ಭಾರತೀಯ ಕೋಸ್ಟ್ ಗಾರ್ಡ್ ನೇಮಕಾತಿ.. ಎಷ್ಟು ಕೆಲಸಗಳು ಖಾಲಿ ಇವೆ, ಯಾರಿಗೆ ಅವಕಾಶ ಇದೆ

ಕೊನೆಯ ದಿನಾಂಕ, ಆಯ್ಕೆ ಪ್ರಕ್ರಿಯೆ ಸೇರಿ ಹಲವು ಮಾಹಿತಿ ಇಲ್ಲಿದೆ.ಆಕಾಂಕ್ಷಿಗಳು ಆನ್ಲೈನ್ನಲ್ಲಿ ಅರ್ಜಿ ಶುಲ್ಕ ಪಾವತಿ ಮಾಡಬೇಕು.ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು

ಭಾರತೀಯ ಕೋಸ್ಟ್ ಗಾರ್ಡ್ ಹುದ್ದೆಗಳನ್ನು ನೇಮಕಾತಿ ಮಾಡುತ್ತಿದ್ದು ಅರ್ಹ ಹಾಗೂ ಆಸಕ್ತಿ ಇರುವ ಆಕಾಂಕ್ಷಿಗಳಿಂದ ಅರ್ಜಿಗಳನ್ನು ಆಹ್ವಾನ ಮಾಡಿದೆ. 2026ರ ಬ್ಯಾಚ್ಗಾಗಿ ಈಗಲೇ ಉದ್ಯೋಗಗಳನ್ನು ತುಂಬಲಾಗುತ್ತಿದೆ. ಈ ನೇಮಕಾತಿ ಅಭಿಯಾನದ ಅಡಿ ಪರೀಕ್ಷೆಯ ಮೂಲಕ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.

ಜನರಲ್ ಡ್ಯೂಟಿ (ಜಿಡಿ) ಮತ್ತು ತಾಂತ್ರಿಕ (ಎಂಜಿನಿಯರಿಂಗ್ ಮತ್ತು ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ಸ್) ಸೇರಿದಂತೆ ವಿವಿಧ ಶಾಖೆಗಳಲ್ಲಿ ಆಯ್ಕೆ ಆದವರನ್ನು ನೇಮಕಾತಿ ಮಾಡಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ಈ ಲೇಖನವನ್ನು ಸಂಪೂರ್ಣವಾಗಿ ಗಮನಿಸಿ ಆನ್‌ಲೈನ್‌ ಮೂಲಕ ಅಪ್ಲೇ ಮಾಡಬಹುದು. ಇದರ ಅಧಿಕೃತ ವೆಬ್‌ಸೈಟ್ https://joinindiancoastguard.cdac.in/ ಆಗಿದೆ. ಈ ಕೆಲಸಗಳಿಗೆ ಸಂಬಂಧಿಸಿದಂತೆ ಕೊನೆಯ ದಿನಾಂಕ, ಆಯ್ಕೆ ಪ್ರಕ್ರಿಯೆ, ಮುಂದಿನ ಅಪ್ಡೇಟ್ಸ್, ಅರ್ಜಿ ಶುಲ್ಕ, ಇತ್ಯಾದಿಗಳ ವಿವರ ಇಲ್ಲಿ ನೀಡಲಾಗಿದೆ.

ಉದ್ಯೋಗದ ಹೆಸರು

ಸಹಾಯಕ ಕಮಾಂಡೆಂಟ್‌ ಹುದ್ದೆಗಳು

ಜನರಲ್ ಡ್ಯುಟಿ (ಜಿಡಿ)- 110 ಉದ್ಯೋಗಗಳು

ತಾಂತ್ರಿಕ (ಇಂಜಿನಿಯರ್)- 30 ಹುದ್ದೆಗಳು

ವಯೋಮಿತಿ-

21 ರಿಂದ 25 ವರ್ಷದ ಒಳಗಿನವರಿಗೆ ಅವಕಾಶ

ಶೈಕ್ಷಣಿಕ ವಿದ್ಯಾರ್ಹತೆ-

ಜನರಲ್ ಡ್ಯುಟಿ (ಜಿಡಿ)- ದ್ವಿತೀಯ ಪಿಯುಸಿ (ಗಣಿತ ಮತ್ತು ಭೌತಶಾಸ್ತ್ರ ಅಧ್ಯಯನ ಮಾಡಿರಬೇಕು)

ತಾಂತ್ರಿಕ (ಇಂಜಿನಿಯರ್)- ತಾಂತ್ರಿಕ ಶಾಖೆ (ಎಂಜಿನಿಯರಿಂಗ್/ಎಲೆಕ್ಟ್ರಿಕಲ್):

ಅರ್ಜಿ ಶುಲ್ಕ ಎಷ್ಟು?

ಜನರಲ್, ಒಬಿಸಿ, ಇಡಬ್ಲುಎಸ್- 300 ರೂಪಾಯಿಗಳು

ಎಸ್ಸಿ, ಎಸ್ಟಿ, ವಿಶೇಷ ಚೇತನರು- ವಿನಾಯಿತಿ ಇದೆ

ಆನ್ಲೈನ್ ಮೂಲಕ ಹಣ ಪಾವತಿ ಮಾಡಬೇಕು

ಪ್ರಮುಖವಾದ ದಿನಾಂಕಗಳು

ಅರ್ಜಿ ಸಲ್ಲಿಕೆಯ ಆರಂಭದ ದಿನಾಂಕ- 05 ಡಿಸೆಂಬರ್ 2024

ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ- 24 ಡಿಸೆಂಬರ್ 2024


Previous Post Next Post