ಮಾಸಿಕ ರೈಲ್ವೆ ಪಾಸ್ ಮಾಡಿಸುವುದು ಹೇಗೆ? ಹಣದ ಉಳಿತಾಯ ಮತ್ತು ಸರದಿ ಸಾಲಿನಲ್ಲಿ ನಿಲ್ಲುವ ಗೊಡವೆಯಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂಬುದನ್ನು ಲೇಖನದ ಮೂಲಕ ಮಾಹಿತಿ ತಿಳಿಯಿರಿ.
ಭಾರತೀಯ ರೈಲ್ವೆ ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. ರೈಲುಗಳಲ್ಲಿ ಪ್ರಯಾಣಿಸಲು ಜನರು ಹೆಚ್ಚು ಅನುಕೂಲಕರ ಎಂದು ಭಾವಿಸುತ್ತಾರೆ. ಇದಕ್ಕಾಗಿ ಅವರು ಪ್ರತಿನಿತ್ಯ ಕೆಲಸ, ಓದಿನ ಉದ್ದೇಶಕ್ಕಾಗಿ ಪ್ರಯಾಣಿಸುತ್ತಾರೆ.
ನಿತ್ಯ ರೈಲಿನಲ್ಲಿ ಪ್ರಯಾಣಿಸುವವರು ಮಾಸಿಕ ರೈಲ್ವೇ ಪಾಸ್ ಮಾಡಿಸುವುದು ಬಹಳ ಉತ್ತಮ. ಇದರಿಂದ ಸಮಯ ಉಳಿತಾಯವಾಗುವುದಲ್ಲದೆ, ಸರದಿ ಸಾಲಿನಲ್ಲಿ ನಿಲ್ಲುವುದು ತಪ್ಪುತ್ತದೆ. ಹಾಗಾದರೆ ಮಾಸಿಕ ರೈಲ್ವೇ ಪಾಸ್ ಮಾಡಿಸುವುದು ಹೇಗೆ ಎಂಬುದನ್ನು ಇಲ್ಲಿ ತಿಳಿಯಿರಿ.
ರೈಲ್ವೆ ಮಾಸಿಕ ಪಾಸ್ ಎಂದರೇನು?
ರೈಲ್ವೆ ಮಾಸಿಕ ಪಾಸ್ ಪಡೆಯುವ ಮೊದಲು, ರೈಲ್ವೆ ಮಾಸಿಕ ಪಾಸ್ ಎಂದರೇನು ಎಂದು ತಿಳಿಯುವುದು ಬಹಳ ಮುಖ್ಯ. ವಾಸ್ತವವಾಗಿ, ಯಾವುದೇ ವಿದ್ಯಾರ್ಥಿ ಅಥವಾ ಕೆಲಸ ಮಾಡುವ ಜನರು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಲು ಪ್ರತಿದಿನ ರೈಲನ್ನು ಬಳಸಿದಾಗ, ರೈಲ್ವೆ ಅವರಿಗೆ ಪಾಸ್ ನೀಡುತ್ತದೆ. ಇದಕ್ಕೆ ಟಿಕೆಟ್ ಬೆಲೆಗಿಂತ ಕೊಂಚ ರಿಯಾಯಿತಿ ಕೂಡ ನೀಡುತ್ತದೆ. ರೈಲ್ವೆ ಪಾಸ್ ಒಂದು ತಿಂಗಳಿಂದ ಮೂರು ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯವರೆಗೆ ಮಾನ್ಯವಾಗಿರುತ್ತದೆ ಎಂಬುದನ್ನು ನಾವು ನಿಮಗೆ ಹೇಳುತ್ತೇವೆ.
ಸಮಯ, ಹಣದ ಉಳಿತಾಯ
ಮಾಸಿಕ ಪಾಸ್ ಮಾಡಿಸುವುದರಿಂದ ಪ್ರಯಾಣ ದರವನ್ನು ಕಡಿಮೆಯಾಗುವುದಲ್ಲದೆ, ದಿನನಿತ್ಯದ ಟಿಕೆಟ್‌ಗಳನ್ನು ಖರೀದಿಸುವ ತೊಂದರೆಯಿಂದ ಉಳಿಸುತ್ತದೆ. ಈ ಪಾಸ್‌ನ ಬಳಕೆಯನ್ನು ಮೀಸಲಾತಿ ಕೋಚ್‌ನಲ್ಲಿ ಮಾನ್ಯವೆಂದು ಪರಿಗಣಿಸಲಾಗುವುದಿಲ್ಲ ಎಂಬುದನ್ನು ನಾವು ನಿಮಗೆ ಹೇಳುತ್ತೇವೆ. ರಿಸರ್ವ್ ಕಂಫರ್ಟ್‌ಮೆಂಟ್‌ನಲ್ಲಿ ಇಂತಹವರು ಪ್ರಯಾಣಿಸುವಂತಿಲ್ಲ.
ಮಾಸಿಕ ಪಾಸ್ ಮಾಡಿಸಲು ಏನು ಬೇಕು?
ರೈಲ್ವೆ ಮಾಸಿಕ ಪಾಸ್ ಬೇಕು ಅನ್ನುವವರು ತಮ್ಮ ಬಳಿ ಪಾಸ್‌ಪೋರ್ಟ್ ಸೈಜ್ ಫೋಟೋ, ಗುರುತಿನ ಚೀಟಿಯನ್ನು ಹೊಂದಿರಬೇಕು. ಈ ಗುರುತಿನ ಚೀಟಿಯಲ್ಲಿ ಹೆಸರು, ವಿಳಾಸ, ವಯಸ್ಸು ಇತ್ಯಾದಿ ಎಲ್ಲಾ ಮಾಹಿತಿಯನ್ನು ಬರೆಯಲಾಗಿದೆ.
ದೂರಕ್ಕೆ ಅನುಗುಣವಾಗಿ ದರವನ್ನು ನಿರ್ಧರಿಸಲಾಗುತ್ತದೆ
ರೈಲ್ವೆ ಮಾಸಿಕ ಪಾಸ್ ನ ದರವನ್ನು ದೂರಕ್ಕೆ ಅನುಗುಣವಾಗಿ ನಿರ್ಧರಿಸಲಾಗುತ್ತದೆ, ಇದು ಸಾಮಾನ್ಯ ದರಕ್ಕಿಂತ ಕಡಿಮೆಯಾಗಿದೆ. ವರದಿಗಳ ಪ್ರಕಾರ, 1 ರಿಂದ 20 ಕಿ.ಮೀ ದೂರಕ್ಕೆ ಅಂದಾಜು 100 ರೂ. ರೈಲ್ವೆ ಪಾಸ್‌ನಲ್ಲಿ ನೀವು ಯಾವ ಮಾರ್ಗದಲ್ಲಿ ಪ್ರಯಾಣಿಸಬಹುದು ಮತ್ತು ಯಾವ ಮಾರ್ಗದಲ್ಲಿ ಪ್ರಯಾಣಿಸಬಾರದು ಎಂಬ ಮಾಹಿತಿಯೂ ಲಭ್ಯವಿರುತ್ತದೆ.
ರೈಲ್ವೆ ಪಾಸ್ ಮಾಡಿಸುವುದು ಹೇಗೆ?
ರೈಲ್ವೆ ಮಾಸಿಕ ಪಾಸ್ ಪಡೆಯುವುದು ತುಂಬಾ ಸುಲಭ. ಇದಕ್ಕಾಗಿ ನೀವು ರೈಲ್ವೆಯ ಬುಕಿಂಗ್ ಕೌಂಟರ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಫಾರ್ಮ್ ಭರ್ತಿ ಮಾಡಿದ ನಂತರ ಗುರುತಿನ ಚೀಟಿಯನ್ನು ನೀಡಬೇಕು. ರೈಲ್ವೆಯ ತನಿಖೆಯ ನಂತರ ಪಾಸ್ ನೀಡಲಾಗುತ್ತದೆ. ಇದರ ಹೊರತಾಗಿ ನೀವು ಆನ್‌ಲೈನ್ ಮೂಲವು ಮಾಸಿಕ ಪಾಸ್ ಮಾಡಿಸಬಹುದು.