PSI, ಪ್ಯಾರಾ ಮಿಲಿಟರಿ ಹುದ್ದೆಗಳಿಗೆ ಪರೀಕ್ಷೆ ಪೂರ್ವ ಉಚಿತ ವಸತಿಯುತ ತರಬೇತಿ: ಅರ್ಜಿ ಹಾಕಿ

PSI, ಪ್ಯಾರಾ ಮಿಲಿಟರಿ ಹುದ್ದೆಗಳಿಗೆ ಪರೀಕ್ಷೆ ಪೂರ್ವ ಉಚಿತ ವಸತಿಯುತ ತರಬೇತಿ: ಅರ್ಜಿ ಹಾಕಿ

Free coaching Karnataka 2024 : ಯಾವುದೇ ಪದವಿ ಪಾಸ್‌ ಮಾಡಿದ್ದು, ಪಿಎಸ್‌ಐ ಹುದ್ದೆಗೆ ಸೇರುವ ಆಕಾಂಕ್ಷಿಗಳು ನೀವಾ.. ಹಾಗಿದ್ರೆ ನಿಮಗಿದೋ ಸರ್ಕಾರದ ವತಿಯಿಂದ ಉಚಿತ ಪರೀಕ್ಷಾ ಪೂರ್ವ ತರಬೇತಿ ಸೌಲಭ್ಯ ಉಚಿತವಾಗಿದೆ. ಈ ಸೌಲಭ್ಯ ಪಡೆಯಲು ಈಗಲೇ ಅರ್ಜಿ ಸಲ್ಲಿಸಿ.



  • ಯಾವುದೇ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ ಪಡೆದು ಕರ್ನಾಟಕ ಪೊಲೀಸ್‌ ಇಲಾಖೆಯ ಪೊಲೀಸ್‌ ಸಬ್‌ಇನ್ಸ್‌ಪೆಕ್ಟರ್‌ ಹುದ್ದೆಗೆ, ಪ್ಯಾರಾ ಮಿಲಿಟರಿ ಹುದ್ದೆಗಳಿಗೆ ಸೇರಬೇಕು ಎಂಬ ಕನಸು ಕಟ್ಟಿಕೊಂಡಿದ್ದೀರಾ.. ಹಾಗಿದ್ರೆ ನಿಮಗಿದೋ ಇಲ್ಲಿದೆ ಉಚಿತ ವಸತಿಯುತ ಪರೀಕ್ಷಾ ಪೂರ್ವ ತರಬೇತಿ ಪಡೆಯುವ ಅವಕಾಶ. 75 ದಿನಗಳ ಕಾಲ ಈ ಉಚಿತ ವಸತಿಯುತ ಕೋಚಿಂಗ್ ನೀಡಲಿದ್ದು, ಆಸಕ್ತರು ಇಂದಿನಿಂದಲೇ ಅರ್ಜಿ ಸಲ್ಲಿಸಿ.
  • 2024-25ನೇ ಸಾಲಿಗೆ ಸಮಾಜ ಕಲ್ಯಾಣ ಇಲಾಖೆಯ ಪರೀಕ್ಷಾ ಪೂರ್ವ ತರಬೇತಿ ಕೇಂದ್ರದ ವತಿಯಿಂದ ಈ ಪಿಎಸ್‌ಐ, ಪ್ಯಾರಾ ಮಿಲಿಟರಿ ಹುದ್ದೆಗಳ ಪರೀಕ್ಷೆಗೆ ಕೋಚಿಂಗ್ ನೀಡಲಾಗುತ್ತಿದ್ದು, ಕರ್ನಾಟಕ ರಾಜ್ಯದ 04 ಕಂದಾಯ ವಿಭಾಗಗಳಲ್ಲಿ ಪ್ರತ್ಯೇಕವಾಗಿ 75 ದಿನಗಳ ವಸತಿಯುತ ತರಬೇತಿ ನೀಡಲಾಗುತ್ತದೆ. ಯಾವುದೇ ಪರೀಕ್ಷೆ ನಡೆಸದೇ ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ.
  • ವಸತಿಯುತ ಪಿಎಸ್‌ಐ, ಪ್ಯಾರಾ ಮಿಲಿಟರಿ ಪೂರ್ವ ನೇಮಕಾತಿ ತರಬೇತಿಯ ಅವಧಿ, ಶೈಕ್ಷಣಿಕ ವಿದ್ಯಾರ್ಹತೆ, ಅರ್ಜಿ ಸಲ್ಲಿಸಬೇಕಾದ ವೆಬ್‌ಸೈಟ್‌ ವಿಳಾಸ ಮತ್ತು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕದ ವಿವರಗಳು ಕೆಳಗಿನಂತಿದ್ದು, ಆಸಕ್ತರು ಅರ್ಜಿ ಸಲ್ಲಿಸಿ.
  • ವಸತಿಯುತ ಪಿಎಸ್‌ಐ, ಪ್ಯಾರಾ ಮಿಲಿಟರಿ ಪೂರ್ವ ನೇಮಕಾತಿ ತರಬೇತಿ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 31-08-2024

ವಸತಿಯುತ ಪಿಎಸ್‌ಐ, ಪ್ಯಾರಾ ಮಿಲಿಟರಿ ಪೂರ್ವ ನೇಮಕಾತಿ ತರಬೇತಿ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಲು ಅರ್ಹತೆಗಳು

  • ಕನಿಷ್ಠ 21 ವರ್ಷ, ಗರಿಷ್ಠ 32 ವರ್ಷ. ಸೇವಾನಿರತವಾಗಿರುವ ಅಭ್ಯರ್ಥಿಗಳು ಗರಿಷ್ಠ 40 ವರ್ಷ ವಯಸ್ಸು ಮೀರಿರಬಾರದು.
  • ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಯುಜಿಸಿ ಇಂದ ಮಾನ್ಯತೆ ಪಡೆದ ಅಂಗೀಕೃತ ವಿಶ್ವವಿದ್ಯಾಲಯದಲ್ಲಿ ಪದವಿ ಅಥವಾ ತತ್ಸಮಾನ (ಪಿಯುಸಿ ನಂತರ ಪದವಿಗೆ ಸಮನಾದ ಯಾವುದೇ ಶಿಕ್ಷಣ) ಪಾಸ್‌ ಮಾಡಿರಬೇಕು.
  • ಸೇವಾನಿರತರಾಗಿದ್ದಲ್ಲಿ ಪೊಲೀಸ್ ಇಲಾಖೆಯ ಯಾವುದೇ ವೃಂದದಲ್ಲಿ ಕನಿಷ್ಠ 5 ವರ್ಷ ಸೇವೆ ಸಲ್ಲಿಸಿರಬೇಕು.
  • ಅಭ್ಯರ್ಥಿ ಕರ್ನಾಟಕ ರಾಜ್ಯದ ನಿವಾಸಿ ಆಗಿರಬೇಕು.
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹೊಂದಿರಬೇಕು.
  • ಪರಿಶಿಷ್ಟ ಜಾತಿ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು.

ಎತ್ತರ, ತೂಕ, ಎದೆ ಅಳತೆ ಅರ್ಹತೆಗಳು

  • ಎತ್ತರ: ಪುರುಷರು ಕನಿಷ್ಠ 163 ಸೆಂ.ಮೀ, ಮಹಿಳೆಯರು ಕನಿಷ್ಠ 153 ಸೆಂ.ಮೀ ಇರಬೇಕು.
  • ತೂಕ: ಪುರುಷರು ಕನಿಷ್ಠ 50 ಕೆ.ಜಿ, ಮಹಿಳೆಯರು ಕನಿಷ್ಠ 45 ಕೆ.ಜಿ ಇರಬೇಕು.
  • ಎದೆ : ಪುರುಷರ ಎದೆ ಸುತ್ತಳತೆ ಕನಿಷ್ಠ 76 ಸೆಂ.ಮೀ ಇರಬೇಕು.
  • ಆಯ್ಕೆ ವಿಧಾನ : ಪದವಿಯಲ್ಲಿ ಪಡೆದಿರುವ ಅಂಕಗಳ ಆಧಾರದಲ್ಲಿ ಶಾರ್ಟ್‌ ಲಿಸ್ಟ್‌ ಮಾಡಿ ನೇಮಕ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ

  • ಸಮಾಜ ಕಲ್ಯಾಣ ಇಲಾಖೆ ಪರೀಕ್ಷಾ ಪೂರ್ವ ತರಬೇತಿ ಕೇಂದ್ರದ ವೆಬ್‌ಸೈಟ್ petc.kar.nic.in ಗೆ ಭೇಟಿ ನೀಡಿ.
  • ಮತ್ತಷ್ಟು ಓದಿ ಎಂದಿರುವ ಆಯ್ಕೆ ಕ್ಲಿಕ್ ಮಾಡಿ.
  • 'ಪೂರ್ವ -ನೇಮಕಾತಿ ವಸತಿಯುತ ಸಬ್‌ಇನ್ಸ್‌ಪೆಕ್ಟರ್ ತರಬೇತಿಗೆ ಆನ್‌ಲೈನ್‌ ಅರ್ಜಿ' ಎಂದಿರುವ ಆಯ್ಕೆ ಕ್ಲಿಕ್ ಮಾಡಿ.
  • ಮತ್ತೊಂದು ಹೊಸ ವೆಬ್‌ಪೇಜ್‌ ತೆರೆಯುತ್ತದೆ.
  • ಈ ಹಂತದಲ್ಲಿ 'ಅರ್ಜಿ ಸಲ್ಲಿಸಿ' ಎಂದಿರುವಲ್ಲಿ ಕ್ಲಿಕ್ ಮಾಡಿ.
  • ನಂತರ ತೆರೆಯುವ ಆನ್‌ಲೈನ್‌ ಅರ್ಜಿ ನಮೂನೆಯಲ್ಲಿ ಕೇಳಲಾದ ಮಾಹಿತಿಗಳನ್ನು ನೀಡಿ ಅರ್ಜಿ ಸಲ್ಲಿಸಿ.

ಸೂಚನೆಗಳು

  • ಇಲಾಖಾವತಿಯಿಂದ ಯಾವುದೇ ಪತ್ರ ವ್ಯವಹಾರವನ್ನು ಅರ್ಜಿ ಹಾಕಿದವರಿಗೆ ನಡೆಸುವುದಿಲ್ಲ. ಆದ್ದರಿಂದ ಇಲಾಖಾ ವೆಬ್‌ಸೈಟ್‌ ಅನ್ನು ಕಾಲಕಾಲಕ್ಕೆ ವೀಕ್ಷಿಸಬೇಕು.
  • ತಪ್ಪು ಮಾಹಿತಿಯ ಕಾರಣದಿಂದ ಉಂಟಾಗಬಹುದಾದ ಲೋಪಗಳಿಗೆ ಸಂಬಂಧಪಟ್ಟ ಅಭ್ಯರ್ಥಿಗಳೇ ಜವಾಬ್ದಾರರಾಗಿರುತ್ತಾರೆ.

Post a Comment

Previous Post Next Post
CLOSE ADS
CLOSE ADS
×