ನಿಮ್ಮ ಏರಿಯಾದಲ್ಲಿ BSNL 4G ನೆಟ್ ವರ್ಕ್ ಸಿಗುತ್ತಿದ್ದಿಯಾ ಎಂದು ಕಂಡುಹಿಡಿಯುವುದು ಹೇಗೆ?

ನಿಮ್ಮ ಏರಿಯಾದಲ್ಲಿ BSNL 4G ನೆಟ್ ವರ್ಕ್ ಸಿಗುತ್ತಿದ್ದಿಯಾ ಎಂದು ಕಂಡುಹಿಡಿಯುವುದು ಹೇಗೆ?

ಈಗ ಎಲ್ಲಾ ಟೆಲಿಕಾಂ ಕಂಪನಿಗಳು ರೀಚಾರ್ಜ್ ದರವನ್ನು ಏರಿಕೆ ಮಾಡಿರುವುದರಿಂದ ಈಗ ಜನರು ಬಿಎಸ್ಎನ್ಎಲ್ ನತ್ತ ಮುಖ ಮಾಡುತ್ತಾ ಇದ್ದರೆ. ಸಧ್ಯದಲ್ಲಿ ಬಿಎಸ್ಎನ್ಎಲ್ 4G ಸೇವೆಯನ್ನು ನೀಡುತ್ತಿದೆ. ನೀವು ಸಹ ಬಿಎಸ್ಎನ್ಎಲ್ ಬಳಸುವರಾಗಿದ್ದರೆ ಅಥವಾ ಯಾವ ಪ್ರದೇಶದಲ್ಲಿ ಬಿಎಸ್ಎನ್ಎಲ್ 4G ನೆಟ್ವರ್ಕ್ ಸಿಗುತ್ತದೆ ಎಂಬುದನ್ನು ನೀವು ತಿಳಿಯುವ ಸರಳ ವಿಧಾನದ ಬಗ್ಗೆ ಮಾಹಿತಿ ಇಲ್ಲಿದೆ.



ನಿಮ್ಮ ಪ್ರದೇಶದಲ್ಲಿ ಬಿಎಸ್ಎನ್ಎಲ್ 4G ನೆಟ್ವರ್ಕ್ ಬರುತ್ತದೆ ಅಥವಾ ಇಲ್ಲ ಎಂಬುದನ್ನು ಈ ಸರಳ ವಿಧಾನದಲ್ಲಿ ತಿಳಿಯಿರಿ.

  • ಹಂತ 1:- ನೀವು 4g network ಪ್ರದೇಶಗಳ ಬಗ್ಗೆ ತಿಳಿಯಲು ನೋಡಲು ನೀವು ಗೂಗಲ್ ಗೆ ತೆರಳಬೇಕು.
  • ಹಂತ 2:- nPerf BSNL ಎಂದು ಟೈಪ್ ಮಾಡಿ ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಬೇಕು.
  • ಹಂತ 3:- nperf ವೆಬ್‌ಸೈಟ್‌ಗೆ ತೆರಳಿ.
  • ಹಂತ 4:- ಬಳಿಕ ನೀವು ನಿಮ್ಮ ದೇಶ ಅಥವಾ ಪ್ರದೇಶವನ್ನು ಆಯ್ಕೆಮಾಡಬೇಕು ಹಾಗೂ ಇದರ ಜೊತೆಗೆ ನಿಮ್ಮ ನೆಟ್‌ವರ್ಕ್ ಆಪರೇಟರ್ ಅನ್ನು ಆಯ್ಕೆಮಾಡಬೇಕಾಗುತ್ತದೆ. ಉದಾಹರಣೆಗೆ ಭಾರತ ಮತ್ತು ಬಿ.ಎಸ್.ಎನ್.ಎಲ್ ಎಂಬ ಆಯ್ಕೆ ಮಾಡಬೇಕು.
  • ಹಂತ 5:- ಬಳಿಕ ನಿಮಗೆ ನೀವು ಆಯ್ಕೆ ಮಾಡಿರುವ ದೇಶದಲ್ಲಿ ಯಾವ ಯಾವ ಭಾಗದಲ್ಲಿ BSNL 4G ನೆಟ್‌ವರ್ಕ್‌ ಸಿಗುತ್ತದೆ ಎಂಬ ಎಲ್ಲಾ ಪ್ರದೇಶಗಳನ್ನು ನಕ್ಷೆಯು ಈಗ ನಿಮಗೆ ಮ್ಯಾಪ್ ನಲ್ಲಿ ಕಾಣಿಸುತ್ತದೆ.
  • ಹಂತ 6: ನಿಮ್ಮ ಪ್ರದೇಶದಲ್ಲಿ ನೆಟ್ವರ್ಕ್ ಸಿಗುತ್ತದೆಯೇ ಎಂಬುದನ್ನು ತಿಳಿಯಲು ಹುಡುಕಾಟ ಬಾಕ್ಸ್‌ನಲ್ಲಿ ನಿಮ್ಮ ಪ್ರದೇಶದ ಹೆಸರನ್ನು ಟೈಪ್ ಮಾಡಿ ಮಾಹಿತಿ ಪಡೆಯಿರಿ.

ಮೇಲೆ ತಿಳಿಸಿದ ಅಂಶಗಳನ್ನು ಸರಿಯಾಗಿ ಪಾಲಿಸಿ ಹಾಗೂ ಇದನ್ನು ಖಚಿತ ಪಡಿಸಿಕೊಳ್ಳಲು ಕೆಲವು ಹಂತಗಳನ್ನು ಅನುಸರಿಸಿ.

ನೆಟ್ವರ್ಕ್ ಮಾಹಿತಿ ಪಡೆಯಲು ಈ ವಿಧಾನಗಳನ್ನು ಅನುಸರಿಸಿ 

  • ನಿಮ್ಮಲ್ಲಿ BSNL 4G ಲಭ್ಯವಿದೆ ಎಂದು ತಿಳಿದುಕೊಳ್ಳಲು ಈಗ BSNL ಗ್ರಾಹಕ ಸೇವೆಯನ್ನು 1800-180-1500 (BSNL ಫೋನ್) ಅಥವಾ 1800-345-1500 (ಇತರ ಫೋನ್‌ಗಳು) ಗೆ ಕರೆ ಮಾಡಿ. ಇದು ನಿಮಗೆ ಉಚಿತ ಸೇವೆಯನ್ನು ನೀಡುತ್ತದೆ. ಹಾಗೂ ತ್ವರಿತವಾಗಿ ನಿಮಗೆ ಮಾಹಿತಿಯನ್ನು ನೀಡಲಾಗುತ್ತದೆ.
  • ನಿಮ್ಮ ಪ್ರದೇಶದಲ್ಲಿ BSNL 4G Network ಸಿಗುತ್ತದೆ ಅಥವಾ ಇಲ್ಲ ಎಂಬುದರ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ನೀವು ನಿಮ್ಮ ಹತ್ತಿರದ BSNL ಕಚೇರಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು. 

ಕಡಿಮೆ ಮೊತ್ತದ ರೀಚಾರ್ಜ್ ಪ್ಲಾನ್ :-

BSNL 997 ರೂಗಳಿಗೆ 3GB ದೈನಂದಿನ ಡೇಟಾವನ್ನು ಒಳಗೊಂಡಂತೆ ಡೇಟಾ-ಹಸಿದ ಬಳಕೆದಾರರಿಗೆ ಅಗ್ಗ ಮತ್ತು ಅದ್ಭುತ ಯೋಜನೆ ನೀಡುತ್ತಿದೆ. ಗ್ರಾಹಕರಿಗೆ ಅನುಕೂಲ ಆಗುವ ದೃಷ್ಟಿಯಿಂದ ಈಗ ಬಿಎನ್ಎಸ್ಎಲ್ ಕಡಿಮೆ recharge ದರದಲ್ಲಿ ಹೆಚ್ಚು ಫೆಸಿಲಿಟಿ ನೀಡುತ್ತಿದೆ. ಇದರ ಜೊತೆಗೆ ಭಾರತದಲ್ಲಿ 5G ಸೇವೆಯನ್ನು ಒದಗಿಸುವ ಉದ್ದೇಶ ಮತ್ತು ಗುರಿಯನ್ನು ಬಿಎಸ್ಎನ್ಎಲ್ ಹೊಂದಿದ್ದು. ಇನ್ನು ಕೆಲವೇ ತಿಂಗಳುಗಳಲ್ಲಿ ಭಾರತದಲ್ಲಿ ಬಿಎಸ್ಎನ್ಎಲ್ 5G ಸೇವೆಯು ಬರಲಿದೆ. ಇದರ ಜೊತೆಗೆ ಬಿಎಸ್ಎನ್ಎಲ್ ತನ್ನ ವ್ಯಾಪ್ತಿಯನ್ನು ಹಳ್ಳಿ ಹಳ್ಳಿಗೂ ತೆಗೆದುಕೊಂಡು ಹೋಗಿ ನೆಟ್ವರ್ಕ್ ಸೌಲಭ್ಯ ನೀಡುತ್ತಿರೂವುದು ವಿಶೇಷ ಆಗಿದೆ.

Post a Comment

Previous Post Next Post
CLOSE ADS
CLOSE ADS
×