರೆವಿಗೆ ಪಡೆಯಬಹುದು. ನಂತರಲ್ಲಿ ಮಗುವಿನ ಹೆಸರನ್ನು ನೋಂದಾಯಿಸಿಕೊಂಡು ಯೋಜನೆಯ ಸೌಲಭ್ಯ ಪಡೆಯಬಹುದು.

8) ಮೇಲೆ ವಿವರಿಸಿರುವಂತೆ ಅರ್ಹ ಸದಸ್ಯರನ್ನು ಹೊರತುಪಡಿಸಿ ಬೇರೆ ಯಾವುದೇ ಸದಸ್ಯರನ್ನು ಯಶಸ್ವಿನಿ ಯೋಜನೆಗೆ ಸೇರಿಸುವಂತಿಲ್ಲ. ಒಂದು ವೇಳೆ ಸುಳ್ಳು ಮಾಹಿತಿ ನೀಡಿ ಅಕ್ರಮವಾಗಿ ಅರ್ಜಿದಾರ ಅಥವಾ ಸಹಕಾರ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿಯ ತಪ್ಪಿನಿಂದಾಗಲಿ ಅರ್ಹರಲ್ಲದ ಸದಸ್ಯರಿಂದ ವಂತಿಗೆ ಪಾವತಿಸಿಕೊಂಡು ಅಂತಹ ವ್ಯಕ್ತಿಗಳನ್ನು ಗೊತ್ತಿದ್ದೋ ಅಥವಾ ಗೊತ್ತಿಲ್ಲದೆಯೋ ನೋಂದಣಿ ಮಾಡಿದ್ದರೂ ಸಹ ಅಂತಹ ವ್ಯಕ್ತಿಗಳು ಯೋಜನೆಯ ಸೌಲಭ್ಯ ಪಡೆಯಲು ಅರ್ಹರಾಗುವುದಿಲ್ಲ ಹಾಗೂ ಅಂತಹ ವ್ಯಕ್ತಿಗಳು ಪಾವತಿಸಿದ ವಂತಿಗೆ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಮತ್ತು ಅವರ ಯಶಸ್ಸಿನಿ ಸದಸ್ಯತ್ವ ತಂತಾನೇ ರದ್ದುಗೊಳ್ಳುತ್ತದೆ. ಪ್ರತ್ಯೇಕ ರದ್ದತಿ ಆದೇಶ ಅವಶ್ಯಕತೆ ಇರುವುದಿಲ್ಲ.

Important Dates- ಯೋಜನೆಯಡಿ ನೋಂದಣಿ ಮಾಡಿಕೊಳ್ಳಲು ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 01 ಡಿಸೆಂಬರ್ 2024

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31 ಡಿಸೆಂಬರ್ 2024

Application Fee-ನೋಂದಣಿ ಶುಲ್ಕ:

A) ಕುಟುಂಬ ಒಂದಕ್ಕೆ ವಾರ್ಷಿಕ ರೂ.500/-ಗಳ ವಂತಿಗೆ ಮತ್ತು ನಾಲ್ಕಕ್ಕಿಂತ ಹೆಚ್ಚಿನ ಸದಸ್ಯರುಗಳ ಕುಟುಂಬದ ಪ್ರತಿಯೊಬ್ಬ ಹೆಚ್ಚುವರಿ ಸದಸ್ಯರಿಗೆ ರೂ.100/- ಗಳನ್ನು ಪಾವತಿಸತಕ್ಕದ್ದು,

B) ನಗರ ಸಹಕಾರ ಸಂಘಗಳ ಗರಿಷ್ಠ ನಾಲ್ಕು ಸದಸ್ಯರ ಕುಟುಂಬ ಒಂದಕ್ಕೆ ವಾರ್ಷಿಕ ರೂ.1000/- ಗಳ ವಂತಿಗೆ ಮತ್ತು ನಾಲ್ಕಕ್ಕಿಂತ ಹೆಚ್ಚಿಗಿ ಸದಸ್ಯರುಗಳ ಕುಟುಂಬದ ಪ್ರತಿಯೊಬ್ಬ ಹೆಚ್ಚುವರಿ ಸದಸ್ಯರಿಗೆ ರೂ.200/-ಗಳನ್ನು ಪಾವತಿಸದ್ದು.

C) ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಸದಸ್ಯರಿಗೆ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪ ಯೋಜನೆಯಡಿ ಸಹಾಯ ಧನ ನೀಡುವ ಮೂಲಕ ಅವರ ವಾರ್ಷಿಕ ಸದಸ್ಯತ್ವದ ವಂತಿಗೆಯನ್ನು ಸರ್ಕಾರವೇ ಭರಿಸುತ್ತದೆ.

ನೋಂದಣಿಯನ್ನು ಎಲ್ಲಿ ಮಾಡಿಕೊಳ್ಳಬೇಕು?

ಅರ್ಹ ಅರ್ಜಿದಾರರು ಅಗತ್ಯ ದಾಖಲಾತಿಗಳ ಸಮೇತ ನಿಮ್ಮ ಹತ್ತಿರದ ಸಹಕಾರಿ ಸಂಘದ ಕಚೇರಿಯನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಬೇಕು.

Yashaswini Yojane Benefits-ಯಾವೆಲ್ಲ ಸೌಲಭ್ಯವನ್ನು ಪಡೆಯಬಹುದು?

1) ಪ್ರಸ್ತುತ ಯಶಸ್ವಿನಿ ಯೋಜನೆಯಡಿಯಲ್ಲಿ ಟ್ರಸ್ಟ್ ಗುರ್ತಿಸಿದ 1650 ವಿವಿಧ ಚಿಕಿತ್ಸೆಗಳು ಮತ್ತು 478 ICU ಚಿಕಿತ್ಸೆಗಳೂ ಸೇರಿದಂತೆ ಒಟ್ಟು 2128 ಚಿಕಿತ್ಸೆಗಳನ್ನು ಅಳವಡಿಸಿಕೊಳ್ಳಲಾಗಿದೆ.

2) ರೋಗಿಗಳಿಗೆ ಸದರಿ ಚಿಕಿತ್ಸಾ ಸೌಲಭ್ಯಗಳನ್ನು ರಾಜ್ಯದಲ್ಲಿ ನೋಂದಾಯಿಸಿದ ಯಶಸ್ಸಿನಿ ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ಒದಗಿಸಲಾಗುವುದು. ನೆಟ್ವರ್ಕ್ ಆಸ್ಪತ್ರೆಗಳನ್ನು ಹೊರತುವಡಿಸಿ ಇತರ ಆಸ್ಪತ್ರೆಗಳಲ್ಲಿ ಯಶಸ್ವಿನಿ ಯೋಜನೆಯ ಸೇವೆ ಲಭ್ಯವಿರುವುದಿಲ್ಲ. ಯಶಸ್ವಿನಿ ಯೋಜನೆಯಡಿ ಫಲಾನುಭವಿ ಚಿಕಿತ್ಸೆ ಪಡೆಯುವ ಮೊದಲು ಆಸ್ಪತ್ರೆಯು ಯೋಜನೆಗೆ ಒಳಪಟ್ಟಿರುವ ಬಗ್ಗೆ ಖಾತ್ರಿ ಪಡಿಸಿಕೊಂಡು ನಂತರ ಚಿಕಿತ್ಸೆ ಪಡೆಯತಕ್ಕದ್ದು,

3) ಯೋಜನೆಯಲ್ಲಿ ಒಳಪಡದ ಚಿಕಿತ್ಸೆಗಳ ಮತ್ತು ಟ್ರಸ್ಟ್ ಅಂಗೀಕರಿಸದ ಆಸ್ಪತ್ರೆಗಳಲ್ಲಿ ಪಡೆದಂತಹ ಚಿಕಿತ್ಸೆಗಳಿಗೆ ಯಶಸ್ವಿನಿ ಟ್ರಸ್ಟ್ ಜವಾಬ್ದಾರರಾಗುವುದಿಲ್ಲ ಹಾಗೂ ಯಾವುದೇ ಕಾರಣಕ್ಕೂ ಆಸ್ಪತ್ರೆಗಳಿಗಾಗಲಿ ಅಥವಾ ಫಲಾನುಭವಿಗಳಿಗಾಗಲಿ ಚಿಕಿತ್ಸಾ ವೆಚ್ಚವನ್ನು ಪಾವತಿಸಲಾಗುವುದಿಲ್ಲ.

4) ಎರಡು ಜೀವಂತ ಮಕ್ಕಳು ಅಥವಾ ಎರಡು ಹರಿಗೆಗೆ ಮಾತ್ರ ಯಶಸ್ವಿನಿ ಯೋಜನೆಯಲ್ಲಿ ಸೌಲಭ್ಯ ದೊರೆಯುತ್ತದೆ.

5) ಯಶಸ್ವಿನಿ ಯೋಜನೆಯ ಪ್ರೋಟೋಕಾಲ್ ಪ್ರಕಾರ ಯಶಸ್ವಿನಿ ಫಲಾನುಭವಿಗಳು ಜನರಲ್ ವಾರ್ಡನಲ್ಲಿ ಮಾತ್ರ ಚಿಕಿತ್ಸೆ ಪಡೆಯಲು ಅರ್ಹರಿರುತ್ತಾರೆ. ಒಂದು ವೇಳೆ ಯೋಜನೆಯಡಿ ನಿಗದಿಪಡಿಸಿರುವ ಜನರಲ್ ವಾರ್ಡ್ ಬದಲಾಗಿ ಉನ್ನತ(Semi Special Ward Or Special Ward)ನಲ್ಲಿ ಚಿಕಿತ್ಸೆ ಪಡೆಯಲು ಇಚ್ಚಿಸಿದಲ್ಲಿ, ಸದರಿ ಫಲಾನುಭವಿಗಳಿಗೆ ಯೋಜನೆಯಡಿ ನಿಗದಿ ಪಡಿಸಿರುವಂತೆ ಜನರಲ್ ವಾರ್ಡಗೆ ಅನ್ವಯಿಸುವ ಚಿಕಿತ್ಸೆಯ ವೆಚ್ಚವನ್ನು ಮಾತ್ರ ಭರಿಸಲಾಗುವುದು. ಉನ್ನತ ವಾರ್ಡ್/ಸ್ಪೆಷಲ್ ವಾರ್ಡಿಗೆ ಆಗುವ ಹೆಚ್ಚುವರಿ ವ್ಯತ್ಯಾಸದ ಚಿಕಿತ್ಸಾ ಮೊತ್ತವನ್ನುಸದರಿ ಫಲಾನುಭವಿಗಳೇ ಭರಿಸತಕ್ಕದ್ದು.

Post a Comment

Previous Post Next Post

Top Post Ad

CLOSE ADS
CLOSE ADS
×