Sukanya Samriddhi; ನಿಮ್ಮ ಮಗಳ ಭವಿಷ್ಯಕ್ಕೆ ಸುಕನ್ಯಾ ಸಮೃದ್ಧಿ ಬಿಟ್ಟು ಬೇರೆ ಯಾವುದು ಬೆಸ್ಟ್; 5 ಸ್ಮಾರ್ಟ್ ಹೂಡಿಕೆ ಆಯ್ಕೆಗಳು ಇಲ್ಲಿವೆ

Sukanya Samriddhi; ನಿಮ್ಮ ಮಗಳ ಭವಿಷ್ಯಕ್ಕೆ ಸುಕನ್ಯಾ ಸಮೃದ್ಧಿ ಬಿಟ್ಟು ಬೇರೆ ಯಾವುದು ಬೆಸ್ಟ್; 5 ಸ್ಮಾರ್ಟ್ ಹೂಡಿಕೆ ಆಯ್ಕೆಗಳು ಇಲ್ಲಿವೆ

Beyond Sukanya Samriddhi; ನಿಮ್ಮ ಮಗಳ ಭವಿಷ್ಯಕ್ಕೆ ಆರ್ಥಿಕ ಸುರಕ್ಷೆ ಒದಗಿಸುವ ಸುಕನ್ಯಾ ಸಮೃದ್ಧಿ ಮಾದರಿಯಲ್ಲೇ ಉತ್ತಮ ಪ್ರಯೋಜನ ನೀಡುವ ಯೋಜನೆಗಳಿವೆಯೇ ಎಂದು ಹುಡುಕಾಡುತ್ತಿದ್ದೀರಾ, ಹಾಗಾದರೆ 5 ಸ್ಮಾರ್ಟ್ ಹೂಡಿಕೆ ಆಯ್ಕೆಗಳು ಇಲ್ಲಿವೆ.



ನಿಮ್ಮ ಮಗಳ ಭವಿಷ್ಯಕ್ಕೆ ಸುಕನ್ಯಾ ಸಮೃದ್ಧಿ ಬಿಟ್ಟು ಬೇರೆ ಯಾವುದು ಬೆಸ್ಟ್; 5 ಸ್ಮಾರ್ಟ್ ಹೂಡಿಕೆ ಆಯ್ಕೆಗಳ ವಿವರ. (ಸಾಂಕೇತಿಕ ಚಿತ್ಋ)

ನಿಮ್ಮ ಮಗಳ ಭವಿಷ್ಯಕ್ಕೆ ಸುಕನ್ಯಾ ಸಮೃದ್ಧಿ ಬಿಟ್ಟು ಬೇರೆ ಯಾವುದು ಬೆಸ್ಟ್; 5 ಸ್ಮಾರ್ಟ್ ಹೂಡಿಕೆ ಆಯ್ಕೆಗಳ ವಿವರ. (ಸಾಂಕೇತಿಕ ಚಿತ್ಋ) 

ಸುಕನ್ಯಾ ಸಮೃದ್ಧಿ ಯೋಜನೆಯು ಹೆಣ್ಣುಮಕ್ಕಳಿಗೆ ಅತ್ಯುತ್ತಮ ಹೂಡಿಕೆ ಯೋಜನೆ. ಖಚಿತವಾಗಿ ಒಪ್ಪಿಕೊಳ್ಳಬೇಕಾದ ವಿಷಯ. ಇದು ಭಾರತೀಯ ಹೆಣ್ಣುಮಕ್ಕಳಿಗಾಗಿ ವಿಶೇಷವಾಗಿ ಬಾಲಕಿಯರಿಗಾಗಿ ವಿನ್ಯಾಸಗೊಳಿಸಿದ ಉಳಿತಾಯ ಯೋಜನೆ. ವಾಣಿಜ್ಯ ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಖಾತೆಯನ್ನು ತೆರೆದು ಮಗಳ ಭವಿಷ್ಯವನ್ನು ಆರ್ಥಿಕವಾಗಿ ಸುರಕ್ಷಿತವಾಗಿರಿಸಲು ಇದು ಪೋಷಕರಿಗೆ ಸಹಾಯ ಮಾಡುತ್ತದೆ.

ಆದರೆ, ಸುಕನ್ಯಾ ಸಮೃದ್ಧಿ ಯೋಜನೆಯ ನಿಯಮ ಬಿಗಿಯಾಗುತ್ತಿದ್ದು, ಅಕ್ಟೋಬರ್ 1 ರಿಂದ ಕಟ್ಟುನಿಟ್ಟಾಗಿ ಜಾರಿಗೆ ಬರಲಿದೆ. ಅಜ್ಜ- ಅಜ್ಜಿ ಹೆಸರಲ್ಲಿದ್ದ ಸುಕನ್ಯಾ ಸಮೃದ್ಧಿ ಯೋಜನೆ ಖಾತೆಯನ್ನು ಹೆಣ್ಮಗುವಿನ ಅಪ್ಪ ಅಮ್ಮನ ಹೆಸರಿಗೆ ಮಾಡಬೇಕು. ಅದೇ ರೀತಿ, ಒಂದೇ ಹೆಣ್ಮಗುವಿನ ಹೆಸರಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯ ಹಲವು ಖಾತೆಗಳಿದ್ದರೆ ಒಂದೇ ಖಾತೆ ಉಳಿಸಿಕೊಂಡು ಉಳಿದವುಗಳನ್ನು ಮುಚ್ಚಬೇಕು.

ಹಾಗಾದರೆ ನಿಮ್ಮ ಮಗಳ ಭವಿಷ್ಯಕ್ಕೆ ಸುಕನ್ಯಾ ಸಮೃದ್ಧಿ ಬಿಟ್ಟು ಬೇರೆ ಯಾವುದು ಬೆಸ್ಟ್ ಅಂತ ಹುಡುಕಾಡ್ತಾ ಇದ್ದೀರಾ? ಇದುವರೆಗೂ ಅದು ಬಿಟ್ಟು ಬೇರೆ ಯಾವುದನ್ನೂ ಹುಡುಕಾಡಿಲ್ಲ ಅನ್ನೋದಾದರೆ, 5 ಸ್ಮಾರ್ಟ್ ಹೂಡಿಕೆಗಳ ಆಯ್ಕೆಗೆ ಅವಕಾಶ ಇದೆ ಎಂಬುದನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ. ಅದನ್ನು ಗಮನಿಸಿ.

ಸುಕನ್ಯಾ ಸಮೃದ್ಧಿ ಹೊರತಾಗಿ 5 ಸ್ಮಾರ್ಟ್‌ ಹೂಡಿಕೆ ಅವಕಾಶ

ಭಾರತದಲ್ಲಿನ ಬ್ಯಾಂಕ್‌ ಮತ್ತು ಅಂಚೆ ಕಚೇರಿಗಳಲ್ಲಿ ಅದ್ಭುತ ಹೂಡಿಕೆಗೆ ಅವಕಾಶ ನೀಡುವ ಹಣಕಾಸು ಉತ್ಪನ್ನಗಳಿವೆ. ಮಗಳ ಭವಿಷ್ಯಕ್ಕಾಗಿ ಹಣ ಹೂಡಿಕೆ ಮಾಡುವ ಅಪ್ಪ ಅಮ್ಮ, ಮೊಮ್ಮಗಳ ಭವಿಷ್ಯಕ್ಕಾಗಿ ಹಣ ಹೂಡಿಕೆ ಮಾಡಲು ಬಯಸುವ ಅಜ್ಜ ಅಜ್ಜಿಯಂದಿರಿಗಾಗಿ ನೋಡುವಾಗ ಈ ಆಯ್ಕೆಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಈ ಮಾಹಿತಿ ಉಪಯೋಗಿಸಿಕೊಂಡು ಉತ್ಪನ್ನಗಳಿಂದ ಸಿಗುವ ಪ್ರಯೋಜನ ಮತ್ತು ಲಾಭವನ್ನು ವಿಶ್ಲೇಷಿಸಬಹುದು ಮತ್ತು ತಮ್ಮ ಮಗುವಿಗೆ ಉತ್ತಮ ಹೂಡಿಕೆಗಳನ್ನು ಆಯ್ಕೆ ಮಾಡಬಹುದು.

1) ಮಕ್ಕಳಿಗೆ ಮ್ಯೂಚುವಲ್ ಫಂಡ್ ಗಿಫ್ಟ್‌

ಮಕ್ಕಳಿಗೆ ಮ್ಯೂಚುವಲ್ ಫಂಡ್ ಅನ್ನು ಗಿಫ್ಟ್ ಆಗಿ ನೀಡಬಹುದು. ಮ್ಯೂಚುವಲ್ ಫಂಡ್ ಮಾರುಕಟ್ಟೆಯಲ್ಲಿ ಚಿಲ್ಡ್ರನ್‌ ಗಿಫ್ಟ್ ಮ್ಯೂಚುವಲ್ ಫಂಡ್ (Children Gift Mutual Fund) ಇದ್ದು, ಬೇರೆ ಬೇರೆ ಕಂಪನಿಗಳು ಬೇರೆ ಬೇರೆ ಹೆಸರಲ್ಲಿ ಇವನ್ನು ಒದಗಿಸುತ್ತಿವೆ. ನಿಮ್ಮ ಮಗಳ ಆರ್ಥಿಕ ಸುರಕ್ಷೆಗಾಗಿ ಸುಕನ್ಯಾ ಸಮೃದ್ಧಿ ಹೊರತಾಗಿ ಇದನ್ನು ಕೂಡ ಪರಿಗಣಿಸಬಹುದು. ಇಲ್ಲಿ ಹೂಡಿಕೆ ಷೇರುವಹಿವಾಟಿನೊಂದಿಗೆ ಹೊಂದಿಕೊಂಡಿದ್ದು ಉತ್ತಮ ರಿಟರ್ನ್ಸ್ ಬರುವಂತಹ ಗಿಫ್ಟ್ ಮ್ಯೂಚುವಲ್ ಫಂಡ್ ಆಯ್ಕೆ ಮಾಡಬೇಕು.

2) ರಾಷ್ಟ್ರೀಯ ಉಳಿತಾಯ ಪತ್ರ

ಸುಕನ್ಯಾ ಸಮೃದ್ಧಿಗೆ ಪರ್ಯಾಯವಾಗಿ ಹೂಡಿಕೆ ಮಾಡಬಹುದಾದ ಇನ್ನೊಂದು ಯೋಜನೆ ರಾಷ್ಟ್ರೀಯ ಉಳಿತಾಯ ಪತ್ರ ಅಥವಾ ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್‌ ( National Savings Certificate (NSC)). ಇದು ಕಡಿಮೆ ರಿಸ್ಕ್‌ನ ನಿಶ್ಚಿತ ಬಡ್ಡಿದರದ ಸರ್ಕಾರಿ ಪ್ರಾಯೋಜಿತ ಹೂಡಿಕೆ ಯೋಜನೆ. ದೇಶದ ಎಲ್ಲ ಅಂಚೆ ಕಚೇರಿಗಳಲ್ಲೂ ಇದು ಲಭ್ಯವಿದೆ. ಮಗಳ ಭವಿಷ್ಯದ ಆರ್ಥಿಕ ಸುರಕ್ಷೆಗಾಗಿ ಈ ಯೋಜನೆ ಕಡೆಗೂ ಗಮನಹರಿಸಬಹುದು.

3) ಅಂಚೆ ಕಚೇರಿ ಅವಧಿ ಠೇವಣಿ

ಸುಕನ್ಯಾ ಸಮೃದ್ಧಿ ಯೋಜನೆಗೆ ಹೊರತಾಗಿ ಮಗಳ ಭವಿಷ್ಯಕ್ಕಾಗಿ ಹೂಡಿಕೆ ಮಾಡಬಹುದಾದ ಯೋಜನೆಗಳ ಪೈಕಿ ಅಂಚೆ ಕಚೇರಿ ಅವಧಿ ಠೇವಣಿ ಕೂಡ ಒಂದು. ಪೋಸ್ಟ್-ಆಫೀಸ್ ಟರ್ಮ್ ಡೆಪಾಸಿಟ್ (POTD), ಇದನ್ನು ಬ್ಯಾಂಕ್ ಎಫ್‌ಡಿ ಅಥವಾ ಸ್ಥಿರ ಠೇವಣಿಗೆ ಹೋಲಿಸಬಹುದು. ಇದು ಕೂಡ ಆಕರ್ಷಕ ಬಡ್ಡಿದರ ಒದಗಿಸುತ್ತದೆ.

4) ಯುನಿಟ್ ಲಿಂಕ್ಡ್‌ ಇನ್ಶೂರೆನ್ಸ್ ಪ್ಲಾನ್

ಮಗಳ ಭವಿಷ್ಯದ ಆರ್ಥಿಕ ಸುರಕ್ಷೆ ಗಮನಿಸಿ ಹೂಡಿಕೆ ಮಾಡುವುದಾದರೆ ಇರುವಂತಹ ಇನ್ನೊಂದು ಅಯ್ಕೆ ಯುನಿಟ್ ಲಿಂಕ್ಡ್‌ ಇನ್ಶೂರೆನ್ಸ್ ಪ್ಲಾನ್ (Unit Link Insurance Plan). ಇದು ಷೇರುಪೇಟೆ ವಹಿವಾಟಿನೊಂದಿಗೆ ಜೋಡಿಕೊಂಡಿರುವ ವಿಮಾ ಯೋಜನೆ. ಇಲ್ಲಿ ನಿಶ್ಚಿತ ಬಡ್ಡಿದರದ ಬದಲಿಗೆ ಕನಿಷ್ಠ ರಿಟರ್ನ್ಸ್‌ ಭರವಸೆಯೊಂದಿಗೆ ಹೆಚ್ಚಿನ ಪ್ರಯೋಜನ ಒದಗಿಸುವ ಹೂಡಿಕೆ ಯೋಜನೆಗಳಿವೆ. ಬೇರೆ ಬೇರೆ ವಿಮಾ ಕಂಪನಿಗಳು ಇದನ್ನು ಒದಗಿಸುತ್ತವೆ. ಸರಿಯಾಗಿ ಅರ್ಥ ಮಾಡಿಕೊಂಡು ಹೂಡಿಕೆ ಮಾಡಬಹುದು.

5) ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್)

ಪಿಪಿಎಫ್ ಮತ್ತೊಂದು ಅತ್ಯುತ್ತಮ ದೀರ್ಘಕಾಲೀನ ಹೂಡಿಕೆ ಆಯ್ಕೆಯಾಗಿದ್ದು ಅದು ತೆರಿಗೆ ಪ್ರಯೋಜನ ಮತ್ತು ಖಾತರಿ ರಿಟರ್ನ್ಸ್‌ ಕೂಡ ನೀಡುತ್ತದೆ. ಸದ್ಯ ಶೇಕಡ 7.1 ಬಡ್ಡಿದರ ಇದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ, ಮಗಳ ಶಿಕ್ಷಣ, ಮದುವೆ ಅಥವಾ ಉದ್ಯಮ ಮುಂತಾದ ತಮ್ಮ ಮಗಳ ಭವಿಷ್ಯದ ಅಗತ್ಯಗಳಿಗಾಗಿ ದೊಡ್ಡ ಮೊತ್ತದ ನಿಧಿಯನ್ನು ನಿರ್ಮಿಸಬಹುದಾಗಿದೆ.

ಇನ್ನೇನಿದೆ ಹೂಡಿಕೆಗೆ ಅವಕಾಶ

ಈ ಐದು ಸ್ಮಾರ್ಟ್ ಹೂಡಿಕೆಗೆ ಹೊರತಾಗಿ ನಿಮ್ಮ ಮಗಳ ಭವಿಷ್ಯದ ಆರ್ಥಿಕ ಸುರಕ್ಷೆಗಾಗಿ ನೀವು ಚಿನ್ನ, ಬೆಳ್ಳಿ ಮುಂತಾದ ಲೋಹಗಳ ಮೇಲೂ ಹೂಡಿಕೆ ಮಾಡಬಹುದು. ಈಗ ಚಿನ್ನದ ಹೂಡಿಕೆಗೆ ಇಟಿಎಫ್‌ ಸೌಲಭ್ಯವೂ ಇದ್ದು ಅದನ್ನೂ ಪರಿಗಣಿಸಬಹುದಾಗಿದೆ. ಇದಲ್ಲದೆ, ಭೂಮಿ (ಸೈಟ್‌) ಖರೀದಿಸಿ ಇಡಬಹುದು. ಯಾವುದರಲ್ಲಿ ಹೂಡಿಕೆ ಮಾಡುವುದಿದ್ದರೂ ಅದನ್ನು ಸ್ವಂತ ವಿವೇಚನೆ ಬಳಸಿಕೊಂಡು ಮಾಡಿ. ಯಾರೋ ಹೇಳಿದರು ಎಂದು ಹೂಡಿಕೆ ಮಾಡಬೇಡಿ.

ಗಮನಿಸಿ: 

ನಮ್ಮ ವೆಬ್ ತಾಣ ಯಾವುದೇ ಹೂಡಿಕೆ ಶಿಫಾರಸು ಮಾಡುವುದಿಲ್ಲ. ಯಾವುದೇ ಹೂಡಿಕೆ ನಿರ್ಧಾರಗಳನ್ನು ಮಾಡುವ ಮೊದಲು ಪ್ರಮಾಣೀಕೃತ ತಜ್ಞರ ಜೊತೆಗೆ ಸಮಾಲೋಚನೆ ನಡೆಸಿ, ನಿರ್ಧಾರ ತೆಗೆದುಕೊಳ್ಳಿ ಎಂಬುದು ಹೂಡಿಕೆದಾರರಿಗೆ ನಮ್ಮ ಸಲಹೆ.

Post a Comment

Previous Post Next Post
CLOSE ADS
CLOSE ADS
×