Uttara Kannada News: ಪಿಯುಸಿ ಆದವರಿಗೆ ಉತ್ತರ ಕನ್ನಡದ ಹಳಿಯಾಳದಲ್ಲಿ ಉಚಿತ ತರಬೇತಿ

Uttara Kannada News: ಪಿಯುಸಿ ಆದವರಿಗೆ ಉತ್ತರ ಕನ್ನಡದ ಹಳಿಯಾಳದಲ್ಲಿ ಉಚಿತ ತರಬೇತಿ

ನೀವು 18 ರಿಂದ 45 ವರ್ಷ ವಯಸ್ಸಿನವರಾಗಿದ್ದರೆ, ನಿಮಗೆ ಕನ್ನಡ ಓದಲು ಬರೆಯಲು ಬಂದರೆ ಸಾಕು. ಊಟ-ವಸತಿ ಶಿಕ್ಷಣ ಎಲ್ಲವೂ ಸಂಪೂರ್ಣ ಉಚಿತ



ಉತ್ತರ ಕನ್ನಡ: ಸೆಕೆಂಡ್ ಪಿಯು (PUC) ಪರೀಕ್ಷೆ ಫಲಿತಾಂಶದ ನಂತರ ಮುಂದೇನು ಮಾಡೋದು ಅಂತ ಯೋಚನೆ ಮಾಡ್ತಾ ಇದೀರಾ? ಇಲ್ಲಿ ನೋಡಿ ಒಳ್ಳೆ ಅವಕಾಶ. ವೃತ್ತಿಪರ ಕಲಿಕೆಗೆ ಅವಕಾಶ ಪಡೆಯುವ ಅದೃಷ್ಟ ನೀಡ್ತಾ ಇದೆ ಕೆನರಾ ಬ್ಯಾಂಕ್ ದೇಶಪಾಂಡೆ ರುಡ್ ಸೆಟ್. ಸ್ವ ಉದ್ಯೋಗದ ಕಿಡಿಯನ್ನು ಮನದಲ್ಲಿ ಬೆಳಗಿಸುವ ಈ ಸಂಸ್ಥೆಯ ಬಗ್ಗೆ ಹಾಗೂ ಇದರ ಕಾರ್ಯ ವೈಖರಿ ಇಲ್ಲಿದೆ. ಉತ್ತರ ಕನ್ನಡದ (Uttara Kannada) ಹಳಿಯಾಳದ ಈ ಸಂಸ್ಥೆಯು ಒದಗಿಸುತ್ತಿರುವ ವೃತ್ತಿಪರ ಕಲಿಕಾ ಅವಕಾಶಗಳು ಹೀಗಿವೆ.

ಇಲ್ಲಿ ಎಲ್ಲವೂ ಉಚಿತ

ನೀವು 18 ರಿಂದ 45 ವರ್ಷ ವಯಸ್ಸಿನವರಾಗಿದ್ದರೆ. ನಿಮಗೆ ಕನ್ನಡ ಓದಲು ಬರೆಯಲು ಬಂದರೆ ಸಾಕೇ ಸಾಕು. ಊಟ-ವಸತಿ ಶಿಕ್ಷಣ ಎಲ್ಲವೂ ಸಂಪೂರ್ಣ ಉಚಿತ. ಸ್ವ ಉದ್ಯೋಗ ತರಬೇತಿ ಪಡೆಯುವವರಿಗೆ ಇಲ್ಲಿ ಎಷ್ಟೊಂದು ವಿಪುಲ ಅವಕಾಶಗಳಿವೆ. ನೀವು ಮೊಟಾರ್ ರಿಪೇರಿ, ಮೊಬೈಲ್ ರಿಪೇರಿ, ಎಲೆಕ್ಟ್ರೀಕ್ ಮೋಟಾರ್ ರಿವೈಂಡಿಂಗ್, ಬ್ಯೂಟಿ ಪಾರ್ಲರ್ ನಿರ್ವಹಣೆ, ಜನರಲ್ ಇಡಿಪಿ, ಕುರಿ ಸಾಕಾಣಿಕೆ, ಹೈನುಗಾರಿಕೆ, ಎರೆಹುಳು ಗೊಬ್ಬರ ತಯಾರಿಕೆ, ಡ್ರೈವಿಂಗ್, ಎಲೆಕ್ಟ್ರಿಕಲ್, ಹೋಂ ಪ್ರಾಡೆಕ್ಟ್ ಮೇಕಿಂಗ್, ಫೆÇೀಟೋಗ್ರಾಫಿ, ವಿಡಿಯೋಗ್ರಾಫಿ, ವೆಲ್ಡಿಂಗ್ ಮತ್ತು ಫ್ಯಾಬ್ರಿಕೇಶನ್ ನಂತಹ ಹಲವು ಕೋರ್ಸುಗಳ ಕಲಿಕೆ ಇಲ್ಲಿ ಲಭ್ಯವಿದೆ. ಈಗಾಗಲೇ 26,000 ಜನ ತರಬೇತಿ ಪಡೆದು 90% ಜನ ಉದ್ಯಮಿಗಳಾಗಿದ್ದಾರೆ.

ಕೆನರಾ ಬ್ಯಾಂಕ್ ದೇಶಪಾಂಡೆ ರುಡ್ ಸೆಟ್‍ಗೆ ಆನ್ ಲೈನ್, ಆಫ್ ಲೈನ್ ಎರಡೂ ಬಗೆಯಲ್ಲಿಯೂ ಅರ್ಜಿ ಸಲ್ಲಿಸಬಹುದು. ಅದಕ್ಕೆ ಸಂಬಂಧಿಸಿದ ಮಾಹಿತಿ ಈ ವಿಡಿಯೋದಲ್ಲಿಯೇ ನೀಡಲಾಗಿದೆ. ಕರ್ನಾಟಕದ ಯಾವುದೇ ಜಿಲ್ಲೆಯಿಂದ ಬೇಕಾದರೂ ಶಿಬಿರಾರ್ಥಿಗಳು ಅರ್ಜಿ ಸಲ್ಲಿಸಬಹುದು. ಯಾವುದೇ ನಿಬಂಧನೆಗಳಿಲ್ಲ. ಯಾವುದೇ ಶುಲ್ಕವಿಲ್ಲ.

ಉತ್ತರ ಕನ್ನಡ ಜಿಲ್ಲೆಯ ಹಳಿಯಾಳಕ್ಕೆ ಬಂದು ಕೋರ್ಸ್ ಕಲಿಯಲು ಇಚ್ಛಿಸುವ ಯುವಕ-ಯುವತಿಯರಿಗೆ ಇದು ಅವಕಾಶದ ಬಾಗಿಲು ತೆರೆಯುವ ಸುವರ್ಣಾವಕಾಶ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ, ಮೊಬೈಲ್ ನಂಬರ್- 9483485489, 9482188780

Post a Comment

Previous Post Next Post
CLOSE ADS
CLOSE ADS
×