pm vishwakarma: ಉಚಿತ ಟೂಲ್ ಕಿಟ್ ಜೊತೆಗೆ ಸಿಗಲಿದೆ 15,000 ರೂ

pm vishwakarma: ಉಚಿತ ಟೂಲ್ ಕಿಟ್ ಜೊತೆಗೆ ಸಿಗಲಿದೆ 15,000 ರೂ

(pm vishwakarma) ಕೇಂದ್ರ ಸರ್ಕಾರದ ಯೋಜನೆಗಳಲ್ಲಿ ಒಂದಾದ ಪಿಎಂ ವಿಶ್ವಕರ್ಮ ಯೋಜನೆಯಲ್ಲಿ ಹಲವು ಸೌಲಭ್ಯಗಳನ್ನು ಪಡೆದುಕೊಳ್ಳಬಹುದು. ಅದರಲ್ಲಿ ಉದ್ಯಮವನ್ನು ಇನ್ನಷ್ಟು ಅಭಿವೃದ್ಧಿ ಪಡಿಸಿಕೊಳ್ಳಲು ಟೂಲ್ ಕಿಟ್ ಇ- ವೋಚರ್ ಸೌಲಭ್ಯದ ಜೊತೆಗೆ 15,000 ಗಳನ್ನು ಕೂಡ ನೀಡಲಾಗುತ್ತದೆ. ಇದು ಯಾರಿಗೆ ಸಿಗುತ್ತದೆ, ಅರ್ಹತೆ ಏನು, ಅರ್ಜಿ ಸಲ್ಲಿಕೆ ಹೇಗೆ? ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.



ಕೇಂದ್ರದ ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಉದ್ಯಮ ಸಚಿವಾಲಯ ಕುಶಲಕರ್ಮಿಗಳಿಗೆ ಟೂಲ್ ಕಿಟ್ ಜೊತೆಗೆ 15,000 ಗಳನ್ನು ನೀಡುತ್ತದೆ. ವಿಶ್ವಕರ್ಮ ಸಮುದಾಯ ಆರ್ಥಿಕವಾಗಿ ಮತ್ತು ಮಾನಸಿಕವಾಗಿ ಬಲಗೊಳ್ಳಬೇಕು ಹಾಗೂ ಅವರು ಸ್ವಂತ ದುಡಿಮೆಯಿಂದ ಜೀವನ ನಡೆಸಿಕೊಳ್ಳುವಂತೆ ಆಗಬೇಕು ಎನ್ನುವ ಕಾರಣಕ್ಕೆ ಈ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯನ್ನು ಜಾರಿಗೆ ತರಲಾಗಿದೆ. ಸುಮಾರು 18 ವಿವಿಧ ವೃತ್ತಿ ಮಾಡುತ್ತಿರುವ ಕುಶಲಕರ್ಮಿಗಳಿಗೆ ಈ ಯೋಜನೆಯ ಪ್ರಯೋಜನ ಸಿಗಲಿದೆ.

ಈ ಯೋಜನೆಯ ಅಡಿಯಲ್ಲಿ 15,000ಗಳನ್ನು ಟೂಲ್ ಕಿಟ್ ಪಡೆದುಕೊಳ್ಳಲು ಸರ್ಕಾರ ನೇರವಾಗಿ ಕುಶಲಕರ್ಮಿಗಳ ಖಾತೆಗೆ ಜಮಾ ಮಾಡುತ್ತದೆ ಜೊತೆಗೆ ಅವರ ಉದ್ಯೋಗಕ್ಕೆ ಸಂಬಂಧಪಟ್ಟಂತೆ ಟ್ರೈನಿಂಗ್ ಕೂಡ ನೀಡಲಾಗುವುದು, ಟ್ರೈನಿಂಗ್ ಸಮಯದಲ್ಲಿ 500 ರೂಪಾಯಿಗಳ ಹಣವನ್ನು ನೀಡಲಾಗುವುದು ಜೊತೆಗೆ ಅತಿ ಕಡಿಮೆ ಬಡ್ಡಿ ದರಕ್ಕೆ ಸಾಲ ಸೌಲಭ್ಯ ಒದಗಿಸಲಾಗುತ್ತದೆ.

ವಿಶ್ವಕರ್ಮ ಯೋಜನೆ ಅಡಿಯಲ್ಲಿ ಟೂಲ್ ಕಿಟ್ ಪಡೆದುಕೊಳ್ಳಲು ಬೇಕಾಗಿರುವ ದಾಖಲೆಗಳು ಯಾವುದು

ಆದಾಯ ಪ್ರಮಾಣ ಪತ್ರ

* ಜಾತಿ ಪ್ರಮಾಣ ಪತ್ರ

* ಆಧಾರ್ ಕಾರ್ಡ್

* ಮೊಬೈಲ್ ಸಂಖ್ಯೆ

* ಬ್ಯಾಂಕ್ ಖಾತೆಯ ವಿವರ

* ಗುರುತಿನ ಪುರಾವೆ

* ಅಡ್ರೆಸ್ ಪ್ರೊಫ್

ಈ ಮೊದಲಾದ ದಾಖಲೆಗಳನ್ನು ಕೊಡಬೇಕು.

ಅರ್ಜಿ ಸಲ್ಲಿಸುವುದು ಹೇಗೆ?:

* ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ. (https://pmvishwakarma.gov.in)

* ನಂತರ ಲಾಗಿನ್ ಆಗಬೇಕು

* ನಿಮ್ಮ ಮೊಬೈಲ್ ಸಂಖ್ಯೆ ನಮೂದಿಸಿ ಕ್ಯಾಪ್ಟ ನಂಬರ್ ಹಾಕಿದರೆ ಒಟಿಪಿಯನ್ನು ನಮೂದಿಸಿ.

* ಬಳಿಕ ಅಗತ್ಯ ಇರುವ ಮಾಹಿತಿಗಳನ್ನು ನೀಡಿ ಟೂಲ್ ಕಿಟ್ ಪಡೆದುಕೊಳ್ಳುವುದಕ್ಕೆ ಅರ್ಜಿ ಸಲ್ಲಿಕೆ ಮಾಡಬಹುದು.


Post a Comment

Previous Post Next Post
CLOSE ADS
CLOSE ADS
×