KPSC Recruitment 2024: ಗ್ರೂಪ್ ಎ & ಬಿ ಹುದ್ದೆಗಳ ನೇಮಕಾತಿ- ಆಸಕ್ತರು ನಾಳೆಯೊಳಗೆ ಅಪ್ಲೈ ಮಾಡಿ

KPSC Recruitment 2024: ಗ್ರೂಪ್ ಎ & ಬಿ ಹುದ್ದೆಗಳ ನೇಮಕಾತಿ- ಆಸಕ್ತರು ನಾಳೆಯೊಳಗೆ ಅಪ್ಲೈ ಮಾಡಿ

ಒಟ್ಟು 384 ಗ್ರೂಪ್ ಎ & ಗ್ರೂಪ್ ಬಿ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಈ ಮೊದಲು ಏಪ್ರಿಲ್ 3, 2024 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿತ್ತು.



KPSC Recruitment 2024: ಕರ್ನಾಟಕ ಲೋಕಸೇವಾ ಆಯೋಗ(Karnataka Public Service Commission) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 384 ಗ್ರೂಪ್ ಎ & ಗ್ರೂಪ್ ಬಿ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಈ ಮೊದಲು ಏಪ್ರಿಲ್ 3, 2024 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿತ್ತು (Last Date). ಬಳಿಕ ಆ ದಿನಾಂಕವನ್ನು ಏಪ್ರಿಲ್ 15ರವರೆಗೆ ವಿಸ್ತರಿಸಲಾಗಿತ್ತು. ಆ ಪ್ರಕಾರ ಆಸಕ್ತರು ನಾಳೆಯೊಳಗೆ ಅರ್ಜಿ ಹಾಕಬೇಕು. ಆಸಕ್ತರು ಆನ್ಲೈನ್ ಮೂಲಕ ಅಪ್ಲೈ ಮಾಡಬೇಕು. ಮಾರ್ಚ್ 4ರಿಂದ ಅರ್ಜಿ ಪ್ರಕ್ರಿಯೆ ಆರಂಭವಾಗಿತ್ತು.

ಪ್ರಸ್ತುತ ಅಭ್ಯರ್ಥಿಗಳ ಹಿತದೃಷ್ಠಿಯಿಂದ ಮತ್ತು ಚುನಾವಣಾ ಕಾರ್ಯ ಪ್ರಗತಿಯಲ್ಲಿರುವ ಕಾರಣದಿಂದಾಗಿ ಅರ್ಜಿ ಸಲ್ಲಿಕೆ ದಿನಾಂಕವನ್ನು ಏಪ್ರಿಲ್ 15, 2024ರವರೆಗೆ ವಿಸ್ತರಿಸಲಾಗಿದೆ ಎಂದು ನೋಟಿಫಿಕೇಶನ್ನಲ್ಲಿ ತಿಳಿಸಲಾಗಿತ್ತು. ಕರ್ನಾಟಕ ಸರ್ಕಾರದ ಉದ್ಯೋಗ ಹುಡುಕುತ್ತಿದ್ರೆ ಈಗಲೇ ಅಪ್ಲೈ ಮಾಡಿ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಹುದ್ದೆಯ ಮಾಹಿತಿ:

ಗ್ರೂಪ್ ಎ - 159

ಗ್ರೂಪ್ ಬಿ- 225

ಒಟ್ಟು ಹುದ್ದೆಗಳು- 384

ಗ್ರೂಪ್ ಎ ಹುದ್ದೆಗಳು:

ಸಹಾಯಕ ಆಯುಕ್ತರು- ಸಿಬ್ಬಂದಿ & ಆಡಳಿತ ಸುಧಾರಣೆ- 40

ವಾಣಿಜ್ಯ ತೆರಿಗೆಗಳ ಸಹಾಯಕ ಆಯುಕ್ತರು- ವಾಣಿಜ್ಯ ತೆರಿಗೆ ಇಲಾಖೆ- 41

ಸಹಾಯಕ ನಿರ್ದೇಶಕರು- ಖಜಾನೆ ಇಲಾಖೆ- 2

ಕಾರ್ಯ ನಿರ್ವಾಹಕ ಅಧಿಕಾರಿ/ಸಹಾಯಕ ಕಾರ್ಯದರ್ಶಿ- ಗ್ರಾಮೀಣಾಭಿವೃದ್ಧಿ & ಪಂಚಾಯತ್ ರಾಜ್ ಇಲಾಖೆ-40

ಡಿವೈಎಸ್ಪಿ- ಒಳಾಡಳಿತ ಇಲಾಖೆ-9

ಸಹಾಯಕ ನಿರ್ದೇಶಕರು ಗ್ರೇಡ್-1, ಸಮಾಜ ಕಲ್ಯಾಣ ಇಲಾಖೆ- 20

ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ/ ಸಹಾಯಕ ನಿರ್ದೇಶಕರು/ಪ್ರಾಂಶುಪಾಲರು/PETC- ಹಿಂದುಳಿದ ವರ್ಗಗಳ ಇಲಾಖೆ-7

ಗ್ರೂಪ್ ಬಿ ಹುದ್ದೆಗಳು:

ತಹಶೀಲ್ದಾರ್, ಗ್ರೇಡ್ 2-ಕಂದಾಯ ಇಲಾಖೆ- 51

ವಾಣಿಜ್ಯ ತೆರಿಗೆ ಅಧಿಕಾರಿ-ವಾಣಿಜ್ಯ ತೆರಿಗೆ ಇಲಾಖೆ- 59

ಕಾರ್ಮಿಕ ಅಧಿಕಾರಿ- ಕಾರ್ಮಿಕ ಇಲಾಖೆ- 4

ಸಹಾಯಕ ಅಧೀಕ್ಷಕರು- ಒಳಾಡಳಿತ ಇಲಾಖೆ (ಬಂಧೀಖಾನೆ)- 3

ಸಹಕಾರ ಸಂಘಗಳ ಸಹಾಯಕ ನಿಬಂಧಕರು- ಸಹಕಾರ ಇಲಾಖೆ- 12

ಸಹಾಯಕ ನಿರ್ದೇಶಕರು-ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆ-9

ಅಬಕಾರಿ ಉಪ ಅಧೀಕ್ಷಕರು, ಆರ್ಥಿಕ ಇಲಾಖೆ(ಅಬಕಾರಿ)- 10

ಉದ್ಯೋಗಾಧಿಕಾರಿ, ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ & ಜೀವನೋಪಾಯ ಇಲಾಖೆ- 3

ಸಹಾಯಕ ನಿರ್ದೇಶಕರು, ಯುವ ಸಬಲೀಕರಣ & ಕ್ರೀಡಾ ಇಲಾಖೆ- 4

ಮುಖ್ಯಾಧಿಕಾರಿ ಗ್ರೇಡ್-1, ನಗರಾಭಿವೃದ್ಧಿ ಇಲಾಖೆ- 1

ಸಹಾಯಕ ಖಜಾನಾಧಿಕಾರಿ- ಆರ್ಥಿಕ ಇಲಾಖೆ (ಖಜಾನೆ)- 46

ಸಹಾಯಕ ನಿರ್ದೇಶಕರು, ಆಹಾರ ನಾಗರಿಕ ಸರಬರಾಜು & ಗ್ರಾಹಕರ ವ್ಯವಹಾರಗಳ ಇಲಾಖೆ-9

ಸಹಾಯಕ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ- 2

ಶಾಖಾಧಿಕಾರಿ- ಕರ್ನಾಟಕ ಸರ್ಕಾರದ ಸಚಿವಾಲಯ- 5

ಸಹಾಯಕ ನಿರ್ದೇಶಕರು, ಗ್ರೇಡ್ 2, ಸಮಾಜ ಕಲ್ಯಾಣ ಇಲಾಖೆ- 7

ವೇತನ:

ನಿಗದಿಪಡಿಸಿಲ್ಲ.

ಉದ್ಯೋಗದ ಸ್ಥಳ:

ಕರ್ನಾಟಕ

ವಯೋಮಿತಿ:

ಕರ್ನಾಟಕ ಲೋಕಸೇವಾ ಆಯೋಗ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಕನಿಷ್ಠ 21 ವರ್ಷ ಮತ್ತು ಗರಿಷ್ಠ 38 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ವಯೋಮಿತಿ ಸಡಿಲಿಕೆ:

2A, 2B, 3A, 3B ಅಭ್ಯರ್ಥಿಗಳು: 3 ವರ್ಷಗಳು

SC, ST, ಪ್ರವರ್ಗ-1 ಅಭ್ಯರ್ಥಿಗಳು: 5 ವರ್ಷಗಳು

PWD ಅಭ್ಯರ್ಥಿಗಳು: 10 ವರ್ಷಗಳು

ಅರ್ಜಿ ಶುಲ್ಕ:

SC/ ST, ಪ್ರವರ್ಗ-1, PWD ಅಭ್ಯರ್ಥಿಗಳು: ಇಲ್ಲ

ಮಾಜಿ ಸೈನಿಕ ಅಭ್ಯರ್ಥಿಗಳು: ರೂ. 50/-

ಪ್ರವರ್ಗ 2A, 2B, 3A, 3B ಅಭ್ಯರ್ಥಿಗಳು: ರೂ. 300/-

ಸಾಮಾನ್ಯ ಅಭ್ಯರ್ಥಿಗಳು: ರೂ. 600/-

ಪಾವತಿ ವಿಧಾನ: ಆನ್‌ಲೈನ್

ಆಯ್ಕೆ ಪ್ರಕ್ರಿಯೆ:

ಪೂರ್ವಭಾವಿ ಪರೀಕ್ಷೆ

ಮುಖ್ಯ ಪರೀಕ್ಷೆ

ಸಂದರ್ಶನ

ಅರ್ಜಿ ಹಾಕೋದು ಹೇಗೆ?

ಅಭ್ಯರ್ಥಿಗಳು ಆನ್ಲೈನ್ ಮೂಲಕ ಅಪ್ಲೈ ಮಾಡಬೇಕು ಎಂದು ನೋಟಿಫಿಕೇಶನ್ನಲ್ಲಿ ತಿಳಿಸಲಾಗಿದೆ. ನೇರವಾಗಿ ಅಪ್ಲೈ ಮಾಡಲು ಲಿಂಕ್ನ್ನು ಈ ಕೆಳಗೆ ನೀಡಲಾಗಿದೆ.

ಆನ್ಲೈನ್ ಮೂಲಕ ಅರ್ಜಿ ಹಾಕಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 04/03/2024

ಅರ್ಜಿ ಸಲ್ಲಿಸಲು ಕೊನೆಯ ದಿನ: ಏಪ್ರಿಲ್ 15, 2024 (ನಾಳೆ)

ಪೂರ್ವಭಾವಿ ಪರೀಕ್ಷೆ ನಡೆಯುವ ದಿನ: ಜುಲೈ 7, 2024

Post a Comment

Previous Post Next Post
CLOSE ADS
CLOSE ADS
×