ಧಾರವಾಡದ ಕೃಷಿ ವಿಜ್ಞಾನ ಯೂನಿವರ್ಸಿಟಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಧಾರವಾಡದ ಕೃಷಿ ವಿಜ್ಞಾನ ಯೂನಿವರ್ಸಿಟಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಧಾರವಾಡದಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಆಗಸ್ಟ್ 9, 2024 ರಂದು ಸಂದರ್ಶನ (Interview) ನಡೆಯಲಿದ್ದು, ಆಸಕ್ತರು ಪಾಲ್ಗೊಳ್ಳಬಹುದು.



UAS Dharwad Recruitment 2024: ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಧಾರವಾಡ(University of Agriculture Sciences Dharwad) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 2 ಟೆಕ್ನಿಕಲ್ ಅಸಿಸ್ಟೆಂಟ್, ಸೀನಿಯರ್ ರಿಸರ್ಚ್ ಫೆಲೋ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಈಗಲೇ ಅಪ್ಲೈ ಮಾಡಿ. ಸರ್ಕಾರಿ ಉದ್ಯೋಗ ಹುಡುಕುತ್ತಿರುವ ಆಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಿ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಧಾರವಾಡದಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಆಗಸ್ಟ್ 9, 2024 ರಂದು ಸಂದರ್ಶನ (Interview) ನಡೆಯಲಿದ್ದು, ಆಸಕ್ತರು ಪಾಲ್ಗೊಳ್ಳಬಹುದು.

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಹುದ್ದೆಯ ಮಾಹಿತಿ:

ಟೆಕ್ನಿಕಲ್ ಅಸಿಸ್ಟೆಂಟ್-1

ಸೀನಿಯರ್ ರಿಸರ್ಚ್ ಫೆಲೋ(SRF)-1

ಶೈಕ್ಷಣಿಕ ಅರ್ಹತೆ:

ಟೆಕ್ನಿಕಲ್ ಅಸಿಸ್ಟೆಂಟ್- ಬಿ.ಎಸ್ಸಿ(ಅಗ್ರಿ)

ಸೀನಿಯರ್ ರಿಸರ್ಚ್ ಫೆಲೋ(SRF)- ಜೆನೆಟಿಕ್ಸ್ & ಪ್ಲಾಂಟ್ ಬ್ರೀಡಿಂಗ್ನಲ್ಲಿ ಎಂ.ಎಸ್ಸಿ(ಅಗ್ರಿ)

ವಯೋಮಿತಿ:

ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಧಾರವಾಡ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ನಿಯಮಾನುಸಾರ ಇರಬೇಕು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ವೇತನ:

ಟೆಕ್ನಿಕಲ್ ಅಸಿಸ್ಟೆಂಟ್-ಮಾಸಿಕ ₹ 35,000

ಸೀನಿಯರ್ ರಿಸರ್ಚ್ ಫೆಲೋ(SRF)- ಮಾಸಿಕ ₹ 35,000+HRA

ಸಂದರ್ಶನದ ವಿವರ:

ಟೆಕ್ನಿಕಲ್ ಅಸಿಸ್ಟೆಂಟ್- ಆಗಸ್ಟ್ 9, 2024 ಬೆಳಗ್ಗೆ 10.30 ಕ್ಕೆ

ಸೀನಿಯರ್ ರಿಸರ್ಚ್ ಫೆಲೋ(SRF)- ಆಗಸ್ಟ್ 9, 2024 ಬೆಳಗ್ಗೆ 11 ಗಂಟೆಗೆ

ಉದ್ಯೋಗದ ಸ್ಥಳ:

ಧಾರವಾಡ

ಆಯ್ಕೆ ಪ್ರಕ್ರಿಯೆ:

ಕ್ವಾಲಿಫಿಕೇಶನ್

ಅನುಭವ

ಸಂದರ್ಶನ

ಪ್ರಮುಖ ದಿನಾಂಕಗಳು:

ನೋಟಿಫಿಕೇಶನ್ ಬಿಡುಗಡೆಯಾದ ದಿನಾಂಕ:24/07/2024

ಸಂದರ್ಶನ ನಡೆಯುವ ದಿನ: ಆಗಸ್ಟ್ 9, 2024

Post a Comment

Previous Post Next Post
CLOSE ADS
CLOSE ADS
×