SSLC ಪಾಸ್ ಆದ ಅಭ್ಯರ್ಥಿಗಳಿಗೆ ಅದೃಷ್ಟ.. ಕಾನ್ಸ್ಟೆಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ಮಹಿಳೆಯರಿಗೂ ಅವಕಾಶ

SSLC ಪಾಸ್ ಆದ ಅಭ್ಯರ್ಥಿಗಳಿಗೆ ಅದೃಷ್ಟ.. ಕಾನ್ಸ್ಟೆಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ಮಹಿಳೆಯರಿಗೂ ಅವಕಾಶ

ಈ ಹುದ್ದೆಗಳಿಗೆ ವಿದ್ಯಾರ್ಹತೆ, ಶುಲ್ಕ, ವಯೋಮಿತಿ ಮಾಹಿತಿ ಇಲ್ಲಿದೆ, ತಿಂಗಳಿಗೆ ಸ್ಯಾಲರಿ ಎಷ್ಟು ಇದೆ, ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ?



10ನೇ ತರಗತಿ ಪಾಸ್ ಆದವರಿಗೆ ಕೇಂದ್ರ ಸರ್ಕಾರದ ಉದ್ಯೋಗ

ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್ (ಐಟಿಬಿಪಿ) ಇಲಾಖೆಯಲ್ಲಿ ಖಾಲಿ ಇರುವಂತ ಹುದ್ದೆಗಳಿಗಾಗಿ ಅರ್ಜಿಗಳನ್ನು ಆಹ್ವಾನ ಮಾಡಲಾಗಿದೆ. ಜಸ್ಟ್ ಇದಕ್ಕೆ 10ನೇ ತರಗತಿ ಪಾಸ್ ಆಗಿದ್ದವರು ಅಪ್ಲೇ ಮಾಡಬಹುದು. ಈಗಾಗಲೇ ಇದರ ನೋಟಿಫಿಕೇಶನ್ ಅನ್ನು ಇಲಾಖೆ ಬಿಡುಗಡೆ ಮಾಡಿದ್ದು ಹುದ್ದೆಯ ಸಂಪೂರ್ಣ ಮಾಹಿತಿ ಏನು ಎಂಬುದು ಇಲ್ಲಿ ವಿವರಿಸಲಾಗಿದೆ.

ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವ ಆಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತಿ ಹೊಂದಿದ ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅಪ್ಲೇ ಮಾಡಬಹುದು. ಇನ್ನು ಈ ಹುದ್ದೆಗಳಿಗೆ ವಿದ್ಯಾರ್ಹತೆ, ಶುಲ್ಕ, ವಯೋಮಿತಿ, ಅನುಭವ, ವಯಸ್ಸು ಇತ್ಯಾದಿಗಳನ್ನು ಇಲ್ಲಿ ನೀಡಲಾಗಿದೆ. ಸರಿಯಾಗಿ ಗಮನಿಸಿ.

ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್ (ಐಟಿಬಿಪಿ) ಹುದ್ದೆಗಳು:

  • ಒಟ್ಟು ಪೋಸ್ಟ್ಗಳು- 819
  • ಕೆಲಸ ಮಾಡುವ ಸ್ಥಳ- ಭಾರತದ ಎಲ್ಲ ಕಡೆ
  • ಹುದ್ದೆಯ ಹೆಸರು- ಕಾನ್ಸ್ಟೆಬಲ್ (ಕಿಚನ್ ಸರ್ವೀಸ್)
  • ತಿಂಗಳಿಗೆ ಸ್ಯಾಲರಿ ಎಷ್ಟು- 21,700- 69,100 ರೂಪಾಯಿ

ವಿದ್ಯಾರ್ಹತೆ:

10ನೇ ತರಗತಿ ಪೂರ್ಣಗೊಳಿಸಿರಬೇಕು

ವಯಸ್ಸಿನ ಮಿತಿ:

18 ರಿಂದ 25 ವರ್ಷದ ಒಳಗಿನ ಯುವಕರು

ಅರ್ಜಿ ಶುಲ್ಕ:

  • ಜನೆರಲ್ ಅಭ್ಯರ್ಥಿಗಳು- 100 ರೂಪಾಯಿಗಳು
  • ಮಹಿಳೆಯರು, ಎಸ್ಸಿ, ಎಸ್ಟಿ, ಮಾಜಿ ಸೈನಿಕರಿಗೆ ಶುಲ್ಕ ಇಲ್ಲ

ಅಭ್ಯರ್ಥಿಗಳು ಶುಲ್ಕವನ್ನು ಆನ್ಲೈನ್ ಮೂಲಕ ಸಲ್ಲಿಸಬೇಕು.

ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ..?

  • ದೈಹಿಕ ಸಹಿಷ್ಣುತೆ ಪರೀಕ್ಷೆ (ಪಿಇಟಿ)
  • ದೈಹಿಕ ಸಾಮರ್ಥ್ಯ ಪರೀಕ್ಷೆ (ಪಿಎಸ್ಟಿ)
  • ಲಿಖಿತ ಪರೀಕ್ಷೆ ನಡೆಸಲಾಗುತ್ತದೆ
  • ದಾಖಲೆಗಳ ಪರಿಶೀಲನೆ
  • ವೈದ್ಯಕೀಯ ಪರೀಕ್ಷೆ ನಂತರ ಸಂದರ್ಶನ

ಅಪ್ಲೇ ಮಾಡುವುದು ಹೇಗೆ..?

ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್ (ಐಟಿಬಿಪಿ) ಲಿಂಕ್ ಅನ್ನು ಕ್ಲಿಕ್ ಮಾಡಬೇಕು. ಫಾರ್ಮ್ನಲ್ಲಿ ಎಲ್ಲವನ್ನು ಸಂಪೂರ್ಣವಾಗಿ ಭರ್ತಿ ಮಾಡಿ. ಫೋಟೋ, ಸಹಿನ್ ಸೇರಿ ಎಲ್ಲ ದಾಖಲೆಗಳನ್ನು ಸ್ಕ್ಯಾನ್ ಮಾಡಬೇಕು. ಶುಲ್ಕವನ್ನು ಪಾವತಿಸಿ, ಬಳಿಕ ಸಬ್ಮೀಟ್ ಮಾಡಿದ ನಂತರ ಅರ್ಜಿಯ ನಂಬರ್ ಅಥವಾ ರಿಕ್ವೆಸ್ಟ್ ನಂಬರ್ ಅಭ್ಯರ್ಥಿಗಳು ಪಡೆಯಲೇಬೇಕು. ಇಲ್ಲದಿದ್ದರೇ ಅರ್ಜಿ ಕ್ಯಾನ್ಸಲ್ ಆಗುತ್ತದೆ.

ಆನ್ಲೈನ್ನಲ್ಲಿ ಅಪ್ಲೇ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ-

https://recruitment.itbpolice.nic.in/rect/index.php

ಇಲಾಖೆಯ ವೆಬ್ಸೈಟ್: 

recruitment.itbpolice.nic.in

ಅತಿ ಮುಖ್ಯವಾದ ದಿನಾಂಕಗಳು ಯಾವುವು..?

  • ಅರ್ಜಿ ಆರಂಭದ ದಿನಾಂಕ- 02-09-2024
  • ಅರ್ಜಿ ಕೊನೆಯ ದಿನಾಂಕ- 01-10-2024

Post a Comment

Previous Post Next Post
CLOSE ADS
CLOSE ADS
×