ಅಮೆಜಾನ್‌ನಲ್ಲಿ ನೂತನ OnePlus Nord 4 5G ಫೋನಿಗೆ ಇರುವ ಆಫರ್‌ ಎಷ್ಟು ಗೊತ್ತಾ?

ಅಮೆಜಾನ್‌ನಲ್ಲಿ ನೂತನ OnePlus Nord 4 5G ಫೋನಿಗೆ ಇರುವ ಆಫರ್‌ ಎಷ್ಟು ಗೊತ್ತಾ?

ಇ ಕಾಮರ್ಸ್‌ ದೈತ್ಯ ಅಮೆಜಾನ್‌ ತಾಣವು ಆಯೋಜಿಸಿರುವ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ 2024 ಈಗ ಲೈವ್ ಇದೆ. ಈ ಸೇಲ್‌ನಲ್ಲಿ ಇತ್ತೀಚಿಗಿನ ಕೆಲವು ಆಯ್ದ ಮೊಬೈಲ್‌ಗಳು ಭಾರೀ ಆಕರ್ಷಕ ಡಿಸ್ಕೌಂಟ್‌ ತಿಳಿಸಿದ್ದು, ಈ ಮೂಲಕ ಆನ್‌ಲೈನ್‌ ಶಾಪಿಂಗ್‌ ಪ್ರಿಯರನ್ನು ಸೆಳೆಯುತ್ತಿದೆ. ಇದೀಗ ಅಮೆಜಾನ್‌ ವೆಬ್‌ಸೈಟ್‌ನಲ್ಲಿ ಒನ್‌ಪ್ಲಸ್‌ ಸಂಸ್ಥೆಯ ಒನ್‌ಪ್ಲಸ್‌ ನಾರ್ಡ್‌ 4 5G ( OnePlus Nord 4 5G ) ಮೊಬೈಲ್‌ ಗ್ರಾಹಕರು ವಾವ್‌ ಎನಿಸುವಂತಹ ಆಫರ್‌ ದರದಲ್ಲಿ ಲಭ್ಯ ಇದೆ.



ಹೌದು, ಅಮೆಜಾನ್‌ ಪ್ಲಾಟ್‌ಫಾರ್ಮ್ನಲ್ಲಿ ಒನ್‌ಪ್ಲಸ್‌ ನಾರ್ಡ್‌ 4 5G ( OnePlus Nord 4 5G ) ಮೊಬೈಲ್ ಭರ್ಜರಿ ಆಕರ್ಷಕ ರಿಯಾಯಿತಿ ಪಡೆದಿದೆ. ಈ ಫೋನಿನ 8GB RAM + 128GB ಸ್ಟೋರೇಜ್‌ ವೇರಿಯಂಟ್‌ ಅನ್ನು ಖರೀದಿದಾರರು 29,998ರೂ. ಗಳ ಆಫರ್‌ ಬೆಲೆಯಲ್ಲಿ ಖರೀದಿ ಮಾಡಬಹುದು. ಇದರ ಜೊತೆಗೆ ಹೆಚ್ಚುವರಿಯಾಗಿ ಆಯ್ದ ಬ್ಯಾಂಕ್‌ಗಳಿಂದ ಡಿಸ್ಕೌಂಟ್‌ ಲಭ್ಯ ಇದ್ದು, ಎಲ್ಲ ಡಿಸ್ಕೌಂಟ್‌ ಪಡೆದರೆ ಈ ಫೋನ್ ಅನ್ನು 27,999ರೂ. ಗಳಿಗೆ ಪಡೆಯಬಹುದು.

oneplus

ಹಾಗೆಯೇ ಈ ಫೋನ್‌ 5,500mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸಹ ಪಡೆದಿದೆ. ಇನ್ನು ಇದು8GB RAM + 256GB ವೇರಿಯಂಟ್‌ ಹಾಗೂ 12GB RAM + 256GB ವೇರಿಯಂಟ್‌ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ. ಹಾಗಾದರೇ ಒನ್‌ಪ್ಲಸ್‌ ನಾರ್ಡ್‌ 4 5G ಮೊಬೈಲ್‌ನ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಪಡೆದಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ ಓದಿರಿ.

ಒನ್‌ಪ್ಲಸ್‌ ನಾರ್ಡ್‌ 4 ಫೀಚರ್ಸ್‌

ಒನ್‌ಪ್ಲಸ್‌ ನಾರ್ಡ್‌ 4 ಮೊಬೈಲ್‌ 6.74 ಇಂಚಿನ ಅಮೋಲೆಡ್‌ ಡಿಸ್‌ಪ್ಲೇ ಅನ್ನು ಪಡೆದಿದ್ದು, ಈ ಡಿಸ್‌ಪ್ಲೇ 1240 x 2772 ಪಿಕ್ಸೆಲ್ ರೆಸಲ್ಯೂಶನ್‌ ಅನ್ನು ಒಳಗೊಂಡಿದೆ. ಹಾಗೆಯೇ 120Hz ರಿಫ್ರೆಶ್ ರೇಟ್‌ ಸೌಲಭ್ಯ ಕೂಡಾ ಪಡೆದಿದ್ದು, ಹಾಗೆಯೇ ಇದು 451ppi ಪಡೆದಿದೆ. ಇದರ ಜೊತೆಗೆ HDR10+ ಸಪೋರ್ಟ್‌ ಸಹ ಇದೆ.

ಒನ್‌ಪ್ಲಸ್‌ ನಾರ್ಡ್‌ 4 ಮೊಬೈಲ್‌ ಕ್ವಾಲ್ಕಮ್‌ ಸ್ನಾಪ್‌ಡ್ರಾಗನ್ 7+ ಜೆನ್‌ 3 ಪ್ರೊಸೆಸರ್‌ ಪವರ್‌ನಲ್ಲಿ ಕೆಲಸ ಮಾಡಲಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 14 ಆಧಾರಿತ OxygenOS 14 ನಲ್ಲಿ ಕೆಲಸ ನಿರ್ವಹಿಸಲಿದೆ. ಹಾಗೆಯೇ 16GB RAM ಮತ್ತು 256GB ಸ್ಟೋರೇಜ್‌ ಅನ್ನು ಒಳಗೊಂಡಿದೆ.

ಒನ್‌ಪ್ಲಸ್‌ ನಾರ್ಡ್‌ 4 ಮೊಬೈಲ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದಿದ್ದು, ಇದರಲ್ಲಿ ಪ್ರಾಥಮಿಕ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌ ನಲ್ಲಿ ಇದೆ. ಇದರ ಎರಡನೇ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್‌ ಅನ್ನು ಪಡೆದುಕೊಂಡಿದೆ. ಹಾಗೆಯೇ ಮುಂಭಾಗದಲ್ಲಿ 16 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ಒನ್‌ಪ್ಲಸ್‌ ನಾರ್ಡ್‌ 4 ಮೊಬೈಲ್‌ 5,500mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿದ್ದು, ಇದರೊಂದಿಗೆ 100W ವೈಯರ್ಡ್‌ ಫಾಸ್ಟ್‌ ಚಾರ್ಜಿಂಗ್‌ ಅನ್ನು ಸಪೋರ್ಟ್‌ ಕೂಡಾ ಇವೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6, ಬ್ಲೂಟೂತ್ 5.4, NFC, GPS ಮತ್ತು USB ಟೈಪ್-C ಪೋರ್ಟ್ ಇವೆ. ಅಂದಹಾಗೆ ಒನ್‌ಪ್ಲಸ್‌ ನಾರ್ಡ್‌ 4 ಫೋನ್‌ 8GB RAM + 128GB ವೇರಿಯಂಟ್‌, 8GB RAM + 256GB ವೇರಿಯಂಟ್‌ ಹಾಗೂ 12GB RAM + 256GB ವೇರಿಯಂಟ್‌ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ.

Post a Comment

Previous Post Next Post
CLOSE ADS
CLOSE ADS
×