ನೌಕಾಪಡೆ ಅಗ್ನಿವೀರರ ಹುದ್ದೆಗೆ ಪಿಯುಸಿ ಪಾಸಾದವರಿಂದ ಅರ್ಜಿ ಆಹ್ವಾನ: ಡಿಗ್ರಿ ಶಿಕ್ಷಣದ ಜತೆಗೆ ವೇತನ ಸಹಿತ ಜಾಬ್

ನೌಕಾಪಡೆ ಅಗ್ನಿವೀರರ ಹುದ್ದೆಗೆ ಪಿಯುಸಿ ಪಾಸಾದವರಿಂದ ಅರ್ಜಿ ಆಹ್ವಾನ: ಡಿಗ್ರಿ ಶಿಕ್ಷಣದ ಜತೆಗೆ ವೇತನ ಸಹಿತ ಜಾಬ್

Navy Agniveer SSR Job Details : ಭಾರತೀಯ ನೌಕಾಪಡೆಯು ಸೀನಿಯರ್ ಸೆಕೆಂಡರಿ ಲೆವೆಲ್‌ ಅಗ್ನಿವೀರರ ಹುದ್ದೆಗಳ ಭರ್ತಿಗೆ ಇದೀಗ ಅರ್ಜಿ ಆಹ್ವಾನಿಸಿದೆ. ನೀವು ದ್ವಿತೀಯ ಪಿಯುಸಿ ಪಾಸಾದ ವಿದ್ಯಾರ್ಥಿಗಳಾಗಿದ್ದಲ್ಲಿ, ನೌಕಾಪಡೆಯ ಉದ್ಯೋಗಗಳಲ್ಲಿ ಆಸಕ್ತಿ ಇದ್ದಲ್ಲಿ ಈಗಲೇ ಅರ್ಜಿ ಸಲ್ಲಿಸಿ.



ದ್ವಿತೀಯ ಪಿಯುಸಿ ಪಾಸಾದ ವಿದ್ಯಾರ್ಥಿಗಳು ನೀವಾಗಿದ್ದು, ಕೇಂದ್ರ ಸರ್ಕಾರಿ ರಕ್ಷಣಾ ಪಡೆಗಳಲ್ಲಿ ಒಂದಾದ ನೌಕಾಪಡೆಯಲ್ಲಿ ಉದ್ಯೋಗ ಮಾಡಲು ಆಸಕ್ತಿ ಇದ್ದಲ್ಲಿ ಇದೀಗ ಭರ್ಜರಿ ಆಫರ್‌. ಅಷ್ಟೇ ಅಲ್ಲದೇ ನೀವು ಇಲ್ಲಿ ಉದ್ಯೋಗದೊಂದಿಗೆ ಪದವಿ ಶಿಕ್ಷಣವನ್ನು ಪಡೆಯಬಹುದಾಗಿದೆ. ಆ ಹುದ್ದೆಯೇ ಅಗ್ನಿವೀರ್‌.

ಭಾರತೀಯ ನೌಕಾಪಡೆಯು ಅಗ್ನಿಪಥ ಯೋಜನೆಯ ಅಗ್ನಿವೀರರ ಭರ್ತಿಗೆ ಇದೀಗ ನೋಟಿಫಿಕೇಶನ್‌ ಬಿಡುಗಡೆ ಮಾಡಿದೆ. ಇದು 2024ನೇ ಸಾಲಿನ ನವೆಂಬರ್ ಬ್ಯಾಚ್‌ ಉದ್ಯೋಗಗಳಾಗಿವೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ, ನೇಮಕಾತಿಯಲ್ಲಿ ಅರ್ಹತೆ ಪಡೆಯುವವರನ್ನು ನವೆಂಬರ್ ತಿಂಗಳ ಅಂತ್ಯಕ್ಕೆ ಹುದ್ದೆಗೆ ನಿಯೋಜನೆ ಮಾಡಲಾಗುತ್ತದೆ. ಹುದ್ದೆಗಳ ವಿವರಗಳನ್ನು ಕುರಿತು ಕೆಳಗಿನಂತೆ ಮಾಹಿತಿ ನೀಡಲಾಗಿದೆ.

ಭಾರತೀಯ ನೌಕಾಪಡೆ ಅಗ್ನಿವೀರರು (ಎಸ್‌ಎಸ್‌ಆರ್‌- ಸೀನಿಯರ್ ಸೆಕೆಂಡರಿ ಲೆವೆಲ್) ಹುದ್ದೆಗಳ ಸಂಖ್ಯೆ : ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುತ್ತದೆ.

ಶೈಕ್ಷಣಿಕ ಅರ್ಹತೆ ಹಾಗೂ ವಯೋಮಿತಿ ಅರ್ಹತೆ

  • 10+2 ವಿದ್ಯಾರ್ಹತೆಯನ್ನು ಕಡ್ಡಾಯವಾಗಿ ಗಣಿತ ಮತ್ತು ಭೌತಶಾಸ್ತ್ರದಲ್ಲಿ ಓದಿರಬೇಕು.
  • ಜತೆಗೆ ಬಯೋಲಜಿ/ ಕೆಮಿಸ್ಟ್ರಿ / ಕಂಪ್ಯೂಟರ್ ಸೈನ್ಸ್‌ ಯಾವುದಾದರು ವಿಷಯ ಜತೆಯಲ್ಲಿ ಓದಿರಬೇಕು.
  • ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು 01 ನವೆಂಬರ್ 2003 - 30 ಏಪ್ರಿಲ್ 2007 ರ ನಡುವೆ ಜನಿಸಿರಬೇಕು.
  • ಅವಿವಾಹಿತ ಪುರುಷ, ಮಹಿಳೆಯರು ಅರ್ಜಿ ಸಲ್ಲಿಸಬಹುದು.

ಇತರೆ ಅರ್ಹತೆಗಳು

  • ಪುರುಷ ಅಭ್ಯರ್ಥಿಗಳ ಎತ್ತರ ಕನಿಷ್ಠ 157 ಸೆಂ.ಮೀ ಇರಬೇಕು.
  • ಮಹಿಳಾ ಅಭ್ಯರ್ಥಿಗಳ ಎತ್ತರ ಕನಿಷ್ಠ 152 ಸೆಂ.ಮೀ ಇರಬೇಕು.
  • Indian Navy Agniveer SSR Apply Online

ಪ್ರಮುಖ ದಿನಾಂಕಗಳು

  • ಆನ್‌ಲೈನ್‌ ರಿಜಿಸ್ಟ್ರೇಷನ್ ಸ್ವೀಕಾರ ದಿನಾಂಕ : 13-05-2024
  • ಅಗ್ನಿವೀರ ಹುದ್ದೆಗೆ ಅಪ್ಲಿಕೇಶನ್ ಸಲ್ಲಿಸಲು ಕೊನೆ ದಿನಾಂಕ : 27-05-2024
  • ಲಿಖಿತ ಪರೀಕ್ಷೆ ಮತ್ತು ದೈಹಿಕ ಸಾಮರ್ಥ್ಯ ಪರೀಕ್ಷೆ : ಆಕ್ಟೋಬರ್ ತಿಂಗಳು
  • ಮೆಡಿಕಲ್ ಟೆಸ್ಟ್‌ ಮತ್ತು ಚಿಲ್ಕಾ'ದ ಐಎನ್‌ಎಸ್‌ ಘಟಕದಲ್ಲಿ ಸೇರುವ ದಿನಾಂಕ: ನವೆಂಬರ್ ತಿಂಗಳು
  • Indian Navy Agniveer SSR 2024

ಭಾರತೀಯ ನೌಕಾಪಡೆಯ ಅಗ್ನಿವೀರ ಹುದ್ದೆ ಕುರಿತ ಮಾಹಿತಿಗಳು / ಸೇರಲು ಅರ್ಹತೆಗಳು

- 17.6 - 21 ವರ್ಷದೊಳಗಿನ ಅಭ್ಯರ್ಥಿಗಳು ಸೇವೆಗೆ ಸೇರಬಹುದು.

- 4 ವರ್ಷ ಸೇವೆಯ ಅವಧಿ ಇರುತ್ತದೆ.

- ವಾರ್ಷಿಕ ರೂ.4.76 ಲಕ್ಷದಿಂದ ನಾಲ್ಕನೇ ವರ್ಷದಲ್ಲಿ ರೂ.6.72 ಲಕ್ಷದವರೆಗೆ ವೇತನ ಇರುತ್ತದೆ.

- ಸೇವಾ ನಿಧಿ ಪ್ಯಾಕೇಜ್‌ ಅನ್ನು 4 ವರ್ಷದ ನಿವೃತ್ತಿ ನಂತರ ಟ್ಯಾಕ್ಸ್‌ ಫ್ರೀ ಆಗಿ ರೂ.11.71 ಲಕ್ಷ ನೀಡಲಾಗುತ್ತದೆ.

- ರೂ.48 ಲಕ್ಷ ಇನ್ಸುರೆನ್ಸ್‌ ಪ್ಯಾಕೇಜ್‌ ಇರುತ್ತದೆ.

- ಅಗ್ನಿವೀರ್ ಸ್ಕಿಲ್ ಸರ್ಟಿಫಿಕೇಟ್‌ ಅನ್ನು ನೀಡಲಾಗುತ್ತದೆ.

ನೇವಿ ಅಗ್ನಿವೀರರಿಗೆ ಸಿಗುವ ಮಾಸಿಕ ವೇತನ

ಮೊದಲನೇ ವರ್ಷ : ರೂ.30,000 ಜತೆಗೆ ಇತರೆ ಭತ್ಯೆಗಳು.

ಎರಡನೇ ವರ್ಷ : ರೂ.33,000 ಜತೆಗೆ ಇತರೆ ಭತ್ಯೆಗಳು.

ಮೂರನೇ ವರ್ಷ : ರೂ.36,500 ಜತೆಗೆ ಇತರೆ ಭತ್ಯೆಗಳು.

ನಾಲ್ಕನೇ ವರ್ಷ : ರೂ.40,000 ಜತೆಗೆ ಇತರೆ ಭತ್ಯೆಗಳು.

ನೌಕಾಪಡೆ ಅಗ್ನಿವೀರರ ನೇಮಕ ಪ್ರಕ್ರಿಯೆ : 

ಲಿಖಿತ ಪರೀಕ್ಷೆ , ದೈಹಿಕ ಸಾಮರ್ಥ್ಯ ಪರೀಕ್ಷೆ, ವೈದ್ಯಕೀಯ ಪರೀಕ್ಷೆ, ಸಹಿಷ್ಣುತೆ ಪರೀಕ್ಷೆ ನಡೆಸಿ, ಅಭ್ಯರ್ಥಿಗಳ ಆಯ್ಕೆ ನಡೆಸಲಾಗುತ್ತದೆ.

ಮಹತ್ವದ ಈ ಸೂಚನೆ ನೆನಪಿರಲಿ

ಅಗ್ನಿವೀರ ಸೇವೆ ಸಲ್ಲಿಸಿದ ಶೇಕಡ.25 ರಷ್ಟು ಅಭ್ಯರ್ಥಿಗಳನ್ನು ಪ್ರತಿ ಬ್ಯಾಚ್‌ನಿಂದ ರೆಗ್ಯುಲರ್ ಕೇಡರ್‌ಗೆ ಆಯ್ಕೆ ಮಾಡಿ, ನಿಯೋಜಿಸುತ್ತದೆ ನೌಕಾಪಡೆ.

ಅಗ್ನಿವೀರ ಹುದ್ದೆಗೆ ಸೇರುವ ಅಭ್ಯರ್ಥಿ ಈ ಸೇವಾ ಅವಧಿಯಲ್ಲಿಯೇ 3 ವರ್ಷದ ಸ್ಕಿಲ್ ಆಧಾರಿತ ಡಿಗ್ರಿ ಕೋರ್ಸ್‌ ಪಡೆಯಲಿದ್ದಾರೆ. ಈ ಕೋರ್ಸ್‌ ಸರ್ಟಿಫಿಕೇಟ್‌ ಅನ್ನು ನೀಡಲಿದ್ದು, ಸೇವಾ ಅವಧಿ ಮುಗಿದ ನಂತರ ಮುಂದಿನ ಉನ್ನತ ಶಿಕ್ಷಣ ಅಧ್ಯಯನಕ್ಕೆ ಹೋಗಬಹುದು.


Post a Comment

Previous Post Next Post
CLOSE ADS
CLOSE ADS
×