ಕೃಷಿ ಹೊಂಡ ನಿರ್ಮಿಸಲು ರೈತರಿಗೆ ಶೇ.90%ರಷ್ಟು ಸಬ್ಸಿಡಿ ಕೂಡಲೇ ಅರ್ಜಿ ಸಲ್ಲಿಸಿ

ಕೃಷಿ ಹೊಂಡ ನಿರ್ಮಿಸಲು ರೈತರಿಗೆ ಶೇ.90%ರಷ್ಟು ಸಬ್ಸಿಡಿ ಕೂಡಲೇ ಅರ್ಜಿ ಸಲ್ಲಿಸಿ

ರೈತರೇ ಕೃಷಿ ಹೊಂಡ ನಿರ್ಮಾಣಕ್ಕೆ ಕರ್ನಾಟಕದಾದ್ಯಂತ ಅರ್ಜಿ ಆಹ್ವಾನವನ್ನು ಮಾಡಲಾಗಿದೆ ಈಗಾಗಲೇ ಕೆಲವೊಂದು ಪ್ರದೇಶಗಳಲ್ಲಿ ಅರ್ಜಿಯನ್ನು ಕರೆದು ಈಗಾಗಲೇ ಕೃಷಿ ಹೊಂಡಗಳ ಕೆಲಸಗಳನ್ನು ಪೂರ್ಣಗೊಳಿಸಲಾಗಿದೆ , ಹಾಗೂ ಇನ್ನು ಕೆಲವೇ ಕೃಷಿ ಹೊಂಡ ಅರ್ಜಿಗಳನ್ನು ಕರೆದಿಲ್ಲ ಹಾಗೂ ಕೆಲವೊಂದು ಕಡೆ ಈಗಾಗಲೇ ಅರ್ಜಿಗಳನ್ನು ಕರೆದಿದ್ದಾರೆ ನೀವು ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಮಾಹಿತಿಯನ್ನು ಪಡೆದುಕೊಳ್ಳಬಹುದು.



ಕೃಷಿ ಹೊಂಡದ ಅರ್ಜಿಗಳು?

ಕರ್ನಾಟಕದಲ್ಲಿ ಮಳೆ ಕಡಿಮೆ ಆಗಿರುವ ಕಾರಣ ಪ್ರತಿಯೊಬ್ಬರು ಅದರಲ್ಲಿಯೂ ಉತ್ತರ ಕರ್ನಾಟಕದ ಭಾಗಗಳಲ್ಲಿ ಬಹಳಷ್ಟು ಜನರು ಕೃಷಿ ಹೊಂಡಗಳ ನಿರ್ಮಾಣ ಅತಿ ಹೆಚ್ಚಾಗಿ ಮಾಡುತ್ತಾರೆ ಏಕೆಂದರೆ ಇಲ್ಲಿ ನೀರಿನ ಕಡಿಮೆ ಪ್ರಮಾಣ ಇರುವುದರಿಂದ ಹಾಗೂ ಮಳೆಯು ಕಡಿಮೆಯಾಗುವುದರಿಂದಾಗಿ ರೈತ ಬಾಂಧವರು ಏನು ಮಾಡುತ್ತಾರೆಂದರೆ ಮಳೆ ಹೆಚ್ಚಾದಾಗ ಮತ್ತು ಬೋರ್ವೆಲ್ ಅಥವಾ ಬಾಯಿಗಳಿಗೆ ನೀರು ಹೆಚ್ಚು ಇದ್ದಾಗ ಅದನ್ನು ತಮ್ಮ ಕೃಷಿಗೊಂಡಗಳಲ್ಲಿ ಶೇಖರಣೆ ಇಟ್ಟುಕೊಂಡು ನಂತರದ ದಿನಗಳಲ್ಲಿ ಬೆಳೆಗಳಿಗೆ ನೀರು ಇಲ್ಲದೆ ಸಮಯದಲ್ಲಿ ಅವುಗಳನ್ನು ಬಳಸುವ ಪದ್ಧತಿಯಲ್ಲಿ ಕೃಷಿ ಹೊಂಡಗಳ ನಿರ್ಮಾಣಗಳನ್ನು ಮಾಡುತ್ತಾರೆ.

ಕೃಷಿ ಭಾಗ್ಯ ಯೋಜನೆ ಅಡಿ ಕೃಷಿ ಹೊಂಡ?

ಮೊದಲು ಸ್ವಲ್ಪ ದಿನಗಳ ಹಿಂದೆ ಕೃಷಿ ಭಾಗ್ಯ ಯೋಜನೆಯನ್ನು ಘೋಷಣೆ ಮಾಡಲಾಗಿತ್ತು ನಂತರದ ಬಿಜೆಪಿ ಸರ್ಕಾರ ಅದನ್ನು ಬಂದು ಮಾಡಿ ನಂತರದ ದಿನಗಳಲ್ಲಿ ಮತ್ತೆ ಅದನ್ನು ಕಾಂಗ್ರೆಸ್ ಸರ್ಕಾರ ಚಾಲನೆ ಮಾಡಿದೆ ಕೃಷಿ ಭಾಗ್ಯ ಯೋಜನೆ ಅಡಿ ಅರ್ಹ ರೈತ ಬಾಂಧವರಿಗೆ ಕೃಷಿ ಹೊಂಡ ನಿರ್ಮಾಣ ಮಾಡಿಕೊಡಲಾಗುವುದು ಎಂದು ಪ್ರಕಟಣೆಯಲ್ಲಿ ಘೋಷಣೆ ಮಾಡಿತ್ತು ಮತ್ತು ಮಾಡಿಕೊಂಡಂತೆ ನಡೆದುಕೊಂಡಿದೆ.

ಕೃಷಿ ಭಾಗ್ಯ ಯೋಜನೆ ಉದ್ದೇಶಗಳೇನು?

ಇದರ ಮೊದಲ ಉದ್ದೇಶ ಕರ್ನಾಟಕದಾದ್ಯಂತ ಬರಗಾಲ ಹೆಚ್ಚಾಗಿದ್ದು ಬರಪೇಡಿದ ಜಿಲ್ಲೆಗಳಲ್ಲಿ ಮಾತ್ರ ಕೃಷಿ ಭಾಗ್ಯ ಯೋಜನೆಯನ್ನು ಜಾರಿಗೆ ತರಲಾಗಿದೆ ಹಾಗೂ ಬರಗಾಲದಿಂದ ಬೆಳೆಗಳು ಹಾನಿಗೆ ಒಳಗಾಗುತ್ತವೆ ಹೀಗಾಗಿ ಅದರಿಂದ ತಪ್ಪಿಸಿಕೊಳ್ಳಲು ರೈತ ಬಾಂಧವರಿಗೆ ಸಹಾಯವಾಗಲು ಕೃಷಿ ಹೊಂಡ ನಿರ್ಮಾಣವನ್ನು ಮಾಡಲಾಗುತ್ತದೆ. ಕಡಿಮೆ ನೀರಿನ ಪ್ರದೇಶಗಳಲ್ಲಿ ಹೆಚ್ಚಿನ ಅವಶ್ಯಕತೆ ಕೃಷಿ ಹೊಂಡಗಳಿಗೆ ಇರುವ ಕಾರಣ ಬರಪೇಡಿದ ಜಿಲ್ಲೆಗಳಲ್ಲಿ ಮಾತ್ರ ಕೃಷಿ ಹೊಂಡಗಳನ್ನು ನಿರ್ಮಾಣ ಮಾಡಲು ಕೃಷಿ ಭಾಗ್ಯ ಯೋಜನೆ ಅಡಿಯಲ್ಲಿ ಅರ್ಹ ಪ್ರದೇಶಗಳೆಂದು ನಿಗದಿ ಮಾಡಲಾಗಿರುತ್ತದೆ.

ಕೃಷಿ ಭಾಗ್ಯ ಯೋಜನೆ ಅಡಿಯಲ್ಲಿ ಸಿಗುವ ಸೌಲಭ್ಯಗಳು ಹಾಗೂ ಸಹಾಯಧನಗಳು?

ಇದರಲ್ಲಿ ಕ್ಷೇತ್ರ ಬದು ನಿರ್ಮಾಣ ನೀರು ಸಂಗ್ರಹಣ ಕೃಷಿ ಹೊಂಡ ನಿರ್ಮಾಣ ಮಾಡುವುದು ಹಾಗೂ ನೀರು ಇಂಗದಂತೆ ಮಾಡಲು ಕೃಷಿ ಹೊಂಡಕ್ಕೆ ತಡಪಲ್ ಫಲಿತ ಅದಿಕ್ಕೆ ಹಾಗೂ ಕೃಷಿಹೊಂಡದ ಸುತ್ತಮುತ್ತಲು ಪ್ರಾಣಿಗಳ ಇಂದ ರಕ್ಷಣೆ ಮಾಡಲು ತಂತಿ ಬೇಲಿ ಹಾಗೂ ಹೊಂಡದಿಂದ ಕೃಷಿಯಲ್ಲಿ ನೀರು ಬಳಕೆ ಮಾಡಲು ಪೆಟ್ರೋಲ್ ಅಥವಾ ಡೀಸೆಲ್ ಇಂಜಿನ್ ಹಾಗೂ ನೀರು ಹಾಯಿಸಲು ಸೂಕ್ಷ್ಮ ನೀರಾವರಿ ಎಲ್ಲವೂ ಒಂದು ಪ್ಯಾಕೇಜ್ ಮಾದರಿಯಲ್ಲಿ ಸಾಯದನವನ್ನು ನೀಡಲಾಗುವುದು.

ಯಾವ ಕೆಲಸಕ್ಕೆ ಎಷ್ಟು ಸಹಾಯಧನ ಇರುತ್ತದೆ?

ಮೊದಲಿಗೆ ಕ್ಷೇತ್ರ ಬದು ನಿರ್ಮಾಣ ಕ್ಷೇತ್ರದ ನಿರ್ಮಾಣ ಮಾಡಲು ಸಾಮಾನ್ಯ ವರ್ಗದ ರೈತರಿಗೆ 80ರಷ್ಟು ಸಾಧನ ಇರುತ್ತದೆ ಹಾಗೂ ಪರಿಸ್ಥಿತಿ ಜಾತಿ ಪರಿಷ್ಠಿತ ಪಂಗಡದ ರೈತರಿಗೆ 90 ರಷ್ಟು ಸಹಾಯದನ ಇರುತ್ತದೆ. ಕೃಷಿಯಲ್ಲಿ ನೀರು ಸಂಗ್ರಹಣ ಕೃಷಿ ಹೊಂಡ ನಿರ್ಮಾಣ ಮಾಡಲು ಹಾಗೂ ನೀರು ಇಂಗದಂತೆ ತಡಪಲ್ ಹಾಕುವುದು ಇದಕ್ಕೂ ಸಹ ಸಾಮಾನ್ಯ ವರ್ಗದ ರೈತರಿಗೆ 80ರಷ್ಟು ಸಹಾಯಧನ ಹಾಗೂ ಪರಿಷ್ಠಿತ ಜಾತಿ ಪರಿಷ್ಠಿತ ಪಂಗಡದ ರೈತರಿಗೆ 90ರಷ್ಟು ಸಹಾಯಧನ ಇರುತ್ತದೆ ಹಾಗೂ ಇದಾದ ನಂತರ ಕೃಷಿಹೊಂಡದ ಸುತ್ತಮುತ್ತಲು ತಂತಿ ಮೇಲೆ ಹಾಕುವುದು ಹಾಗೂ ಡೀಸೆಲ್ ಹಾಗೂ ಪೆಟ್ರೋಲ್ ಪಂಪ್ ಸೆಟ್ ಯಾವುದಾದರೂ ಒಂದನ್ನು ನೀಡಲು ಸಾಮಾನ್ಯ ವರ್ಗದ ರೈತರಿಗೆ 40ರಷ್ಟು ಸಹಾಯಧನ ಇದ್ದು ಹಾಗೂ ಉಳಿದ ರೈತ ಬಾಂಧವರಿಗೆ 50ರಷ್ಟು ಸಹಾಯಧನ ಇದೆ.

ಇದಾದ ನಂತರ ಕೃಷಿ ಹೊಂಡದಿಂದ ಬೆಳೆಗಳಿಗೆ ನೀರು ಹಾಯಿಸಲು ಸೂಕ್ಷ್ಮ ನೀರಾವರಿ ಯೋಜನೆ ಅಡಿ ಸಾಮಾನ್ಯ ವರ್ಗದ ರೈತರಿಗೆ 90ರಷ್ಟು ಹಾಗೂ ಉಳಿದ ರೈತರಿಗೂ 90ರಷ್ಟು ಸಹಾಯಧನವನ್ನು ನೀಡುವ ಮೂಲಕ ಒಟ್ಟಾರೆಯಾಗಿ ಒಂದು ಪ್ಯಾಕೇಜ್ ಮಾದರಿಯಲ್ಲಿ ಇದರಲ್ಲಿ ಎಲ್ಲಾ ರೀತಿಯ ಸಹಾಯಧನಗಳನ್ನು ನೀವು ಒಮ್ಮೆಲೇ ಒಂದೇ ಸಮಯಕ್ಕೆ ಪಡೆಯಬಹುದು.

ಫಲಾನುಭವಿಗಳ ಅರ್ಜಿಗಳನ್ನು ಆಯ್ಕೆ ಮಾಡುವುದು ಹೇಗೆ ಇರುತ್ತದೆ?

ಹವಮಾನ ವಲಯದ ಯಾವುದೇ ಆಸಕ್ತಿ ಹೊಂದಿರುವ ರೈತ ಬಾಂಧವರು ಅರ್ಜಿಯನ್ನು ನೀಡಲು ಮುಂದೆ ಬಂದರೆ ಅಂತಹ ರೈತರಿಂದ ಅರ್ಜಿಯನ್ನು ಸ್ವೀಕರಿಸಬೇಕು ಹಾಗೂ ಜೇಷ್ಠತೆ ಆಧಾರದ ಮೇಲೆ ರೈತ ಸಂಪರ್ಕ ಕೇಂದ್ರಗಳಲ್ಲಿ ಅರ್ಜಿಯನ್ನು ಸ್ವೀಕಾರ ಮಾಡಲಾಗುವುದು ಹಾಗೂ ಪಿಎಂ ಕಿಸಾನ್ ತಂತ್ರಾಂಶದಲ್ಲಿ ನೋಂದಣಿಯಾಗಿ ಆಯ್ಕೆಯಾದ ಅರ್ಹ ಅರ್ಜಿಗಳ ಜಷ್ಟತೆ ಆಧಾರದ ಮೇಲೆ ನಿಮಗೆ ಕೃಷಿಹೊಂಡದ ನಿರ್ಮಾಣದ ಅರ್ಹ ಫಲಾನುಭವಿಗಳ ಆಯ್ಕೆಯನ್ನು ಮಾಡಲಾಗುವುದು.

ರೈತರು ಜಮೀನು ಸಾಗುವಳಿ ಮಾಡುವ ಒಂದು ಸರ್ವೆ ನಂಬರ್ ನಲ್ಲಿ ಕನಿಷ್ಠ ಒಂದು ಎಕರೆ ಜಮೀನು ಇರಬೇಕು ಅಂತ ರೈತರಿಗೆ ಮಾತ್ರ ಇದರ ಅರ್ಹತೆಯನ್ನು ಪಡೆಯಬಹುದು ಹಾಗೂ ಹಿಂದಿನ ಸಾಲುಗಳಲ್ಲಿ ಕೃಷಿಭಾಗ್ಯ ಯೋಜನೆ ಅಥವಾ ಯೋಜನೆ ಅಡಿ ಕೃಷಿ ಹೊಂಡದ ಫಲಾನುಭವಿಗಳೆಂದು ಕಾಣಿಸಿಕೊಳ್ಳಬಾರದು ಅಂದರೆ ಅದರ ಫಲಾನುಭವಿಗಳಾಗಿರಬಾರದು ಅಂದರೆ ಕೃಷಿ ಹೊಂಡ ಹಿಂದಿನ ದಿನಗಳಲ್ಲಿ ಮಾಡಿಕೊಂಡಿರಬಾರದು.

ಕೃಷಿ ಹೊಂಡ ಅಪ್ರುವಲ್ ಆದ ನಂತರ ಪ್ರಕ್ರಿಯೆಗಳು ಏನು?

ರೈತ ಸಂಪರ್ಕ ಕೇಂದ್ರದ ಪರಿಶೀಲನ ವರದಿಯಲ್ಲಿ ಆಯ್ಕೆ ಮಾಡಿದ ಅರ್ಹ ಫಲಾನುಭವಿಗಳನ್ನು ಕೃಷಿಹೊಂಡದ ಅಂದಾಜು ವೆಚ್ಚವನ್ನು ಕೆ ಕಿಸಾನ್ ತಂತ್ರಾಂಶದಲ್ಲಿ ನೀಡುವುದು ಹಾಗೂ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ತಂತ್ರಾಂಶದಲ್ಲಿ ರೈತರ ಅರ್ಜಿಯನ್ನು ಪರಿಶೀಲಿಸಿ ನಂತರದ ಕಾರ್ಯವನ್ನು ಮುಂದುವರಿಸುವುದು ಹಾಗೂ ಕಾರ್ಯವನ್ನು ನೀಡಿದ ನಂತರ ಕೃಷಿಭಾಗ್ಯ ಪ್ಯಾಕೇಜ್ ಮಾದರಿ ಕುರಿತು ರೈತರಿಗೆ ಮಾಹಿತಿ ನೀಡಿ ಅದರಂತೆ ಘಟಕ ಕ್ಷೇತ್ರ ಬಹುದು ನಿರ್ಮಾಣ ಕೃಷಿ ಹೊಂಡ ಪಾಲಿಟಿ ನೋಡಿ ಸೋಲಾರ್ ಪಂಪ್ಸೆಟ್ ಹಾಗೂ ಸೂಕ್ಷ್ಮ ನೀರಾವರಿ ಅಳವಡಿಕೆಯನ್ನು ಕ್ರಮವಾಗಿ ಅನುಷ್ಠಾನಗೊಳಿಸುವುದು ಹಾಗೂ ಘಟಕಗಳ ಅನುಷ್ಠಾನಕ್ಕೆ ತಂತ್ರಾಂಶದಲ್ಲಿ ನೀಡಿರುವ ವೇಳಾಪಟ್ಟಿ ಅನ್ವಯವಾಗಿ ಕ್ಷೇತ್ರದ ಜಿಪಿಎಸ್ ಫೋಟೋಗಳನ್ನು ತೆಗೆದುಕೊಳ್ಳಬೇಕು ಮತ್ತು ದಾಖಲೆಗಳೊಂದಿಗೆ ದಾಖಲಿತಯಿಸಬೇಕು.

ಜಿಲ್ಲೆವಾರು ನಿಗದಿಪಡಿಸಿರುವ ಒಂದು ವರ್ಷದ ಕಾರ್ಯಕ್ರಮ ಅನ್ವಯ ರೈತರಿಂದ ಅರ್ಜಿಗಳನ್ನು ಪಡೆದು ವಿವರಗಳನ್ನು ತಂತ್ರಾಂಶದಲ್ಲಿನೊಂದಹಿಸಿ ನಂತರ ಕ್ಷೇತ್ರ ಪರಿಶೀಲನೆ ಕೈಗೊಂಡು ಜೇಷ್ಠತೆ ಆಧಾರದ ಮೇಲೆ ಅರ್ಹ ರೈತರಿಗೆ ಕಡ್ಡಾಯವಾಗಿ ತಂತ್ರಾಂಶದ ಮೂಲಕವೇ ಕಾರ್ಯಾ ದೇಶವನ್ನು ನೀಡಬೇಕು.

ಎಷ್ಟು ಉದ್ದ ಮತ್ತು ಅಗಲದ ಕೃಷಿ ಹೊಂಡಗಳನ್ನು ಮಾಡಿಕೊಳ್ಳಬಹುದ??

ಕೃಷಹೊಂಡದ ಅಳತೆಯನ್ನು ನಾವು ನೋಡುವುದಾದರೆ 10 ಮೀಟರ್ ಉದ್ದ ಮತ್ತು 10 ಮೀಟರ್ ಅಗಲ ಮೂರು ಮೀಟರ್ ಎತ್ತರದ ಕೃಷಿ ಹೊಂಡವನ್ನು ಮಾಡಿಕೊಳ್ಳಬಹುದು. ಅದೇ ರೀತಿಯಾಗಿ 12 ಮೀಟರ್ ಉದ್ದ 12 ಮೀಟರ್ ಅಗಲ ಹಾಗೂ ಮೂರು ಮೀಟರ್ ಎತ್ತರದ ಕೃಷಿ ಹೊಂಡವನ್ನು ಮಾಡಿಕೊಳ್ಳಬಹುದು. ಅದೇ ರೀತಿಯಾಗಿ 15 ಮೀಟರ್ ಅಗಲ 15 ಮೀಟರ್ ಉದ್ದ ಮತ್ತು 3 ಮೀಟರ್ ಎತ್ತರದ ಕೃಷಿ ಹೊಂಡವನ್ನು ಮಾಡಿಕೊಳ್ಳಬಹುದು. ಅದೇ ರೀತಿಯಾಗಿ 18 ಮೀಟರ್ ಉದ್ದ 18 ಮೀಟರ್ ಅಗಲ ಹಾಗೂ 3 m ಎತ್ತರದ ಕೃಷಿ ಹೊಂಡವನ್ನು ಮಾಡಿಕೊಳ್ಳಬಹುದು. ಅದಾದ ನಂತರ ಅತ್ಯಂತ ದೊಡ್ಡ ಕೃಷಿ ಹೊಂಡ 21 ಮೀಟರ್ ಅಗಲ ಹಾಗೂ 21m ಉದ್ದ ಹಾಗೂ ಎತ್ತರ ಮೂರು ಮೀಟರ್ ಕೃಷಿ ಹೊಂಡವನ್ನು ನೀವು ಕೃಷಿ ಭಾಗ್ಯ ಯೋಜನೆ ಅಡಿಯಲ್ಲಿ ಮಾಡಿಕೊಳ್ಳಬಹುದು.

ಯಾವ ಕೃಷಿ ಹೊಂಡಕ್ಕೆ ಯಾವ ತಾರ್ಪಲ್ ನೀಡುತ್ತಾರೆ?

10 ಮೀಟರ್ ಉದ್ದ 10 ಮೀಟರ್ ಅಗಲ 3 ಮೀಟರ್ ಎತ್ತರ ಇದಕ್ಕೆ 250 ಮೈಕ್ರಾನ್ ಅಥವಾ 420 gsm ಪಾಲಿಥಿನ್ ತಡಪಲ್ಲನ್ನು ನೀಡಲಾಗುತ್ತದೆ. 12 ಮೀಟರ್ ಉದ್ದ 12 ಮೀಟರ್ ಅಗಲ 3 ಮೀಟರ್ ಎತ್ತರ ಹಾಗೂ 15 ಮೀಟರ್ ಉದ್ದ 15 ಮೀಟರ್ ಅಗಲ ಹಾಗೂ 3 m ಎತ್ತರ ಕೃಷಿ ಹೊಂಡಕ್ಕೂ ಇದೇ ತಡಪಲ್ಲನ್ನು ನೀಡಲಾಗುವುದು ಹಾಗೂ ಇನ್ನೂ ಉಳಿದ ಎರಡು ರೀತಿಯ ಕೃಷಿ ಹೊಂಡಗಳು 18 ಮೀಟರ್ ಹಾಗೂ 21 ಮೀಟರ್ ಕೃಷಿ ಹೊಂಡಕ್ಕೆ ಕಡ್ಡಾಯವಾಗಿ 420 gsm ಪಾಲಿಥಿನ್ ಹೊದಿಕೆಯನ್ನು ನೀಡಲಾಗುತ್ತದೆ.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಏನು?

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳೇನೆಂದರೆ ಸರ್ವೇಸಾಮಾನ್ಯವಾಗಿ ಪ್ರತಿಯೊಂದು ಸರ್ಕಾರದ ಯೋಜನೆಗಳು ಅದ್ರಲ್ಲಿ ಕೃಷಿ ಇಲಾಖೆಗೆ ಸಂಬಂಧಪಟ್ಟ ಯೋಜನೆಗಳನ್ನು ಪಡೆಯಬೇಕಾದರೆ ಕಡ್ಡಾಯವಾಗಿ ನಿಮ್ಮ ಪಹಣಿ ಪತ್ರ ಬೇಕು ಅದಾದ ನಂತರ ಆಧಾರ್ ಕಾರ್ಡ್ ತೆಗೆದುಕೊಂಡು ಹೋಗಬೇಕು, ನಂತರ ಒಂದು ತಲಾಟಿಸಟ್ ಅಥವಾ ಖಾತೆ ಉತಾರಿಯನ್ನು ಬರೆದುಕೊಂಡು ಹೋಗಬೇಕು ಇದಾದ ನಂತರ ಒಂದು ಜಮೀನಿನ ಪಹಣಿ ಪತ್ರ ಹಾಗೂ ಬ್ಯಾಂಕ್ ಪಾಸ್ ಪುಸ್ತಕ ಹಾಗೂ ಎರಡು ಭಾವಚಿತ್ರಗಳನ್ನು ತೆಗೆದುಕೊಂಡು ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ಬೇಗನೆ ಅರ್ಜಿಯನ್ನು ಕೊಡಬೇಕಾಗುತ್ತದೆ ಮೊದಲು ಅರ್ಜಿ ಕೊಟ್ಟಿದವರಿಗೂ ಜೇಷ್ಠತೆ ಆಧಾರದ ಮೇಲೆ ಅರ್ಜಿಯನ್ನು ಸೆಲೆಕ್ಟ್ ಮಾಡಬಹುದು ಅಥವಾ ಮಾಡದೇನು ಇರಬಹುದು.

ಒಂದು ವೇಳೆ ನಿಗದಿತ ಅರ್ಜಿಗಳಿಗಿಂತ ಹೆಚ್ಚಿನ ಅರ್ಜಿಗಳು ಬಂದರೆ ಆ ಅರ್ಜಿಗಳನ್ನು ಲಾಟರಿ ಎತ್ತುವ ಮೂಲಕ ಅರ್ಜಿಗಳನ್ನು ಆಯ್ಕೆ ಮಾಡಲಾಗುತ್ತದೆ ಅರ್ಜಿಯನ್ನು ಆಯ್ಕೆ ಮಾಡಿದ ನಂತರ ಮೇಲೆ ತಿಳಿಸಿದಂತೆ ಮುಂದಿನ ಕಾರ್ಯಗಳು ಪ್ರಾರಂಭವಾಗುತ್ತವೆ. ನೀವು ಕೂಡ ಇದುವರೆಗೆ ಯಾವುದೇ ರೀತಿಯ ಕೃಷಿ ಇಲಾಖೆ ಸೌಲಭ್ಯಗಳು ಪಡೆದುಕೊಂಡರೆ ಇದ್ದಲ್ಲಿ ಹಿಂದೆ ಹೋಗಿ ಕೃಷಿ ಇಲಾಖೆಗೆ ಅರ್ಜಿಯನ್ನು ಕೊಟ್ಟು ಬನ್ನಿ ಹಾಗೂ ಮೊದಲ ಬಾರಿಗೆ ನಿಮ್ಮ ಜಮೀನಿಗೆ ಕೃಷಿ ಹೊಂಡವನ್ನು ಸರ್ಕಾರದ ಯೋಜನೆ ಅಡಿಯಲ್ಲಿ ಪಡೆದುಕೊಂಡು ನಿರ್ಮಾಣ ಮಾಡಿಕೊಳ್ಳಿ.


Post a Comment

Previous Post Next Post
CLOSE ADS
CLOSE ADS
×