540 ಅರಣ್ಯ ರಕ್ಷಕರ ನೇಮಕಾತಿ: ತಾತ್ಕಾಲಿಕ ಪಟ್ಟಿ, ಅನರ್ಹರ ಪಟ್ಟಿ ಬಿಡುಗಡೆ., ಚೆಕ್‌ ಮಾಡಲು ಲಿಂಕ್ ಇಲ್ಲಿದೆ

540 ಅರಣ್ಯ ರಕ್ಷಕರ ನೇಮಕಾತಿ: ತಾತ್ಕಾಲಿಕ ಪಟ್ಟಿ, ಅನರ್ಹರ ಪಟ್ಟಿ ಬಿಡುಗಡೆ., ಚೆಕ್‌ ಮಾಡಲು ಲಿಂಕ್ ಇಲ್ಲಿದೆ

karnataka forest guard recruitment result : ಕರ್ನಾಟಕ ಫಾರೆಸ್ಟ್‌ ಡಿಪಾರ್ಟ್‌ಮೆಂಟ್‌ನ 540 ಗಾರ್ಡ್‌ ಹುದ್ದೆಗಳ ಭರ್ತಿಗೆ ಸಂಬಂಧ ಇದೀಗ ಪ್ರಾವಿಷನಲ್ ಸೆಲೆಕ್ಟ್‌ ಲಿಸ್ಟ್‌ ಹಾಗೂ ಅನರ್ಹರ ಪಟ್ಟಿ ಬಿಡುಗಡೆ ಮಾಡಿದೆ.



2023-24ನೇ ಸಾಲಿನ ಅರಣ್ಯ ಇಲಾಖೆಯ ವಿವಿಧ ವೃತ್ತದಲ್ಲಿ ಸೇರಿದಂತೆ ಒಟ್ಟು 540 ಗಸ್ತು ಅರಣ್ಯ ಪಾಲಕ (ಅರಣ್ಯ ರಕ್ಷಕ) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ಇದೀಗ ಅರಣ್ಯ ಇಲಾಖೆಯ ನೇಮಕಾತಿ ಪ್ರಾಧಿಕಾರವು ವೃತ್ತಾವಾರು ಅನರ್ಹ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ನೇಮಕ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಅಭ್ಯರ್ಥಿಗಳು ತಾತ್ಕಾಲಿಕ ಆಯ್ಕೆಪಟ್ಟಿ ಹಾಗೂ ಅನರ್ಹರ ಪಟ್ಟಿಯನ್ನು ಸಹ ಚೆಕ್‌ ಮಾಡಿಕೊಳ್ಳಬಹುದಾಗಿದೆ.

ವೃಂದ ಮತ್ತು ನೇಮಕಾತಿ ನಿಯಮ ಹಾಗೂ ಅಧಿಸೂಚನೆಯಲ್ಲಿನ ಷರತ್ತುಗಳನ್ವಯ ಈ ಲಿಸ್ಟ್‌ ಬಿಡುಗಡೆ ಮಾಡಲಾಗಿದೆ. ದೈಹಿಕ ತಾಳ್ವಿಕೆ ಪರೀಕ್ಷೆ, ದೈಹಿಕ ಕಾರ್ಯ ಸಮರ್ಥತೆ ಪರೀಕ್ಷೆ ಹಾಗೂ ದೇಹದಾರ್ಢ್ಯತೆ ಪರೀಕ್ಷೆಗಳಿಗೆ ಮೆರಿಟ್ ಹಾಗೂ ನೇರ ಮತ್ತು ಸಮತಳ ಬಿಂದುಗಳ ಅನುಸಾರ ಅರ್ಹತೆ ಪಡೆದ ಅಭ್ಯರ್ಥಿಗಳ 1:20 (ಹುದ್ದೆ:ಅಭ್ಯರ್ಥಿ) ತಾತ್ಕಾಲಿಕ ಅರ್ಹತಾ ಪಟ್ಟಿಯಲ್ಲಿ ಅನರ್ಹಗೊಂಡ ಅಭ್ಯರ್ಥಿಗಳ ಪಟ್ಟಿಯನ್ನು ಇಲಾಖೆಯ ಅಂತರ್ಜಾಲದಲ್ಲಿ ಪ್ರಕಟಿಸಲಾಗಿದೆ.

ತಾತ್ಕಾಲಿಕ ಪಟ್ಟಿಯೂ ಪ್ರಕಟ

ಅರಣ್ಯ ಇಲಾಖೆಯು ಅನರ್ಹರ ಪಟ್ಟಿ ಜತೆಗೆ ಪ್ರತಿ ಪ್ರವರ್ಗದಲ್ಲಿ ತಾತ್ಕಾಲಿಕವಾಗಿ ಆಯ್ಕೆಯಾಗಿರುವ ಕೊನೆಯ ಅಭ್ಯರ್ಥಿಯು ಗಳಿಸಿರುವ ಅಂಕಗಳ ಶೇಕಡವಾರು ಮಾಹಿತಿಯ ವಿವರವನ್ನು ಬಿಡುಗಡೆ ಮಾಡಿದೆ.

ಈ ಕುರಿತು ಯಾವುದಾದರೂ ಆಕ್ಷೇಪಣೆ ಇದ್ದಲ್ಲಿ ಪೂರಕ ದಾಖಲಾತಿಗಳೊಂದಿಗೆ ಸ್ಪಷ್ಟ ರೀತಿಯಲ್ಲಿ ಆಕ್ಷೇಪಣೆಯನ್ನು ವಿವರಿಸಿ ಆಯಾ ವೃತ್ತಕ್ಕೆ ನಿಗದಿತ ಇ-ಮೇಲ್ ವಿಳಾಸಕ್ಕೆ ಸಲ್ಲಿಸಬಹುದು. ಆಯಾ ವೃತ್ತದ ಅನರ್ಹಪಟ್ಟಿ, ತಾತ್ಕಾಲಿಕ ಪಟ್ಟಿಯ ಪಿಡಿಎಫ್‌ ಫೈಲ್‌ ಅನ್ನು https://kfdrecruitment.in/ ಗೆ ಭೇಟಿ ನೀಡಿ ಚೆಕ್‌ ಮಾಡಬೇಕು. ಇಲ್ಲಿ ಆಕ್ಷೇಪಣೆಗೆ ಇಮೇಲ್‌ ವಿಳಾಸ ಸಿಗಲಿದೆ.

ಆಕ್ಷೇಪಣೆ ಸಲ್ಲಿಸಲು ಕೊನೆ ದಿನಾಂಕ 

28-07-2024 ರ ಸಂಜೆ 05 ಗಂಟೆವರೆಗೆ.

ಈ ಮೇಲೆ ನಿಗದಿಪಡಿಸಿದ ದಿನಾಂಕದ ನಂತರ ಮತ್ತು ಈ ಮೇಲಿನ ವಿಧಾನವನ್ನು ಹೊರತುಪಡಿಸಿ ಇತರೆ ಯಾವುದೇ ವಿಧಾನ, ಕೊರಿಯರ್ ಮೂಲಕ ಸ್ವೀಕೃತವಾದ ಹಾಗೂ ಅಸ್ಪಷ್ಟ ಆಕ್ಷೇಪಣೆಯನ್ನು ಪರಿಗಣಿಸಲಾಗುವುದಿಲ್ಲ.

ಒಟ್ಟು ತಾತ್ಕಾಲಿಕವಾಗಿ ಆಯ್ಕೆಯಾದ ಅಭ್ಯರ್ಥಿಗಳು

ಬಳ್ಳಾರಿ ವೃತ್ತಕ್ಕೆ 28, ಕಲಬುರಗಿ ವೃತ್ತಕ್ಕೆ 26, ಮಂಗಳೂರು ವೃತ್ತಕ್ಕೆ 57, ಹಾಸನ ವೃತ್ತಕ್ಕೆ 18, ಮೈಸೂರು ವೃತ್ತಕ್ಕೆ 47, ಬೆಳಗಾವಿ ವೃತ್ತಕ್ಕೆ 12, ಬೆಂಗಳೂರು ವೃತ್ತಕ್ಕೆ 49, ಕೆನರಾ ವೃತ್ತಕ್ಕೆ 58, ಧಾರವಾಡ ವೃತ್ತಕ್ಕೆ 05, ಚಾಮರಾಜನಗರ ವೃತ್ತದ 83, ಚಿಕ್ಕಮಗಳೂರು ವೃತ್ತಕ್ಕೆ 52 ಅಭ್ಯರ್ಥಿಗಳು ತಾತ್ಕಾಲಿಕವಾಗಿ ಆಯ್ಕೆ ಆಗಿದ್ದಾರೆ.

ಅಭ್ಯರ್ಥಿಗಳು ಅರಣ್ಯ ಇಲಾಖೆ ನೇಮಕಾತಿ ಪೋರ್ಟಲ್ https://kfdrecruitment.in ಗೆ ಭೇಟಿ ನೀಡಿ ಗಸ್ತು ಅರಣ್ಯ ಪಾಲಕ (ಅರಣ್ಯ ರಕ್ಷಕ) ಹುದ್ದೆಗಳ ತಾತ್ಕಾಲಿಕ ಪಟ್ಟಿ, 1:20 ಪಟ್ಟಿಯಲ್ಲಿ ಅನರ್ಹಗೊಂಡವರ ಪಟ್ಟಿಯನ್ನು ತಮ್ಮ ವೃತ್ತದ ಅಧಿಕೃತ ಲಿಂಕ್ ಕ್ಲಿಕ್ ಮಾಡುವ ಮೂಲಕ ಚೆಕ್‌ ಮಾಡಬಹುದು.

ಅರಣ್ಯ ರಕ್ಷಕರ ಹುದ್ದೆಗೆ ಶೈಕ್ಷಣಿಕ ಅರ್ಹತೆ

ದ್ವಿತೀಯ ಪಿಯುಸಿ ಅಥವಾ ತತ್ಸಮಾನ ಶೈಕ್ಷಣಿಕ ಅರ್ಹತೆ ಪಾಸ್‌ ಮಾಡಿರಬೇಕು.

ಅರಣ್ಯ ರಕ್ಷಕರ ಹುದ್ದೆಗೆ ವಯಸ್ಸಿನ ಅರ್ಹತೆ

ಅಭ್ಯರ್ಥಿಯು ಕನಿಷ್ಠ 18 ವರ್ಷ ಪೂರೈಸಿರಬೇಕು. ಗರಿಷ್ಠ ವಯೋಮಿತಿ SC / ST / CAT-1 ಅಭ್ಯರ್ಥಿಗಳಿಗೆ 32 ವರ್ಷ, ಓಬಿಸಿ ಅಭ್ಯರ್ಥಿಗಳಿಗೆ 30 ವರ್ಷ, ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ 27 ವರ್ಷ ನಿಗದಿಪಡಿಸಲಾಗಿದೆ.

ಅರಣ್ಯ ರಕ್ಷಕರ ಹುದ್ದೆಗೆ ನೇಮಕಾತಿ ಪ್ರಕ್ರಿಯೆ ಹೇಗಿರುತ್ತದೆ?

ಅರಣ್ಯ ರಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಿದವರ ಶೈಕ್ಷಣಿಕ ಅರ್ಹತೆಯ ಅಂಕಗಳ ಆಧಾರದಲ್ಲಿ ಮೀಸಲಾತಿಗೆ ಅನುಗುಣವಾಗಿ ಮತ್ತು ವೃತ್ತವಾರು ಹುದ್ದೆಗಳಿಗೆ ಅನುಗುಣವಾಗಿ 1:20 ಅನುಪಾತದಲ್ಲಿ ದೇಹದಾರ್ಢ್ಯತೆ, ದೈಹಿಕ ತಾಳ್ವಿಕೆ ಮತ್ತು ದೈಹಿಕ ಕಾರ್ಯ ಸಮರ್ಥತೆ ಪರೀಕ್ಷೆಗಳಿಗೆ ಅರ್ಹತಾ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ.

ಈ ಮೂರು ಪರೀಕ್ಷೆಗಳಲ್ಲಿ ಅರ್ಹತೆ ಹೊಂದಿದ ಅಭ್ಯರ್ಥಿಗಳು ಮಾತ್ರ ಮುಂದಿನ ಹಂತದ ಲಿಖಿತ ಪರೀಕ್ಷೆಗೆ ಅರ್ಹರಾಗುತ್ತಾರೆ.

ಪರೀಕ್ಷೆಯಲ್ಲಿ ಪಡೆದ ಅಂಕಗಳ ಶೇಕಡ ಅರ್ಧ ಮತ್ತು ಹುದ್ದೆಗೆ ನಿಗದಿಪಡಿಸಿದ ವಿದ್ಯಾರ್ಹತೆಯಲ್ಲಿ ಗಳಿಸಿದ ಶೇಕಡ ಅಂಕಗಳ ಶೇಕಡ ಅರ್ಧ ಅಂಕಗಳನ್ನು ಕ್ರೂಢೀಕರಿಸಿ ಆಯ್ಕೆ ಪಟ್ಟಿ ಪ್ರಕಟಿಸಲಾಗುತ್ತದೆ.

ಅರಣ್ಯ ರಕ್ಷಕರ ಹುದ್ದೆಗೆ ವೇತನ ಶ್ರೇಣಿ

ಅರಣ್ಯ ರಕ್ಷಕ ಹುದ್ದೆಗಳಿಗೆ ವೇತನ ಶ್ರೇಣಿ ರೂ.18,600 - 32,600 ವರೆಗೆ ನೀಡಲಾಗುತ್ತದೆ. ಅಲ್ಲದೇ ಪಿಂಚಣಿ ಸೌಲಭ್ಯ, ವಿಶೇಷ ಭತ್ಯೆಗಳು ಇರಲಿವೆ.


Post a Comment

Previous Post Next Post
CLOSE ADS
CLOSE ADS
×