10th ಪಾಸಾದವರಿಗೆ 2 ವರ್ಷದ ಕೋರ್ಸ್‌: ಪ್ರತಿ ತಿಂಗಳು Rs.14,480 ಸ್ಟೈಫಂಡ್‌ನೊಂದಿಗೆ ITI ತತ್ಸಮಾನ ಪ್ರಮಾಣಪತ್ರ

10th ಪಾಸಾದವರಿಗೆ 2 ವರ್ಷದ ಕೋರ್ಸ್‌: ಪ್ರತಿ ತಿಂಗಳು Rs.14,480 ಸ್ಟೈಫಂಡ್‌ನೊಂದಿಗೆ ITI ತತ್ಸಮಾನ ಪ್ರಮಾಣಪತ್ರ

What Next After SSLC Pass : ಎಸ್‌ಎಸ್‌ಎಲ್‌ಸಿ ನಂತರ ಉಚಿತ ಪ್ರವೇಶದೊಂದಿಗೆ ಉತ್ತಮ ಕೋರ್ಸ್‌ಗಳನ್ನು ಮಾಡಬೇಕು ಎಂದುಕೊಂಡವರಿಗೆ ಇಲ್ಲಿದೆ ಸುವರ್ಣಾವಕಾಶ. ಉಚಿತ ಶಿಕ್ಷಣ, ತರಬೇತಿ, ಉಚಿತ ಊಟದೊಂದಿಗೆ, ಕಡಿಮೆ ಖರ್ಚಿನ ವಸತಿ ಪಡೆದು, 2 ವರ್ಷ ಮಾಸಿಕ Rs.14,480 ಸ್ಟೈಫಂಡ್‌ನೊಂದಿಗೆ ITI ಸಮನಾಂತರ ಸರ್ಟಿಫಿಕೇಟ್‌ ಕೋರ್ಸ್‌ ಪಡೆಯುವ ಅವಕಾಶ ಇಲ್ಲಿದೆ.



ಎಸ್‌ಎಸ್ಎಲ್‌ಸಿ ನಂತರ ಮುಂದೇನು? ಎನ್ನುವ ಪ್ರಶ್ನೆ ಪ್ರತಿ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೇ ಪೋಷಕರು ಸಹ ತಮ್ಮ ಮಕ್ಕಳ ಮುಂದಿನ ಶಿಕ್ಷಣದ ಬಗ್ಗೆ ಹೀಗೆ ಒಂದು ಪ್ರಶ್ನೆ ಕೇಳಿಕೊಳ್ಳುವುದು ಉಂಟು. ಅದಕ್ಕೆ ಉತ್ತರ ಡಿಪ್ಲೊಮ, ದ್ವಿತೀಯ ಪಿಯುಸಿ, ಐಟಿಐ ಕೋರ್ಸ್‌ಗಳು ಮುಂದಿನ ಶಿಕ್ಷಣಕ್ಕೆ ಇರುವ ಆಯ್ಕೆಗಳು. ಅವುಗಳಲ್ಲಿ ವಿವಿಧ ಬ್ರ್ಯಾಂಚ್‌, ಟ್ರೇಡ್, ವಿಷಯಗಳ ಸಂಯೋಜನೆಯನ್ನು ವಿದ್ಯಾರ್ಥಿಗಳು ತಮ್ಮ ಆಸಕ್ತಿ ಮೇರೆಗೆ, ಕರಿಯರ್‌ ದೃಷ್ಟಿಯಿಂದ ಆಯ್ಕೆ ಮಾಡಿಕೊಳ್ಳಲು ಅವಕಾಶ ಇರುತ್ತದೆ.

ಅಂದಹಾಗೆ ಎಸ್‌ಎಸ್‌ಎಲ್‌ಸಿ ನಂತರ ಮುಂದೇನು? ಎನ್ನುವವರಿಗಾಗಿಯೇ, ಅದರಲ್ಲೂ ರಾಜ್ಯದ ಬಡ ಕುಟುಂಬಗಳ ಹಿನ್ನೆಲೆಯ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ದೃಷ್ಟಿಯಿಂದ ಟೊಯೋಟಾ ಟೆಕ್ನಿಕಲ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್‌ 2 ವರ್ಷದ ಟೊಯೋಟ ಕೌಶಲ್ಯ - ಕುಶಲಕರ್ಮಿ ತರಬೇತಿ ಯೋಜನೆ'ಯನ್ನು ನೀಡುತ್ತಿದೆ. ಅಂದಹಾಗೆ ಇದೊಂದು ತರಬೇತಿ ಕೋರ್ಸ್‌ ಆಗಿದ್ದು, ಪ್ರವೇಶ ಪಡೆದವರಿಗೆ 2 ವರ್ಷ ಪೂರ್ಣಕಾಲ ಮುಗಿಸಿದವರಿಗೆ ಐಟಿಐ ತತ್ಸಮಾನ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ಅಷ್ಟು ಮಾತ್ರವಲ್ಲದೇ ಪ್ರತಿ ತಿಂಗಳು Rs.14,480 ಸ್ಟೈಫಂಡ್ ಅನ್ನು ಈ ತರಬೇತಿ ಅವಧಿಯಲ್ಲಿ ನೀಡಲಾಗುತ್ತದೆ. ಉಚಿತ ಊಟ, ಕಡಿಮೆ ಖರ್ಚಿನ ವಸತಿ ವ್ಯವಸ್ಥೆ, ಉಚಿತ ಶಿಕ್ಷಣ ಸೌಲಭ್ಯಗಳು ಈ ಕೋರ್ಸ್‌ಗೆ ಪ್ರವೇಶ ಪಡೆದವರಿಗೆ ಸಿಗಲಿವೆ.

ಟೊಯೋಟಾ'ದಿಂದ 2 ವರ್ಷದ ಕುಶಲಕರ್ಮಿ ತರಬೇತಿ ಯೋಜನೆ

ಇದು ಫ್ಲೆಕ್ಸಿ ಎಂಒಯು ಟ್ರೈನಿಂಗ್ ಪ್ರೋಗ್ರಾಮ್‌ - ಟೊಯೋಟ ಕೌಶಲ್ಯ ಯೋಜನೆಯು ಒಂದು ರೀತಿಯಲ್ಲಿ 'ಕಲಿಯಿರಿ ಮತ್ತು ಸಂಪಾದಿಸಿರಿ' ಎಂಬ ಪರಿಕಲ್ಪನೆಯೊಂದಿಗೆ 'ಕೈಗಾರಿಕೆಯಲ್ಲಿ ಉದ್ಯೋಗ ತರಬೇತಿ'ಯನ್ನು ನೀಡುವ ವಿಶ್ವ ದರ್ಜೆಯ ಕೌಶಲ್ಯ ತಂತ್ರಜ್ಞ ಅರಿವು ನೀಡುವ ಕೋರ್ಸ್‌.

ಕೋರ್ಸ್‌ ಅವಧಿ : 

2 ವರ್ಷ (ಕೌಶಲ್ಯ, ಜ್ಞಾನ, ದೈಹಿಕ ಮತ್ತು ಮಾನಸಿಕ)

ಕೋರ್ಸ್‌ಗೆ ಸೇರಲು ವಿದ್ಯಾರ್ಹತೆ: 

ಎಸ್‌ಎಸ್‌ಎಲ್‌ಸಿ ತೇರ್ಗಡೆ.

ವಯಸ್ಸಿನ ಅರ್ಹತೆಗಳು: 

18-24 ವರ್ಷದೊಳಗಿರಬೇಕು.

ಲಭ್ಯ ಇರುವ ಶಿಶಿಕ್ಷು ತರಬೇತಿ ಟ್ರೇಡ್‌ಗಳು

ಅಸೆಂಬ್ಲಿ ಟೆಕ್ನೀಷಿಯನ್ (ಆಟೋಮೊಟಿವ್)

ಆಟೋಮೊಟಿವ್ ಪೇಂಟ್ ಟೆಕ್ನೀಷಿಯನ್.

ಆಟೋಮೊಟಿವ್ ವೆಲ್ಡ್‌ ಟೆಕ್ನೀಷಿಯನ್.

ಮೆಕಟ್ರಾನಿಕ್ಸ್‌ ಟೆಕ್ನೀಷಿಯನ್ಸ್‌.

ಲಭ್ಯತೆಯ ಆಧಾರದ ಮೇಲೆ ಸೀಟು ನೀಡಲಾಗುತ್ತದೆ.

ಕೋರ್ಸ್‌ ಪರೀಕ್ಷೆ ಮತ್ತು ಪ್ರಮಾಣ ಪತ್ರ

e- NTC : 

ಐಟಿಯ ತತ್ಸಮಾನ ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್ ನೀಡಲಾಗುತ್ತದೆ.

ಟೊಯೊಟಾ ಜೆಐಎಂ ಸರ್ಟಿಫಿಕೇಟ್‌ ನೀಡಲಾಗುತ್ತದೆ.

ಈ ಸರ್ಟಿಫಿಕೇಟ್‌ ಗಳನ್ನು ಬಳಸಿಕೊಂಡು ಮುಂದೆ ರೈಲ್ವೆ ಉದ್ಯೋಗಗಳು, ಅಬ್ರಾಡ್‌ ಹುದ್ದೆಗಳಿಗೂ ಅರ್ಜಿ ಸಲ್ಲಿಸಬಹುದಾಗಿದೆ.

ವಿಶೇಷ ಸೂಚನೆ

ಪ್ರತಿ ತಿಂಗಳು ನೀಡುವ ಸ್ಟೈಫಂಡ್ ರೂ.14,480.

PF, ESI ಸೌಲಭ್ಯಗಳನ್ನು ನೀಡಲಾಗುತ್ತದೆ.

ತರಬೇತಿ ಮುಗಿದ ನಂತರ ಅರ್ಹ ಶಿಶಿಕ್ಷುಗಳು, ಅಪ್ರೆಂಟಿಸ್‌ಶಿಪ್‌ ತರಬೇತಿಗೆ ಅರ್ಹರಾಗಿರುತ್ತಾರೆ.

ಪ್ರವೇಶ ಪಡೆಯುವ ಬಗ್ಗೆ

Apply Online For TTTI 2 Years Toyota Kaushalya Program

ಈ ಮೇಲಿನ ಲಿಂಕ್‌ ಬಳಸಿ ಆನ್‌ಲೈನ್‌ ಅರ್ಜಿ ಸಲ್ಲಿಸಬೇಕು. ಟೊಯೋಟ ಟೆಕ್ನಿಕಲ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್‌ ನಲ್ಲಿ ಪ್ರವೇಶ ಪಡೆಯಲು ಲಿಖಿತ ಪರೀಕ್ಷೆ, ದೈಹಿಕ ಪರೀಕ್ಷೆ ಮತ್ತು ಸಂದರ್ಶನದಲ್ಲಿ ಪಾಸ್ ಆಗಬೇಕು.

ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ದಿನಾಂಕ: 

ಮೇ 26, 2024, ಸಮಯ ಬೆಳಿಗ್ಗೆ 09ಕ್ಕೆ ಆರಂಭ.

ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ನಡೆಸುವ ಸ್ಥಳ: ಹುಬ್ಬಳ್ಳಿ, ತುಮಕೂರು, ಶಿವಮೊಗ್ಗ, ಹಾಸನ, ಬಿಡದಿ.

Post a Comment

Previous Post Next Post
CLOSE ADS
CLOSE ADS
×