ಐಬಿಪಿಎಸ್‌ ಆರ್‌ಆರ್‌ಬಿ, ಪಿಎಸ್‌ಬಿ ಬ್ಯಾಂಕ್‌ ಹುದ್ದೆ ಪರೀಕ್ಷೆಗಳಿಗೆ ಸಂಭಾವ್ಯ ವೇಳಾಪಟ್ಟಿ ಪ್ರಕಟ

ಐಬಿಪಿಎಸ್‌ ಆರ್‌ಆರ್‌ಬಿ, ಪಿಎಸ್‌ಬಿ ಬ್ಯಾಂಕ್‌ ಹುದ್ದೆ ಪರೀಕ್ಷೆಗಳಿಗೆ ಸಂಭಾವ್ಯ ವೇಳಾಪಟ್ಟಿ ಪ್ರಕಟ

Bank Jobs 2024 By IBPS: ನೀವು ಯಾವುದೇ ವಿಷಯ ಸಂಯೋಜನೆಯೊಂದಿಗೆ ಪಿಯುಸಿ ಅಥವಾ 12ನೇ ತರಗತಿ ತೇರ್ಗಡೆಯಾಗಿದ್ದು, ಪದವಿ ಪಾಸಾಗಿದ್ದು, ಯಾವುದಾದರೂ ಒಂದು ಖಾಯಂ ಹುದ್ದೆ ಬೇಕು ಎಂದುಕೊಂಡಿದ್ದಲ್ಲಿ ಸದ್ಯದಲ್ಲೇ ನಿಮಗೆ 9 ಸಾವಿರಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಹಾಕುವ ಅವಕಾಶ ಇದೆ



ದೇಶದಾದ್ಯಂತ ಇರುವ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳು ಹಾಗೂ ಪಬ್ಲಿಕ್‌ ಸೆಕ್ಟಾರ್‌ ಬ್ಯಾಂಕ್‌ಗಳು ಪ್ರತಿವರ್ಷವು ಸಹ ತಮಗೆ ಅಗತ್ಯ ಇರುವ ಹುದ್ದೆಗಳ ಭರ್ತಿಗಾಗಿ ಐಬಿಪಿಎಸ್‌ ಸಾಮಾನ್ಯ ನೇಮಕಾತಿ ಪ್ರಕ್ರಿಯೆಗಳಲ್ಲಿ ಪಾಲ್ಗೊಳ್ಳುತ್ತವೆ. ಅಂದರೆ ಈ ಬ್ಯಾಂಕ್‌ಗಳಿಗೆ ಬೇಕಾದ ಅಗತ್ಯ ಅಭ್ಯರ್ಥಿಗಳನ್ನು ವಿವಿಧ ಹುದ್ದೆಗಳಿಗೆ ಭರ್ತಿ ಮಾಡಲು ನೇಮಕಾತಿ ಪ್ರಕ್ರಿಯೆಯನ್ನು ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆ (ಐಬಿಪಿಎಸ್‌) ನೆಡೆಸಿಕೊಡುತ್ತದೆ. ಈ ವರ್ಷ ಆರ್‌ಆರ್‌ಬಿ ಹಾಗೂ ಪಿಎಸ್‌ಬಿ ಬ್ಯಾಂಕ್‌ಗಳಲ್ಲಿ 9000 ಕ್ಕೂ ಅಧಿಕ ವಿವಿಧ ಹಂತದ ಹುದ್ದೆಗಳನ್ನು ಭರ್ತಿ ಮಾಡುವ ಸಾಧ್ಯತೆ ಇದೆ. ಆದ್ದರಿಂದ ಈ ಹುದ್ದೆಗಳಿಗೆ ನಡೆಸಲಾಗುವ ವಿವಿಧ ಹಂತದ ಪರೀಕ್ಷೆಗಳಿಗೆ ಸಂಭಾವ್ಯ ವೇಳಾಪಟ್ಟಿಯನ್ನು ಈಗ ಐಬಿಪಿಎಸ್‌ಸಿ ಬಿಡುಗಡೆ ಮಾಡಿದೆ.

ಬ್ಯಾಂಕಿಂಗ್ ಹುದ್ದೆಗಳಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ಈ ವೇಳಾಪಟ್ಟಿಯನ್ನು ಚೆಕ್‌ ಮಾಡಿಕೊಂಡು, ಪರೀಕ್ಷೆಗೆ ಅಗತ್ಯ ಸಿದ್ಧತೆಯನ್ನು ಮಾಡಿಕೊಳ್ಳಿ.

  • ಐಬಿಪಿಎಸ್ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳು (ಆರ್‌ಆರ್‌ಬಿ ), ಪಬ್ಲಿಕ್‌ ಸೆಕ್ಟಾರ್‌ ಬ್ಯಾಂಕ್‌ (ಪಿಎಸ್‌ಬಿ) ಗಳಲ್ಲಿ ಯಾವೆಲ್ಲ ಹುದ್ದೆಗಳನ್ನು ಭರ್ತಿ ಮಾಡಲಿದೆ ಎಂಬುದನ್ನು ಈ ಕೆಳಗಿನಂತೆ ಲಿಸ್ಟ್‌ ನಲ್ಲಿ ಚೆಕ್‌ ಮಾಡಿಕೊಳ್ಳಬಹುದು.
  • ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳಲ್ಲಿ ನೇಮಕ ಮಾಡುವ ಹುದ್ದೆಗಳು ಪಬ್ಲಿಕ್ ಸೆಕ್ಟಾರ್ ಬ್ಯಾಂಕ್‌ಗಳಲ್ಲಿ ನೇಮಕ ಮಾಡುವ ಹುದ್ದೆಗಳು
  • ಆಫೀಸ್ ಅಸಿಸ್ಟಂಟ್ಆಫೀಸರ್ ಸ್ಕೇಲ್‌-Iಆಫೀಸರ್ ಸ್ಕೇಲ್‌-IIಆಫೀಸರ್ ಸ್ಕೇಲ್‌-III ಕ್ಲರ್ಕ್‌ಪ್ರೊಬೇಷನರಿ ಆಫಿಸರ್‌ಗಳುಸ್ಪೆಷಲಿಸ್ಟ್‌ ಆಫೀಸರ್‌ಗಳು

ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳಲ್ಲಿ ನೇಮಕ ಮಾಡುವ ಹುದ್ದೆಗಳಿಗೆ ಪರೀಕ್ಷೆ ದಿನಾಂಕಗಳು

ಪರೀಕ್ಷೆಗಳು ಹುದ್ದೆಗಳು ಪರೀಕ್ಷೆ ದಿನಾಂಕಗಳು

  • ಪೂರ್ವಭಾವಿ ಪರೀಕ್ಷೆ ಆಫೀಸ್ ಅಸಿಸ್ಟಂಟ್ ಮತ್ತು ಆಫೀಸರ್ ಸ್ಕೇಲ್‌-I 03.08.2024, 04.08.2024, 10.08.2024, 17.08.2024 & 18.08.2024
  • ಸಿಂಗಲ್ ಎಕ್ಸಾಮಿನೇಷನ್ ಆಫೀಸರ್ ಸ್ಕೇಲ್‌ II, III 29.09.2024
  • ಮುಖ್ಯ ಪರೀಕ್ಷೆ ಆಫೀಸರ್ ಸ್ಕೇಲ್‌-Iಆಫೀಸ್ ಅಸಿಸ್ಟಂಟ್ 29.09.2024 06.10.2024

ಪಬ್ಲಿಕ್ ಸೆಕ್ಟಾರ್ ಬ್ಯಾಂಕ್‌ಗಳಲ್ಲಿ ನೇಮಕ ಮಾಡುವ ಹುದ್ದೆಗಳಿಗೆ ಪರೀಕ್ಷೆ ದಿನಾಂಕಗಳು

ಪರೀಕ್ಷೆಗಳು ಕ್ಲರ್ಕ್‌ ಹುದ್ದೆ ಪ್ರೊಬೇಷನರಿ ಆಫೀಸರ್ ಹುದ್ದೆಗಳು ಸ್ಪೆಷಲಿಸ್ಟ್‌ ಆಫೀಸರ್ ಹುದ್ದೆ

  • ಪೂರ್ವಭಾವಿ ಪರೀಕ್ಷೆ ದಿನಾಂಕಗಳು 24.08.2024 25.08.2024 31.08.2024 19.10.2024 20.10.2024 09.11.2024
  • ಮುಖ್ಯ ಪರೀಕ್ಷೆ ದಿನಾಂಕಗಳು 13.10.2024 30.11.2024 14.12.2024

ಈ ಮೇಲಿನ ಎಲ್ಲ ಹುದ್ದೆಗಳಿಗೆ ಶೀಘ್ರದಲ್ಲೇ ಅಧಿಕೃತ ನೋಟಿಫಿಕೇಶನ್‌ ಪ್ರಕಟಿಸಿ, ಆನ್‌ಲೈನ್‌ ಮೂಲಕ ಮಾತ್ರ ರಿಜಿಸ್ಟ್ರೇಷನ್‌ ಪಡೆಯಲಾಗುತ್ತದೆ. ಆಸಕ್ತರು ಅರ್ಜಿ ಸಲ್ಲಿಸಬಹುದು. ಯಾವ್ಯಾವ ಹುದ್ದೆಗಳು ಎಷ್ಟು ಎಂದು ಇನ್ನು ಅಧಿಕೃತ ಮಾಹಿತಿ ಬಿಡುಗಡೆ ಆಗಿಲ್ಲ. ಈ ಕುರಿತು ಸಹ ನೋಟಿಫಿಕೇಶನ್‌ ಬಿಡುಗಡೆ ಮಾಡಿದಾಗ ತಿಳಿಯಬಹುದು. ಹೆಚ್ಚಿನ ಮಾಹಿತಿಗಾಗಿ ಆಗಾಗ ವೆಬ್‌ಸೈಟ್‌ ವಿಳಾಸ www.ibps.in ಗೆ ಭೇಟಿ ನೀಡಿ, ಅಪ್‌ಡೇಟ್‌ ಪಡೆಯಬಹುದು.


Post a Comment

Previous Post Next Post
CLOSE ADS
CLOSE ADS
×