ಎಲ್‌ಐಸಿಯಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ, ಯಾರೆಲ್ಲ ಅರ್ಹರು LIC Scholarship Good News

SVR Creations
0

LIC Scholarship Good News: ಎಲ್‌ಐಸಿಯು ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್‌ವೊಂದನ್ನು ಕೊಟ್ಟಿದೆ. ಭಾರತೀಯ ಜೀವವಿಮಾ ನಿಗಮವು ( LIC) ದೇಶದ ವಿವಿಧ ಕೋರ್ಸ್‌ಗಳಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು ಮುಂದಾಗಿದೆ. ಈ ಸಂಬಂಧ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ ಮಾಡಲಾಗಿದೆ.

ಎಲ್‌ಐಸಿಯು ಭಾರತದ ಅತ್ಯಂತ ದೊಡ್ಡ ಜೀವವಿಮೆ ನೀಡುವ ಕಂಪನಿಯಾಗಿದ್ದು, ಸಂಪೂರ್ಣವಾಗಿ ಭಾರತ ಸರ್ಕಾರದ ಅಧೀನಕ್ಕೆ ಒಳಪಟ್ಟಿದೆ. ಇನ್ನು ಇದೀಗ ಎಲ್‌ಐಸಿ ಗೋಲ್ಡನ್ ಜುಬಿಲಿ ವಿದ್ಯಾರ್ಥಿವೇತನ ಯೋಜನೆ 2024ರ ಮೂಲಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು ಮುಂದಾಗಿದೆ. ಹಾಗಾದರೆ ಈ ವಿದ್ಯಾರ್ಥಿ ವೇತನಕ್ಕೆ ಯಾರೆಲ್ಲ ಅರ್ಹರು, ಯಾರು ಅರ್ಜಿ ಸಲ್ಲಿಸಬಹುದು ನೋಡೋಣ ಬನ್ನಿ..

LIC ವಿದ್ಯಾರ್ಥಿವೇತನ ಅರ್ಹತೆ 

ಎಲ್‌ಐಸಿಯು ವಿವಿಧ ವಿದ್ಯಾರ್ಥಿಗಳಿಂದ ವಿದ್ಯಾರ್ಥಿ (Students Scholarship) ವೇತನಕ್ಕಾಗಿ ಅರ್ಜಿ ಆಹ್ವಾನ ಮಾಡಿದೆ. ಎಲ್‌ಐಸಿ ಗೋಲ್ಡನ್‌ ಜುಬಿಲೀ ಫೌಂಡೇಶನ್ ಆಡಿಯಲ್ಲಿ ಅಖಿಲ ಭಾರತ ಆಧಾರದ ಮೇಲೆ ಈ ವಿದ್ಯಾರ್ಥಿ ವೇತನವನ್ನು ನೀಡುತ್ತಿದೆ.

ಶೈಕ್ಷಣಿಕ ವರ್ಷ 2021-22, 2023-23 ಅಥವಾ 2023-24 ರಲ್ಲಿ Xth / XIIth (ಎಸ್‌ಎಸ್‌ಎಲ್‌ಸಿ ಅಥವಾ ದ್ವಿತೀಯ ಪಿಯುಸಿ) ಡಿಪ್ಲೋಮಾ ಅಥವಾ ಅದಕ್ಕೆ ಸಮಾನಾಂತರ ಪರೀಕ್ಷೆಯಲ್ಲಿ ಕನಿಷ್ಠ ಶೇಕಡ 60% ಅಂಕಗಳೊಂದಿಗೆ ಇಲ್ಲವೇ ಸಮಾನ CGPA ಗ್ರೇಡ್‌ನೊಂದಿಗೆ ಉತ್ತೀರ್ಣರಾದ ಮತ್ತು 2024-25ರ ಶೈಕ್ಷಣಿಕ ಮೊದಲ ವರ್ಷಕ್ಕೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ ಎಂದು ಘೋಷಿಸಲಾಗಿದೆ.

ಇನ್ನು ವಿವಿಧ ಕೋರ್ಸ್‌ಗಳನ್ನು ಮಾಡುತ್ತಿರುವ ವಿದ್ಯಾರ್ಥಿಗಳಿಗೂ ಈ ವಿದ್ಯಾರ್ಥಿ ವೇತನ ಅನ್ವಯವಾಗಲಿದೆ. ಉನ್ನತ ಶಿಕ್ಷಣ ಮಾಡಬೇಕು ಎಂದು ಇಚ್ಛಿಸುತ್ತಿರುವ ಯುವಕ ಹಾಗೂ ಯುವತಿಯರಿಗಾಗಿ ಸಾಮಾನ್ಯ ವಿದ್ಯಾರ್ಥಿ ವೇತನವನ್ನೂ ಪರಿಚಯಿಸಲಾಗಿದೆ.

* ವೈದ್ಯಕೀಯ, ಇಂಜಿನಿಯರಿಂಗ್, ಯಾವುದೇ ವಿಭಾಗದಲ್ಲಿ ಪದವಿ, ಯಾವುದೇ ಕ್ಷೇತ್ರದಲ್ಲಿ ಡಿಪ್ಲೊಮಾ ಕೋರ್ಸ್ ಮತ್ತು ಇಂಟಿಗ್ರೇಟೆಡ್ ಕೋರ್ಸ್‌ಗಳನ್ನು ಮಾಡುವವರಿಗೆ.

* ಸರ್ಕಾರಿ ಮಾನ್ಯತೆ ಪಡೆದ ಕಾಲೇಜುಗಳು ಸಂಸ್ಥೆಗಳು ಅಥವಾ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿನ (ITI) ಕೋರ್ಸ್‌ಗಳ ಮೂಲಕ ವೃತ್ತಿಪರ ಕೋರ್ಸ್ ಮಾಡುವವರಿಗೆ ಇದು ಅನ್ವಯವಾಗಲಿದೆ.

ಇನ್ನು ಕೆಲವು ನಿರ್ದಿಷ್ಟ ವಿದ್ಯಾಭ್ಯಾಸ ಮಾಡಲು ಇಚ್ಛಿಸುವ ಹೆಣ್ಣು ಮಕ್ಕಳಿಗೆ ವಿಶೇಷ ವಿದ್ಯಾರ್ಥಿ ವೇತನವನ್ನು ಪರಿಚಯಿಸಲಾಗಿದೆ.

ಅದರಲ್ಲಿ 10+2 ಪ್ಯಾಟರ್ನ್ ಅಂತರ್ಗತ ಕ್ಲಾಸ್ XI ಮತ್ತು XII ಅಥವಾ ಇಂಟರ್‌ಮೀಡಿಯಟ್ ವಿದ್ಯಾಭ್ಯಾಸ ಮಾಡುವ ಹೆಣ್ಣು ಮಕ್ಕಳು ಹಾಗೂ Xlh (ಎಸ್‌ಎಸ್‌ಎಲ್‌ಸಿ)ಯ ನಂತರ ಯಾವುದೇ ಕ್ಷೇತ್ರದಲ್ಲಿ ಎರಡು ವರ್ಷಗಳ ಡಿಪ್ಲೊಮಾ ಕೋರ್ಸ್ ಮಾಡುವವರು ಈ ವಿದ್ಯಾರ್ಥಿ ವೇತನಕ್ಕೆ ಅರ್ಹರಾಗಿರುತ್ತಾರೆ ಎಂದು ಎಲ್‌ಐಸಿಯ ಪ್ರಕಟಣೆ ತಿಳಿಸಿದೆ.

ಯಾರಿಗೆ ಅನ್ವಯಿಸಲಿದೆ: 

ಮೇಲೆ ಹೇಳಿದ ವಿದ್ಯಾಭ್ಯಾಸ ಮಾಡಿರುವ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿ ವೇತನ ಅನ್ವಯವಾಗಲಿದೆ. ಮುಖ್ಯವಾಗಿ ಆರ್ಥಿಕವಾಗಿ ಸಂಕಷ್ಟದಲ್ಲಿ ಇರುವ ವಿದ್ಯಾರ್ಥಿಗಳನ್ನು ಆದ್ಯತೆಯ ಮೇಲೆ ಈ ವಿದ್ಯಾರ್ಥಿ ವೇತನಕ್ಕೆ ಪರಿಗಣಿಸಲಾಗುತ್ತದೆ. ಇನ್ನು ಕೆಲವು ನಿರ್ದಿಷ್ಟ ಷರತ್ತುಗಳನ್ನು ಸಹ ವಿಧಿಸಲಾಗಿದೆ. ಆನ್‌ಲೈನ್‌ ಅರ್ಜಿ, ಇತರ ಅರ್ಹತಾ ಷರತ್ತುಗಳು ಮತ್ತು ಯೋಜನೆಯ ವಿವರಗಳನ್ನು ತಿಳಿದುಕೊಳ್ಳಲು ನೀವು ಅಧಿಕೃತ ವೆಬ್‌ಸೈಟ್‌ https://licindia.in dc. (https://licindia.in/)ಗೆ ಭೇಟಿ ನೀಡಬಹುದಾಗಿದೆ. ಇನ್ನು ಆನ್‌ಲೈನ್‌ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ 22.12.2024 ಎಂದು ಹೇಳಲಾಗಿದೆ.

Post a Comment

0 Comments
* Please Don't Spam Here. All the Comments are Reviewed by Admin.
Post a Comment (0)

#buttons=(Accept !) #days=(20)

Our website uses cookies to enhance your experience. Learn More
Accept !
To Top