ಸರ್ಕಾರವು ವಿವಿಧ ಯೋಜನೆಗಳ ಮೂಲಕ ಎಲ್ಲರಿಗೂ ಸೌಲಭ್ಯವನ್ನು ಕಲ್ಪಿಸಲು ಮುಂದಾಗಿದ್ದು ಹಲವಾರು ಸೌಲಭ್ಯಗಳನ್ನು ಈಗಾಗಲೇ ವಿವಿಧ ಯೋಜನೆಗಳ ಮೂಲಕ ರಾಜ್ಯದ ಜನತೆಗೆ ನೀಡಲಾಗಿದೆ. ಇನ್ನು ಅದೇ ರೀತಿಯಾಗಿ ರೈತರಿಗೆ ಮತ್ತಷ್ಟು ಸೌಲಭ್ಯವನ್ನು ಒದಗಿಸುವ ಸಲುವಾಗಿ ಇದೀಗ ಸರ್ಕಾರ ಮತ್ತೊಂದು ಯೋಜನೆಯನ್ನು ಸಿದ್ಧ ಮಾಡಿದೆ, ಮತ್ತು ಅದನ್ನು ಆದಷ್ಟು ಬೇಗ ಅನುಷ್ಠಾನಗೊಳಿಸಲು ಮುಂದಾಗಿದೆ. ಹಾಗಾದರೆ ಸರ್ಕಾರದಿಂದ ಸಿಕ್ಕಿರುವಂತ ಮತ್ತೊಂದು ಯೋಜನೆ ಯಾವುದೆಂದರೆ ಅದೆ ನರೇಗಾ ಯೋಜನೆ(National Rural Employment Guarantee Scheme).
ನರೇಗಾ ಯೋಜನೆಯ ಹೈಲೈಟ್ಸ್:
ಈ ನರೇಗಾ ಯೋಜನೆಯ ಅಡಿಯಲ್ಲಿ ಕೃಷಿಕರಿಗೆ ಸಹಯಾಧನ ಒದಗಿಸುವ ಸಲುವಾಗಿ ಅವರ ಕೆಲಸವನ್ನು ಮುಂದುವರೆಸಲು ಪ್ರೋತ್ಸಾಹ ನೀಡುವುದಾಗಿದೆ. ರೈತರು ಬರಿ ಬೆಳೆ,ತೋಟ,ಗದ್ದೆ ಬೆಳೆಯುವ ಚಟುವಟಿಕೆ ಮಾತ್ರವಲ್ಲದೆ, ಪ್ರಾಣಿ ಮತ್ತು ಪಶು ಸಾಕಾಣಿಕೆ ಅಂದರೆ ಹೈನುಗಾರಿಕೆ ಅಲ್ಲಿಯೂ ಸಹ ತಮ್ಮನ್ನು ತೊಡಗಿಸಿಕೊಂಡು ಇರುತ್ತಾರೆ. ಇನ್ನು ಅದರಲ್ಲಿ ಕೋಳಿ ಸಾಕಾಣಿಕೆ, ಕುರಿ ಸಾಕಾಣಿಕೆ, ಗೋವು ಸಾಕಾಣಿಕೆ ಮತ್ತು ಮುಂತಾದವು ಸೇರಿರುತ್ತವೆ.
ಇನ್ನು ಗ್ರಾಮೀಣ ಭಾಗದ ಜನರಿಗೆ ಅದರಲ್ಲೂ ಪ್ರಮುಖವಾಗಿ ಕುರಿ ಸಾಕಾಣಿಕೆ ಮಾಡುತ್ತಿರುವವರು ಮತ್ತು ಕುರಿ ಸಾಕಾಣಿಕೆ ಮಾಡಲು ಯೋಜನೆ ಹಾಕಿಕೊಂಡು ಇರುವವರಿಗೆ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಸಹಾಯಧನವನ್ನು ನೀಡಲು ಸಾರ್ಕಾರ ಮುಂದಾಗಿದೆ.ಇದರಂತೆ ಸಹಾಯಧನ ಪಡೆಯಲು ಸಂಬಂಧ ಪಟ್ಟಂತಹ ಗ್ರಾಮಸ್ಥರು ಕುರಿ ಸಾಕಾಣಿಕೆ ಮಾಡಲು ಬೇಕಾಗುವ ಅಗತ್ಯ ವಸ್ತುಗಳು ಅಂದರೆ ಕುರಿ ಸಾಕಾಣಿಕೆಯ ಶೆಡ್ ನಿರ್ಮಾಣ ಮಾಡಲು ಬೇಕಾಗುವ ಎಲ್ಲಾ ಅಗತ್ಯ ವಸ್ತುಗಳ ಮೊತ್ತವನ್ನು ಪಟ್ಟಿ ಮಾಡಿ.
ಗ್ರಾಮ ಪಂಚಾಯಿತಿಯಲ್ಲಿ ಅನುಮೋದನೆ ಪಡೆದುಕೊಳ್ಳಲು, ಮನವಿಯನ್ನು ಸಲ್ಲಿಸುವ ಮೂಲಕ ಸಹಾಯಧನದ ಶಿಫಾರಸ್ಸು ಪಡೆಯಬಹುದು. ಇನ್ನು ಈ ವಿಷಯದ ಕುರಿತಾಗಿ ಜಿಲ್ಲಾಧಿಕಾರಿಯಿಂದ ಗ್ರಾಮ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಸೂಚನೆಯನ್ನು ನೀಡಲಾಗಿದೆ . ಇನ್ನು ರೈತರು ತಮ್ಮ ಜಾಗದ ಸುತ್ತಲೂ ಶೆಡ್ ನಿರ್ಮಿಸಲು 44,000 ಸಾವಿರದ ವರೆಗೆ ಸಹಾಯಧನವನ್ನು ಗ್ರಾಮ ಪಂಚಾಯತಿಯಿಂದ ಪಡೆಯಬಹುದಾಗಿದೆ.
ಕಳ್ಳರು ಮತ್ತು ಕಾಡು ಪ್ರಾಣಿಗಳು ದಾಳಿ ಮಾಡದಂತೆ ತಡೆಯಲು, ಮತ್ತು ಕುರಿ ಸಾಕಾಣಿಕೆಯಲ್ಲಿ ಕುರಿಗಳನ್ನು ಸುರಕ್ಷಿತವಾಗಿ ಇರಿಸಿಕೊಳ್ಳಲು ಶೆಡ್ ನಿರ್ಮಾಣ ಮಾಡುವುದು ಅವಶ್ಯಕ ಎಂದು ಹೇಳಿದರೆ ತಪ್ಪಾಗಲಾರದು. ಆದಕಾರಣ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಬರುವ ಹೈನುಗಾರಿಕೆ ಚಟುವಟಿಕೆ ಮಾಡುವಂತ ರೈತರಿಗೆ ಈ ಸೌಲಭ್ಯವನ್ನು ಒದಗಿಸುವ ಸಲುವಾಗಿ ಜಿಲ್ಲಾಪಂಚಾಯತ್ ವತಿಯಿಂದ ಈ ಯೋಜನೆಯನ್ನು ಗ್ರಾಮೀಣ ಭಾಗದಲ್ಲಿ ಜಾರಿಗೆ ತರಲಾಗಿದೆ.