ಬಳ್ಳಾರಿ ಜಿಲ್ಲೆಯಲ್ಲಿ 10th, 12th ಪಾಸಾದವರಿಗೆ ಸರ್ಕಾರಿ ಹುದ್ದೆ: ಅಂಗನವಾಡಿ ಜಾಬ್‌ಗಳಿಗೆ ಅರ್ಜಿ ಆಹ್ವಾನ

ಬಳ್ಳಾರಿ ಜಿಲ್ಲೆಯಲ್ಲಿ 10th, 12th ಪಾಸಾದವರಿಗೆ ಸರ್ಕಾರಿ ಹುದ್ದೆ: ಅಂಗನವಾಡಿ ಜಾಬ್‌ಗಳಿಗೆ ಅರ್ಜಿ ಆಹ್ವಾನ

ಒಟ್ಟಾರೆ 141 ಅಂಗನವಾಡಿ ಸಹಾಯಕಿಯರು, ಕಾರ್ಯಕರ್ತೆಯರ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಬಳ್ಳಾರಿ ಜಿಲ್ಲೆಯಾದ್ಯಂತ ಸದರಿ ಹುದ್ದೆಗಳಿಗೆ ಸೇರಲು ಆಸಕ್ತಿ ಇರುವವರು ಅರ್ಜಿ ಸಲ್ಲಿಸಿ. ಹುದ್ದೆಗಳಿಗೆ ಬೇಕಾದ ಅರ್ಹತೆ, ಅರ್ಜಿ ಹಾಕುವ ವಿಧಾನ ಇಲ್ಲಿ ತಿಳಿಸಲಾಗಿದೆ.



ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಬಳ್ಳಾರಿ ಜಿಲ್ಲೆಯ ಎಲ್ಲ ಶಿಶು ಅಭಿವೃದ್ಧಿ ಯೋಜನೆಗಳಲ್ಲಿ ಖಾಲಿ ಇರುವ ಕಾರ್ಯಕರ್ತೆ ಹುದ್ದೆಗಳು ಹಾಗೂ ಸಹಾಯಕಿಯರ ಹುದ್ದೆಗಳನ್ನು ಭರ್ತಿ ಮಾಡಲು ನೇಮಕ ಅಧಿಸೂಚನೆ ಬಿಡುಗಡೆ ಮಾಡಿದೆ. ಒಟ್ಟಾರೆ 141 ಹುದ್ದೆಗಳಿವೆ. ಯಾವುದೇ ಪರೀಕ್ಷೆ ನಡೆಸದೇ ನೇಮಕ ಮಾಡುವ ಈ ಹುದ್ದೆಗಳಿಗೆ ಸೆಪ್ಟೆಂಬರ್ 10 ರೊಳಗೆ ಆಸಕ್ತರು ಅರ್ಜಿ ಸಲ್ಲಿಸಿ. ಮಹಿಳಾ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು.

ಬಳ್ಳಾರಿ ಅಂಗನವಾಡಿ ಹುದ್ದೆಗಳ ವಿವರ

  • ಅಂಗನವಾಡಿ ಕಾರ್ಯಕರ್ತೆ ಹುದ್ದೆ 22
  • ಅಂಗನವಾಡಿ ಸಹಾಯಕಿ ಹುದ್ದೆ 119

ಅಂಗನವಾಡಿ ಸಹಾಯಕಿ, ಕಾರ್ಯಕರ್ತೆ ಹುದ್ದೆಗಳಿಗೆ ವಿದ್ಯಾರ್ಹತೆಗಳು

  • ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ವಿದ್ಯಾರ್ಹತೆ : 12ನೇ ತರಗತಿ / ಡಿಪ್ಲೊಮ ಇಸಿಸಿಇ / ತತ್ಸಮಾನ ಶಿಕ್ಷಣ ಪಾಸ್.
  • ಅಂಗನವಾಡಿ ಸಹಾಯಕಿ ಹುದ್ದೆಗೆ ವಿದ್ಯಾರ್ಹತೆ : 10ನೇ ತರಗತಿ ಪಾಸ್.

ಅರ್ಜಿ ಸಲ್ಲಿಸಲು ವಯಸ್ಸಿನ ಅರ್ಹತೆಗಳು

  • ಅರ್ಜಿ ಹಾಕುವ ಕೊನೆ ದಿನಾಂಕಕ್ಕೆ ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 35 ವರ್ಷ ವಯಸ್ಸು ದಾಟಿರಬಾರದು.
  • ಇತರೆ ಹಿಂದುಳಿದ ವರ್ಗದವರಿಗೆ 3 ವರ್ಷ, ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಪ್ರವರ್ಗ-1 ವರ್ಗದವರಿಗೆ 5 ವರ್ಷ ವಯಸ್ಸಿನ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.

ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹುದ್ದೆಗಳಿಗೆ ಅರ್ಜಿ ಪ್ರಕ್ರಿಯೆಯ ದಿನಾಂಕಗಳು

  • ಆನ್‌ಲೈನ್‌ ಅಪ್ಲಿಕೇಶನ್‌ ಸ್ವೀಕಾರ ಆರಂಭಿಕ ದಿನಾಂಕ: 10-08-2024
  • ಆನ್‌ಲೈನ್‌ ಅಪ್ಲಿಕೇಶನ್ ಸಲ್ಲಿಸಲು ಕೊನೆ ದಿನಾಂಕ : 10-09-2024

ಬಳ್ಳಾರಿ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹುದ್ದೆಗಳಿಗೆ ಅರ್ಜಿ ಹಾಕುವ ಪ್ರಕ್ರಿಯೆ

  • ನೇಮಕಾತಿ ಜಿಲ್ಲೆ ಬಳ್ಳಾರಿ >> ಶಿಶು ಅಭಿವೃದ್ಧಿ ಯೋಜನೆ (ತಾಲ್ಲೂಕು) >> ಅಧಿಸೂಚನೆ ಸಂಖ್ಯೆ >> ಹುದ್ದೆ' ಆಯ್ಕೆ ಮಾಡಿ ಕ್ಲಿಕ್ ಮಾಡಿ.
  • ನಂತರ ಅರ್ಜಿ ಸಲ್ಲಿಸಲು ಬಯಸುವ ಅಂಗನವಾಡಿ ಕೇಂದ್ರ ಆಯ್ಕೆ ಮಾಡಿ.
  • ಆನ್‌ಲೈನ್‌ ಅರ್ಜಿ ನಮೂನೆ ತೆರೆಯುತ್ತದೆ.
  • ಕೇಳಲಾದ ಮಾಹಿತಿಗಳನ್ನು ನೀಡಿ ಅರ್ಜಿ ಹಾಕಿ.
  • ಅಗತ್ಯ ದಾಖಲೆಗಳನ್ನು ಆಯಾ ಹೆಸರಿನ ಮುಂದೆ ಇರುವ ಆಯ್ಕೆ ಬಟನ್‌ ಕ್ಲಿಕ್‌ ಮಾಡಿ ಸ್ಕ್ಯಾನ್‌ ಮಾಡಿ ತಪ್ಪದೇ ಅಪ್‌ಲೋಡ್ ಮಾಡಿ.
  • ಅಪ್ಲಿಕೇಶನ್‌ ಸಲ್ಲಿಸಲು ಬೇಕಾದ ದಾಖಲೆಗಳು / ಮಾಹಿತಿಗಳುಜನನ ಪ್ರಮಾಣ ಪತ್ರ / ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ / ಪಿಯುಸಿ ಅಂಕಪಟ್ಟಿ / ವಾಸಸ್ಥಳ ದೃಢೀಕರಣ ಪತ್ರ, / ಮೀಸಲಾತಿ ಕೋರುವ ದಾಖಲೆಗಳು ಅಗತ್ಯವಾಗಿ ಬೇಕು.


Post a Comment

Previous Post Next Post
CLOSE ADS
CLOSE ADS
×