ರೇಷನ್‌ ಕಾರ್ಡ್‌ ತಿದ್ದುಪಡಿಗೆ ಅವಕಾಶ; ಏನೆಲ್ಲಾ ಬದಲಾವಣೆ ಮಾಡಬಹುದು? ಕೊನೆಯ ದಿನಾಂಕ ಯಾವಾಗ?

ರೇಷನ್‌ ಕಾರ್ಡ್‌ ತಿದ್ದುಪಡಿಗೆ ಅವಕಾಶ; ಏನೆಲ್ಲಾ ಬದಲಾವಣೆ ಮಾಡಬಹುದು? ಕೊನೆಯ ದಿನಾಂಕ ಯಾವಾಗ?

Ration Card Correction Start : ಕರ್ನಾಟಕ ಆಹಾರ ಇಲಾಖೆಯು ಪಡಿತರ ಚೀಟಿ ತಿದ್ದುಪಡಿಗೆ ಅವಕಾಶ ನೀಡಿದೆ. ಆಗಸ್ಟ್‌ 10 ವರೆಗೂ ತಿದ್ದುಪಡಿ ಮಾಡಬಹುದು ಎಂದು ಇಲಾಖೆ ತಿಳಿಸಿದ್ದು, ಆ ಬಳಿಕ ಸೇವೆ ಸ್ಥಗಿತವಾಗಲಿದೆ. ಏನೆಲ್ಲಾ ಬದಲಾವಣೆ ಮಾಡಬಹುದು? ಯಾವೆಲ್ಲಾ ದಾಖಲೆ ಬೇಕು? ಇಲ್ಲಿದೆ ಮಾಹಿತಿ.




ಬೆಂಗಳೂರು: ರೇಷನ್‌ ಕಾರ್ಡ್‌ ತಿದ್ದುಪಡಿಗೆ ಕರ್ನಾಟಕ ಆಹಾರ, ನಾಗರೀಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆಯು ಅವಕಾಶ ನೀಡಿದೆ. ಆಗಸ್ಟ್‌ 10 ಕೊನೆಯ ದಿನವಾಗಿದ್ದು, ಅಷ್ಟರೊಳಗೆ ಅರ್ಜಿ ಸಲ್ಲಿಸಿ ಬದಲಾವಣೆ ಮಾಡಿಕೊಳ್ಳಬಹುದು.

ಈ ಕುರಿತು ಮಾಹಿತಿ ನೀಡಿರುವ ಇಲಾಖೆಯು, ಪಡಿತರ ಚೀಟಿ (ರೇಷನ್‌ ಕಾರ್ಡ್‌) ಹೊಂದಿರುವವರು ಅದರಲ್ಲಿ ತಿದ್ದುಪಡಿ ಮಾಡಿಕೊಳ್ಳುವ ಸಂಬಂಧ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಆಗಸ್ಟ್‌ 10 ರವರೆಗೆ ಅವಕಾಶವಿದೆ. ರೇಷನ್‌ ಕಾರ್ಡುದಾರರು ಈ ಸೌಲಭ್ಯವನ್ನು ಬಳಸಿಕೊಂಡು ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದೆ.


ಏನಲ್ಲಾ ಬದಲಾವಣೆಗೆ ಅವಕಾಶ?

  • ಕುಟುಂಬ ಸದಸ್ಯರ ಹೆಸರು ತಿದ್ದುಪಡಿ.
  • ಮನೆ ಯಜಮಾನರ ಬದಲಾವಣೆ
  • ಹೊಸ ಸದಸ್ಯರ ಸೇರ್ಪಡೆ
  • ವಿಳಾಸ ಬದಲಾವಣೆ
  • ಮೃತರ ಅಥವಾ ಬೇರೆ ಕುಟುಂಕ್ಕೆ ಸೇರಿದವರ ಹೆಸರು ತೆಗೆಯುವುದು.
  • ಫೋಟೋ ಮತ್ತು ಬಯೋಮೆಟ್ರಿಲ್‌ ಅಪ್ಡೇಟ್‌

ಯಾವೆಲ್ಲಾ ದಾಖಲೆಗಳು ಬೇಕು?

ಅರ್ಜಿದಾರರು ಆಧಾರ್ ಕಾರ್ಡ್ ಪ್ರತಿ, ಹೊಸ ಹೆಸರು ಸೇರ್ಪಡೆಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಮೊಬೈಲ್ ಸಂಖ್ಯೆ, ಹಾಲಿ ಪಡಿತರ ಚೀಟಿ ದಾಖಲೆ ಇಟ್ಟುಕೊಂಡಿರಬೇಕು.

ಎಲ್ಲಿ ತಿದ್ದುಪಡಿಗೆ ಅವಕಾಶ?

ತಿದ್ದುಪಡಿ ಮಾಡಿಕೊಳ್ಳುವವರು ಹತ್ತಿರವಿರುವ ಗ್ರಾಮ ಒನ್, ಕರ್ನಾಟಕ ಒನ್ ಕೇಂದ್ರಕ್ಕೆ ಅಗತ್ಯ ದಾಖಲೆಯೊಂದಿಗೆ ತೆರಳಿ ಆನ್‌ಲೈನ್ ಅರ್ಜಿ ಸಲ್ಲಿಸಿ ತಿದ್ದುಪಡಿ ಮಾಡಿಕೊಳ್ಳಬೇಕು. ಆಗಸ್ಟ್ 10 ರವರೆಗೆ ಬೆಳಗ್ಗೆ 10 ರಿಂದ ಸಂಜೆ 5ರವರೆಗೆ ತಿದ್ದುಪಡಿಗೆ ಅವಕಾಶವಿದೆ. ಕೇವಲ ಅನ್ ಲೈನ್ ಮೂಲಕವೇ ಅರ್ಜಿ ಸಲ್ಲಿಸಬಹುದು. ಯಾವುದೆ ಕೈಬರಹ ಹಾಗೂ ಮುದ್ರಿತ ಅರ್ಜಿಗಳನ್ನು
ಸ್ವೀಕರಿಸುವುದಿಲ್ಲ ಎಂದು ಇಲಾಖೆ ತಿಳಿಸಿದೆ.


ವಿದ್ಯುತ್‌ ಬಿಲ್‌ ದಾಖಲೆ ನೀಡಬೇಕು

ಪಡಿತರ ಚೀಟಿ ತಿದ್ದುಪಡಿ ಮಾಡಿರುವವರು ಇತ್ತೀಚಿನ ವಿದ್ಯುತ್ ಬಿಲ್ಲಿನಲ್ಲಿ ನಮೂದಿಸಿರುವ ವಿದ್ಯುತ್ ಮೀಟರ್ ಆರ್‌ಆರ್‌ ಸಂಖ್ಯೆ ಮತ್ತು ಲೊಕೇಷನ್ ಕೋಡ್ ನೀಡುವುದು ಕಡ್ಡಾಯ ಮಾಡಲಾಗಿದೆ. ವಿದ್ಯುತ್ ಸಂಪರ್ಕ ನಿಮ್ಮ ಕುಟುಂಬದ ಯಾರೇ ಸದಸ್ಯರ ಹೆಸರಿನಲ್ಲಿರಲು ಅಥವಾ ನಿಮ್ಮ ಮನೆ ಮಾಲೀಕರ ಹೆಸರಿನಲ್ಲಿರಲಿ, ಅದೇ ಆರ್.ಆರ್ ನಂಬರ್ ನೀಡುವುದು ಕಡ್ಡಾಯವಾಗಿದೆ. ಮನೆಗೆ ವಿದ್ಯುತ್ ಇಲ್ಲದವರು ತಮಗೆ ವಿದ್ಯುತ್ ಸಂಪರ್ಕ ಇಲ್ಲ / ತಮ್ಮ ಮನೆಗೆ ಅಧಿಕೃತ ವಿದ್ಯುತ್ ಮೀಟರ್ ಇಲ್ಲ / ತಮ್ಮದು ಭಾಗ್ಯಜ್ಯೋತಿ´ ಸಂಪರ್ಕ / ತಮ್ಮದು ಗ್ರೂಪ್ ಕ್ವಾರ್ಟರ್ಸ್ ಆಗಿದ್ದು ಎಲ್ಲರಿಗೂ ಸಾಮನ್ಯ ಮೀಟರ್ ಇದೆ. ಹೀಗೆ ನಿಮ್ಮ ಮನೆಯ ವಿದ್ಯುತ್ ವ್ಯವಸ್ಥೆ ಬಗ್ಗೆ ಸ್ಪಷ್ಟವಾಗಿ ಘೋಷಿಸಬೇಕು ಎಂದು ಇಲಾಖೆ ಸೂಚಿಸಿದೆ.

ಹೊಸ ರೇಷನ್‌ ಕಾರ್ಡ್‌ ವಿತರಣೆ ಯಾವಾಗ?

ಆಹಾರ ಇಲಾಖೆಯು ಸದ್ಯ ರೇಷನ್‌ ಕಾರ್ಡ್‌ ತಿದ್ದುಪಡಿಗೆ ಮಾತ್ರವೇ ಅವಕಾಶ ನೀಡಿದೆ. ಹೊಸ ರೇಷನ್‌ ಕಾರ್ಡ್‌ ಅರ್ಜಿ ಸಲ್ಲಿಸುವ ಬಗ್ಗೆ ಯಾವುದೇ ಮಾಹಿತಿ, ಸುತ್ತೋಲೆಯನ್ನು ನೀಡಿಲ್ಲ. ಇನ್ನು ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ತೆರಳಿ ತಿದ್ದುಪಡಿ ಅರ್ಜಿ ಸಲ್ಲಿಕೆ, ಅರ್ಜಿಯ ಸ್ಥಿತಿ, ಹೊಸ ಅರ್ಜಿ ವಿಲೇವಾರಿ ಸೇರಿದಂತೆ ಅಗತ್ಯ ಮಾಹಿತಿ ಪಡೆದುಕೊಳ್ಳಬಹುದು.

ಆಹಾರ ಇಲಾಖೆ ವೆಬ್‌ಸೈಟ್‌ ಲಿಂಕ್‌ - https://ahara.kar.nic.in/Home/EServices

Post a Comment

Previous Post Next Post
CLOSE ADS
CLOSE ADS
×