Scholarship online application- 1 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ

ರಾಜ್ಯ ಸರಕಾರದಿಂದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗಲು ವಿದ್ಯಾರ್ಥಿ ವೇತನ(Scholarship application) ಪಡೆಯಲು 1 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ.



  • ರಾಜ್ಯ ಸರಕಾರದಿಂದ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಕ್ಕೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಪ್ರತ್ಯೇಕ ಜಾಲತಾಣವನ್ನು ರಚನೆ ಮಾಡಿದ್ದು ವಿದ್ಯಾರ್ಥಿಗಳು ಈ ವೆಬ್ಸೈಟ್ ಭೇಟಿ ಮಾಡಿ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಅರ್ಜಿ ಸಲ್ಲಿಸಬಹುದು.
  • ವಿದ್ಯಾರ್ಥಿ ವೇತನ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ? ಬೇಕಾಗುವ ದಾಖಲೆಗಳು ಏನು? ಯಾರೆಲ್ಲ ಅರ್ಜಿ ಸಲ್ಲಿಸಲು ಅರ್ಹರು? ಸಂಬಂಧಪಟ್ಟ ಇಲಾಖೆಗಳ ಸಹಾಯವಾಣಿ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ವಿವರಿಸಲಾಗಿದೆ.

SSP website-ಎಲ್ಲಾ ಬಗ್ಗೆಯ ಸರಕಾರಿ ವಿದ್ಯಾರ್ಥಿ ವೇತನ ಪಡೆಯಲು ಅರ್ಜಿ ಸಲ್ಲಿಸಲು ಒಂದೇ ವೆಬ್ಸೈಟ್:

ರಾಜ್ಯ ಸರಕಾರದಿಂದ ಎಲ್ಲಾ ಇಲಾಖೆಗಳಿಂದ ಜಾರಿಯಲ್ಲಿರುವ ವಿವಿಧ ಬಗ್ಗೆಯ ವಿದ್ಯಾರ್ಥಿ ವೇತನವನ್ನು ಪಡೆಯಲು 1 ನೇ ತರಗತಿಯಿಂದ ಪದವಿ ವ್ಯಾಸಂಗ ಮಾಡುತ್ತಿರುವವರ ವರೆಗಿನ ಎಲ್ಲಾ ವಿದ್ಯಾರ್ಥಿಗಳು ಇ-ಆಡಳಿತ ಇಲಾಖೆಯಿಂದ ಅಭಿವೃದ್ದಿಪಡಿಸಿರುವ SSP PORTAL(https://ssp.postmatric.karnataka.gov.in/) ಅನ್ನು ಭೇಟಿ ಮಾಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ವಿದ್ಯಾರ್ಥಿಗಳು ನಿಮ್ಮ ಹತ್ತಿರದ ಗ್ರಾಮ ಒನ್/ಕರ್ನಾಟಕ ಒನ್/ಬೆಂಗಳೂರು ಒನ್ ಕೇಂದ್ರವನ್ನು ನೇರವಾಗಿ ಭೇಟಿ ಮಾಡಿ ಅರ್ಜಿ ಸಲ್ಲಿಸಬಹುದು ಅಥವಾ ಈ ಕೆಳಗೆ ವಿವರಿಸಿರುವ ವಿಧಾನವನ್ನು ಅನುಸರಿಸಿ ನಿಮ್ಮ ಮೊಬೈಲ್ ಮೂಲಕವೇ ಅರ್ಜಿ ಸಲ್ಲಿಸಬಹುದು.

Documents for SSP Scholarship-ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:

1) ಅರ್ಜಿದಾರರ ಆಧಾ‌ರ್ ಸಂಖ್ಯೆ ಮತ್ತು ಆಧಾರ್ ನಲ್ಲಿ ಇರುವ ಹಾಗೆ ಹೆಸರು

2) ಅರ್ಜಿದಾರರ ಮೊಬೈಲ್ ಸಂಖ್ಯೆ

3) ಅರ್ಜಿದಾರರ ಇ-ಮೇಲ್ ಐ.ಡಿ.

4) ಅರ್ಜಿದಾರರ ಶಾಲಾ ನೋಂದಣಿ ವಿವರ

5) ಅರ್ಜಿದಾರರ ಹೆಸರಿನಲ್ಲಿ ಇರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಆ‌ರ್.ಡಿ ಸಂಖ್ಯೆ

6) ಅರ್ಜಿದಾರರ ವಿಕಲಚೇತನರಾಗಿದ್ದಲ್ಲಿ ಯು.ಡಿ.ಐ.ಡಿ ಗುರುತಿನ ಸಂಖ್ಯೆ

7) ಅರ್ಜಿದಾರರ ವಾಸವಿರುವ ಜಿಲ್ಲೆ, ತಾಲ್ಲೂಕು, ವಿಧಾನಸಭಾ ಕ್ಷೇತ್ರದ ಹೆಸರು ಮತ್ತು ಮನೆಯ ವಿಳಾಸ

8) ಹಾಸ್ಟೆಲ್ ವಿವರಗಳು (ಅನ್ವಯವಾದಲ್ಲಿ)

SSP Scholarship Online link-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:

ವಿದ್ಯಾರ್ಥಿ ವೇತನ ಪಡೆಯಲು ಅರ್ಹರಿರುವ ವಿದ್ಯಾರ್ಥಿಗಳು ಈ ಕೆಳಗೆ ನೀಡಿರುವ ಮಾಹಿತಿಯನ್ನು ಅನುಸರಿಸಿ ಆ ಹಂತಗಳನ್ನು ಪಾಲಿಸಿ SSP ವೆಬ್ಸೈಟ್ ಅನ್ನು ಪ್ರವೇಶ ಮಾಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

Step-1: ಪ್ರಥಮದಲ್ಲಿ ಈ Apply Now ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ SSP ಪೋರ್ಟಲ್ ಅನ್ನು ಪ್ರವೇಶ ಮಾಡಬೇಕು.



Step-2: ಬಳಿಕ ಮೊದಲ ಬಾರಿಗೆ ಈ ವೆಬ್ಸೈಟ್ ಅನ್ನು ಪ್ರವೇಶ ಮಾಡುತ್ತಿರುವವರು ಖಾತೆಯನ್ನು ಸೃಜನೆ ಮಾಡಿಕೊಳ್ಳಬೇಕು ಈಗಾಗಲೇ ಖಾತೆಯನ್ನು ಸೃಜನೆ ಮಾಡಿಕೊಂಡಿರುವವರು ನೇರವಾಗಿ ನಿಮ್ಮ ಬಳಕೆದಾರ ಐಡಿಯನ್ನು ಹಾಕಿ ಲಾಗಿನ್ ಆಗಬೇಕು.

ಹೊಸದಾಗಿ ಖಾತೆಯನ್ನು ರಚನೆ ಮಾಡಿಕೊಳ್ಳುವ ವಿಧಾನದ ಸಂಪೂರ್ಣ ಮಾಹಿತಿ ಕೈಪಿಡಿ: Download Now

Step-3: ಲಾಗಿನ್ ಅಗಿ ಅರ್ಜಿದಾರರ ಆಧಾರ್ ಕಾರ್ಡ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯನ್ನು ಹಾಕಿ ಇ-ಕೆವೈಸಿಯನ್ನು ದೃಡೀಕರಿಸಿ ವಿಧ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಅಗತ್ಯವಿರುವ ವಿವರವನ್ನು ಭರ್ತಿ ಮಾಡಿ ಮುಂದುವರೆಯಬೇಕು

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನದ ಸಂಪೂರ್ಣ ಮಾಹಿತಿಯ ಕೈಪಿಡಿಯನ್ನು ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ: Download Now

Scholarship Helpline numbers- ಇಲಾಖಾವಾರು ಸಹಾಯವಾಣಿಗಳು:

  • STATE SCHOLARSHIP PORTAL HELPLINE NUMBER- 1902
  • ಸಮಾಜ ಕಲ್ಯಾಣ ಇಲಾಖೆ- 9482300400/08022634300
  • ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ- 8277799990
  • ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ- 9482300400/080-22634300
  • ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ- 8050770004/8050770005
  • ಕುಟುಂಬ ವೆಬ್ಸೈಟ್- 080-22371030


Previous Post Next Post