Crop insurance claim enquiry| ನಿಮ್ಮ ಬೆಳೆ ವಿಮೆಯ ಅರ್ಜಿ ಸ್ಥಿತಿಯ ಕುರಿತು ಯಾರಿಗೆ ವಿಚಾರಿಸಬೇಕು

Crop insurance claim enquiry| ನಿಮ್ಮ ಬೆಳೆ ವಿಮೆಯ ಅರ್ಜಿ ಸ್ಥಿತಿಯ ಕುರಿತು ಯಾರಿಗೆ ವಿಚಾರಿಸಬೇಕು

Crop insurance claim enquiry: ನಮಸ್ಕಾರ ಬಂಧುಗಳೇ ಹಿಂದಿನ ವರದಿಗೆ ಸ್ವಾಗತ ಇಂದಿನ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವುದೇನೆಂದರೆ,ರೈತರು ಬೆಳೆ ವಿಮೆ ಅರ್ಜಿ ಸ್ಥಿತಿ ಮತ್ತು ಪರಿಹಾರದ ಹಣ ವರ್ಗಾವಣೆಯ ಕುರಿತು ಯಾರ ಬಳಿ ಮಾಹಿತಿಯನ್ನು ಪಡೆದುಕೊಳ್ಳಬಹುದು ಎಂದು ಈ ಒಂದು ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸಿಕೊಡುತ್ತೇವೆ.



ರೈತರು ಬೆಳೆ ವಿಮೆ ಅರ್ಜಿ ಸ್ಥಿತಿ ಮತ್ತು ಪರಿಹಾರದ ಹಣದ ವರ್ಗಾವಣೆಯ ಕುರಿತು ಯಾರ ಬಳಿ ಮಾಹಿತಿಯನ್ನು ಹೊಡೆದುಕೊಳ್ಳಬೇಕು ಎಂದು ನಾನು ನಿಮಗೆ ತಿಳಿಸಿಕೊಡುತ್ತೇನೆ.

ಹಲವಾರು ರೈತರಿಗೆ ಈ ಮಾಹಿತಿ ತಿಳಿದಿರುವುದಿಲ್ಲ ಏನೆಂದರೆ ಒಮ್ಮೆ ತಾವು ಬೆಳೆದ ಬೆಳೆಗಳಿಗೆ ಬೆಳೆ ವಿಮೆ ಮಾಡಿಸಿದ ಬಳಿಕ ತಮ್ಮ ಅರ್ಜಿಗಳು ಯಾವ ಹಂತದಲ್ಲಿ ಇವೆ ಆ ಅರ್ಜಿ ಸ್ಥಿತಿ ಮತ್ತು ಪರಿಹಾರದ ಹಣದ ಜಮಾದ ಕುರಿತು ಯಾರಲ್ಲಿ ವಿಚಾರಿಸಬೇಕು? ಎಂದು ಈ ಕುರಿತು ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.

ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ2023 ರ ಮುಂಗಾರು ಅಂಗಾಮಿನ ಬೆಳೆ ವಿಮೆಯ ಪರಿಹಾರದ ರೈತರ ಖಾತೆಗೆ ಹಣವನ್ನು ವರ್ಗಾವಣೆ ಆಗುತ್ತಿದ್ದು ಪರಿಹಾರದ ಹಣವನ್ನು ಪಡೆದ ರೈತರು ತಮ್ಮ ಬೆಳೆ ವಿಮೆ ಅರ್ಜಿ ಸ್ಥಿತಿಯ ಕುರಿತು ತಿಳಿದುಕೊಳ್ಳಲು ಯಾವೆಲ್ಲ ವಿಧಾನಗಳು ಇವೆ ಎಂಬ ಮಾಹಿತಿಯನ್ನು ತಿಳಿಸಲಾಗಿದೆ.

Crop insurance claim enquiry :

ವಿಧಾನ 1: samrakshane.Karnataka.gov.in ಅಧಿಕೃತವಾದ ವೆಬ್ ಸೈಟ್ ಗೆ ಭೇಟಿ ಮಾಡಿ.

ರೈತರು ತಮ್ಮ ಬೆಳೆ ವಿಮೆ ಅರ್ಜಿಯ ಸ್ಥಿತಿ ಮತ್ತು ಪರಿಹಾರದ ಹಣ ಜಮಾ ಇವರ ವನ್ನು ತಿಳಿದುಕೊಳ್ಳಲು ಈ ಕೆಳಗೆ ನೀಡಿರುವ ವಿಧಾನವನ್ನು ಅನುಸರಿಸಿ ನೇರವಾಗಿ samrakshane.Karnataka.gov.in ಒಂದು ಅಧಿಕೃತ ಜಾಲತಾಣಕ್ಕೆ ಭೇಟಿ ಮಾಡಿ ಮಾಹಿತಿಯನ್ನು ಪಡೆದುಕೊಳ್ಳಬಹುದು.

ಸಂರಕ್ಷಣೆಯ ವೆಬ್ಸೈಟ್ ಗೆ ಭೇಟಿ ಮಾಡಿ ಬೆಳೆ ವಿಮೆಯ ಕುರಿತು ಮಾಹಿತಿಯನ್ನು ಪಡೆಯುವ ವಿಧಾನವನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ > bele vime status check ಮಾಡಿಕೊಂಡು ನಮ್ಮ ಪುಟದ ಲೇಖನಕ್ಕೆ ಭೇಟಿ ಮಾಡಿ ಮಾಹಿತಿಯನ್ನು ತಿಳಿಯಿರಿ.

Crop insurance claim enquiry :

ವಿಧಾನ 2: ನಿಮ್ಮ ಜಿಲ್ಲೆಯ ಇನ್ಶೂರೆನ್ಸ್ ಕಂಪನಿ ಪ್ರತಿನಿಧಿ ಸಂಪರ್ಕಿಸಿ ಮಾಹಿತಿಯನ್ನು ಪಡೆದುಕೊಳ್ಳಿ.

ರೈತರು ತಮ್ಮ ಬೆಳೆ ವಿಮೆಯ ಅರ್ಜಿಯ ಕುರಿತು ಸಂಪೂರ್ಣ ಮಾಹಿತಿಯನ್ನು ನಿಮ್ಮ ಜಿಲ್ಲೆಗೆ ವಿಮಾ ಕಂಪನಿಯಿಂದ ನೇಮಕ ಮಾಡಿರುವಂತಹ ಇನ್ಸೂರೆನ್ಸ್ ಕಂಪನಿ ಪ್ರತಿನಿಧಿಯನ್ನು ಸಂಪರ್ಕಿಸಿಯು ಸಹ ಈ ಮಾಹಿತಿ ಪಡೆಯಬಹುದು.

Insurance companies:- ನಿಮ್ಮ ಜಿಲ್ಲೆಯ ಇನ್ಸೂರೆನ್ಸ್ ಕಂಪನಿಯ ಪ್ರತಿನಿಧಿಯ ವಿವರ ಪಡೆಯುವುದು ಹೇಗೆ

ಎರಡು ವಿಧಾನಗಳ ಮೂಲಕ ಇನ್ಸೂರೆನ್ಸ್ ಕಂಪನಿ ಪ್ರತಿನಿಧಿಯ ವಿವರವನ್ನು ಪಡೆಯಬಹುದು ಮೊದಲನೆಯದಾಗಿinsurance companies toll free numbers ಈ ಲಿಂಕ್ ನ ಮೇಲೆ ಕ್ಲಿಕ್ ಮಾಡಿಕೊಂಡು ಸಂರಕ್ಷಣೆ ವೆಬ್ಸೈಟ್ ಗೆ ಭೇಟಿ ಮಾಡಿ ಮುಂದೆ ಕ್ಲಿಕ್ ಮಾಡಿ ಹೋಂ ಪೇಜ್ ನಲ್ಲಿ ಕಾಣುವ ಕಾಂಟ್ಯಾಕ್ಟ್ ಬಟನ್ ನ ಮೇಲೆ ಕ್ಲಿಕ್ ಮಾಡಿಕೊಂಡು ಇನ್ಸೂರೆನ್ಸ್ ಕಂಪನಿಯ ಸಹಾಯವಾಣಿಯನ್ನು ಸಂಪರ್ಕಿಸಿ ಮಾಹಿತಿಯನ್ನು ಪಡೆದುಕೊಳ್ಳಿ.

ಅಥವಾ ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ಮಾಡಿ ಇನ್ಸೂರೆನ್ಸ್ ಕಂಪನಿಯ ಪ್ರತಿನಿಧಿಯ ವಿವರವನ್ನು ಪಡೆದುಕೊಳ್ಳಬಹುದು.

Karnataka agriculture department :

ವಿಧಾನ 3: ನಿಮ್ಮ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕ ಕಚೇರಿಗೆ ಭೇಟಿ ಮಾಡಿ ಮಾಹಿತಿಯನ್ನು ಪಡೆಯಬಹುದು

ರೈತರು ಬೆಳೆ ವಿಮೆ ಅರ್ಜಿಯ ಇತರೆ ಮಾಹಿತಿಯನ್ನು ಪಡೆದುಕೊಳ್ಳಲು ನಿಮ್ಮ ತಾಲೂಕಿನಲ್ಲಿ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರ ಕಛೇರಿಗೆ ಕಚೇರಿಯ ಸಮಯದಲ್ಲಿ ನೇರವಾಗಿ ಭೇಟಿ ಮಾಡಿ ಈ ಕಚೇರಿಯಲ್ಲಿ ಕೃಷಿ ಅಧಿಕಾರಿ ಇವರನ್ನು ಕುದ್ದು ಭೇಟಿ ಮಾಡಿ ನಿಮ್ಮ ಬೆಳೆ ವಿಮೆಯ ಅರ್ಜಿಯ ಕುರಿತು ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು.

Post a Comment

Previous Post Next Post
CLOSE ADS
CLOSE ADS
×