KCET 2024 ಫಲಿತಾಂಶ ಬಿಡುಗಡೆ ಯಾವಾಗ? ಚೆಕ್‌ ಮಾಡುವುದು ಹೇಗೆ?

KCET 2024 ಫಲಿತಾಂಶ ಬಿಡುಗಡೆ ಯಾವಾಗ? ಚೆಕ್‌ ಮಾಡುವುದು ಹೇಗೆ?

ಕರ್ನಾಟಕ ಕಾಮನ್ ಎಂಟ್ರ್ಯಾನ್ಸ್‌ ಟೆಸ್ಟ್‌ ರಿಸಲ್ಟ್‌ ಬಿಡುಗಡೆ ಯಾವಾಗ ಎಂದು ಕಾದು ಕುಳಿತಿರುವ ವಿದ್ಯಾರ್ಥಿಗಳಿಗೆ ಉತ್ತರ ಇಲ್ಲಿದೆ. ಹಾಗೂ ರಿಸಲ್ಟ್‌ ಚೆಕ್‌ ಮಾಡುವ ವಿಧಾನವನ್ನು ಇಲ್ಲಿ ತಿಳಿಸಲಾಗಿದೆ. ಸಿಇಟಿ ಫಲಿತಾಂಶದ ನಂತರ ಕೌನ್ಸಿಲಿಂಗ್ ವೇಳಾಪಟ್ಟಿ ಬಿಡುಗಡೆ ಮಾಡಲಾಗುತ್ತದೆ.



2024-25ನೇ ಸಾಲಿನ ಇಂಜಿನಿಯರಿಂಗ್, ಆರ್ಕಿಟೆಕ್ಚರ್, ಕೃಷಿ ವಿಜ್ಞಾನ, ವೆಟರಿನರಿ, ಬಿ-ಫಾರ್ಮ್‌, ಇತರೆ ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗೆ ನಡೆಸಿದ ಅರ್ಹತಾ ಪರೀಕ್ಷೆಯಾದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯ ರಿಸಲ್ಟ್‌ ಬಿಡುಗಡೆಯ ದಿನಗಣನೆ ಆರಂಭವಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಏಪ್ರಿಲ್ 18, 19 ರಂದು ನಡೆಸಿದ್ದ ಯುಜಿಸಿಇಟಿ ಪರೀಕ್ಷೆಯ ಫಲಿತಾಂಶವು ಮೇ 20 ರಂದು ಪ್ರಕಟವಾಗಲಿದೆ. ಈ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಕೆಇಎ ವೆಬ್‌ಸೈಟ್‌ನಲ್ಲಿ ತಮ್ಮ ಯುಜಿಸಿಇಟಿ ರಿಜಿಸ್ಟರ್ ನಂಬರ್ ಹಾಗೂ ತಮ್ಮ ಜನ್ಮ ದಿನಾಂಕ ಮಾಹಿತಿ ನೀಡಿ ಲಾಗಿನ್ ಆಗುವ ಮೂಲಕ ರಿಸಲ್ಟ್‌ ಚೆಕ್‌ ಮಾಡಬಹುದು.

ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಯುಜಿಸಿಇಟಿ 2024) ಫಲಿತಾಂಶ ದಿನಾಂಕ: 20-05-2024

ಯುಜಿಸಿಇಟಿ 2024 ಫಲಿತಾಂಶ ಚೆಕ್‌ ಮಾಡಲು ವೆಬ್‌ ವಿಳಾಸ :

ಕೆಇಎ ಏಪ್ರಿಲ್ 18, 19 ರಂದು ನಡೆಸಿದ್ದ ಸಿಇಟಿ ಪರೀಕ್ಷೆಯನ್ನು 3.49 ಲಕ್ಷ ವಿದ್ಯಾರ್ಥಿಗಳು ಬರೆದಿದ್ದರು.

ಕೆಸಿಇಟಿ ಬರೆದ 12th ಪಾಸ್ ವಿದ್ಯಾರ್ಥಿಗಳಿಗೆ ವಿಶೇಷ ಸೂಚನೆ

ಪ್ರಸಕ್ತ ವರ್ಷದ ಯುಜಿಸಿಇಟಿ ಬರೆದ 12ನೇ ತರಗತಿ / ದ್ವಿತೀಯ ಪಿಯುಸಿ ಪಾಸಾದ ವಿವಿಧ ಬೋರ್ಡ್‌ ವಿದ್ಯಾರ್ಥಿಗಳು ತಮ್ಮ ಅಂಕಗಳನ್ನು ಸಿಇಟಿ ಲಾಗಿನ್‌ನಲ್ಲಿ ದಾಖಲಿಸಲು ಕೆಇಎ ಸೂಚನೆ ನೀಡಿದೆ. ಈ ಕುರಿತು ಹೆಚ್ಚಿನ ಮಾಹಿತಿಗೆ, ದಿನಾಂಕಗಳ ಕುರಿತು ತಿಳಿಯಲು ಕೆಳಗಿನ ಲಿಂಕ್‌ ಕ್ಲಿಕ್ ಮಾಡಿ ಓದಿರಿ.

ಯುಜಿಸಿಇಟಿ 2024 ರಿಸಲ್ಟ್‌ ಚೆಕ್‌ ಮಾಡುವ ವಿಧಾನ

  • ಕರ್ನಾಟಕ ಎಕ್ಸಾಮಿನೇಷನ್‌ ಅಥಾರಿಟಿ ಅಫೀಶಿಯಲ್ ವೆಬ್‌ಸೈಟ್‌ https://cetonline.karnataka.gov.in/kea/ ಗೆ ಭೇಟಿ ನೀಡಿ.
  • ಓಪನ್ ಆದ ವೆಬ್‌ಪುಟದಲ್ಲಿ 'ಪ್ರವೇಶ >> ಯುಜಿಸಿಇಟಿ 2024' ಆಯ್ಕೆ ಮಾಡಿ. ಅಥವಾ
  • ಇತ್ತೀಚಿನ ಪ್ರಕಟಣೆಗಳು ಎಂದಿರುವ ಕೆಳಗಡೆ ' ಯುಜಿಸಿಇಟಿ 2024' ಫಲಿತಾಂಶದ ಲಿಂಕ್ ನೀಡಲಾಗಿರುತ್ತದೆ. ಕ್ಲಿಕ್ ಮಾಡಿ.
  • ಕೆಇಎ'ಯ ಹೊಸ ಪೇಜ್‌ ತೆರೆಯುತ್ತದೆ.
  • ಈ ಪೇಜ್‌ನಲ್ಲಿ ಅಭ್ಯರ್ಥಿಗಳು ತಮ್ಮ ರಿಜಿಸ್ಟರ್ ನಂಬರ್ ಮತ್ತು ಜನ್ಮ ದಿನಾಂಕ ಮಾಹಿತಿ ನೀಡಿ, 'Submit' ಎಂಬಲ್ಲಿ ಕ್ಲಿಕ್ ಮಾಡಿ.
  • ಫಲಿತಾಂಶ ಪ್ರದರ್ಶಿತವಾಗುತ್ತದೆ. ಡೌನ್‌ಲೋಡ್ ಮಾಡಿ ಪ್ರಿಂಟ್ ತೆಗೆದುಕೊಳ್ಳಿ.

ಸೀಟು ಹಂಚಿಕೆ ಯಾವಾಗ?

ಇಂಜಿನಿಯರಿಂಗ್, ಆರ್ಕಿಟೆಕ್ಚರ್, ಕೃಷಿ ವಿಜ್ಞಾನ, ವೆಟರಿನರಿ, ಬಿ-ಫಾರ್ಮ್‌ ಮುಂತಾದ ಎಲ್ಲ ಕೋರ್ಸ್‌ಗಳಿಗೆ ಯುಜಿಸಿಇಟಿ ಫಲಿತಾಂಶದ ನಂತರ ಮೊದಲನೇ ಸುತ್ತಿನ ಸೀಟು ಹಂಚಿಕೆ ವೇಳಾಪಟ್ಟಿ ಹಾಗೂ ಇತರೆ ಪ್ರಕ್ರಿಯೆಗಳ ಕುರಿತು ನೋಟಿಸ್‌ ಬಿಡುಗಡೆ ಆಗಲಿದೆ. ಅಭ್ಯರ್ಥಿಗಳು ಮೊದಲ ಸುತ್ತಿನ ಪ್ರವೇಶಾತಿ ಪಡೆದ ನಂತರ ಎರಡನೇ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಬಿಡುಗಡೆ ಆಗಲಿದೆ. ಇದೇ ರೀತಿ ಒಟ್ಟು 5 ಸುತ್ತಿನಲ್ಲಿ ಸೀಟು ಹಂಚಿಕೆ ಆಗಲಿದ್ದು, ಪ್ರವೇಶ ಪ್ರಕ್ರಿಯೆ ನಡೆಸಲಾಗುತ್ತದೆ.

ಭಾರಿ ವಿವಾದಕ್ಕೆ ಕಾರಣವಾಗಿದ್ದ 2024 ಯುಜಿಸಿಇಟಿ

ಬಿಇ ಮತ್ತು ವೃತ್ತಿಪರ ಶಿಕ್ಷಣಗಳ ಪ್ರವೇಶ ಅರ್ಹತಾ ಪರೀಕ್ಷೆ ಕೆಸಿಇಟಿ 2024 ರಲ್ಲಿ ಸುಮಾರು 50 ಪಠ್ಯೇತರ ಪ್ರಶ್ನೆಗಳನ್ನು ಕೇಳಲಾಗಿದ್ದ ಕಾರಣ ಈ ಸಲ ಭಾರಿ ವಿವಾದಕ್ಕೆ ಕಾರಣವಾಗಿತ್ತು. ಈ ಸಮಸ್ಯೆ ನಿವಾರಣೆಗಾಗಿ ಉನ್ನತ ಶಿಕ್ಷಣ ಇಲಾಖೆ ತಜ್ಞರ ಸಮಿತಿ ರಚಿಸಿ, ಪರಿಹಾರಗಳನ್ನು ಕೇಳಿತ್ತು. ಅದಕ್ಕೆ ವರದಿ ಸಿಕ್ಕಿದ್ದು, ಅದರ ಆಧಾರದಲ್ಲಿ ಉನ್ನತ ಶಿಕ್ಷಣ ಇಲಾಖೆ ಕೆಲವು ಮಹತ್ವದ ಆದೇಶಗಳನ್ನು ಇತ್ತೀಚೆಗೆ ಪ್ರಕಟಿಸಿತ್ತು. ಪಠ್ಯೇತರ ಪ್ರಶ್ನೆಗಳನ್ನು ಕೈಬಿಡುವ ಜತೆಗೆ, ಇತರೆ ಹಲವು ಆದೇಶ ನೀಡಲಾಗಿತ್ತು.

Post a Comment

Previous Post Next Post
CLOSE ADS
CLOSE ADS
×