Realme: ಈ 5G ಫೋನಿನ ಬೆಲೆ ದಿಢೀರ್ ಕುಸಿತ! 2,499 ರೂ.ನ ಇಯರ್‌ಬಡ್‌ ಉಚಿತ.. 2,500 ಡಿಸ್ಕೌಂಟ್

ರಿಯಲ್‌ಮಿ (Realme) ಕಳೆದ ತಿಂಗಳು ರಿಯಲ್‌ಮಿ ನಾರ್ಜೊ 70 ಟರ್ಬೊ 5G (Realme Narzo 70 Turbo 5G) ಫೋನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿತ್ತು. ಇದು ಕಂಪನಿಯ 'Narzo' ಸರಣಿಯ ಹೊಸ 5G ಫೋನ್ ಆಗಿದೆ. 12GB RAM ಮತ್ತು ಮಿಡಿಯಾಟೆಕ್ ಡೈಮೆನ್ಸಿಟಿ 7300 ಎನರ್ಜಿ ಪ್ರೊಸೆಸರ್‌ ಹೊಂದಿರುವ ಈ ಮೊಬೈಲ್‌ನ ಬೆಲೆ ಒಂದು ತಿಂಗಳೊಳಗೆ ಭಾರೀ ಇಳಿಕೆಯಾಗಿದೆ. ಕಂಪನಿಯು ಭರ್ಜರಿ ಡಿಸ್ಕೌಂಟ್ ಮತ್ತು ಆಫರ್‌ಗಳೊಂದಿಗೆ ಮಾರಾಟ ಮಾಡುತ್ತಿದೆ. ಈ ಫೋನ್‌ ಖರೀದಿಸಿದರೆ, ಉಚಿತವಾಗಿ ಇಯರ್‌ಬಡ್‌ ಸಹ ನೀಡಲಾಗುತ್ತದ.



ರಿಯಲ್‌ಮಿ ನಾರ್ಜೊ 70 ಟರ್ಬೊ 5G ಫೋನಿನ 8GB+128GB ಮತ್ತು 12GB+256GB ಸ್ಟೋರೇಜ್‌ ರೂಪಾಂತರದ ಮೇಲೆ 1,000 ರೂ. ಡಿಸ್ಕೌಂಟ್ ಲಭ್ಯವಿದೆ. ಈ ರಿಯಾಯಿತಿಯೊಂದಿಗೆ, ಫೋನಿನ 8GB RAM ರೂಪಾಂತರವನ್ನು 16,999 ರೂ.ಗೆ ಖರೀದಿಸಬಹುದು. 12GB RAM ರೂಪಾಂತರವನ್ನು 19,999 ರೂ.ಗೆ ಖರೀದಿಸಬಹುದು. ಈ ಮೊಬೈಲ್‌ನ 6GB RAM+128GB ಸ್ಟೋರೇಜ್ ರೂಪಾಂತರದ ಖರೀದಿ ಮೇಲೆ 750 ರೂ.ಗಳ ರಿಯಾಯಿತಿ ಲಭ್ಯವಿದೆ. ಡಿಸ್ಕೌಂಟ್ ಬಳಿಕ ಇದರ ಬೆಲೆ 16,249 ರೂ.ಗೆ ಇಳಿಕೆಯಾಗಲಿದೆ.

Realme Narzo 70 Turbo 5G discount

ಕಂಪನಿಯು ರಿಯಾಯಿತಿ ಹೊರತುಪಡಿಸಿ, ಈ ಫೋನ್ ಖರೀದಿಸುವ ಎಲ್ಲಾ ಗ್ರಾಹಕರಿಗೆ 2,499 ರೂ. ಮೌಲ್ಯದ ರಿಯಲ್‌ಮಿ ಬಡ್ಸ್ N1 ಅನ್ನು ಉಚಿತವಾಗಿ ನೀಡುತ್ತಿದೆ. ಫೋನ್ ಖರೀದಿಸುವಾಗ MobiKwik ಮೂಲಕ ಪಾವತಿ ಮಾಡಿದರೆ, 1,500 ರೂ. ಕ್ಯಾಶ್‌ಬ್ಯಾಕ್ ಪಡೆಯಬಹುದು. ಈ ಎಲ್ಲಾ ಆಫರ್‌ಗಳು ಕಂಪನಿಯ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ರಿಯಲ್‌ಮಿ ವೆಬ್‌ಸೈಟ್‌ನಲ್ಲಿ ಈ ಆಫರ್‌ ಪಡೆಯಿರಿ.

ರಿಯಲ್‌ಮಿ ನಾರ್ಜೊ 70 ಟರ್ಬೊ 5G ಫೋನಿನ ಫೀಚರ್ಸ್‌

ಡಿಸ್ಪ್ಲೇ ವಿವರ

ರಿಯಲ್‌ಮಿ ನಾರ್ಜೊ 70 ಟರ್ಬೊ 5G ಮೊಬೈಲ್ 6.67 ಇಂಚಿನ ಸ್ಯಾಮ್‌ಸಂಗ್ E4 OLED ಡಿಸ್ಪ್ಲೇಯನ್ನು ಹೊಂದಿದೆ. ಇದು 120 Hz ರಿಫ್ರೆಶ್ ದರ, 180Hz ಟಚ್ ಸ್ಯಾಂಪ್ಲಿಂಗ್ ದರದೊಂದಿಗೆ ಬರುತ್ತದೆ. ಜೊತೆಗೆ, 1200 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಮತ್ತು AG DT Star 2 ಗಾಜಿನ ರಕ್ಷಣೆಯನ್ನು ಹೊಂದಿದೆ.

ಪ್ರೊಸೆಸರ್ ಸಾಮರ್ಥ್ಯ

ಕಂಪನಿಯು ಈ ಫೋನನ್ನು ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಎನರ್ಜಿ 5G 4nm ಪ್ರೊಸೆಸರ್‌ನೊಂದಿಗೆ ಬಿಡುಗಡೆ ಮಾಡಿದೆ. ಇದು ಆಕ್ಟಾ ಕೋರ್ ಚಿಪ್‌ಸೆಟ್ ಆಗಿದೆ. ಇದು ಆಂಡ್ರಾಯ್ಡ್‌ 14 ಆಧಾರಿತ ರಿಯಲ್‌ಮಿ ಯುಐ 5.0 ನಲ್ಲಿ ಕೆಲಸ ನಿರ್ವಹಿಸುತ್ತದೆ. ಈ ಫೋನ್ Turbo AnTuTu ಬೆಂಚ್‌ಮಾರ್ಕ್ ಸ್ಕೋರ್ 750,000 ಪಡೆದಿದೆ.

ಕ್ಯಾಮೆರಾ ಸೆಟಪ್

ರಿಯಲ್‌ಮಿ ನಾರ್ಜೊ 70 ಟರ್ಬೊ 5G ಮೊಬೈಲ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ F1.8 ಅಪರ್ಚರ್‌ನೊಂದಿಗೆ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಲಭ್ಯವಿದೆ. ಇದು 2 ಮೆಗಾಪಿಕ್ಸೆಲ್ f/2.4 ಅಪರ್ಚರ್ ಲೆನ್ಸ್‌ನ ಬೆಂಬಲವನ್ನು ಪಡೆಯುತ್ತದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೊನಿನಲ್ಲಿ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ.

ಬ್ಯಾಟರಿ ಬ್ಯಾಕಪ್

ರಿಯಲ್‌ಮಿ ನಾರ್ಜೊ 70 ಟರ್ಬೊ 5G ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದನ್ನು ವೇಗವಾಗಿ ಚಾರ್ಜ್ ಮಾಡಲು, 45W ಅಲ್ಟ್ರಾ ಫಾಸ್ಟ್ ಚಾರ್ಜಿಂಗ್‌ ಬೆಂಬಲ ಒದಗಿಸಲಾಗಿದೆ. ಕೇವಲ 30 ನಿಮಿಷಗಳಲ್ಲಿ ಶೇ.50 ರಷ್ಟು ಚಾರ್ಜ್ ಆಗುತ್ತದೆ.

ಇತರೆ ವೈಶಿಷ್ಟ್ಯಗಳು

ರಿಯಲ್‌ಮಿ ನಾರ್ಜೊ 70 ಟರ್ಬೊ 5G ಫೋನ್ ನೀರು ನಿರೋಧಕ IP65 ರೇಟಿಂಗ್, ಮಳೆ ನೀರಿನ ಟಚ್ ವೈಶಿಷ್ಟ್ಯ ಹೊಂದಿದೆ. ಜೊತೆಗೆ, ವೈ-ಫೈ, ಬ್ಲೂಟೂತ್ 5.4, ಡ್ಯುಯಲ್ ಸ್ಟಿರಿಯೊ, ಸ್ಪೀಕರ್, ಏರ್ ಮತ್ತು ಗೆಸ್ಚರ್, ಫ್ಲ್ಯಾಷ್ ಕ್ಯಾಪ್ಸುಲ್, ರೀಡಿಂಗ್ ಮೋಡ್ ಸೇರಿದಂತೆ ಹಲವು ಎಐ ಫೀಚರ್ಸ್‌ಗಳನ್ನು ಹೊಂದಿದೆ.



Previous Post Next Post