ಪೋಸ್ಟ್ ಆಫೀಸ್ ಈ ಯೋಜನೆಯಲ್ಲಿ ಸಿಗಲಿದೆ ಪ್ರತಿ ತಿಂಗಳು 9,000 ರೂ ಆದಾಯ

ಪೋಸ್ಟ್ ಆಫೀಸ್ ಈ ಯೋಜನೆಯಲ್ಲಿ ಸಿಗಲಿದೆ ಪ್ರತಿ ತಿಂಗಳು 9,000 ರೂ ಆದಾಯ

ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್, ಕೇಂದ್ರ ಸರ್ಕಾರ ಬೆಂಬಲಿತ ಮಂತ್ಲಿ ಇನ್‌ಕಮ್ ಸ್ಕೀಮ್(MIS) ಯೋಜನೆಯಲ್ಲಿ ಪಡೆಯಿರಿ ಪ್ರತಿ ತಿಂಗಳು 9,000 ರೂ ಆದಾಯ



ಇಂದು ಎಲ್ಲರೂ ಸ್ಥಿರ ಯೋಜನೆಗಳು ಸೇರಿದಂತೆ ಹಲವು ರೀತಿಯ ಹೂಡಿಕೆಗಳನ್ನು ಮಾಡುತ್ತಾರೆ. ಈ ಹೂಡಿಕೆಗಳು ಭವಿಷ್ಯದಲ್ಲಿ ಬಹಳ ಉಪಯುಕ್ತವಾಗುತ್ತದೆ. ಈ ಯೋಜನೆಗಳಲ್ಲಿ ನಿವೃತ್ತಿಯ ನಂತರ ಅಥವಾ ಇನ್ನಿತರ ಉದ್ಯಮಕ್ಕಾಗಿ ಇಂತಿಷ್ಟು ಹಣ ದೊರೆಯುತ್ತದೆ. ಇಂದು ಇಂತಹ ಹಲವಾರು ಯೋಜನೆಗಳು ಜನರಿಗೆ ಉತ್ತಮ ರೀತಿಯಲ್ಲಿ ಆರ್ಥಿಕ ನೆರವನ್ನು ನೀಡುತ್ತಿವೆ. ಹಾಗೆಯೇ ಇಂದು ಜನರು ಸುರಕ್ಷಿತ, ಸ್ಥಿರ ಹಾಗೂ ಖಚಿತ ಆದಾಯಕ್ಕೆ ಕಾಯುತ್ತಿರುತ್ತಾರೆ. ಈ ಯೋಜನೆಗಳು ತಮ್ಮ ನಿವೃತ್ತಿಯ ಸಮಯದಲ್ಲಿ ಸಹಾಯವಾಗಲಿದೆ ಎಂದುಕೊಳುತ್ತಾರೆ. ಅದಕ್ಕಾಗಿ ಹಲವಾರು ಸರ್ಕಾರಿ ಮತ್ತು ಖಾಸಗಿ ಯೋಜನೆಗಳಲ್ಲಿ ಹೂಡಿಕೆ ಮಾಡುತ್ತಿರುತ್ತಾರೆ.

ಕೇಂದ್ರ ಸರ್ಕಾರ ಬೆಂಬಲಿತ ಹಲವು ಯೋಜನೆಗಳನ್ನು ಪೋಸ್ಟ್ ಆಫೀಸ್ ಜಾರಿಗೆ ತಂದಿದೆ :

ಹಾಗೆಯೇ ಇದೀಗ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್ ತಿಳಿದು ಬಂದಿದೆ. ಹೌದು ನಾವು ಪೋಸ್ಟ್ ಆಫೀಸ್ (Post Office) ನಲ್ಲಿ ಅನೇಕ ರೀತಿಯ ಠೇವಣಿ, ಯೋಜನೆಗಳು, ಸಾಲ ಸೌಲಭ್ಯಗಳನ್ನು(loan facilities) ಕಾಣುತ್ತೆವೆ. ಇದೀಗ ಕೇಂದ್ರ ಸರ್ಕಾರ ಬೆಂಬಲಿತ ಹಲವು ಯೋಜನೆಗಳನ್ನು ಪೋಸ್ಟ್ ಆಫೀಸ್ ಜಾರಿಗೆ ತಂದಿದೆ. ಈ ಪೈಕಿ ಪೋಸ್ಟ್ ಆಫೀಸ್ ತಿಂಗಳ ಆದಾಯ ಯೋಜನೆ(MIS) ಪ್ರತಿ ತಿಂಗಳು 9,000 ರೂಪಾಯಿ ಆದಾಯ ನೀಡಲಿದೆ. ಕೇವಲ 1,000 ರೂಪಾಯಿಯಿಂದ ಖಾತೆ ಆರಂಭಿಸಿ ಪ್ರತಿ ತಿಂಗಳು 9,000 ರೂಪಾಯಿ ಸ್ಥಿರ ಹಾಗೂ ಸುರಕ್ಷಿತ ಆದಾಯ ಪಡೆಯಲು ಸಾಧ್ಯವಿದೆ.

ಪೋಸ್ಟ್ ಆಫೀಸ್‌ನಲ್ಲಿ ಜಾರಿಯಲ್ಲಿದೆ ಮಂತ್ಲಿ ಇನ್‌ಕಮ್ ಸ್ಕೀಮ್ (MIS) ಯೋಜನೆ :

ಪೋಸ್ಟ್ ಆಫೀಸ್‌ನಲ್ಲಿರುವ ಮಂತ್ಲಿ ಇನ್‌ಕಮ್ ಸ್ಕೀಮ್(Monthly Income Scheme) ಕೇಂದ್ರ ಸರ್ಕಾರದ ಬೆಂಬಲಿತ ಸಣ್ಣ ಉಳಿತಾಯ ಯೋಜನೆಯಾಗಿದೆ. ಇಲ್ಲಿ ಯಾವುದೇ ಹೆಚ್ಚಿನ ತೊಂದರೆಗಳಿಲ್ಲ, ಜೊತೆಗೆ ಉತ್ತಮ ಆದಾಯ (Income) ಪ್ರತಿ ತಿಂಗಳು ಪಡೆಯಬಹುದು. ಈ ಯೋಜನೆಯಲ್ಲಿ ಕನಿಷ್ಠ 1,000 ರೂಪಾಯಿ ಗರಿಷ್ಠ 9 ಲಕ್ಷ ರೂಪಾಯಿ(ಒಂದು ಖಾತೆಗೆ). ಹಾಗೂ ಜಾಯಿಂಟ್ ಖಾತೆ ಆಗಿದ್ದರೆ ಗರಿಷ್ಠ 15 ಲಕ್ಷ ರೂಪಾಯಿ ಹೂಡಿಕೆ ಮಾಡಬಾಹುದಾಗಿದೆ.

ಈ ಯೋಜನೆಯ್ಲಲಿರುವ ಲಾಭಗಳು :

ಈ ಯೋಜನೆಯ ಮೆಚ್ಯುರಿಟಿ ಅವಧಿ 5 ವರ್ಷದ ವರೆಗೆ ಇರುತ್ತದೆ. 1 ವರ್ಷದ ಬಳಿಕ ತುರ್ತು ಅಗತ್ಯಕ್ಕಾಗಿ ಅಥವಾ ಆರ್ಥಿಕ ಸಂಕಷ್ಟದಿಂದ MIS ಯೋಜನೆ ಕ್ಲೋಸ್ ಮಾಡಲು ಬಯಸಿದರೆ ಅದಕ್ಕೂ ಅವಕಾಶವಿದೆ. ಪೋಸ್ಟ್ ಆಫೀಸ್ 7.4 ಶೇಕಡಾ ಬಡ್ಡಿದರ ನೀಡುತ್ತಿದೆ. ನಿಯಮಿತವಾಗಿ ಹೂಡಿಕೆ ಮಾಡಿದರೆ 5 ವರ್ಷದ ಮೆಚ್ಯುರಿಟಿ ಅವಧಿಯಲ್ಲಿ ಪ್ರತಿ ತಿಂಗಳು ಗರಿಷ್ಠ 9,000 ರೂಪಾಯಿ ಆದಾಯ ಗಳಿಸಲು ಸಾಧ್ಯವಿದೆ.

ತಿಂಗಳ ಆದಾಯ ಯೋಜನೆ ಖಾತೆಯಲ್ಲಿ ಒಟ್ಟು 5 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ ತಿಂಗಳಿಗೆ 3,083.33 ರೂಪಾಯಿ ಆದಾಯ ಸಿಗಲಿದೆ. ಇನ್ನು 9 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ ತಿಂಗಳಿಗೆ 5,550 ರೂಪಾಯಿ ಆದಾಯ ಪಡೆಯಬಹುದು. ಇನ್ನು ಜಾಯಿಂಟ್ ಖಾತೆ ಮೂಲಕ 15 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದಲ್ಲಿ ತಿಂಗಳಿಗೆ 9,250 ರೂಪಾಯಿ ಆದಾಯ ಪಡೆಯಬಹುದಾಗಿದೆ.

ಈ ಯೋಜನೆಗೆ ಇರುವ ಅರ್ಹತೆಗಳು (Qualifications) :

10 ವರ್ಷದ ಮೇಲ್ಪಟ್ಟ ಅಪ್ರಾಪ್ತರು ಅವರ ಹೆಸರಿನಲ್ಲೇ ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಸಾಧ್ಯವಿದೆ.

ಒಬ್ಬರು ಒಂದಕ್ಕಿಂತ ಹೆಚ್ಚು ಖಾತೆಗಳನ್ನು ತೆರೆದು ಹೂಡಿಕೆ ಮಾಡಲು ಅವಕಾಶವಿದೆ.

ಖಾತೆ ಆರಂಭಿಸಿದ ಒಂದು ವರ್ಷದೊಳಗೆ ಯಾವುದೇ ಹೂಡಿಕೆ ಮೊತ್ತ ಮರಳಿ ಪಡೆಯಲು ಸಾಧ್ಯವಿಲ್ಲ.

ಬಳಿಕ ನಿಯಮಗಳ ಅನುಸಾರ ಖಾತೆ ಕ್ಲೋಸ್ ಮಾಡಿ ಹಣ ಮರಳಿ ಪಡೆಯಬಹುದು.

ಮೆಚ್ಯುರಿಟಿ ಮೊದಲೇ ಹೂಡಿಕೆ ಮಾಡಿದಾದ ಮೃತಪಟ್ಟರೆ, ನಾಮಿನಿ ಖಾತೆಗೆ ಹೂಡಿಕೆ ಮೊತ್ತ ಹಾಗೂ ಬಡ್ಡಿದರ ಜಮೆ ಆಗಲಿದೆ.

ಪೋಸ್ಟ್ ಆಫೀಸ್ ಮಂತ್ಲಿ ಇನ್‌ಕಮ್ ಸ್ಕೀಮ್ ಯೋಜನೆಯಲ್ಲಿ ಖಾತೆ ತೆರೆಯಲು ಇರಬೇಕಾದ ದಾಖಲೆಗಳು (Documents) :

ವಿಳಾಸ ಪುರಾವೆ.

ಎರಡು ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರಗಳು.

ಗುರುತಿನ ಪುರಾವೆ – ಪಾಸ್‌ಪೋರ್ಟ್, ಪ್ಯಾನ್ ಕಾರ್ಡ್, ರೇಷನ್ ಕಾರ್ಡ್, ಅಥವಾ ಭಾರತದ ಚುನಾವಣಾ ಆಯೋಗವು ನೀಡಿದ ಮತದಾರರ ಗುರುತಿನ ಚೀಟಿಯಂತಹ.

KYC ಕಾರ್ಯವಿಧಾನವನ್ನು ಕೈಗೊಳ್ಳಲು ನೀವು ಮೂಲ ದಾಖಲೆಗಳನ್ನು ಸಹ ತೆಗೆದುಕೊಂಡು ಹೋಗಬೇಕು.

ಪೋಸ್ಟ್ ಆಫೀಸ್ ಮಂತ್ಲಿ ಇನ್‌ಕಮ್ ಸ್ಕೀಮ್ ಯೋಜನೆಯನ್ನು ತೆರೆಯುವ ಪ್ರಕ್ರಿಯೆ (steps for opening account) :

ಹಂತ 1: ಹತ್ತಿರದ ಅಂಚೆ ಕಚೇರಿಗೆ ಹೋಗಿ ಮತ್ತು ಮೊದಲು ಉಳಿತಾಯ ಖಾತೆಯನ್ನು ತೆರೆಯಿರಿ.

ಹಂತ 2: ಅರ್ಜಿ ನಮೂನೆಯನ್ನು ಕೇಳಿ ಮತ್ತು ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ.

ಹಂತ 3: ಪಾಸ್‌ಪೋರ್ಟ್ ಗಾತ್ರದ ಫೋಟೋಗಳೊಂದಿಗೆ ಗುರುತಿನ ಮತ್ತು ವಿಳಾಸ ಪುರಾವೆ ದಾಖಲೆಗಳ ಫೋಟೋಕಾಪಿಯನ್ನು ಸಲ್ಲಿಸಿ.

ಹಂತ 4: ನಾಮಿನಿಯನ್ನು ಆಯ್ಕೆಮಾಡಿ ಮತ್ತು ನಗದು ಅಥವಾ ಚೆಕ್ ಅನ್ನು ಠೇವಣಿ ಮಾಡಿ.


Post a Comment

Previous Post Next Post
CLOSE ADS
CLOSE ADS
×