ದ್ವಿತೀಯ ಪಿಯುಸಿ ಪರೀಕ್ಷೆ 2 ವಿಷಯವಾರು ಅಂತಿಮ ವೇಳಾಪಟ್ಟಿ ಬಿಡುಗಡೆ: ಇಲ್ಲಿ ಚೆಕ್‌ ಮಾಡಿಕೊಳ್ಳಿ

ದ್ವಿತೀಯ ಪಿಯುಸಿ ಪರೀಕ್ಷೆ 2 ವಿಷಯವಾರು ಅಂತಿಮ ವೇಳಾಪಟ್ಟಿ ಬಿಡುಗಡೆ: ಇಲ್ಲಿ ಚೆಕ್‌ ಮಾಡಿಕೊಳ್ಳಿ

April - May 2024 II PUC Exam-2 Final Time Table : ಏಪ್ರಿಲ್ 10 ರಂದು ದ್ವಿತೀಯ ಪಿಯುಸಿ ಪರೀಕ್ಷೆ 1 ಫಲಿತಾಂಶವನ್ನು ಬಿಡುಗಡೆ ಮಾಡಲಾಗಿತ್ತು. ಇದೀಗ ಪರೀಕ್ಷೆ 2 ಅಂತಿಮ ವೇಳಾಪಟ್ಟಿಯನ್ನು ಕೆಎಸ್‌ಇಎಬಿ ಮಂಡಲಿ ವಿಷಯವಾರು ಬಿಡುಗಡೆ ಮಾಡಿದೆ. ಪುನರಾವರ್ತಿತ ಹಾಗೂ ಫಲಿತಾಂಶ ಉನ್ನತೀಕರಣಕ್ಕಾಗಿ ಪರೀಕ್ಷೆ 2 ಬರೆಯಲಿಚ್ಚಿಸುವವರು ಈ ವೇಳಾಪಟ್ಟಿ ಚೆಕ್‌ ಮಾಡಿಕೊಳ್ಳಿ.



ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ 1 ಬರೆದು ಫಲಿತಾಂಶ ಪಡೆದವರು, ಇದೀಗ ತಮ್ಮ ಫಲಿತಾಂಶ ಉನ್ನತೀಕರಣಕ್ಕಾಗಿ ಹಾಗೂ ಪುನರಾವರ್ತಿತ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆ 2 ಬರೆಯಬಹುದು. ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ 2 ಅನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯು ಏಪ್ರಿಲ್ 29 ರಿಂದ ಮೇ 16 ರವರೆಗೆ ನಡೆಸಲು ಅಂತಿಮ ದಿನಾಂಕಗಳನ್ನು ನಿಗದಿಪಡಿಸಿದೆ. ಹಾಗೂ ವಿಷಯವಾರು ವೇಳಾಪಟ್ಟಿಯನ್ನು ವಿದ್ಯಾರ್ಥಿಗಳ ಮಾಹಿತಿಗಾಗಿ ಬಿಡುಗಡೆ ಮಾಡಲಾಗಿದೆ.

ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ 2 ವಿಷಯವಾರು ಅಂತಿಮ ವೇಳಾಪಟ್ಟಿ ಈ ಕೆಳಗಿನಂತಿದೆ ನೋಡಿ.

  • ಕನ್ನಡ, ಅರೇಬಿಕ್ 29-04-2024
  • ಇತಿಹಾಸ / ಭೌತಶಾಸ್ತ್ರ 30-04-2024
  • ಇಂಗ್ಲಿಷ್ 02-05-2024
  • ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ 03-05-2024
  • ಭೂಗೋಶಾಸ್ತ್ರ, ಮನಃಶಾಸ್ತ್ರ, ರಸಾಯನಶಾಸ್ತ್ರ, ಗೃಹವಿಜ್ಞಾನ, ಮೂಲಗಣಿತ 04-05-2024
  • ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ, ಗಣಿತ, ಶಿಕ್ಷಣಶಾಸ್ತ್ರ 09-05-2024
  • ಸಮಾಜಶಾಸ್ತ್ರ, ಭೂಗರ್ಭಶಾಸ್ತ್ರ, ಜೀವಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗಣಕ ವಿಜ್ಞಾನ 11-05-2024
  • ಅರ್ಥಶಾಸ್ತ್ರ 13-05-2024
  • ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ 14-05-2024
  • ಹಿಂದಿ 15-05-2024
  • ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಅರೆಬಿಕ್, ಫ್ರೆಂಚ್ 16-05-2024
  • ಹಿಂದೂಸ್ತಾನಿ ಸಂಗೀತ, ಮಾಹಿತಿ ತಂತ್ರಜ್ಞಾನ, ಬ್ಯೂಟಿ ಅಂಡ್ವೆಲ್‌ನೆಸ್‌ , ಆಟೋಮೊಬೈಲ್, ರೀಟೈಲ್ 16-05-2024

https://kseab.karnataka.gov.in/storage/pdf-files/20242ndPUCexam-2finaltimetable.pdf

Post a Comment

Previous Post Next Post
CLOSE ADS
CLOSE ADS
×