Best Farmer award- ಶ್ರೇಷ್ಠ ತೋಟಗಾರಿಕೆ ರೈತ ಮತ್ತು ರೈತ ಮಹಿಳೆ ಪ್ರಶಸ್ತಿ ಪಡೆಯಲು ಅರ್ಜಿ

Best Farmer award- ಶ್ರೇಷ್ಠ ತೋಟಗಾರಿಕೆ ರೈತ ಮತ್ತು ರೈತ ಮಹಿಳೆ ಪ್ರಶಸ್ತಿ ಪಡೆಯಲು ಅರ್ಜಿ

ಬಾಗಲಕೋಟೆ ವಿಶ್ವವಿದ್ಯಾಲಯದಿಂದ ಶ್ರೇಷ್ಠ ತೋಟಗಾರಿಕೆ ರೈತ ಮತ್ತು ರೈತ ಮಹಿಳೆ ಪ್ರಶಸ್ತಿ(Best Farmer award) ಪಡೆಯಲು ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅರ್ಹ ರೈತ ಮತ್ತು ರೈತ ಮಹಿಳೆಯರು ಈ ಅಂಕಣದಲ್ಲಿ ತಿಳಿಸಿರುವ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಂಡು ಕೊನೆಯ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಬಹುದು.



ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟೆದಲ್ಲಿ(uhs) 2024ರ ಡಿಸೆಂಬರ್ 21 ರಿಂದ 24 ರವರೆಗೆ “ಆರ್ಥಿಕತೆ ಮತ್ತು ಪೌಷ್ಟಿಕತೆಗಾಗಿ ತೋಟಗಾರಿಕೆ” ಎಂಬ ಘೋಷವಾಕ್ಯದಡಿ ತೋಟಗಾರಿಕೆ ಮೇಳವನ್ನು ವಿಶ್ವವಿದ್ಯಾಲಯದ ಮುಖ್ಯ ಆವರಣದಲ್ಲಿ ಆಯೋಜನೆ ಮಾಡಲಾಗಿದ್ದು.

ತೋಟಗಾರಿಕೆ ಮೇಳದಲ್ಲಿ, ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟೆಯ(uhsbagalkot) ವ್ಯಾಪ್ತಿಯಲ್ಲಿ ಬರುವ ರಾಜ್ಯದ 24 ಜಿಲ್ಲೆಗಳಲ್ಲಿ, ಪ್ರತಿಯೊಂದು ಜಿಲ್ಲೆಗೆ ತೋಟಗಾರಿಕೆ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಒಬ್ಬ ಕೃಷಿಕರಿಗೆ, ಶ್ರೇಷ್ಠ ತೋಟಗಾರಿಕೆ ರೈತ / ರೈತ ಮಹಿಳೆಯನ್ನು ಆಯ್ಕೆ ಮಾಡಿ ಸೂಕ್ತ ಬಹುಮಾನದೊಂದಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಗುತ್ತದೆ ಎಂದು ತೋಟಗಾರಿಕೆ ವಿಶ್ವವಿದ್ಯಾಲಯದಿಂದ ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ.

Best Farmer award application-ಅರ್ಜಿಯನ್ನು ಸಲ್ಲಿಸುವ ವಿಧಾನ:

ಈ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಲು ಬಯಸುವ ಅರ್ಹ ರೈತ ಅಥವಾ ರೈತ ಮಹಿಳೆಯರು ಅರ್ಜಿ ನಮೂನೆಯನ್ನು, ಸಹ ಸಂಶೋಧನಾ ಮತ್ತು ವಿಸ್ತರಣಾ ನಿರ್ದೇಶಕರ ಕಛೇರಿ, ಪ್ರಾದೇಶಿಕ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ತೋ.ವಿ.ವಿ. ಆವರಣ ಜಿ.ಕೆ.ವಿ.ಕೆ. ಅಂಚೆ, ಬೆಂಗಳೂರು ಅಥವಾ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವೆಬ್ಸೈಟ್ www.uhsbagalkot.karnataka.gov.in ಮೂಲಕ ಅರ್ಜಿ ನಮೂನೆ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಖುದ್ದಾಗಿ 5ನೇ ನವೆಂಬರ್ 2024ರ ಸಂಜೆ 5 ರೊಳಗಾಗಿ ಸಹ ಸಂಶೋಧನಾ ಮತ್ತು ವಿಸ್ತರಣಾ ನಿರ್ದೇಶಕರ ಕಛೇರಿ, ಪ್ರಾದೇಶಿಕ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣ ಜಿ.ಕೆ.ವಿ.ಕೆ. ಅಂಚೆ, ಬೆಂಗಳೂರು – 560065 ಇವರಿಗೆ ಸಲ್ಲಿಸಬೇಕು.

Farmer award-ಅರ್ಜಿ ಸಲ್ಲಿಸಲು ಒದಗಿಸಬೇಕಾದ ದಾಖಲೆಗಳು:

1) ಅರ್ಜಿದಾರರ ಆಧಾರ್ ಕಾರ್ಡ ಪ್ರತಿ

2) ಬ್ಯಾಂಕ್ ಪಾಸ್ ಬುಕ್ ಪ್ರತಿ

3) ಜಮೀನಿನ ಪಹಣಿ

4) ನಿಮ್ಮ ಕೃಷಿ ಸಾಧನೆಯ ಕುರಿತು ಪತ್ರಿಕಾ ಪ್ರಕಟಣೆ ಪ್ರತಿ(ಲಭ್ಯವಿದ್ದಲ್ಲಿ)

5) ಅರ್ಜಿದಾರರ ಪೋಟೋ

6) ಅರ್ಜಿದಾರರ ಮೊಬೈಲ್ ನಂಬರ್

Best Farmer award application-ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಲು ವೆಬ್ಸೈಟ್ ಲಿಂಕ್: Download Now

ಅರ್ಜಿ ಸಲ್ಲಿಕೆ ಇತರೆ ಮಾಹಿತಿ ಕುರಿತು ಇನ್ನು ಹೆಚ್ಚಿನ ಮಾಹಿತಿ ಪಡೆಯಲು ಮೊಬೈಲ್ ಸಂಖ್ಯೆಗಳು:

ಡಾ. ಇಟಿಗಿ ಪ್ರಭಾಕರ, ವಿಸ್ತರಣಾ ಮುಂದಾಳು, ಪ್ರಾದೇಶಿಕ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ಬೆಂಗಳೂರು ಮೊ.ಸಂ. 9538771475, ಡಾ. ದೊಡ್ಡಬಸಪ್ಪ ಬಿ. ಸಹಾಯಕ ಪ್ರಾಧ್ಯಾಪಕರು, ಕೃಷಿ ಕೀಟಶಾಸ್ತ್ರ, ಪ್ರಾ.ತೋ.ಸಂ.ವಿ.ಕೇಂದ್ರ, ಬೆಂಗಳೂರು ಮೊ.ಸಂ. 7795072699, ಶ್ರೀಮತಿ ಸೀಮಾ ಎಂ. ಪ್ರಾ.ತೋ.ಸಂ.ವಿ.ಕೇಂದ್ರ, ಬೆಂಗಳೂರು ಮೊ.ಸಂ. 7411228096 ಅಥವಾ ಶುಲ್ಕ ರಹಿತ ಉದ್ಯಾನ ಸಹಾಯವಾಣಿ 18004257910ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಲಾಗಿದೆ.

Best Farmer award notification download link- ಅಧಿಕೃತ ಅಧಿಸೂಚನೆ: 

Download Now


Post a Comment

Previous Post Next Post

Top Post Ad

CLOSE ADS
CLOSE ADS
×