Bhagya Lakshmi Yojana: 2006 ರ ಬಳಿಕ ಜನಿಸಿದ ಎಲ್ಲಾ ಹೆಣ್ಣುಮಕ್ಕಳಿಗೂ ಸಿಹಿಸುದ್ದಿ! ಅರ್ಜಿ ಹಾಕಲು ಮರೆಯದಿರಿ

Bhagya Lakshmi Yojana: 2006 ರ ಬಳಿಕ ಜನಿಸಿದ ಎಲ್ಲಾ ಹೆಣ್ಣುಮಕ್ಕಳಿಗೂ ಸಿಹಿಸುದ್ದಿ! ಅರ್ಜಿ ಹಾಕಲು ಮರೆಯದಿರಿ

ಹಿಂದಿನ ಕಾಲದಲ್ಲಿ ಹೆಣ್ಣು ಮಗು ಜನಿಸಬಾರದು ಗಂಡೆ ಜನಿಸಬೇಕೆಂದು ಹೆಣ್ಣು ಭ್ರೂಣ ಹತ್ಯೆ ಮಾಡುವ ಸಂಖ್ಯೆ ಹೆಚ್ಚಾಗಿ ಇತ್ತು. ಆದರೆ ಈಗ ಕಾಲ ಸಂಪೂರ್ಣ ಬದಲಾಗಿದೆ. ಹೆಣ್ಣು ಮಗುವಿನ ಜನನಕ್ಕೆ ಮತ್ತು ಸ್ತ್ರೀಯರ ಸಬಲೀಕರಣಕ್ಕೆ ಸರ್ವ ತರನಾದ ಅವಕಾಶ ಕಲ್ಪಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಈಗಾಗಲೇ ಅನೇಕ ಸೌಲಭ್ಯ ಪರಿಚಯಿಸಿದ್ದು ಹೆಣ್ಣು ಮಗು ಜನಿಸುತ್ತಿದ್ದಂತೆ ಕೂಡ ಯೋಜನೆ ಫಲಾನುಭವಿಗಳಾಗಲು ಅವಕಾಶ ನೀಡಲಾಗುತ್ತಿದೆ. ಅಂಥವುಗಳಲ್ಲಿ ಒಂದಾಗಿ ನಾವು ಭಾಗ್ಯಲಕ್ಷ್ಮೀ ಯೋಜನೆ (Bhagya Lakshmi Yojana) ಯನ್ನು ನಾವು ಕಾಣಬಹುದು.



ಯೋಜನೆಯ ಹೆಸರೇನು?

ಈಗಾಗಲೇ ಮಹಿಳೆಯರನ್ನು ಸ್ವಾವಲಂಬಿ ಯಾಗಿ ಮಾಡುವ ಸಲುವಾಗಿ ಅನೇಕ ಯೋಜನೆ ಬಂದಿದೆ. ಹೆಣ್ಣು ಮಗು ಜನಿಸಿದಂತೆ ಭಾಗ್ಯಲಕ್ಷ್ಮೀ ಯೋಜನೆ (Bhagya Lakshmi Yojana) ಅಡಿಯಲ್ಲಿ 50ಸಾವಿರ ರೂಪಾಯಿಗಳ ಬಾಂಡ್ ನೀಡಲಾಗುತ್ತಿದೆ. ಹೀಗೆ ಇಟ್ಟ ಬಾಂಡ್ ಅನ್ನು ಆಕೆಗೆ 21ವರ್ಷ ವಯಸ್ಸು ಆದ ಬಳಿಕ ಆ ಒಂದು ಹಣವನ್ನು ಮಹಿಳೆಯ ಉನ್ನತ ವಿದ್ಯಾಭ್ಯಾಸ ಅಥವಾ ಇತರ ಕಾರಣಕ್ಕಾಗಿ ಬಳಸಬಹುದಾಗಿದೆ. ಈ ಭಾಗ್ಯಲಕ್ಷ್ಮೀ ಯೋಜನೆ (Bhagya Lakshmi Yojana) ಯು ಮದುವೆ ಮತ್ತು ಶೈಕ್ಷಣಿಕ ಅಗತ್ಯ ಪೂರೈಸುವ ನೆಲೆಯಲ್ಲಿ ವರದಾನವಾಗಿದೆ.

ದಾಖಲೆ ಅಗತ್ಯ

  • ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸುವ ಮುನ್ಮ ಕೆಲವೊಂದು ಅಗತ್ಯ ದಾಖಲಾತಿಯನ್ನು ನೀವು ಕೂಡ ಹೊಂದಿರಬೇಕು.
  • ತಂದೆ, ತಾಯಿಯ ಆಧಾರ್ ಕಾರ್ಡ್ (Aadhaar Card) ಹಾಗೂ ಬ್ಯಾಂಕ್ ಪಾಸ್ ಪುಸ್ತಕದ ದಾಖಲೆ ಅಗತ್ಯವಾಗಿದೆ.
  • ಮಗು ಮತ್ತು ಮಗುವಿನ ತಂದೆ ತಾಯಿಯ ಪಾಸ್ ಪೋರ್ಟ್ ಅಳತೆ ಫೋಟೊ ಬೇಕು.
  • ಮಗುವಿನ ಜನನ ಸರ್ಟಿಫಿಕೇಟ್.
  • ಆದಾಯ ಮತ್ತು ಜಾತಿ ಪ್ರಮಾಣ ಪತ್ರ ಸಹ ಅಗತ್ಯವಾಗಿದೆ.

ಏನು ಮಾಡಬೇಕು, ಪ್ರಯೋಜನೆ ಏನು?

ಹೆಣ್ಣು ಮಗು ಜನಿಸಿದ್ದ ಬಳಿಕ‌ ಅಂಗನವಾಡಿ ಕೇಂದ್ರದಲ್ಲಿ ನೋಂದಾಯಿಸಿಕೊಳ್ಳಬೇಕು. ಆಗ ಅಂಗನವಾಡಿ ಆಶಾ ಕಾರ್ಯಕರ್ತೆಯರು ಈ ಬಗ್ಗೆ ಅಗತ್ಯ ದಾಖಲೆ ಸಮೇತ ಡೇಟಾ ಸರಕಾರಕ್ಕೆ ಸಲ್ಲಿಸಲಿದ್ದಾರೆ. ಹೀಗೆ ನಿಮ್ಮ ಒಂದು ಮಗುವಿಗೆ ಭಾಗ್ಯಲಕ್ಷ್ಮೀ ಯೋಜನೆ (Bhagya Lakshmi Yojana) ಭವಿಷ್ಯದಲ್ಲಿ ವರದಾನ ವಾಗಲಿದೆ ಎಂದು ಈ ಮೂಲಕ ಹೇಳಬಹುದು. ಇದರಲ್ಲಿ ಬಾಂಡ್ ನೀಡಲಾಗುವ ಕಾರಣ ಮಗುವಿಗೆ 21 ವರ್ಷವಾದ ಬಳಿಕ ನೀವು ಆ ಹಣ ಪಡೆಯಬಹುದು. ಶಿಕ್ಷಣ, ಸ್ವ ಉದ್ಯೋಗ ಅಥವಾ ಮದುವೆ ಮಾಡಿಸಲು ಈ ಹಣ ಉಪಯೋಗ ಆಗಲಿದೆ.

ಈ ನಿಯಮ ಇರಲಿದೆ:

ಈ ಒಂದು ಯೋಜನೆ ಹೆಣ್ಣು ಮಕ್ಕಳಿಗೆ ಮಾತ್ರವೇ ಸಂಬಂಧಿಸಿದ್ದಾಗಿದೆ. ಒಂದು ಮನೆಯ ದಂಪತಿಗೆ ಜನಿಸಿದ್ದ ಎರಡು ಹೆಣ್ಣು ಮಕ್ಕಳಿಗೆ ಮಾತ್ರವೇ ಭಾಗ್ಯಲಕ್ಷ್ಮೀ ಬಾಂಡ್ ಮಾಡಿಕೊಡಲಾಗುತ್ತದೆ. ಕುಟುಂಬದ ವಾರ್ಷಿಕ ಆದಾಯ ಎರಡು ಲಕ್ಷ ರೂಪಾಯಿ ಮೀರಬಾರದು. 2006 ರ ನಂತರ ಜನಿಸಿದ್ದ ಹೆಣ್ಣು ಮಕ್ಕಳಿಗೆ ಮಾತ್ರವೇ ಈ ಯೋಜನೆ ಅನ್ವಯವಾಗಲಿದೆ. 50ಸಾವಿರ ರೂಪಾಯಿ ತನಕದ ಬಾಂಡ್ ಆಗಿದ್ದು 18ವರ್ಷಕ್ಕಿಂತ ಮೊದಲು ಮದುವೆಯಾಗುದ ಹೆಣ್ಣು ಮಕ್ಕಳಿಗೆ ಯೋಜನೆಯ ಫಲ ಸಿಗಲಾರದು.


Post a Comment

Previous Post Next Post
CLOSE ADS
CLOSE ADS
×