Standup India Scheme: ಮಹಿಳೆಯರಿಗೆ ಸ್ವಂತ ಉದ್ಯಮ ಮಾಡಲು 10 ಲಕ್ಷ ಸಹಾಯಧನ.!

Standup India Scheme: ಮಹಿಳೆಯರಿಗೆ ಸ್ವಂತ ಉದ್ಯಮ ಮಾಡಲು 10 ಲಕ್ಷ ಸಹಾಯಧನ.!

ದೇಶದ ಮಹಿಳೆಯರು ಸ್ವತಂತ್ರವಾಗಿ ಹಾಗೂ ಸ್ವಾವಲಂಬಿಗಳಾಗಿ ಬದುಕಲು ಕೇಂದ್ರ(center) ಹಾಗೂ ರಾಜ್ಯ(State) ಸರ್ಕಾರಗಳು ವಿವಿಧ ರೀತಿಯ ಯೋಜನೆಗಳನ್ನು ಜಾರಿಗೆ ತರುತ್ತಲೇ ಇರುತ್ತದೆ. ಇವುಗಳ ಮುಖ್ಯ ಉದ್ದೇಶ ಮಹಿಳೆಯರು ಹಣಕಾಸಿನ ವಿಷಯದಲ್ಲಿ ಸದೃಢರಾಗಬೇಕು ಎನ್ನುವುದು.

ಈ ಯೋಜನೆಗಳ ಮೂಲಕ ಮಹಿಳೆಯರು ಅಂಥ ಯೋಜನೆಗಳಿಂದ ಸಾಲ ಪಡೆದು, ಸ್ವಂತ ಬ್ಯುಸಿನೆಸ್ (Own Business) ಶುರು ಮಾಡಬಹುದು. ಇದರಿಂದ ಮಹಿಳೆಯರು ಹಣ ಗಳಿಸಲು ಶುರು ಮಾಡಿ, ತಮ್ಮ ಕುಟುಂಬವನ್ನು ಪೋಷಿಸಬಹುದು. ಹಾಗೆಯೇ ಇನ್ನಷ್ಟು ಜನರಿಗೆ ಕೆಲಸವನ್ನು ಸಹ ಕೊಡಬಹುದು. ಇದಕ್ಕಾಗಿ ಸರ್ಕಾರ ಸಹಾಯ ಮಾಡಲಿದೆ.




  • ಮಹಿಳೆಯರು ಈಗ ಬ್ಯುಸಿನೆಸ್ ಮಾಡಿ, ಉತ್ತಮ ಹಂತಕ್ಕೆ ಬೆಳೆಯುವುದಕ್ಕೆ ಶುರು ಮಾಡಿರುವ ಈ ಲೋನ್ (Loan) ಕೊಡುವ ಸೌಲಭ್ಯದ ಹೆಸರು ಸ್ಟ್ಯಾಂಡ್ ಅಪ್ ಇಂಡಿಯಾ (Standup India Loan) ಆಗಿದೆ. ಈ ಒಂದು ಯೋಜನೆಯ ಮೂಲಕ ಮಹಿಳೆಯರಿಗೆ ಬ್ಯುಸಿನೆಸ್ ಮಾಡಲು 10 ಲಕ್ಷದವರೆಗೂ ಸಾಲ ಸೌಲಭ್ಯ ನೀಡಲಾಗುತ್ತದೆ. ಈ ಯೋಜನೆಯಿಂದ ಮಹಿಳೆಯರು ಲೋನ್ ಪಡೆಯುವುದು ಹೇಗೆ? ಅಪ್ಲೈ ಮಾಡುವುದು ಹೇಗೆ? ಇದೆಲ್ಲವನ್ನು ‌ಇಂದಿನ ಈ ಲೇಖನದಲ್ಲಿ ತಿಳಿಯೋಣ ಬನ್ನಿ
  • ಸ್ಟ್ಯಾಂಡ್ ಅಪ್ ಇಂಡಿಯಾ ಎನ್ನುವ ಈ ಸ್ಕೀಮ್ ನಲ್ಲಿ ಮಹಿಳಾ ಉದ್ಯಮಿಗಳು ಮತ್ತು ಸಮಾಜದ SC ಹಾಗೂ ST ವರ್ಗಕ್ಕೆ ಸೇರಿದ ಮಹಿಳೆಯರಿಗಾಗಿ ಸಾಲ ಕೊಡುವುದಕ್ಕೆ ಸರ್ಕಾರ ಮುಂದಾಗಿದೆ. ಮಹಿಳೆಯರು ಯಾವುದೇ ಒಂದು ಬ್ಯಾಂಕ್‌ನಿಂದ 10 ಲಕ್ಷದಿಂದ 1 ಕೋಟಿ ರೂ.ವರೆಗೂ ಸಾಲ ಸೌಲಭ್ಯ ಪಡೆಯಬಹುದು.
  • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ(SC ಹಾಗೂ ST)ಕ್ಕೆ ಸೇರಿದ ಕೆಲಸ ಮಾಡುತ್ತಿರುವ ಅಥವಾ ಬ್ಯುಸಿನೆಸ್ ಮಾಡುತ್ತಿರುವ ಮಹಿಳೆಯರಿಗೆ ಈ ಸಾಲ ಸೌಲಭ್ಯ ಕೊಡಲಾಗುತ್ತದೆ. ಈ ಸಾಲವನ್ನು ಬ್ಯುಸಿನೆಸ್ ಮಾಡುವವರಿಗೆ ಕೊಡಲಾಗುತ್ತದೆ. ಈ ಸಾಲವನ್ನು ಪ್ರೊಡಕ್ಷನ್, ಸೇವೆ ಹಾಗೂ ಬ್ಯುಸಿನೆಸ್ ಈ ಮೂರು ವಿಭಾಗದ ಕ್ಷೇತ್ರಗಳಲ್ಲಿ ಸಾಲ ಪಡೆಯಬಹುದು.
  • ಒಂದು ವೇಳೆ ಇದು ಪಾರ್ಟ್ನರ್ಶಿಪ್ ಬ್ಯುಸಿನೆಸ್ ಆಗಿದ್ದರೆ, 51% ಪಾರ್ಟ್ನರ್ಶಿಪ್ ಹೆಣ್ಣುಮಕ್ಕಳು/SC/ST ವರ್ಗಕ್ಕೆ ಸೇರಿರುವ ವ್ಯಕ್ತಿಯ ಹೆಸರಲ್ಲಿ ಇರಬೇಕು. ಇದರಲ್ಲಿ 10 ಲಕ್ಷದಿಂದ 1 ಕೋಟಿವರೆಗೂ ಕಾಂಪೋಸಿಟ್ ಸಾಲ ಪಡೆಯಬಹುದು. ಇಲ್ಲಿ ಕರಾರಿನ ಸಾಲ, ಹಾಗೂ ಕಾರ್ಯವಾಹಿ ಬಂಡವಾಳ ಎರಡು ಕೂಡ ಬರುತ್ತದೆ. ಕಡಿಮೆ ಬಡ್ಡಿಗೆ ಈ ಸಾಲ ಸೌಲಭ್ಯ ನೀಡಲಾಗುತ್ತದೆ.

ಸಾಲ ಪಡೆಯಲು ಯಾರೆಲ್ಲಾ ಅರ್ಹತೆ ಪಡೆಯುತ್ತಾರೆ?

  • SC/ST ವರ್ಗಕ್ಕೆ ಸೇರಿದ ಮಹಿಳೆ ಆಗಿರಬೇಕು.
  • 18 ವರ್ಷಕ್ಕಿಂತ ಹೆಚ್ಚಿರುವವರು ಈ ಸಾಲಕ್ಕೆ ಅರ್ಜಿ ಸಲ್ಲಿಸಬಹುದು.
  • ಸಾಲ ಪಡೆಯುವ ವ್ಯಕ್ತಿ ಇನ್ಯಾವುದೇ ಬ್ಯಾಂಕ್ ನ ಸದಸ್ಯ ಆಗಿರಬಾರದು.
  • ಈ ಯೋಜನೆಗೆ ಅರ್ಜಿ ಸಲ್ಲಿಸುವವರು ಹಸಿರು ವಲಯ ಯೋಜನೆಯಲ್ಲಿ ಇರಬೇಕು. ಅವರು ಹಸಿರು ಕ್ಷೇತ್ರದ ಉತ್ಪಾದನೆ, ಸೇವೆ ಹಾಗೂ ಹೊಸ ಬ್ಯುಸಿನೆಸ್ ಶುರು ಮಾಡಬಹುದು.
  • ಸಾಲದ ಅವಧಿಯು ಗರಿಷ್ಠ 7 ವರ್ಷಗಳು ಮತ್ತು ಗರಿಷ್ಠ ಮೊರಟೋರಿಯಂ ಅವಧಿಯು 18 ತಿಂಗಳುಗಳು.
  • ಅರ್ಜಿದಾರರು ಯಾವುದೇ ಬ್ಯಾಂಕ್ ಅಥವಾ NBFC ಯಲ್ಲಿ ಡೀಫಾಲ್ಟ್ ದಾಖಲೆಯನ್ನು ಹೊಂದಿರಬಾರದು.

ಅರ್ಜಿ ಸಲ್ಲಿಸುವುದು ಹೇಗೆ?

ಹಂತ 1: ಮೊದಲು ಸ್ಟ್ಯಾಂಡ್-ಅಪ್ ಇಂಡಿಯಾದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ‘https://www.standupmitra.in/Login/Register‘.

ಹಂತ 2: ಇಲ್ಲಿ ವ್ಯಾಪಾರದ ವಿಳಾಸ, ರಾಜ್ಯ, ಜಿಲ್ಲೆ, ಗ್ರಾಮ, ಪಟ್ಟಣ, ನಗರ ಮತ್ತು ಪಿನ್ ಕೋಡ್ ಅನ್ನು ಒಳಗೊಂಡಿರುವ ವ್ಯಾಪಾರ ಕಾಲಮ್ ಅನ್ನು ನಮೂದಿಸುವ ಮೂಲಕ ನೋಂದಣಿ ಫಾರ್ಮ್ ಅನ್ನು ಭರ್ತಿ ಮಾಡಿ.

ಹಂತ 3: ಪ್ರವರ್ತಕರು ಮಹಿಳಾ ವರ್ಗ ಅಥವಾ SC/ST ವರ್ಗಕ್ಕೆ ಸೇರಿದ್ದಾರೆಯೇ ಮತ್ತು ವ್ಯಾಪಾರದಲ್ಲಿ 51% ಅಥವಾ ಹೆಚ್ಚಿನ ಪಾಲನ್ನು ಹೊಂದಿದ್ದಾರೆಯೇ ಎಂಬುದನ್ನು ಆಯ್ಕೆಮಾಡಿ.

ಹಂತ 4: ಅರ್ಜಿದಾರರ ಯೋಜನೆ, ವ್ಯವಹಾರದ ಸ್ವರೂಪ, ಸಾಲದ ಮೊತ್ತ, ವ್ಯವಹಾರ ಚಟುವಟಿಕೆಯ ಸ್ವರೂಪ ಮತ್ತು ವಿವರಗಳು, ವ್ಯಾಪಾರಕ್ಕಾಗಿ ಸ್ಥಳ ಸ್ಥಿತಿ ಮತ್ತು ಮೊದಲ ಬಾರಿಗೆ ಉದ್ಯಮಿಗಳ ಡ್ರಾಪ್ ಡೌನ್‌ಗಳನ್ನು ಆಯ್ಕೆಮಾಡಿ.


ಹಂತ 5: ಮುಂದೆ ಅವನು ತನ್ನ ಹಿಂದಿನ ವ್ಯವಹಾರದ ಅನುಭವದ ಬಗ್ಗೆ ವರ್ಷಗಳ ವ್ಯವಹಾರ ಚಟುವಟಿಕೆ, ವ್ಯವಹಾರ ಅನುಭವ ಮತ್ತು ಸ್ವಭಾವವನ್ನು ನಮೂದಿಸುವ ಮೂಲಕ ಮಾಹಿತಿಯನ್ನು ನೀಡಬೇಕು.

ಹಂತ 6: ಕೈ ಹಿಡಿದಿರುವ ಬೆಂಬಲವನ್ನು ಬಯಸಿದಂತೆ (Like wanting hand-held support) ಟಿಕ್ ಮಾಡಿ.

ಹಂತ 7: ನೋಂದಣಿಯ ಕೊನೆಯ ಹಂತವು ಅರ್ಜಿದಾರರ ಹೆಸರು, ಉದ್ಯಮದ ಹೆಸರು, ಬಳಕೆದಾರ ಹೆಸರು, ಮೊಬೈಲ್ ಸಂಖ್ಯೆ, ಇಮೇಲ್ ಇತ್ಯಾದಿಗಳ ವೈಯಕ್ತಿಕ ಮಾಹಿತಿಯಾಗಿದೆ.

ಹಂತ 8: ರಿಜಿಸ್ಟರ್ ಅನ್ನು ಕ್ಲಿಕ್ ಮಾಡುವ ಮೂಲಕ ಅರ್ಜಿದಾರರು ಆಯಾ ಸಾಲ ಸಂಸ್ಥೆಯಲ್ಲಿ ಸ್ಟ್ಯಾಂಡ್-ಅಪ್ ಇಂಡಿಯಾ ಯೋಜನೆಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತದೆ ಮತ್ತು ಹೆಚ್ಚಿನ ಔಪಚಾರಿಕತೆಗಳಿಗಾಗಿ ಅವರ ಅಧಿಕಾರಿಗಳು ಸಂಪರ್ಕಿಸುತ್ತಾರೆ.

Post a Comment

Previous Post Next Post
CLOSE ADS
CLOSE ADS
×