ಕೃಷಿ ಕ್ಷೇತ್ರ ಅಭಿವೃದ್ಧಿ ಆದರೆ ಅದು ಈ ದೇಶದ ಅಭಿವೃದ್ಧಿ ಎಂದು ಹೇಳಲಾಗುತ್ತದೆ. ಹಾಗಾಗಿ ಕೃಷಿ ಕ್ಷೇತ್ರದ ಅಭಿವೃದ್ಧಿ ಮಾಡಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಅನೇಕ ಜಂಟಿ ಯೋಜನೆಯನ್ನು ಸಹ ಪರಿಚಯ ಮಾಡಿದ್ದು ರೈತರ ಕಷ್ಟಕ್ಕೆ ಮೊದಲಿಂದಲು ನೆರವು ನೀಡುತ್ತಲೇ ಬಂದಿದೆ. ಅಂತಹ ಯೋಜನೆಗಳು ಬಹುತೇಕ ರೈತರಿಗೆ ಇನ್ನೂ ಕೂಡ ತಲುಪಿಲ್ಲ, ಈ ನೆಲೆಯಲ್ಲಿ ಕೇಂದ್ರ ಸರಕಾರದ ಮಾರ್ಗ ಸೂಚಿ ಅನ್ವಯ 5 ಎಕರೆ ಭೂಪ್ರದೇಶದ (Agricultural Land) ಒಳಗೆ ಕೃಷಿ ಮಾಡಿಕೊಂಡ ರೈತರಿಗೆ ಭರ್ಜರಿ ಗುಡ್ ನ್ಯೂಸ್ ಒಂದಿದ್ದು, ಕಾಲ ಕ್ರಮೇಣ ಇದೇ ಕ್ರಮ ದೇಶಾದ್ಯಂತ ಜಾರಿಗೆ ಬರಲಿದೆ. ಈ ಬಗ್ಗೆ ಪೂರ್ತಿ ಮಾಹಿತಿ ಇಲ್ಲಿದೆ.
ಯಾವುದು ಈ ಯೋಜನೆ?
ಇದರ ಹೆಸರು ಕಿಸಾನ್ ಆಶೀರ್ವಾದ್ ಎಂದಾಗಿದೆ. 5 ಎಕರೆ ಜಮೀನು ಇರುವವರಿಗೆ 25,000 ರೂಪಾಯಿ, 2 ಎಕರೆ ಜಮೀನಿಗೆ 5 ರಿಂದ 10 ಸಾವಿರ ರೂಪಾಯಿ ಹಣ ನೀಡಲಾಗುವುದು. 4 ಎಕರೆ ಕೃಷಿ ಭೂಮಿ (Agricultural Land) ಹೊಂದಿರುವವರು 20,000 ರೂಪಾಯಿ ಪಡೆಯಲಿದ್ದಾರೆ. ಈ ಮೂಲಕ 5 ಎಕರೆ ಭೂ ಪ್ರದೇಶ ಹೊಂದಿದ್ದವರಿಗೆ ಆಶೀರ್ವಾದ್ ಯೋಜನೆಯ ಅಡಿಯಲ್ಲಿ 25,000 ರೂಪಾಯಿ ಹಾಗೂ ಕಿಸಾನ್ ಸಮ್ಮಾನ್ ಯೋಜನೆ (PM Kisan Samman Nidhi Yojana) ಅಡಿಯಲ್ಲಿ 6ಸಾವಿರ ಒಟ್ಟು 31ಸಾವಿರ ಸಹಾಯಧನ ಸಿಗಲಿದೆ.
ಯಾವ ರಾಜ್ಯದಲ್ಲಿ ಈ ವ್ಯವಸ್ಥೆ ಇದೆ?
ಪಿಎಂ ಕಿಸಾನ್ ಸಮ್ಮಾನ್ ಯೋಜನೆ (PM Kisan Samman Nidhi Yojana) ಯ ಅಡಿಯಲ್ಲಿ ರೈತರು ವಾರ್ಷಿಕವಾಗಿ 6 ಸಾವಿರ ಮೊತ್ತವನ್ನು ಕಂತಿನ ಆಧಾರದ ಮೇಲೆ ಪಡೆಯುತ್ತಿದ್ದು ಈ ಒಂದು ಮೊತ್ತ ರೈತರ ಸಂಕಷ್ಟಕ್ಕೆ ನೆರವಾಗುತ್ತಿದೆ. ಇದು ದೇಶಾದ್ಯಂತ ಎಲ್ಲ ರಾಜ್ಯದ ರೈತರಿಗೆ ಸಿಗುತ್ತಿದೆ. ಆದರೆ ಜಾರ್ಖಂಡ್ ರಾಜ್ಯದಲ್ಲಿ ರೈತರಿಗೆ ವಾರ್ಷಿಕವಾಗಿ 25,000ಮೊತ್ತ ವನ್ನು ನೀಡಲು ಅಲ್ಲಿನ ಸರಕಾರ ತೀರ್ಮಾನ ಕೈಗೊಂಡಿದ್ದು, ಇದು ಅನೇಕ ರೈತರಿಗೆ ಆರ್ಥಿಕ ಅಭಿವೃದ್ಧಿ ನಿಟ್ಟಿನಲ್ಲಿ ಪ್ರೋತ್ಸಾಹ ನೀಡಲಿದೆ. ಆದರೆ ಇದು Agricultural Land ಆಧಾರದ ಮೇಲೆ ಸಿಗುವ ಒಂದು ಪ್ರೋತ್ಸಾಹ ಧನ ಇದಾಗಿದೆ.
ಈ ದಾಖಲಾತಿ ಅಗತ್ಯ:
- ಆಧಾರ್ ಕಾರ್ಡ್
- ಬ್ಯಾಂಕ್ ಲಿಂಕ್ ಹೊಂದಿದ್ದು ಖಾತೆ ಇರಬೇಕು.
- ಕಂದಾಯ ಇಲಾಖೆ ಪ್ರಮಾಣ ಪತ್ರ
- ಭೂ ದಾಖಲೆಗಳು.
- ಪಹಣಿ ಪತ್ರ ಮತ್ತು ಭೂಮಿ ಟ್ಯಾಕ್ಸ್ ಪೇ ಮಾಹಿತಿ ಹೊಂದಿರಬೇಕು.
ಮೊಬೈಲ್ ಸಂಖ್ಯೆ, ಪಾಸ್ ಪೋರ್ಟ್ ಅಳತೆ ಫೋಟೋ ಇನ್ನಿತರ ದಾಖಲಾತಿ ಅಗತ್ಯವಾಗಿದೆ. ಈ ಒಂದು ಯೋಜನೆಯು ಜಾರ್ಖಂಡ್ ಸರಕಾರ ಜಾರಿಗೆ ತಂದಿದ್ದು ಈ ಎಲ್ಲ ದಾಖಲಾತಿಯನ್ನು ಅಗತ್ಯವಾಗಿ ಕೇಳಲಾಗುವುದು.
ಕರ್ನಾಟಕಕ್ಕೂ ಬರಲಿದೆ:
ಸದ್ಯ ಜಾರ್ಖಂಡ್ ಸರಕಾರದ ಅವಧಿಯಲ್ಲಿ ಬಂದ ಈ ಆಶೀರ್ವಾದ್ ಯೋಜನೆಯನ್ನು ಮುಂದಿನ ದಿನಗಳಲ್ಲಿ ನಮ್ಮ ಕರ್ನಾಟಕ ರಾಜ್ಯಕ್ಕೆ ಕೂಡ ಇದೇ ಯೋಜನೆ ವಿಸ್ತರಣೆ ಆಗಲಿದೆ. ಕರ್ನಾಟಕದಲ್ಲಿ ಎಲ್ಲ ರೈತರಿಗೆ ಈ ಯೋಜನೆ ಜಾರಿಗೆ ಸಿಕ್ಕಿದ್ದೇ ಆದರೆ ಸಮಗ್ರ ಕೃಷಿ ಅಭಿವೃದ್ಧಿ ಮಾಡಲು ಬಹಳ ಅನುಕೂಲ ಆಗಲಿದೆ. ಆದರೆ ಆಶೀರ್ವದ್ ಯೋಜನೆ ಯಾವಾಗ ಜಾರಿಗೆ ಬರಲಿದೆ ಎಂಬುದನ್ನು ಕಾದು ನೋಡಬೇಕಿದೆ.