Congress Guarantee: KSRTC ಬಸ್ ನಲ್ಲಿ ಸಂಚರಿಸುವ ರಾಜ್ಯದ ಎಲ್ಲಾ 65 ವರ್ಷ ಮೇಲ್ಪಟ್ಟ ಪುರುಷರಿಗೆ ಬಿಗ್ ಸುದ್ದಿ! ಇನ್ನೊಂದೇ ಹೆಜ್ಜೆ ಬಾಕಿ

Congress Guarantee: KSRTC ಬಸ್ ನಲ್ಲಿ ಸಂಚರಿಸುವ ರಾಜ್ಯದ ಎಲ್ಲಾ 65 ವರ್ಷ ಮೇಲ್ಪಟ್ಟ ಪುರುಷರಿಗೆ ಬಿಗ್ ಸುದ್ದಿ! ಇನ್ನೊಂದೇ ಹೆಜ್ಜೆ ಬಾಕಿ

Congress Guarantee: ರಾಜ್ಯದ ಕಾಂಗ್ರೆಸ್ ಸರಕಾರದಿಂದ ಮಹಿಳೆಯರಿಗೆಲ್ಲ ಶಕ್ತಿ ಯೋಜನೆಯಿಂದ ಅನೇಕ ಪ್ರಯೋಜನೆ ಸಿಕ್ಕಿದೆ. ಶಕ್ತಿ ಯೋಜನೆ ಬಂದ ಬಳಿಕ ರಾಜ್ಯಾದ್ಯಂತ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ. ಹಾಗಾಗಿ ಶಕ್ತಿ ಯೋಜನೆಯಿಂದಾಗಿ(Shakti Yojana) ಮಹಿಳೆಯರ ಪ್ರವಾಸ , ದೈನಿಕ ಓಡಾಟಕ್ಕೆ ಬೆಂಬಲ ಸಿಕ್ಕಂತಾಗಿದೆ. ರಾಜ್ಯದ ಒಳಗೆ ಸರಕಾರಿ ಬಸ್ ಉಚಿತವಾದ ಕಾರಣ ಮಹಿಳೆಯರ ಓಡಾಟ ಕೂಡ ಅಧಿಕವಾಗಿದೆ.



ಬೇರೆ ಅವರಿಗೂ ನೀಡಿ

ಮಹಿಳೆಯರಿಗೆ ಮಾತ್ರ ಉಚಿತ ಬಸ್ ಪ್ರಯಾಣದ ಅವಕಾಶ ನೀಡಿದ್ದು ಪುರುಷರಿಗೆ , ಮಕ್ಕಳಿಗೆ ಈ ಸೌಲಭ್ಯ ಸಿಗುತ್ತಿಲ್ಲ. ಮಹಿಳಾ ಪ್ರಯಾಣಿಕರ ಸಂಖ್ಯೆ ಅಧಿಕವಾದ ಕಾರಣ ಮಕ್ಕಳಿಗೆ, ಕೆಲಸಕ್ಕೆ ತೆರಳುವ ಪುರುಷರಿಗೆ ಸದಾ ರಶ್ ಆಗಿರುವ ಬಸ್ ನಲ್ಲಿ ಟಿಕೆಟ್ ಕೊಟ್ಟು ಪ್ರಯಾಣ ಮಾಡುವುದು ಹಿತಕರ ಅನಿಸುತ್ತಿಲ್ಲ ಹೀಗಾಗಿ ಸಾರ್ವತ್ರಿಕ ಉಚಿತ ಮಾಡುವಂತೆ ಅನೇಕ ಮನವಿ ಬಂದಿದ್ದು ಈ ಕಾರಣಕ್ಕಾಗಿ ರಾಜ್ಯ ಸರಕಾರದ ಮುಂದಿನ ನಡೆ ಏನಿರಬಹುದು ಎಂಬ ಕುತೂಹಲ ಎಲ್ಲರಲ್ಲೂ ಇದ್ದೇ ಇರಲಿದೆ.

ಪುರುಷರಿಗೆ ಉಚಿತ ಬಸ್ ಪ್ರಯಾಣ

ಇತ್ತೀಚೆಗೆ ಹಿರಿಯ ನಾಗರಿಕರಿಗೆ ಹಾಗೂ ಪುರುಷರಿಗೆ ಉಚಿತ ಪ್ರಯಾಣಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಅನೇಕ ಮನವಿ ಬಂದಿದ್ದ ಹಿನ್ನೆಲೆಯಲ್ಲಿ ಈ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳಲಾಗುತ್ತಿದೆ ಎಂಬುದನ್ನು ಸಿಎಂ ಆರ್ಥಿಕ ಸಲಹೆಗಾರರಾದ ಶಾಸಕ ಬಸವರಾಜ ರಾಯರೆಡ್ಡಿ ಅವರು ಇತ್ತೀಚೆಗಷ್ಟೇ ಮಾಧ್ಯಮದ ಮುಂದೆ ಮಾತನಾಡಿದ್ದಾರೆ.

ಏನಂದ್ರು?

ಶಾಸಕ ಬಸವರಾಜ ರಾಯರೆಡ್ಡಿ ಅವರು ನನ್ನನ್ನು ಹಣಕಾಸು ಮಂತ್ರಿ ಮಾಡುವಂತೆ ಈಗಾಗಲೇ ಸಿಎಂ ಅವರಿಗೆ ಮನವಿ ಮಾಡಿದ್ದೇನೆ. ನಾನು ಹಣಕಾಸು ಮಂತ್ರಿ ಆದರೆ ಹಲವಾರು ಜನಪ್ರಿಯ ಯೋಜನೆ ಜಾರಿಗೆ ತರುವೆನು. ಅಂತಹ ಯೋಜನೆಯಲ್ಲಿ ಪುರುಷರಿಗೆ ಉಚಿತ ಬಸ್ ಪ್ರಯಾಣ ಕೂಡ ಜಾರಿಗೆ ಬರಲಿದೆ. 60-65 ವರ್ಷ ಮೇಲ್ಪಟ್ಟ ಪುರುಷರು ಅಂದರೆ ಹಿರಿಯ ನಾಗರಿಕರಿಗೆ ಶೀಘ್ರವೇ ಉಚಿತ ಬಸ್ ಪ್ರಯಾಣ ಯೋಜನೆ ಜಾರಿಗೆ ಬರಲಿದೆ. ಬಜೆಟ್ ನಲ್ಲಿ ಕೂಡ ಚಿಂತಿಸಲಾಗಿದೆ ಎಂದು ಅವರು ಹೇಳಿದರು. ಒಟ್ಟಾರೆಯಾಗಿ ಸಿಎಂ ಸಿದ್ದರಾಮಯ್ಯ ಅವರು ಈ ಒಂದು ಯೋಜನೆಗೆ ಪೂರ್ತಿ ಸಮ್ಮತಿ ನೀಡಿದರೆ 65ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಎಲ್ಲರಿಗೂ ಉಚಿತ ಪ್ರಯಾಣ ಸಿಗಲಿದೆ ಎಂದು ಹೇಳಬಹುದು. ಮುಂದಿನ ದಿನದಲ್ಲಿ ಸಾರ್ವತ್ರಿಕ ಉಚಿತ ಪ್ರಯಾಣ ಬರಲೂ ಬಹುದಾಗಿದೆ.‌


Post a Comment

Previous Post Next Post
CLOSE ADS
CLOSE ADS
×