ಕನ್ನಡ ರಾಜ್ಯೋತ್ಸವ 2024 (karnataka rajyotsava 2024) ಪ್ರಯುಕ್ತ ಹಿಂದೂಸ್ತಾನ್ ಟೈಮ್ಸ್ ಕನ್ನಡವು ರಾಜ್ಯದ ಪ್ರಮುಖ 10 ಕೋಟೆಗಳ ಪಟ್ಟಿಯನ್ನು (Karnataka Top 10 Forts) ಇಲ್ಲಿ ನೀಡಿದೆ. ಕೋಟೆ ಕೊತ್ತಲಗಳ ಊರು ಎಂದರೆ ಹಲವು ನಗರಗಳು ಈಗಲೂ ಕರೆಯಿಸಿಕೊಳ್ಳುತ್ತವೆ. ಅಂತಹ ಕೋಟೆಗಳ ವಿಶೇಷ ಇಲ್ಲಿದೆ.
ಕರ್ನಾಟಕದ ನೂರಕ್ಕೂ ಹೆಚ್ಚು ಊರುಗಳಲ್ಲಿ ಈಗಲೂ ಕೋಟೆಗಳಿವೆ. ಕೆಲವು ಕೋಟೆಗಳು ಸುಸ್ಥಿರವಾಗಿದ್ದು ಪ್ರವಾಸಿ ತಾಣಗಳಾಗಿಯೂ ಮಾರ್ಪಟ್ಟಿವೆ.
(1 / 11)

ಬೆಂಗಳೂರು ಕೋಟೆ( Bangalore Fort)ರಾಜಧಾನಿ ಬೆಂಗಳೂರಿನ ಪ್ರಮುಖ ಆಕರ್ಷಣೆಯಾದ ಕೋಟೆಗೆ ಐದು ಶತಮಾನಗಳ ಇತಿಹಾಸವಿದೆ. ವಿಜಯನಗರ ಸಾಮ್ರಾಜ್ಯದ ಸಾಮಂತ ರಾಜ ಕೆಂಪೇಗೌಡರು ಬೆ೦ಗಳೂರಿನಲ್ಲಿ 1537 ರಲ್ಲಿ ಮಣ್ಣಿನ ಕೋಟೆ ಕಟ್ಟಿ ಆಧುನಿಕ ಬೆಂಗಳೂರಿಗೆ ನಾಂದಿ ಹಾಡಿದರು. ಎರಡು ನೂರು ವರ್ಷಗಳ ಬಳಿಕ 1761ರಲ್ಲಿ ಹೈದರಾಲಿ ಮಣ್ಣಿನ ಕೋಟೆಯ ಬದಲಿಗೆ ಕಲ್ಲಿನ ಕೋಟೆಯನ್ನು ಕಟ್ಟಿದ್ದು ಇತಿಹಾಸ. ಒಂಬತ್ತು ಬಾಗಿಲುಗಳಿಂದ ಕೂಡಿದ್ದ ಕೋಟೆ ಎಲ್ಲಾ ಭಾಗಗಳಿಂದ ಸಂಪರ್ಕ ಹೊಂದಿತ್ತು ಪೂರ್ವಕ್ಕೆ ಹಲಸೂರು ಹೆಬ್ಬಾಗಿಲು. ಪಶ್ಚಿಮಕ್ಕೆ ಸೊಂಡೆಕೊಪ್ಪ ಹೆಬ್ಬಾಗಿಲು, ಉತ್ತರಕ್ಕೆ ಯಶವಂತಪುರ ಉಪದ್ವಾರ, ದಕ್ಷಿಣಕ್ಕೆ ಆನೇಕಲ್ ಹಿಬ್ಬಾಗಿಲು, ಕೆಂಗೇರಿ ಉಪದ್ವಾರ, ಕಾನಕಾನಹಳ್ಳಿ ಉಪದ್ವಾರ . ಯಲಹಂಕ ಹೆಬ್ಬಾಗಿಲು, ವರ್ತೂರು ಉಪದ್ವಾರ.ಸಜ್ಜಾಪುರ ಉಪದ್ವಾರ ಈಗಲೂ ಇವೆ. ಈಗಲೂ ಹಲವು ದೇವಸ್ಥಾನಗಳು ಕೋಟೆಯೊಳಗೆ ಇವೆ.
(2 / 11)

ಚಿತ್ರದುರ್ಗ ಕೋಟೆ (Chitradurga Fort)ಚಿತ್ರದುರ್ಗದ ಕಲ್ಲಿನ ಕೋಟೆ, ಸಿಡಿಲಿಗೂ ಬೆಚ್ಚದ ಉಕ್ಕಿನ ಕೋಟೆ, ಮದಕರಿ ನಾಯಕರಾಳಿದ ಕೋಟೆ ಎನ್ನುವುದನ್ನು ನೀವು ನಾಗರಹಾವು ಚಿತ್ರದ ಕನ್ನಡ ನಾಡಿನ ವೀರರ ಮಣಿಯ ಎನ್ನುವ ಹಾಡಿನಲ್ಲಿ ಕೇಳಿರಬಹುದು. ಅಂತಹ ಇತಿಹಾಸ ಇರುವ ಕೋಟೆಯಿದು. ಈಗಲೂ ಚಿತ್ರದುರ್ಗದ ಕೋಟೆ ಗಟ್ಟಿಮುಟ್ಟಾಗಿದೆ. ಒನಕೆ ಓಬವ್ವನೊಂದಿಗೆ ನಂಟು ಹೊಂದಿರುವ ಐತಿಹಾಸಿಕ ತಾಣವೂ ಹೌದು. ಮದಕರಿ ನಾಯಕ, ಹೈದರಾಲಿ ಹಾಗೂ ಟಿಪ್ಪುಸುಲ್ತಾನ್ ಇಲ್ಲಿ ಆಡಳಿತ ನಡೆಸಿದ ಇತಿಹಾಸವೂ ಇದೆ. ಬೃಹದಾಕಾರದ ಶಿಲೆಗಳು ಹಾಗೂ ಕಲ್ಲಿನ ಗೋಡೆಗಳಿಂದ ರೂಪುಗೊಂಡಿರುವ ಕೋಟೆಯನ್ನು ಕಣಿವೆಯ ಮಧ್ಯದಲ್ಲಿ ನೋಡುವುದೇ ಚಂದ. ಬೃಹತ್ ಕಲ್ಲು, ಬೆಟ್ಟಗಳು ಹಾಗು ದೃಶ್ಯ ಕಣಿವೆಗಳು ಸುತ್ತಮುತ್ತಲಿನಿಂದ ಮನಮೋಹಕವಾಗಿವೆ.
(3 / 11)

ಕಲಬುರಗಿ ಕೋಟೆ ( Kalaburgi Fort)ಬಹುಮನಿ ಆಡಳಿತವಿದ್ದು ಕಲಬುರಗಿಯಲ್ಲಿ ಕೋಟೆ ನಿರ್ಮಾಣಗೊಂಡಿದ್ದು ಶತಮಾನಗಳ ಹಿಂದೆಯೇ. ಅಲಾವುದ್ದೀನ್ ಹಸನ್ ಬಹಮನ್ ಷಾ ಬಹಮನಿ ಸಾಮ್ರಾಜ್ಯದ ದೊರೆ ಪಶ್ಚಿಮ ಏಷ್ಯಾದ ಮತ್ತು ಯುರೋಪಿಯನ್ ಮಿಲಿಟರಿ ವಾಸ್ತುಶಿಲ್ಪದ ಶೈಲಿಯಲ್ಲಿ ಕೋಟೆಯನ್ನು ನಿರ್ಮಿಸಿದರು. ಅರ್ಧ ಎಕರೆ ಪ್ರದೇಶದಲ್ಲಿ ಹರವಿಕೊಂಡಿರುವ ಕಲಬುರಗಿ ಕೋಟೆಯ ಒಳಗೆ ಜಾಮಿಯಾ ಮಸೀದಿ ನಿರ್ಮಾಣ ಮಾಡಲಾಯಿತು.ಇದು ಪರ್ಷಿಯನ್ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲ್ಪಟ್ಟ ಅನನ್ಯ ರಚನೆಯ ಕಟ್ಟಡ. ,ಸೊಗಸಾದ ಗುಮ್ಮಟಗಳು ಮತ್ತು ಕಮಾನುಗಳನ್ನು ಒಳಗೆ ಕಾಣಬಹುದು. ಈಗಲೂ ನಿರ್ವಹಣೆಯೊಂದಿಗೆ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ.
(4 / 11)

ಮಿರ್ಜಾನ ಕೋಟೆ ಕುಮಟಾ(Mirjan Fort)ಉತ್ತರ ಕನ್ನಡದ ಕುಮಟಾ ಸಮುದ್ರ ತೀರಕ್ಕೆ ಹೊಂದಿಕೊಂಡ ಪ್ರಮುಖ ಊರು. ಇಲ್ಲಿನ ಮಿರ್ಜಾನ್ ಕೋಟೆಯು ಶತಮಾನಗಳ ಇತಿಹಾಸದಿಂದ ಗಮನ ಸೆಳೆಯುತ್ತದೆ.16 ನೇ ಶತಮಾನದಲ್ಲಿ ತುಳುವ-ಸಾಳುವ ಕುಲದ ಅಡಿಯಲ್ಲಿ ಗೇರ್ಸೊಪ್ಪಾದ ಮೆಣಸಿನ ರಾಣಿ ಚೆನ್ನಭೈರವ ದೇವಿಗೆ ಅದರ ನಿರ್ಮಾಣಕ್ಕೆ ಕಾರಣವಾಗಿದೆ ಎನ್ನುತ್ತದೆ ಇತಿಹಾಸ.ಮಿರ್ಜಾನ್ ಕೋಟೆಯು ವಿಜಯನಗರ ಸಾಮ್ರಾಜ್ಯದಿಂದ ಬಿಜಾಪುರ ಸುಲ್ತಾನರಿಗೆ ಮತ್ತು ಅಂತಿಮವಾಗಿ ಮರಾಠ ಮತ್ತು ಬ್ರಿಟಿಷ್ ಆಳ್ವಿಕೆಗೆ ಅಧಿಕಾರದ ಪರಿವರ್ತನೆಗಳಿಗೆ ಸಾಕ್ಷಿಯಾಗಿ ನಿಂತಿದೆ. ಈಗಲೂ ಪ್ರವಾಸಿಗರ ನೆಚ್ಚಿನ ತಾಣವಿದು
(5 / 11)

ರಾಯಚೂರು ಕೋಟೆ( Raichur Fort)ಕಲ್ಯಾಣ ಕರ್ನಾಟಕದ ಪ್ರಮುಖ ನಗರ ರಾಯಚೂರು. ಬಿಸಿಲ ನಾಡು ಎಂದೇ ಖ್ಯಾತಿ ಪಡೆದಿರುವ ರಾಯಚೂರಿನ ಕೋಟೆಗೂ ಅಷ್ಟೇ ಮಹತ್ವವಿದೆ. ರಾಯಚೂರು ನಗರದ ಹೃದಯ ಭಾಗದಲ್ಲಿರುವ ಕೋಟೆಗೆ ಶತಮಾನಗಳ ಇತಿಹಾಸವಿದೆ. ಕೋಟೆಯ ಮೂಲವನ್ನು ಯಾದವ ರಾಜವಂಶದವರಿಂದ ಗುರುತಿಸಬಹುದು.ವಿಜಯನಗರ ಸಾಮ್ರಾಜ್ಯ ಆದಿಲ್ ಶಾಹಿಗಳು ಮತ್ತು ಮೊಘಲರಯ ಸೇರಿದಂತೆ ವಿವಿಧ ಆಡಳಿತಗಾರರ ಆಡಳಿತದ ವೇಳೆ ಬಳಕೆಯಾದ ಕೋಟೆಯಿದು. ಅವರ ವಾಸ್ತುಶಿಲ್ಪದ ಮುದ್ರೆಗಳು ಮತ್ತು ಸಾಂಸ್ಕೃತಿಕ ಪ್ರಭಾವಗಳು ಕೋಟೆಯಲ್ಲಿ ಕಾಣಬಹುದು. ಕೋಟೆಯು ಫತೇಹ ದರವಾಜಾ ಮತ್ತು ಆದಿಲ್ ಶಾಹಿ ದ್ವಾರ ವಿಶೇಷ ಆಕರ್ಷಣೆ.
(6 / 11)
ರಾಯಚೂರು ಕೋಟೆ( Raichur Fort)ಕಲ್ಯಾಣ ಕರ್ನಾಟಕದ ಪ್ರಮುಖ ನಗರ ರಾಯಚೂರು. ಬಿಸಿಲ ನಾಡು ಎಂದೇ ಖ್ಯಾತಿ ಪಡೆದಿರುವ ರಾಯಚೂರಿನ ಕೋಟೆಗೂ ಅಷ್ಟೇ ಮಹತ್ವವಿದೆ. ರಾಯಚೂರು ನಗರದ ಹೃದಯ ಭಾಗದಲ್ಲಿರುವ ಕೋಟೆಗೆ ಶತಮಾನಗಳ ಇತಿಹಾಸವಿದೆ. ಕೋಟೆಯ ಮೂಲವನ್ನು ಯಾದವ ರಾಜವಂಶದವರಿಂದ ಗುರುತಿಸಬಹುದು. ವಿಜಯನಗರ ಸಾಮ್ರಾಜ್ಯ ಆದಿಲ್ ಶಾಹಿಗಳು ಮತ್ತು ಮೊಘಲರಯ ಸೇರಿದಂತೆ ವಿವಿಧ ಆಡಳಿತಗಾರರ ಆಡಳಿತದ ವೇಳೆ ಬಳಕೆಯಾದ ಕೋಟೆಯಿದು. ಅವರ ವಾಸ್ತುಶಿಲ್ಪದ ಮುದ್ರೆಗಳು ಮತ್ತು ಸಾಂಸ್ಕೃತಿಕ ಪ್ರಭಾವಗಳು ಕೋಟೆಯಲ್ಲಿ ಕಾಣಬಹುದು. ಕೋಟೆಯು ಫತೇಹ ದರವಾಜಾ ಮತ್ತು ಆದಿಲ್ ಶಾಹಿ ದ್ವಾರ ವಿಶೇಷ ಆಕರ್ಷಣೆ.
ಶ್ರೀರಂಗಪಟ್ಟಣ ಕೋಟೆ( Srirangapatna fort)ಕಾವೇರಿ ನದಿಯ ದ್ವೀಪ ನಗರ ಶ್ರೀರಂಗಪಟ್ಟಣ. ಟಿಪ್ಪು ಸುಲ್ತಾನನ ರಾಜಧಾನಿಯಾಗಿದ್ದ ಶ್ರೀರಂಗಪಟ್ಟಣದಲ್ಲಿ ಹಲವಾರು ಐತಿಹಾಸಿಕ ತಾಣಗಳು ಇವೆ. ಇದರಲ್ಲಿ ಶ್ರೀರಂಗಪಟ್ಟಣ ಕೋಟೆಯೂ ಒಂದು. ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯ ಸಮಯದಲ್ಲಿ ತಿಮ್ಮಣ್ಣ ಹೆಬ್ಬಾರ್ ಎಂಬ ಸ್ಥಳೀಯ ನಾಯಕನಿಂದ ನಿರ್ಮಿಸಿದ ಕೋಟೆಯಲ್ಲಿ ಎರಡು ಗೋಡೆಗಳು ಮತ್ತು ನಾಲ್ಕು ಭವ್ಯವಾದ ಗೇಟ್‌ಗಳಿವೆ. ಇದನ್ನು ಒಮ್ಮೆ ಭಾರತದ ಪ್ರಬಲ ಕೋಟೆ ಎಂದು ಪರಿಗಣಿಸಲಾಗಿತ್ತು. ಆನಂತರ ಕೋಟೆಗೆ ಪುನರುಜ್ಜೀವನ ನೀಡಿದ್ದು ಟಿಪ್ಪುಸುಲ್ತಾನ್. ಟಿಪ್ಪು ಕೋಟೆ ಎಂದೂ ಕರೆಯಲ್ಪಡುವ ಶ್ರೀರಂಗಪಟ್ಟಣ ಕೋಟೆಯು ಕರ್ನಾಟಕದ ಪ್ರಮುಖ ತಾಣಗಳಲ್ಲಿ ಒಂದಾಗಿದೆ. ಆರು ನೂರು ವರ್ಷಕ್ಕೂ ಮಿಗಿಲಾದ ಇತಿಹಾಸ ಈ ಕೋಟೆಗಿದೆ.
(7 / 11)

ಸವದತ್ತಿ ಕೋಟೆ( ಬೆಳಗಾವಿ Savadatti Fort)ಬೆಳಗಾವಿ ಜಿಲ್ಲೆಯ ಸವದತ್ತಿ ಪ್ರಮುಖ ಧಾರ್ಮಿಕ ತಾಣ. ರೇಣುಕಾ ಯಲ್ಲಮ್ಮ ಕ್ಷೇತ್ರವಾದ ಇಲ್ಲಿನ ಕೋಟೆಯೂ ಎರಡು ಶತಮಾನದ ಇತಿಹಾಸ ಹೊಂದಿದೆ. 18 ನೇ ಶತಮಾನದ ಸವದತ್ತಿ ಕೋಟೆಯನ್ನು ಸಿರಸಂಗಿ ದೇಸಾಯಿ ನಿರ್ಮಿಸಿದ್ದಾರೆ. ಒಳ ಹೋದರೆ 8 ಭದ್ರಕೋಟೆಗಳು ಇಲ್ಲಿ ಸಿಗುತ್ತವೆ. ಸವದತ್ತಿ ಕೋಟೆಯು ನಾಲ್ಕು ಕೊತ್ತಲಗಳಿಂದ ಆವೃತವಾದ ಕಾಡಸಿದ್ದೇಶ್ವರ ದೇವಸ್ಥಾನವನ್ನು ಹೊಂದಿರುವುದು ವಿಶೇಷ. ಪ್ರಾಕಾರದ ಒಳಗಿನ ಭಾಗದಲ್ಲಿರುವ ಕಾಡಸಿದ್ದೇಶ್ವರ ದೇವಸ್ಥಾನದ ಸುತ್ತಲೂ ಜ್ಯಾಮಿತಿಯ ವಿನ್ಯಾಸಗಳ ಸುಂದರ ಕೆತ್ತನೆಯು ಸುಮಾರು 200 ಕ್ಕಿಂತ ಹೆಚ್ಚು ವಿನ್ಯಾಸಗಳೂ ಆಕರ್ಷಿಸುತ್ತವೆ. ಈಗಲೂ ಉತ್ತಮ ನಿರ್ವಹಣೆಯಿಂದ ಗಮನ ಸೆಳೆಯುತ್ತದೆ.
(8 / 11)

ಮಡಿಕೇರಿ ಕೋಟೆ( madikeri fort)ಮಂಜಿನ ನಗರಿ ಮಡಿಕೇರಿ ಕೋಟೆ ನಗರವೂ ಹೌದು. ಮಡಿಕೇರಿ ನಗರದ ಪ್ರಮುಖ ಭಾಗವಾಗಿ ಕೋಟೆ ಗುರುತಿಸಿಕೊಂಡಿದೆ. 1681 ರಲ್ಲಿ ಮುದ್ದುರಾಜರು ಈ ಕೋಟೆಯನ್ನು ಮಣ್ಣಿನಲ್ಲಿ ನಿರ್ಮಿಸಿದರು, ಬಳಿಕ ಟಿಪ್ಪು ಸುಲ್ತಾನ್ ರವರು ಗ್ರಾನೈಟ್ ನಲ್ಲಿ ಮರು ನಿರ್ಮಿಸಿದ್ದನ್ನು ಇತಿಹಾಸ ಹೇಳುತ್ತದೆ. 1814ರಲ್ಲಿ 2ನೇ ಲಿಂಗರಾಜೇಂದ್ರ ಮತ್ತೆ ನವೀಕರಿಸಿದರು. 1933ರಲ್ಲಿ ಬ್ರಿಟಿಷರು ಗಡಿಯಾರ ಗೋಪುರವನ್ನು ನಿರ್ಮಿಸಿದರು. ಅಲ್ಲಿ ಜೀವಂತ ರೀತಿಯ 2 ಕಲ್ಲಿನ ಆನೆಗಳನ್ನು ಸಹ ನೋಡಬಹುದು. ಕೊಡವ ಜೀವನಕ್ಕೆ ಸಂಬಂಧಿಸಿದ ಐತಿಹಾಸಿಕ ವಸ್ತುಗಳನ್ನು ಪ್ರದರ್ಶಿಸುವ ವಸ್ತು ಸಂಗ್ರಹಾಲಯವು ಪ್ರವಾಸಿಗರನ್ನು ಆಕರ್ಷಿಸುತ್ತದೆ.ಮಡಿಕೇರಿ ಬಸ್ ನಿಲ್ದಾಣದಿಂದ 500ಮೀಟರ್ ಎತ್ತರದ ಒಂದು ಗುಡ್ಡದ ಮೇಲೆ ಈ ಕೋಟೆ ಗಮನ ಸೆಳೆಯುತ್ತದೆ
(9 / 11)

ಮಂಗಳೂರು ಕೋಟೆ( Mangalore Fort)ಮಂಗಳೂರು ಕೋಟೆ ಎಂದು ಕರೆಯುವ ಬೆಳ್ತಂಗಡಿಯಿಂದ 6 ಕಿಮೀ ದೂರದಲ್ಲಿದೆ. ಕುದುರೆಮುಖ ಬೆಟ್ಟಗಳ ಶ್ರೇಣಿಯ 1700 ಅಡಿ ಎತ್ತರದಲ್ಲಿರುವ ಈ ಕೋಟೆಯೊಂದಿಗೆ ಹಸಿರು ಪರಿಸರ ಸವಿಯುವುದೇ ಚಂದ. ಕೋಟೆಯನ್ನು ಹಿಂದೆ ನರಸಿಂಹ ಘಡ ಎನ್ನುವ ಹೆಸರಿನಿಂದಲೂ ಕರೆಯಲಾಗುತ್ತಿತ್ತು. ಇದಕ್ಕೆ ಜಮಾಲಗಡ್ಡ ಅಥವಾ ಗಡಾಯಿಕಲ್ಲು ಎನ್ನುವ ಹೆಸರೂ ಇದೆ. ಇದು ಚಾರಣಕ್ಕೆ ಹೇಳಿ ಮಾಡಿಸಿದ ಸ್ಥಳ. ಸಾಕಷ್ಟು ಪ್ರವಾಸಿಗರು ಕೋಟೆ ವೀಕ್ಷಣೆಗೆ ಬರುತ್ತಾರೆ.
(10 / 11)

ಮಂಜರಾಬಾದ್ ಕೋಟೆ ಹಾಸನ(Manjarabad fort )ಮಲೆನಾಡಿನ ಹಾಸನದ ಪ್ರಮುಖ ತಾಣ ಮಂಜಜರಾಬಾದ್ ಕೋಟೆ. ಸಕಲೇಶಪುರದಿಂದ 5 ಕಿ.ಮೀ ದೂರದಲ್ಲಿರುವ ಕೋಟೆಯನ್ನು ನಿರ್ಮಿಸಿದ್ದು ಟಿಪ್ಪು ಸುಲ್ತಾನ್. 1792ರಲ್ಲಿ ನಿರ್ಮಾಣವಾದ ಕೋಟೆ ಭೂಮಟ್ಟದಿಂದ 988 ಮೀಟರ್ ಎತ್ತರದ ಗುಡ್ಡದ ಮೇಲಿರುವುದರಿಂದ ಅಲ್ಲಿನ ಪರಿಸರದೊಂದಿಗೆ ವೀಕ್ಷಿಸುವುದೇ ಆನಂದ..ಟಿಪ್ಪುಸುಲ್ತಾನ್ ಈ ಕೋಟೆಯಿಂದ ಮಂಜಿರಾಬಾದಿನ ಮಂಜು ತುಂಬಿದ ಪ್ರಕೃತಿ ಸೌಂದರ್ಯವನ್ನು ನೋಡಿ ಬೆಕ್ಕಸಬೆರಗಾಗಿ ಪ್ರವಾಸಕ್ಕಾಗಿಯೇ ನಿರ್ಮಿಸಿದ್ದು ಇತಿಹಾಸ. ಈಗಲೂ ಇದು ಪ್ರಮುಖ ಪ್ರವಾಸ ತಾಣವೇ.
(11 / 11)