ನಿಮ್ಮ ಗ್ರಾಮ ಪಂಚಾಯತಿಯಲ್ಲಿ ಸಿಗುವ ಎಲ್ಲಾ ಸೇವೆಗಳ ಮಾಹಿತಿಯನ್ನು ಪಡೆಯುವ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ

ನಿಮ್ಮ ಗ್ರಾಮ ಪಂಚಾಯತಿಯಲ್ಲಿ ಸಿಗುವ ಎಲ್ಲಾ ಸೇವೆಗಳ ಮಾಹಿತಿಯನ್ನು ಪಡೆಯುವ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ

ಆತ್ಮೀಯ ಓದುಗರೇ, ನಮ್ಮ ಸಂವಿಧಾನದ 73 ನೇ ತಿದ್ದುಪಡಿಯ ಪ್ರಕಾರ ನಮ್ಮ ದೇಶದಲ್ಲಿ ಪಂಚಾಯತಿಗಳು ಅಧಿಕೃತವಾಗಿ ಜಾರಿಗೆ ಬಂದವು. ಇವು ಗ್ರಾಮೀಣ ಭಾಗದ ಸರ್ಕಾರ ಎಂದೇ ಜನಜನಿತವಾಗಿವೆ. ಕಾರಣ ಗ್ರಾಮೀಣ ಭಾರತದ ಅಭಿವೃದ್ಧಿಯ ಜವಾಬ್ದಾರಿ ಈ ಪಂಚಾಯತಿಗಳ ಮೇಲೆಯೇ ನಿಂತಿದೆ.



ಪಂಚಾಯತಿಗಳಲ್ಲಿ ಅದರಲ್ಲೂ ಗ್ರಾಮ ಪಂಚಾಯಿತಿಯು ದೇಶದ ಬೆಳವಣಿಗೆಯಲ್ಲಿ  ತುಂಬಾ ಪ್ರಮುಖ ಪಾತ್ರ ವಹಿಸಿದೆ. ಭಾರತ ಹಳ್ಳಿಗಳ ದೇಶ ಆಗಿರುವುದರಿಂದ ಹಳ್ಳಿಗಳ ಅಭಿವೃದ್ಧಿ ಆದರೆ ದೇಶದ ಅಭಿವೃದ್ಧಿ ಅದಂತೆ ಎನ್ನುವ ಮಾತು ಅಕ್ಷರಶಃ ಸತ್ಯವಾಗಿದೆ.

  • ಗ್ರಾಮ ಪಂಚಾಯತಿ ಜಾರಿಗೆ ಬಂದ ಮೇಲೆ ಹಳ್ಳಿಗಳಲ್ಲಿ ಮೂಲಭೂತ ಸೌಕರ್ಯಗಳಾದ ರಸ್ತೆ,ಕುಡಿಯುವ ನೀರು,ಶೌಚಾಲಯ, ವಿದ್ಯುತ್ ಮುಂತಾದವುಗಳ ಅಭಿವೃದ್ಧಿಯಾಗಿವೆ. ಅಲ್ಲದೇ ಸರ್ಕಾರಗಳ ಜನ ಕಲ್ಯಾಣ ಯೋಜನೆಗಳ ಅನುಷ್ಠಾನದ ಜವಾಬ್ದಾರಿಯನ್ನು ಅವು ಸಮರ್ಥವಾಗಿ ನಿಭಾಯಿಸುತ್ತಿವೆ.
  • ಇದೀಗ ನಿಮ್ಮ ಗ್ರಾಮ ಪಂಚಾಯತಿಯಲ್ಲಿ ನಡೆಯುವ ಎಲ್ಲಾ ಜನ ಕಲ್ಯಾಣ ಯೋಜನೆಗಳ ಅನುಷ್ಠಾನದ ಬಗ್ಗೆ ಮಾಹಿತಿ ತಿಳಿಯಲು ರಾಜ್ಯ ಸರ್ಕಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಡಿಯಲ್ಲಿ ಪಂಚತಂತ್ರ ಎಂಬ ಪ್ರತ್ಯೇಕ ವೇದಿಕೆಯನ್ನು ಕಲ್ಪಿಸಿದ್ದು ಅಲ್ಲಿ ನೀವು ನಿಮ್ಮ ಗ್ರಾಮ ಪಂಚಾಯತಿ ಅಡಿಯಲ್ಲಿ ಇಲ್ಲಿಯವರೆಗೆ ಯಾವ ಯಾವ ಸೇವೆಗಳನ್ನು ನೀಡಲಾಗಿದೆ ಮತ್ತು ಗ್ರಾಮ ಪಂಚಾಯತಿ ಸದಸ್ಯರು ಯಾರು,ಅಧ್ಯಕ್ಷರು ಯಾರು ಹಾಗೂ ಅವರ ಸಂಪರ್ಕದ ವಿವರಗಳು ಎಲ್ಲಾ ಸಿಗುತ್ತವೆ.
  • ಹಾಗಾದರೆ ನಿಮ್ಮ ಗ್ರಾಮ ಪಂಚಾಯತಿಯ ಎಲ್ಲಾ ಕೆಲಸಗಳ ಮಾಹಿತಿ ಮಡೆಯುವುದು ಹೇಗೆ ಎಂಬುದನ್ನು ಇವತ್ತಿನ ಅಂಕಣದಲ್ಲಿ ತಿಳಿಸುತ್ತೇವೆ.ತಪ್ಪದೇ ಕೊನೆಯವರೆಗೂ ಓದಿರಿ.

ಗ್ರಾಮ ಪಂಚಾಯತಿ ಕಾರ್ಯಗಳನ್ನು ತಿಳಿಯುವುದು ಹೇಗೆ?

ಹಂತ -1) ಮೊಟ್ಟ ಮೊದಲು ನೀವು ಕೆಳಗೆ ನೀಡಲಾಗಿರುವ ರಾಜ್ಯ ಸರ್ಕಾರದ ಅಧಿಕೃತ ಜಾಲತಾಣದ ಲಿಂಕ್ ಮೇಲೆ ಕ್ಲಿಕ್ ಮಾಡಿ.

https://panchatantra.karnataka.gov.in/USER_MODULE/userLogin/loadPanchamitra

ಹಂತ -2) ಅಲ್ಲಿ ನೀವು ನಿಮ್ಮ ಜಿಲ್ಲೆ, ತಾಲ್ಲೂಕು ಹಾಗೂ ನಿಮ್ಮ ಪಂಚಾಯತಿಯ ಹೆಸರನ್ನು ನಮೂದಿಸಿ,ಕೆಳಗೆ ನೀಡಲಾಗಿರುವ ಹುಡುಕು ಬಟನ್ ಮೇಲೆ ಕ್ಲಿಕ್ ಮಾಡಿ.

ಹಂತ -3) ಅಲ್ಲಿ ನಿಮಗೆ ನಿಮ್ಮ ಗ್ರಾಮ ಪಂಚಾಯತಿಯ ವಿವರ ಮತ್ತು ಸಂಪರ್ಕ ಸಂಖ್ಯೆ ಸಿಗುತ್ತದೆ.

ಹಂತ – 4) ಅದೇ ರೀತಿಯಾಗಿ ನೀವು ಕೆಳಗೆ scroll ಮಾಡಿದಂತೆ ನಿಮ್ಮ ಗ್ರಾಮ ಪಂಚಾಯತಿಯ ಸದಸ್ಯರ ಯಾರು ಅವರ ಸಂಪರ್ಕ ಸಂಖ್ಯೆ ಹಾಗೂ ಇಲ್ಲಿಯವರೆಗೆ ಎಷ್ಟು ಸಭೆ ಮಾಡಲಾಗಿದೆ ಮತ್ತು ಯಾವ ಯಾವ ಯೋಜನೆಗಳು ಜಾರಿಯಲ್ಲಿವೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಸಿಗುತ್ತದೆ.

ಹಂತ -5) ಹಾಗೆಯೇ ನಿಮಗೆ ನಿಮ್ಮ ಗ್ರಾಮ ಪಂಚಾಯ್ತಿಯ ವ್ಯಾಪ್ತಿ ಎಷ್ಟಿದೆ ಎಂಬ ಮ್ಯಾಪ್ ಕೂಡ ನಿಮಗೆ ಸಿಗುತ್ತದೆ.

ಈ ರೀತಿಯಾಗಿ ನೀವು ಮನೆಯಲ್ಲೇ ಕುಳಿತು ನಿಮ್ಮ ಮೊಬೈಲ್ ನಲ್ಲೇ ನಿಮ್ಮ ಗ್ರಾಮ ಪಂಚಾಯತಿಯ ಸಂಪೂರ್ಣ ಚಟುವಟಿಕೆಗಳ ಮಾಹಿತಿಯನ್ನು ಸುಲಭವಾಗಿ ಪಡೆಯಿರಿ.


Post a Comment

Previous Post Next Post
CLOSE ADS
CLOSE ADS
×