Belevime status ಮೊಬೈಲ್ ನಂಬರ್ ಹಾಕಿ ಬೆಳೆ ವಿಮೆ ಸ್ಟೇಟಸ್ ಮೊಬೈಲ್ ನಲ್ಲಿ ಹೀಗೆ ಚೆಕ್ ಮಾಡಿ 2024

Belevime status ಮೊಬೈಲ್ ನಂಬರ್ ಹಾಕಿ ಬೆಳೆ ವಿಮೆ ಸ್ಟೇಟಸ್ ಮೊಬೈಲ್ ನಲ್ಲಿ ಹೀಗೆ ಚೆಕ್ ಮಾಡಿ 2024

Belevime status: ರೈತರು ಕಳೆದ ಸಾಲಿನ 2023-24ನೇ ಸಾಲಿನಲ್ಲಿ ಅಂದರೆ ಮುಂಗಾರು ಹಂಗಾಮಿಗೆ ಬೆಳೆ ವಿಮೆ ಮಾಡಿಸಿದ ರೈತರು ತಮಗೆ ಎಷ್ಟು ವಿಮೆ ಹಣ ಜಮೆಯಾಗಿದೆ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.



ಹೌದು, ರೈತ ಬಾಂಧವರೇ ಕಳೆದ ಮುಂಗಾರು ಸಾಲಿನಲ್ಲಿ ಬೆಳೆ ವಿಮೆ ಹಣ ಇನ್ನೂ ಕೆಲವು ರೈತರಿಗೆ ಜಮೆ ಮಾಡಲಾಗುತ್ತಿದೆ. ಕೆಲವು ರೈತರಿಗೆ ಜಮೆಯಾದರೆ ಕೆಲವು ರೈತರಿಗೆ ಇನ್ನೂ ಜಮೆಯಾಗಿಲ್ಲ.

ಏಕೆಂದರೆ ಕೆಲವು ರೈತರ ಎಫ್ಐಡಿ ಇರದಿದ್ದರೆ ಇನ್ನೂ ಕೆಲವು ರೈತರಿಗೆ ಬೆಳೆ ಸಮೀಕ್ಷೆ ಮಾಡದಿದ್ದರೆ ಅಂತಹ ರೈತರಿಗೆ ಬೆಳೆ ವಿಮೆ ಜಮೆಯಾಗಿಲ್ಲ. ಈಗ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ ಯಾವ ಯಾವ ರೈತರ ದಾಖಲೆಗಳು ಸರಿಯಿದೆಯೋ ಅಂತಹವರಿಗೆಲ್ಲ ಬೆಳೆ ವಿಮೆ ಹಣ ಜಮೆ ಮಾಡಲಾಗುತ್ತಿದೆ.

Belevime status ನಿಮಗೆಷ್ಟು ಬೆಳೆ ವಿಮೆ ಹಣ ಜಮೆಯಾಗಿದೆ? ಮೊಬೈಲ್ ನಲ್ಲಿ ಹೀಗೆ ಚೆಕ್ ಮಾಡಿ

ಕಳೆದ ಸಾಲಿನಲ್ಲಿ ಮುಂಗಾರು ಹಂಗಾಮಿಗೆ ಬೆಳೆ ವಿಮೆ ಮಾಡಿಸಿದ ರೈತರ ವಿಮೆ ಹಣ ಜಮೆಯಾಗಲು ಯಾವ ಸ್ಥಿತಿಯಲ್ಲಿದೆ ಎಂಬುದನ್ನು ಚೆಕ್ ಮಾಡಲು ಈ

https://samrakshane.karnataka.gov.in/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗನಿಮಗೆ ಬೆಳೆ ವಿಮೆ ಚೆಕ್ ಮಾಡುವ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ವರ್ಷದ ಆಯ್ಕೆ 2023-2024 ಆಯ್ಕೆ ಮಾಡಿಕೊಳ್ಳಬೇಕು.ನಂತರ ಮುಂದೆ / ಗೋ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಇನ್ನೊಂದು ಪೇಜ್ ಓಪನ್ ಆಗಿದ್ದು ಕಾಣಿಸುತ್ತದೆ. ಅಲ್ಲಿ ನೀವು check Status ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ನಿಮಗೆ ಮೂರು ಆಯ್ಕೆಗಳು ಕಾಣಿಸುತ್ತವೆ. Proposal Mobile No and Aadhaar ಹೀಗೆ ಮೂರು ಆಯ್ಕೆಗಳು ಕಾಣಿಸುತ್ತವೆ.

ಅದರಲ್ಲಿ ನೀವು Mobile No. ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಮೊಬೈಲ್ ನಂಬರ್ ಬರೆಯಬೇಕು. ಇದಾದ ನಂತರ ಅಲ್ಲಿ ಕಾಣುವ Captcha ಕೋಡ್ ಹಾಕಬೇಕು. ನಂತರ Search ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಅರ್ಜಿ ವಿಮಾ ಕಂಪನಿಯಿಂದ ಸ್ವೀಕೃತವಾಗಿರುವ ಮಾಹಿತಿ ಕಾಣಿಸುತ್ತದೆ.

 

Belevime status

ಇದಾದ ನಂತರ ಅಲ್ಲಿ ಕಾಣುವ Select ಮೇಲೆ ಕ್ಲಿಕ್ ಮಾಡಬೇಕು. ಇದಾದ ನಂತರ View Details ಮೇಲೆ ಕ್ಲಿಕ್ ಮಾಡಬೇಕು. ಆಗ ತೆರೆದುಕೊಳ್ಳುವ ಪೇಜ್ ನಲ್ಲಿನೀವು ಯಾವ ಸರ್ವೆ ನಂಬರಿಗೆ ವಿಮೆ ಮಾಡಿಸಿದ್ದೀರಿ ಎಷ್ಟು ವಿಮೆ ಹಣ ಪಾವತಿಸಿದ್ದೀರಿ?ನಿಮ್ಮ ಬೆಳೆ ಸಂಪೂರ್ಣ ಹಾನಿಯಾದರೆ ಎಷ್ಟುವಿಮೆ ಹಣ ಜಮೆಯಾಗಬಹುದು ಎಂಬ ಮಾಹಿತಿ ಕಾಣಿಸುತ್ತದೆ.

ಒಂದು ವೇಳೆ ನಿಮಗೆ ಬೆಳೆ ವಿಮೆ ಹಣ ಜಮೆಯಾಗಿದ್ದರೆ ಯಾವ ಸರ್ವೆ ನಂಬರಿಗೆ ಎಷ್ಟುವಿಮೆ ಹಣ ಜಮೆಯಾಗಿದೆ ಎಂಬ ಮಾಹಿತಿ ಕಾಣಿಸುತ್ತದೆ.

Belevime status ಬೆಳೆ ವಿಮೆ ಹಣ ಯಾವಾಗ ಜಮೆಯಾಗುತ್ತದೆ?

ಮಳೆ ಅಭಾವ ಅಥವಾ ಇತರೆ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಂದ ಸ್ಥಳ, ನಿರ್ಧಿಷ್ಠ, ಪ್ರಕೃತಿ ವಿಕೋಪಗಳಾದ ಆಲಿಕಲ್ಲು, ಮಳೆ, ಭೂ ಕುಸಿತ, ಬೆಳೆ ಮುಳುಗಡೆ, ಮೇಘ ಸ್ಫೋಟ ಹಾಗೂ ಗುಡುಗು ಮಿಂಚುಗಳಿಂದ ಉಂಟಾಗುವ ಬೆಂಕಿ ಅವಘಡ ಸಂದರ್ಭದಲ್ಲಿ ಬೆಳೆ ನಷ್ಟ ಉಂಟಾದರೆ ಮಾತ್ರ ರೈತರಿಗೆ ಬೆಳೆ ವಿಮೆ ಹಣ ಜಮೆಯಾಗುತ್ತದೆ. ಪ್ರಾಕೃತಿಕ ವಿಕೋಪದಿಂದಾಗಿ ಬೆಳೆ ಹಾನಿಯಾದಾಗ 72 ಗಂಟೆಯೊಳಗೆ ಆಯಾ ವಿಮಾ ಕಂಪನಿಗೆ ತಿಳಿಸಬೇಕು. ಆಗ ವಿಮಾ ಕಂಪನಿಯ ಸಿಬ್ಬಂದಿಗಳು ಬಂದು ಬೆಳೆ ಹಾನಿಯಾಗಿರುವ ಕುರಿತು ವರದಿ ಮಾಡುತ್ತಾರೆ.

Belevime status ಬೆಳೆ ವಿಮೆ ಹೇಗೆ ನಿರ್ಧರಿಸುತ್ತಾರೆ?

ವಿಮಾ ಘಟಕದಲ್ಲಿ ಶೇ.75 ಕ್ಕಿಂತ ಹೆಚ್ಚಿನ ಕ್ಷೇತ್ರದಲ್ಲಿ ಬಿತ್ತನೆ ವಿಫಲಗೊಂಡರೆ, ಅಥವಾ ಬಿತ್ತನೆಯಾದ ನಂತರ ಕಟಾವಿಗೆ ಮೊದಲು ಸಕಾಲಕ್ಕೆ ಮಳೆ ಬಾರದೆ ನಿರೀಕ್ಷಿತ ಇಳುವರಿಗಿಂತ ಶೇ. 50 ಕ್ಕಿಂತ ಹೆಚ್ಚು ಇಳುವರಿ ನಷ್ಟ ಆದಲ್ಲಿ ಅಥವಾ ಅಕಾಲಿಕ ಮಳೆಯಿಂದ ಬೆಳೆ ಮುಳುಗಡೆ ಅಥವಾ ಕಟಾವಿನ ನಂತರ 14 ದಿನದೊಳಗೆ ಅಕಾಲಿಕ ಮಳೆಯಿಂದ ಬೆಳೆ ನಾಶವಾದರೆ ವಿಮಾ ಸಂಸ್ಥೆ ವೈಯಕ್ತಿಕವಾಗಿ ನಷ್ಟವನ್ನು ನಿರ್ಧರಿಸಿ ಪರಿಹಾರ ನೀಡಲು ಅವಕಾಶವಿರುತ್ತದೆ.


Post a Comment

Previous Post Next Post
CLOSE ADS
CLOSE ADS
×