ಅಂತೂ ಇಂತೂ ಕೂಡಿ ಬಂತು ಕಂಕಣಭಾಗ್ಯ.. ಸದ್ಯದಲ್ಲೇ ನಟಿ, ಆಂಕರ್‌ ಅನುಶ್ರೀ ಮದ್ವೆ!? ಇವ್ರೇ ನೋಡಿ ಹುಡ್ಗ

Anchor Anushree Marriage: ಕನ್ನಡ ಕಿರುತೆರೆಯ ಜನಪ್ರಿಯ ನಿರೂಪಕಿ, ಸ್ಯಾಂಡಲ್‌ವುಡ್‌ ನಟಿ ಅನುಶ್ರೀ ಕರುನಾಡ ಮನೆಮಾತಾಗಿದ್ದಾರೆ.. ಒಮ್ಮೆ ಈಕೆ ತೆರೆ ಮೇಲೆ ಬಂದರೇ ಸಾಕು ಕಣ್ಣು ಮಿಟುಕಿಸದೇ ನೋಡುವವರಿದ್ದಾರೆ.. ಇವರ ಆಂಕರಿಂಗ್‌ ನೋಡೋಕೆ ಅಂತಾ ಶೋನಾ ವೀಕ್ಷಿಸುವವರಿದ್ದಾರೆ. ಸಾಕಷ್ಟು ಕಾರ್ಯಕ್ರಮಗಳು ಯಶಸ್ವಿಯಾಗುವಲ್ಲಿ ಇವರ ಪಾತ್ರ ದೊಡ್ಡದಾಗಿರುತ್ತೆ.. ಏಕೆಂದರೆ ಕನ್ನಡದ ಟಾಪ್‌ ನಟಿಯರಿಗೆ ಇರೋ ಅಭಿಮಾನಿ ಬಳಗ ಇವರಿಗೂ ಇದೆ.



ಸಿನಿಮಾ ಹಿರೋಯಿನ್‌ಗಿಂತಲೂ ಹೆಚ್ಚು ಫ್ಯಾನ್ಸ್‌ ಕ್ರೇಜ್‌ ಕ್ರಿಯೆಟ್‌ ಮಾಡಿರುವ ನಟಿ ಅನುಶ್ರೀ ಕಾರ್ಯಕ್ರಮ ನಿರೂಪಣೆಯ ಜೊತೆಗೆ ತಮ್ಮ ಮುದ್ದು ಮುದ್ದಾದ ಮಾತುಗಳಿಂದ ರಂಜಿಸುತ್ತಿರುವ ಚೆಲುವೆ ಈಕೆ.

ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ಆಕ್ಟೀವ್‌ ಆಗಿರುವ ಅನುಶ್ರೀ ಆಗಾಗ್ಗೆ ಇನ್‌ಸ್ಟಾಗ್ರಂ ಲೈವ್‌ ಬಂದು ತಮ್ಮ ಫ್ಯಾನ್ಸ್‌ ಜೊತೆ ಮಾತನಾಡುತ್ತಿರುತ್ತಾರೆ.. ಹೀಗೆ ಅವರು ಅಭಿಮಾನಿಗಳ ಕೈಗೆ ಸಿಕ್ಕಾಗೆಲ್ಲ ಅವರು ಕೇಳೋದು ಒಂದೇ ಪ್ರಶ್ನೆ ಅನುಶ್ರೀ ಅವರೇ ನಿಮ್ಮ ಮದುವೆ ಯಾವಾಗ? ಹುಡುಗ ಯಾರು? ಅಂತ



ಈ ಮದುವೆ ಯಾವಾಗ ಆಗೋದು ಎನ್ನುವ ಪ್ರಶ್ನೆ ಅನುಶ್ರೀ ಅವರಿಗೆ ಕೇಳಿ ಕೇಳಿ ಸಾಕಾಗಿದೆ.. ಅವರು ಹೇಗೆ ಖಡಕ್‌ ಉತ್ತರ ಕೊಟ್ರು ಜನ ಮಾತ್ರ ಈ ಪ್ರಶ್ನೆ ಕೇಳೋದನ್ನು ನಿಲ್ಲಿಸಲಿಲ್ಲ.. ಆದ್ರೆ ಈಗ ಅದಕ್ಕೆಲ್ಲ ಉತ್ತರ ಸಿಕ್ಕಂತಿದೆ

ನಿರೂಪಕಿ, ಸ್ಯಾಂಡಲ್‌ವುಡ್‌ ನಟಿ ಅನುಶ್ರೀ ಮದುವೆಗೆ ಮೂಹೂರ್ತ ಫಿಕ್ಸ್‌ ಆಗಿದೆ ಎನ್ನಲಾಗುತ್ತಿದ್ದು, ದೊಡ್ಡ ಸ್ಟಾರ್‌ ನಟನ ಜೊತೆ ಹಸೆಮಣೆ ಏರೋದಕ್ಕೆ ರೆಡಿಯಾಗಿದ್ದಾರಂತೆ.. ಹೀಗೊಂದು ಸುದ್ದಿ ಸದ್ಯ ಮನರಂಜನಾ ವಲಯದಲ್ಲಿ ಹರಿದಾಡುತ್ತಿದೆ.. ಹಾಗಾದರೆ ಅನು ಮದುವೆಯಾಗ್ತೀರೋ ಹುಡುಗ ಯಾರು? ಎನ್ನುವುದನ್ನು ಇಲ್ಲಿ ತಿಳಿಯೋಣ

ಮಾಲಿವುಡ್ ಎಂದರೇ ಮಲಯಾಳಂನ ಖ್ಯಾತ ನಟ ಉಣ್ಣಿ ಮುಕುಂದನ್‌ ಅವರ ಜೊತೆ ಅನುಶ್ರೀ ಮದುವೆ ಸುದ್ದಿ ಹರಿದಾಡುತ್ತಿದೆ.. ಸೋಷಿಯಲ್‌ ಮಿಡಿಯಾದಲ್ಲಿಯೂ ಸಾಕಷ್ಟು ಚರ್ಚೆಯಾಗಿದೆ.. ಇಬ್ಬರ ಪೋಟೋಗಳು ಸಖತ್‌ ವೈರಲ್‌ ಆಗುತ್ತಿವೆ.. ಆದರೆ ಇದರ ಅಸಲಿ ಕಥೆಯೇ ಬೇರೆ

ಹೌದು ಮಲಯಾಳಿ ನಟನೊಂದಿಗೆ ತಳುಕುಹಾಕಿಕೊಂಡಿದ್ದ ಹೆಸರು ನಮ್ಮ ಕನ್ನಡದ ನಟಿ, ನಿರೂಪಕಿ ಅನುಶ್ರೀ ಅಲ್ಲ.. ಮಲಯಾಳಿ ನಟಿ ಅನುಶ್ರೀ.. ಇಬ್ಬರಿಬ್ಬರು ಮದುವೆಯಾಗಲಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡಿತ್ತು.. ಆದರೆ ನಟ ಈ ವದಂತಿಗಳನ್ನೆಲ್ಲ ತಳ್ಳಿಹಾಕಿ ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದಿದ್ದಾರೆ.. ಈ ಇಬ್ಬರ ಸುದ್ದಿ ಹರಿದಾಡುತ್ತಿದ್ದರೆ ಕನ್ನಡಿಗರು ಇದಕ್ಕೆ ಬೇರೆ ಕಥೆ ಕಟ್ಟಿದ್ದು ಉಣ್ಣಿ ಮುಕುಂದನ್‌ ಜೊತೆಗೆ ಕನ್ನಡತಿ ಅನುಶ್ರೀ ಮದುವೆಯಾಗಲಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ
Previous Post Next Post