HSRP Number Plate: ಇಂತಹವರು HSRP ನಂಬರ್ ಪ್ಲೇಟ್ ಬುಕ್ ಮಾಡುವ ಅಗತ್ಯ ಇಲ್ಲ! ಕೇಂದ್ರದ ಆದೇಶ

HSRP Number Plate: ಇಂತಹವರು HSRP ನಂಬರ್ ಪ್ಲೇಟ್ ಬುಕ್ ಮಾಡುವ ಅಗತ್ಯ ಇಲ್ಲ! ಕೇಂದ್ರದ ಆದೇಶ

ರಾಜ್ಯಾದ್ಯಂತ ವಾಹನ ಇರುವವರಿಗೆ ಸರಕಾರ ಇತ್ತೀಚೆಗಷ್ಟೇ ಹೊಸ ಆದೇಶ ಒಂದನ್ನು ನೀಡಿತ್ತು. ಅದರ ಪ್ರಕಾರ ಯಾರೆಲ್ಲ ವಾಹನ ಹೊಂದಿದ್ದಾರೆ ಅವರಿಗೆ HSRP Number Plate ಅನ್ನು ಅಳವಡಿಕೆ ಮಾಡಬೇಕು. ಮಾಡದೆ ಇದ್ದವರಿಗೆ ಕೂಡ ಪುನಃ ಪುನಃ ಅವಕಾಶ ನೀಡಲಾಗುತ್ತಿದೆ‌. ಹೀಗಾಗಿ ವಾಹನಗಳಿಗೆ HSRP ಅಳವಡಿಕೆ ಬಗ್ಗೆ ಜನರಿಗೂ ಕೂಡ ಮನದಟ್ಟು ಆಗುತ್ತಿದೆ ಎನ್ನಬಹುದು. ಅದರ ಜೊತೆಗೆ ಹೊಸದಾಗಿ ವಾಹನ ಖರೀದಿ ಮಾಡೋರಿಗೆ ಬಿಗ್ ರಿಲೀಫ್ ಸಿಗಲಿದೆ.



2019ಕ್ಕಿಂತ ಮೊದಲು ನೋಂದಣಿ ಆದ ವಾಹನಗಳಿಗೆ ಅತಿ ಸುರಕ್ಷತಾ ನೋಂದಣಿ ಕಡ್ಡಾಯ ಮಾಡಿದ್ದ ಬಳಿಕ ಆನ್ಲೈನ್ ಮೂಲಕ HSRP Number Plate ಗೆ ಬೇಡಿಕೆ ಇಟ್ಟವರ ಪ್ರಮಾಣ ಕೂಡ ಅಧಿಕವಾಗುತ್ತಿದೆ‌. ಅನೇಕ ತಾಂತ್ರಿಕ ಕಾರಣದಿಂದಾಗಿ ಆನ್ಲೈನ್ ಮೂಲಕ ರಿಜಿಸ್ಟ್ರೇಶನ್ ಆದರೂ ಕೂಡ ಅನೇಕರಿಗೆ ನಂಬರ್ ಪ್ಲೇಟ್ ಇನ್ನು ಕೂಡ ಬಂದಿಲ್ಲ ಈ ನಡುವೆ ಹೊಸದಾಗಿ ವಾಹನ ಖರೀದಿ ಮಾಡ್ತೇನೆ ಅನ್ನೋರಿಗೆ HSRP ಯಿಂದ ಮುಕ್ತತೆ ಸಿಗಲಿದೆ.

ಗಡುವು ವಿಸ್ತರಣೆ:

HSRP Number Plate ಅಳವಡಿಕೆ ಮಾಡಿಕೊಂಡಿದ್ದವರು ಈಗ ರಿಲೀಫ್ ಆಗಿದ್ದಾರೆ. ಅದೇ ರೀತಿ ಇನ್ನು ಕೂಡ ಮಾಡಿಸಿ ಕೊಂಡಿಲ್ಲ ಅನ್ನೋರಿಗೆ ಈಗಾಗಲೇ ಅನೇಕ ಸಲ ಅವಕಾಶ ನೀಡಲಾಗಿದೆ. ಮೊದಲು ಫೆಬ್ರವರಿ 17 ಕೊನೆಯ ದಿನಾಂಕ ಎಂದು ಹೇಳಲಾಗಿತ್ತು ಬಳಿಕ ಮತ್ತೆ ಸಮಯಾವಕಾಶ ನೀಡಲಾಗಿದೆ. ಅದೇ ರೀತಿ ಈಗ ಕೊನೆಯದಾಗಿ ಮೇ 31ರ ಒಳಗೆ ವಾಹನಕ್ಕೆ HSRP ನಂಬರ್ ಪ್ಲೇಟ್ ಅನ್ನು ಕಡ್ಡಾಯವಾಗಿ ಮುಂದುವರೆಸುವಂತೆ ತಿಳಿಸಲಾಗಿದೆ.

ಹೊಸ ವಾಹನಕ್ಕೆ HSRP ಮಾಡಿಸಬೇಕಾಗಿಲ್ಲ:

ಹೊಸದಾಗಿ ವಾಹನ ಖರೀದಿ‌ ಮಾಡ್ತೇನೆ ಅನ್ನೋರು ಅಥವಾ ಈಗ ವಾಹನ ಖರೀದಿ ಮಾಡಿ ಒಂದು ವರ್ಷ ಕೂಡ ಆಗಿರದೇ ಇದ್ದರೆ ವಾಹನ ಖರೀದಿ ಮಾಡಿದ್ದ ಶೋ ರೂಂ ನವರೆ ನಂಬರ್ ಪ್ಲೇಟ್ ಹಾಕಿಸಿಕೊಡಬೇಕು ಎಂಬ ನಿಯಮ ಇತ್ತೀಚೆಗಷ್ಟೇ ಜಾರಿಗೆ ಬಂದಿದೆ. ಹಾಗಾಗಿ‌ ನೀವು ಹೊಸ ವಾಹನ ಖರೀದಿ ಮಾಡುವಾಗ HSRP ರಿಜಿಸ್ಟ್ರೇಶನ್ ಆಗಿಯೇ ನಿಮ್ಮ ಕೈ ಸೇರಲಿದೆ ಎಂದು ಈ ಮೂಲಕ ಹೇಳಬಹುದು.

ನಿಯಮ ಮೀರಿದರೆ ಏನಾಗುತ್ತೆ?

HSRP Number Plate ಅನ್ನು ನಿಗಧಿತ ದಿನಾಂಕದ ಒಳಗೆ ಮಾಡಿಸದೇ ಇದ್ದರೆ ನಿಮಗೆ ಮೇ 31ರ ಬಳಿಕ ಫೈನ್ ಬೀಳುವ ಸಾಧ್ಯತೆ ಇದೆ. ನಿಮ್ಮ ಲೈಸೆನ್ಸ್ ರದ್ದು ಸಹ ಆಗಬಹುದು. ಹಾಗಾಗಿ ನೀವು ರಿಜಿಸ್ಟ್ರೇಶನ್ ಮಾಡಿಸಿದ್ದರೆ ಅದರ ಒಂದು ಕಾಪಿಯನ್ನು ಮತ್ತು ನೀವು ಬಿಲ್ ಕಟ್ಟಿದ್ದ ರಿಸಿಪ್ಟ್ ಅನ್ನು ಸದಾ ಜೊತೆಗೆ ಇಟ್ಟುಕೊಂಡು ಪ್ರಯಾಣ ಮಾಡಿದರೆ ನೀವು ದಂಡ ಪಾವತಿ ಮಾಡಬೇಕಿಲ್ಲ.


Post a Comment

Previous Post Next Post
CLOSE ADS
CLOSE ADS
×